ಕ್ಯಾನರಿ ಹುಲ್ಲು
| Canary grass | |
|---|---|
| Rightmost illustration is Phalaris canariensis | |
| Scientific classification | |
| Unrecognized taxon (fix): | Phalaris |
| Species: | P. canariensis |
| Binomial name | |
| Phalaris canariensis | |
uthority = L.
}} ಕ್ಯಾನರಿ ಹುಲ್ಲು ಪೋಯೇಸೀ ಕುಟುಂಬಕ್ಕೆ ಸೇರಿದ ಒಂದು ಪ್ರಮುಖ ಬಗೆಯ ಹುಲ್ಲು. ಫಲಾರಿಸ್ ಅರುಂಡಿನೇಸಿಯ ಎಂಬುದು ಇದರ ವೈಜ್ಞಾನಿಕ ಹೆಸರು.
ಭೌಗೋಳಿಕ
[ಬದಲಾಯಿಸಿ]ಯೂರೋಪ್ ಖಂಡದ ಸಮಶೀತೋಷ್ಣವಲಯ. ಏಷ್ಯ ಮತ್ತು ಉತ್ತರ ಅಮೆರಿಕಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಒಳ್ಳೆಯ ಮೇವು ಎಂದು ಕಂಡುಕೊಂಡ ಮೇಲೆ ಮೊಟ್ಟಮೊದಲ ಬಾರಿಗೆ ಇದನ್ನು ಸ್ವೀಡನ್ನಿನಲ್ಲಿ ಬೆಳೆಸಲಾಯಿತು. ಇತ್ತೀಚೆಗೆ ಬೇರೆ ದೇಶಗಳಲ್ಲಿಯೂ ಇದನ್ನು ಹುಲ್ಲುಗಾವಲುಗಳಲ್ಲಿ ಬೆಳೆಸಲಾಗುತ್ತಿದೆ.
ಸಸ್ಯ ಲಕ್ಷಣಗಳು
[ಬದಲಾಯಿಸಿ]ಕ್ಯಾನರಿ ಹುಲ್ಲು ಸುಮಾರು 4'-8' ಎತ್ತರಕ್ಕೆ ಬೆಳೆಯುವ ಸದೃಢವಾದ ಬಹುವಾರ್ಷಿಕ ಸಸ್ಯ. ದನಕರುಗಳ ತುಳಿತಕ್ಕೆ ಸಿಕ್ಕಿದರೂ ಇದರ ಪ್ರಕಂದಗಳು ಹಾಳಾಗುವುದಿಲ್ಲ. ಗಿಡದಿಂದ ನೇರವಾಗಿ ಮೇಲಕ್ಕೆ ಬೆಳೆಯುವ ಹಲವಾರು ಗೆಣ್ಣು ಕಾಂಡಗಳು ಹೊರಡುತ್ತವೆ. ಒಂದೊಂದರಲ್ಲೂ 5-8 ಅಗಲವಾದ ಎಲೆಗಳಿವೆ. ಹೂಗಳು ಉರುಳೆಯಾಕಾರದ ಸಂಕೀರ್ಣ ಬಗೆಯ ಹೂಗೊಂಚಲಿನಲ್ಲಿ ಸಮಾವೇಶಗೊಂಡಿವೆ.
ಕೃಷಿ
[ಬದಲಾಯಿಸಿ]ಫಲವತ್ತಾದ ಮತ್ತು ಬಹಳ ತೇವಪೂರಿತವಾದ ಮಣ್ಣಿನಲ್ಲಿ ಈ ಹುಲ್ಲು ಚೆನ್ನಾಗಿ ಬೆಳೆಯುತ್ತದೆ. ಚೌಳು ಭೂಮಿಯಲ್ಲಿ ಬೆಳೆಯಲಾರದು. ಚೆನ್ನಾಗಿ ಹದಮಾಡಿದ ಭೂಮಿಯಲ್ಲಿ ಎಕರೆಗೆ 4-8 ಪೌ.ಬೀಜದಂತೆ ಬಿತ್ತಿ ಬೆಳೆಸಬಹುದು. ಕ್ಯಾನರಿ ಹುಲ್ಲು ಒಂದು ಉತ್ತಮ ದರ್ಜೆಯ ಮೇವು. ಇದರ ದಂಟು ರಸಭರಿತವಾಗೂ ರುಚಿಯಾಗೂ ಇರುವುದರಿಂದ ದನಗಳಿಗೆ ಅಚ್ಚುಮೆಚ್ಚು. ತೆನೆಗಳು ಅದೇ ತಾನೇ ಹೊರಡುತ್ತಿರುವ ಹಂತದಲ್ಲಿ ಇದನ್ನು ಕಟಾಯಿಸಬೇಕು. ಇಳುವರಿ ಎಕರೆಗೆ 2-3ಳಿ ಟನ್‍ವರೆಗೆ ಇದೆ. ಬರಿ ಮೇವಾಗಿ ಮಾತ್ರವಲ್ಲದೆ ಕಾಲುವೆ, ಹಳ್ಳದ ದಂಡೆಗಳಲ್ಲಿ ಉಂಟಾಗುವ ಭೂಸವೆತವನ್ನು ನಿಲ್ಲಿಸುವುದಕ್ಕೂ ಕ್ಯಾನರಿಹುಲ್ಲನ್ನು ಬೆಳೆಯಬಹುದು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]