ಕ್ರಿಪ್ಟೋಮೀರಿಯ
| ಕ್ರಿಪ್ಟೋಮೀರಿಯ ಜಪಾನಿಕ | |
|---|---|
| Plate from "Flora Japonica" by Philipp Franz von Siebold and Joseph Gerhard Zuccarini | |
| Conservation status | |
| Scientific classification | |
| Unrecognized taxon (fix): | ಕ್ರಿಪ್ಟೋಮೀರಿಯ |
| ಪ್ರಜಾತಿ: | ಕ. ಜಪಾನಿಕ
|
| Binomial name | |
| ಕ್ರಿಪ್ಟೋಮೀರಿಯ ಜಪಾನಿಕ | |
| Synonyms | |
|
Synonyms list
| |
ಕ್ರಿಪ್ಟೋಮೀರಿಯ ನಗ್ನಬೀಜಿ ಸಸ್ಯಗುಂಪಿನ ಪೈನೇಸೀ ಕುಟುಂಬಕ್ಕೆ ಸೇರಿದ ಒಂದು ನಿತ್ಯಹರಿದ್ವರ್ಣದ ಶಂಕುವೃಕ್ಷ. ಇದಕ್ಕೆ ಜಪಾನೀ ಸೀಡರ್ ಎಂಬ ಸಾಮಾನ್ಯ ಬಳಕೆಯ ಹೆಸರಿದೆ.
ಪ್ರಭೇದಗಳು
[ಬದಲಾಯಿಸಿ]
ಜಪಾನಿಕ ಎಂಬ ಒಂದೇ ಪ್ರಭೇದವನ್ನೊಳಗೊಂಡಿರುವ ಇದರ ತವರು ಚೀನ.
ಸಸ್ಯ ಲಕ್ಷಣಗಳು
[ಬದಲಾಯಿಸಿ]ಕ್ರಿಪ್ಟೊಮೀರಿಯ ಸುಮಾರು 125' ಎತ್ತರಕ್ಕೆ ಬೆಳೆಯುವ ಬೃಹದ್ಗಾತ್ರದ ಮರ. ಇದಕ್ಕೆ ನೇರವಾಗಿ ಬೆಳೆಯುವ ನಾಜೂಕಿನ ಮುಖ್ಯ ಕಾಂಡವಿದೆ. ತೊಗಟೆ ಕೆಂಪುಮಿಶ್ರಿತ ಕಂದುಬಣ್ಣದ್ದು. ಎಲೆಗಳು ಉದ್ದನೆಯ ಕಡ್ಡಿಗಳಂತಿದ್ದು ಸುರುಳಿಸುರುಳಿಯಾಗಿ ಜೋಡಣೆಗೊಂಡಿವೆ. ಹೂಗಳು ಏಕಲಿಂಗಿಗಳು; ಬೇರೆಬೇರೆ ಶಂಕುಗಳಲ್ಲಿ (ಕೋನ್) ಸಮಾವೇಶಗೊಂಡಿವೆ. ಹಲವಾರು ಗಂಡುಶಂಕುಗಳು ಗುಂಪುಗೂಡಿಕೊಂಡು ರೆಂಬೆಗಳ ತುದಿಯಲ್ಲಿ ಹುಟ್ಟುತ್ತವೆ. ಇವುಗಳ ಆಕಾರ ದೀರ್ಘ ಅಂಡದಂತೆ. ಹೆಣ್ಣು ಶಂಕುಗಳು ಗುಂಡಗಿವೆ; ಒಂಟೊಂಟಿಯಾಗಿ ಮೋಟು ರೆಂಬೆಗಳ ತುದಿಯಲ್ಲಿ ಹುಟ್ಟುತ್ತವೆ. ಪ್ರತಿ ಶಂಕುವಿನಲ್ಲಿ ಹಲವಾರು ಪಟ್ಟಿಗಳೂ ಒಂದೊಂದು ಪಟ್ಟಿಗೆ ಅಂಟಿದಂತೆ 3-5 ಅಂಡಕಗಳೂ ಇವೆ. ಅಂಡಕಗಳು ನಿಷೇಚನಗೊಂಡು ಬೀಜಗಳಾದಂತೆ ಅವಕ್ಕೆ ತೆಳುವಾದ ರೆಕ್ಕೆ ಮೂಡುತ್ತದೆ. ಬೀಜ ಪ್ರಸರಣಕ್ಕೆ ಈ ರೆಕ್ಕೆ ಸಹಕಾರಿ.
ಸಸ್ಯಾಭಿವೃದ್ಧಿ
[ಬದಲಾಯಿಸಿ]ಕ್ರಿಪ್ಟೊ ಮೀರಿಯವನ್ನು ಬೀಜಗಳ ಮೂಲಕ ಇಲ್ಲವೆ ಕಾಂಡ ತುಂಡುಗಳ ಮೂಲಕ ವೃದ್ಧಿಸಲಾಗುತ್ತದೆ. ಇದರ ಬೆಳವಣಿಗೆಗೆ ಫಲವತ್ತಾದ ತೇವಪೂರಿತ ಗೋಡುಮಣ್ಣು ಮತ್ತು ನೆರಳು ಅತ್ಯಗತ್ಯ.[೨]
ಉಪಯೋಗಗಳು
[ಬದಲಾಯಿಸಿ]ಇದಕ್ಕೆ ಸುಂದರವಾದ ಪಿರಮಿಡ್ ಆಕೃತಿಯಿರುವುದರಿಂದಲೂ ಇದರ ಎಲೆಗಳು ಯಾವಾಗಲೂ ಹಸಿರಾಗಿರುವುದರಿಂದಲೂ ಇದನ್ನು ಚೀನ ಮತ್ತು ಜಪಾನುಗಳಲ್ಲಿ ರಸ್ತೆಗಳ ಅಕ್ಕಪಕ್ಕದಲ್ಲೂ ಉದ್ಯಾನಗಳಲ್ಲೂ ಶೋಭೆಗೆಂದು ಬೆಳೆಸಲಾಗಿದೆ. ಅಲ್ಲದೆ ಇದರ ಚೌಬೀನೆ ಮೃದುವಾಗಿಯೂ ಕೆಂಪುಮಿಶ್ರಿತ ಕಂದುಬಣ್ಣದ್ದಾಗಿಯೂ ಇದ್ದು ಮರಗೆಲಸಕ್ಕೆ ಸುಲಭವಾಗಿ ಮಣಿಯುವುದರಿಂದ ಇದನ್ನು ಕಟ್ಟಡದ ಕೆಲಸಗಳಿಗೆ, ಪೀಪಾಯಿ ಮತ್ತು ಟೀ ಪೆಟ್ಟಿಗೆಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಹಿಮಾಲಯ ಪರ್ವತಶ್ರೇಣಿಗಳಲ್ಲಿ ಇದು ಬೆಳೆಯುತ್ತದೆ.
ಛಾಯಾಂಕಣ
[ಬದಲಾಯಿಸಿ]-
Sugi avenue at the Togakushi shrine in Nagano
-
Cross section
-
Wilson's Stump was a sugi tree on Yaku Island estimated to be over 2,000 years old when cut
-
Grown as a bonsai
-
Seed cone
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Cryptomeria japonica, Morton Arboretum acc. 560–82*11 & 12
- USDA Forest Service Fact Sheet ST-219 Japanese Cedar (pdf)
- Conifers Around the World: Cryptomeria japonica - Sugi.
ಉಲ್ಲೇಖಗಳು
[ಬದಲಾಯಿಸಿ]
- ↑ Thomas, P.; Katsuki, T.; Farjon, A. (2013). "Cryptomeria japonica". IUCN Red List of Threatened Species. 2013 e.T39149A2886821. doi:10.2305/IUCN.UK.2013-1.RLTS.T39149A2886821.en. Retrieved 19 November 2021.
- ↑ ಟೆಂಪ್ಲೇಟು:EFloras