ವಿಷಯಕ್ಕೆ ಹೋಗು

ಕ್ರಿಪ್ಟ್ಯಾಂತಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರಿಪ್ಟ್ಯಾಂತಸ್
Cryptanthus zonatus
Scientific classification e
Unrecognized taxon (fix): Cryptanthus
Synonyms[]
  • Madvigia Liebm.
  • Pholidophyllum Vis.

ಕ್ರಿಪ್ಟ್ಯಾಂತಸ್ ಬ್ರೊಮೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ ಜಾತಿ ; ಬ್ರಜಿಲ್ ದೇಶದ ಮೂಲವಾಸಿ.

ಪ್ರಭೇದಗಳು

[ಬದಲಾಯಿಸಿ]

ಸುಮಾರು 12 ಪ್ರಭೇದಗಳನ್ನೊಳಗೊಂಡಿದೆ. ಸಾಮಾನ್ಯವಾಗಿ ಅಪ್ಪುಸಸ್ಯವಾಗಿ ಬೆಳೆಯುತ್ತದೆ. ಇದನ್ನು ಕುಂಡಸಸ್ಯ ಮತ್ತು ಕಲ್ಲೇರಿ ಸಸ್ಯವನ್ನಾಗಿ ಬೆಳೆಸುತ್ತಾರೆ. ಕ್ರಿಪ್ಟ್ಯಾಂತಸ್ ಜೊನೇಟಸ್, ಕ್ರಿ. ಅಂಡ್ಯುಲೇಟಸ್, ಕ್ರಿ. ಜೆಬ್ರಿನಸ್, ಕ್ರಿ. ಏಕಾಲಿಸುಗಳು ಉದ್ಯಾನ ಪ್ರಾಮುಖ್ಯವಿರುವ ಪ್ರಭೇದಗಳು.

ಸಸ್ಯ ಲಕ್ಷಣ

[ಬದಲಾಯಿಸಿ]

ಬಹುವಾರ್ಷಿಕ ಮೂಲಿಕೆ ಸಸ್ಯವಾದ ಇದರಲ್ಲಿ ಕಾಂಡ ಪ್ರಮುಖವಾಗಿ ಕಾಣುವುದಿಲ್ಲ. ಉದ್ದವಾದ ಗರಗಸದ ಅಂಚುಳ್ಳ ಎಲೆಗಳಿವೆ. ಇವು ಗಿಡದ ಬುಡದಲ್ಲಿ ಕಮಲದ ದಳಗಳ ರೀತಿ ಜೋಡಣೆಗೊಂಡಿವೆ; ಪ್ರಭೇದಗಳಿಗೆ ಅನುಗುಣವಾಗಿ ಎಲೆಗಳಿಗೆ ವಿವಿಧ ಬಣ್ಣಗಳಿವೆ. ಹೂಗೊಂಚಲು ಚಂಡುಮಂಜರಿ ಮಾದರಿಯದು ; ಅಸಂಖ್ಯ ಉಪಪತ್ರಗಳಿಂದ ಆವೃತವಾಗಿದೆ. ಒಂದೊಂದು ಹೂವಿನಲ್ಲಿ 3 ಪುಷ್ಪಪತ್ರಗಳು, 3 ದಳಗಳು, 6 ಕೇಸರಗಳು, ಮೂರು ಕಾರ್ಪೆಲುಗಳಿಂದ ಕೂಡಿದ ನೀಚ ಸ್ಥಾನದ ಅಂಡಾಶಯ ಇವೆ. ಕೇಸರಗಳ ಬುಡ ದಳಸಮೂಹದ ಗಂಟಲಿಗೆ ಅಂಟಿಕೊಂಡಿದೆ. ಫಲ ಬಹುಬೀಜಗಳನ್ನೊಳಗೊಂಡ ಬೆರಿ ಮಾದರಿಯದು.

ಸಸ್ಯಾಭಿವೃದ್ಧಿ

[ಬದಲಾಯಿಸಿ]

ಕ್ರಿಪ್ಟ್ಯಾಂತಸಿನ ವಿವಿಧ ಪ್ರಭೇದಗಳನ್ನು ಮೋಸುಗಳಿಂದ (ಆಫ್‍ಸೆಟ್ಸ್) ಸುಲಭವಾಗಿ ವೃದ್ಧಿ ಮಾಡಬಹುದು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

[]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. 1 2 "Cryptanthus Otto & A.Dietr." Plants of the World Online. Royal Botanic Gardens, Kew. Retrieved 2022-11-18.