ಕ್ಯಾದರೀನ್ ಟೈನನ್
ಕ್ಯಾದರೀನ್ ಟೈನನ್ | |
---|---|
ಜನನ | ೨೧ ಜನವರಿ ೧೮೫೯ ಡಬ್ಲಿನ್ |
ಮರಣ | ೨ ಏಪ್ರಿಲ್ ೧೯೩೧ ವಿಂಬಲ್ಡನ್, ಲಂಡನ್ |
ವೃತ್ತಿ | ಕವಿಯೆತ್ರಿ, ಕಾದಂಬರಿಕಾರರು |
ಕ್ಯಾದರೀನ್ ಟೈನನ್ (1861-1931) ಇಂಗ್ಲಿಷ್ ಕಾದಂಬರಿಕಾರಳು; ಕವಯಿತ್ರಿಯೂ ಹೌದು.
ಡಬ್ಲಿನ್ ಜಿಲ್ಲೆಯ ಕ್ಲಾಂಡಲ್ಕಿನ್ನಿನ ಒಬ್ಬ ರೈತನ ಮಗಳು. 1883ರಲ್ಲಿ ಹೆನ್ರಿ ಆಲ್ಬರ್ಟ್ ಹಿಂಕ್ಸನ್ ಎಂಬ ವಕೀಲನನ್ನು ಮದುವೆಯಾಗಿ ಲಂಡನ್ನಿನಲ್ಲಿ ನೆಲಸಿದಳು. ಈಕೆ ನೂರಾರು ಕಾದಂಬರಿಗಳನ್ನು ಬರೆದಿದ್ದಾಳೆ. ಅವುಗಳಲ್ಲಿ ಮುಖ್ಯವಾದವು ಇವು :
ದಿ ವೇ ಆಫ್ ಎ ಮೇಡ್ (1895), ದಿ ಹ್ಯಾಂಡ್ಸಮ್ ಬ್ಯಾಂಡನ್ಸ್ (1898), ಎ ಮಿಡ್‍ಸಮರ್ ರೋಸ್ (1913), ಜಾನ್-ಎ-ಡ್ರೀಮ್ಸ್ (1916), ದಿ ಸೆಕೆಂಡ್ ವೈಫ್ (1920) ದಿ ಇನ್‍ಫ್ಯಾಚುಯೇಷನ್ ಆಫ್ ಪೀಟರ್ (1926), ದಿ ಹೌಸ್ ಇನ್ ದಿ ಫಾರೆಸ್ಟ್ (1928), ಟ್ವೆಂಟಿಫೈವ್ ಇಯರ್ಸ್ (1913), ದಿ ಮಿಡ್ಲ್ ಇಯರ್ಸ್ (1917), ದಿ ಇಯರ್ಸ್ ಆಫ್ ದಿ ಷ್ಯಾಡೊ (1919), ದಿ ವಾಂಡರಿಂಗ್ ಇಯರ್ಸ್ (1922), ಮೆಮ್ವಾಸ್ (1924)- ಇವು ಆತ್ಮಕಥಾರೂಪದ ಪುಸ್ತಕಗಳು.
ಕೆಲ್ಟಿಕ್ ಪುನುರುದ್ಧಾರಕ್ಕಾಗಿ ಕೆಲಸ ಮಾಡಿದವರಲ್ಲಿ ಈಕೆ ಪ್ರಮುಖಳು. ತನ್ನ ಕಾಲದ ಎಲ್ಲ ಪ್ರಮುಖ ಐರಿಷ್ ಲೇಖಕರ ಪರಿಚಯವು ಈಕೆಗೆ ಇತ್ತು. ಆ್ಯಲಿಸ್ ಮೆಯ್ನೆಲ್ ಈಕೆಯ ಹತ್ತಿರದ ಗೆಳತಿಯಾಗಿದ್ದಳು. ಲಂಡನ್ನಿನಲ್ಲಿ ಇವರಿಬ್ಬರ ಸಮಾಧಿಗಳು ಅಕ್ಕಪಕ್ಕದಲ್ಲಿವೆ.