ವಿಷಯಕ್ಕೆ ಹೋಗು

ಕ್ಯಾಂಬೇ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Khambhat
ಕ್ಯಾಂಬೇ
City
Tower Road, Khambhat
Tower Road, Khambhat
ಅಡ್ಡಹೆಸರು: 
Trambavati Nagari
Khambhat is located in Gujarat
Khambhat
Khambhat
Location within Gujarat
ನಿರ್ದೇಶಾಂಕಗಳು: 22°18′N 72°37′E / 22.3°N 72.62°E / 22.3; 72.62
ದೇಶಭಾರತ
StateGujarat
DistrictAnand
ಸರ್ಕಾರ
 • ಪ್ರಕಾರ[ನಗರ ಪಾಲಿಕೆ]]
ವಿಸ್ತೀರ್ಣ
 • ಒಟ್ಟು
2,932.9 km2 (1,132.4 sq mi)
ಜನಸಂಖ್ಯೆ
 (2011)
 • ಒಟ್ಟು
೯೯,೧೬೪ (M+OG)
 • ಸಾಂದ್ರತೆ620/km2 (1,600/sq mi)
Languages
 • OfficialGujarati
ಸಮಯ ವಲಯUTC+5:30 (IST)
PINs
388620, 388625, 388630, 388540
Telephone code02698
ವಾಹನ ನೋಂದಣಿGJ 23
ಜಾಲತಾಣkhambhatnagarpalika.in

ಕ್ಯಾಂಬೇ ಭಾರತದ ಪಶ್ಚಿಮ ರಾಜ್ಯವಾದ ಗುಜರಾತಿನ ತೀರದ ಒಂದು ಖಾರಿ; ಅದೇ ಹೆಸರಿನ ಒಂದು ಪಟ್ಟಣ. ಕ್ಯಾಂಬೇ ಖಾರಿಯಲ್ಲಿ ಅರಬ್ಬೀಸಮುದ್ರ ಕೊಂಬಿನ ಆಕಾರದಲ್ಲಿ ಭೂಮಿಯೊಳಕ್ಕೆ ಚಾಚಿಕೊಂಡಿದೆ. ನೈಋತ್ಯ ಮಾನ್ಸೂನ್ ಗಾಳಿಯಿಂದಾಗಿ ಈ ಎಡೆಯಲ್ಲಿ ಸಮುದ್ರದ ಭರತ ವಿಪರೀತ. ಸುಮಾರು 40' ಎತ್ತರಕ್ಕೆ ಸಮುದ್ರದ ಉಬ್ಬರ ಸಂಭವಿಸುವುದಲ್ಲದೆ ಅದರ ವೇಗವೂ ಹೆಚ್ಚಾಗಿರುತ್ತದೆ. ಇದರ ಫಲವಾಗಿ ಖಾರಿಯ ತೀರದಲ್ಲಿರುವ ಬಂದರುಗಳನ್ನೆಲ್ಲ ಗೋಡು ಮುಚ್ಚಿಕೊಂಡಿದೆ. ಕಡಲಕರೆಯ ಬದಿ ಅತ್ಯಂತ ಅಪಾಯಕರ.

ಪಟ್ಟಣ

[ಬದಲಾಯಿಸಿ]

ಕ್ಯಾಂಬೇ ಪಟ್ಟಣ ಅದೇ ಹೆಸರಿನ ಖಾರಿಯ ಮೇಲಿದೆ. ಖಂಬಾತ್ ಅಥವಾ ಖಂಬಾಯತ್ ಎಂದೂ ಹೆಸರಾದ ಈ ಪಟ್ಟಣ ಗುಜರಾತಿನ ಕೈರಾ ಜಿಲ್ಲೆಯ ಕ್ಯಾಂಬೇ ತಾಲ್ಲೂಕಿನ ಕೇಂದ್ರ ಕೂಡ. ಕೈರಾ ರೈಲ್ವೆ ನಿಲ್ದಾಣದ ದಕ್ಷಿಣಕ್ಕೆ 31 ಮೈ. ದೂರದಲ್ಲಿ ಕೋಹಿ ನದಿಯ ಮೇಲಿರುವ ಈ ಪಟ್ಟಣ ಹಿಂದೆ ಇದೇ ಹೆಸರಿನ ಸಂಸ್ಥಾನದ ರಾಜಧಾನಿಯಾಗಿತ್ತು. ಇದು ಭಾರತದ ಮುಖ್ಯ ಬಂದರಾಗಿತ್ತೆಂದು ಮರಿನೋ ಸಸುದೋ, ಮಾರ್ಕೊ ಪೋಲೋ ಮುಂತಾದ ವಿದೇಶಿ ಪ್ರವಾಸಿಗಳು ತಿಳಿಸಿದ್ದಾರೆ. 15ನೆಯ ಶತಮಾನದಲ್ಲಿ ಗುಜರಾತಿನ ಮುಸ್ಲಿಂ ದೊರೆಗಳ ಅಧೀನದಲ್ಲಿ ಇಲ್ಲಿಯ ಬಂದರು ಉಚ್ಛ್ರಾಯಸ್ಥಿತಿಯಲ್ಲಿತ್ತು. ಕ್ಯಾಂಬೇ ಖಾರಿಯಲ್ಲಿ ಸಮುದ್ರದ ಗೋಡು ತುಂಬಿ ಬಂದು ಇದರ ಪ್ರಾಮುಖ್ಯ ಕ್ರಮೇಣ ಕುಗ್ಗಿತು.

ವ್ಯಾಪಾರ

[ಬದಲಾಯಿಸಿ]

ಈಗ ಇದು ಒಂದು ವ್ಯಾಪಾರಕೇಂದ್ರ. ಜನಸಂಖ್ಯೆ ೨,೦೧,೯೫೪.[೧] ಹತ್ತಿ, ಧಾನ್ಯ, ಹೊಗೆಸೊಪ್ಪು ಇವು ಇಲ್ಲಿಯ ವ್ಯಾಪಾರ ಸರಕುಗಳು. ಉಪ್ಪು, ಜಮಖಾನ, ಕೈಮಗ್ಗದ ಬಟ್ಟೆ, ಕಸೂತಿ ಮತ್ತು ಬೆಂಕಿಪೆಟ್ಟಿಗೆ ಕೈಗಾರಿಕೆ; ಅಗೆಟ್, ಕಾರ್ನೀಲಿಯನ್ ಮುಂತಾದ ಕಲ್ಲುಗಳನ್ನಿಟ್ಟು ಒಡವೆಗಳ ತಯಾರಿಕೆ-ಇವಕ್ಕೆ ಕ್ಯಾಂಬೇ ಪ್ರಸಿದ್ಧವಾಗಿದೆ.

ವಾಸ್ತುಶಿಲ್ಪ

[ಬದಲಾಯಿಸಿ]
Mohman Khan Nawab of Cambay
Mausoleum of 1st Wali–ul–Hind Moulai Abdullah, Khambat, Gujarat, 1050AD-1100AD.
The city of Cambay was an important Indian manufacturing and trading center noted by Marco Polo and illustrated here in the 15th century.

ಖಂಬಾತ್ ಎಂಬ ಹೆಸರು ಕಂಭ ಅಥವಾ ಸ್ತಂಭ ಎಂಬುದರಿಂದ ಬಂತೆಂದು ಹೇಳಲಾಗಿದೆ. ಈ ಪಟ್ಟಣದ ಸುತ್ತ ಇರುವ ಒಂದು ಇಟ್ಟಿಗೆಯ ಕೋಟೆ ಮತ್ತು ಕೋಟೆಯ ಒಳಭಾಗದಲ್ಲಿರುವ ಜಾಮೀ ಮಸೀದಿ ಇಲ್ಲಿಯ ಮುಖ್ಯ ಪ್ರಾಚೀನ ಸ್ಮಾರಕಗಳು. ಜಾಮೀ ಮಸೀದಿಯನ್ನು 1325ರಲ್ಲಿ ಕಟ್ಟಲಾಯಿತು. ಇದು ಗುಜರಾತಿನ ಅತಿಪ್ರಾಚೀನ ಇಸ್ಲಾಮೀ ವಾಸ್ತುಕೃತಿಗಳಲ್ಲೊಂದು. ಇದರಲ್ಲಿ ಹಿಂದೂ ವಾಸ್ತುಶೈಲಿಯ ಅಂಶಗಳೂ ಕಂಡುಬರುತ್ತವೆ. ಈ ಕಟ್ಟಡದಲ್ಲಿ ಮೊದಲಾದ ಈ ಸಮ್ಮಿಶ್ರಶೈಲಿ ಮುಂದೆ ಗುಜರಾತಿನ ಇಸ್ಲಾಮೀ ವಾಸ್ತುಶೈಲಿಗೆ ಮಾದರಿಯಾಯಿತು. ಅಗೆಟ್, ಕಾರ್ನೀಲಿಯನ್ ಮುಂತಾದ ಶಿಲೆಗಳಿಂದ ವಿವಿಧ ರೀತಿಯ ಮಣಿಗಳನ್ನು ತಯಾರಿಸುವ ಕೈಗಾರಿಕೆ ಇಲ್ಲಿ 3ನೆಯ ಸಹಸ್ರಮಾನಕ್ಕೆ ಸೇರಿದ ಹರಪ್ಪ ಸಂಸ್ಕೃತಿ ಕಾಲದಿಂದಲೂ ಪ್ರಚಲಿತವಾಗಿದೆಯೆಂಬುದು ಉತ್ಖನನಗಳಿಂದ ತಿಳಿದು ಬರುತ್ತದೆ.

ಪ್ರಸ್ತುತ

[ಬದಲಾಯಿಸಿ]

ತೈಲ ಮತ್ತು ನೈಸರ್ಗಿಕ ಅನಿಲಗಳಿಂದಾಗಿ ಕ್ಯಾಂಬೇ ಈಚೆಗೆ ಪ್ರಸಿದ್ಧವಾಗಿದೆ. ಕ್ಯಾಂಬೇಗೆ 12 ಕಿಮೀ ಪಶ್ಚಿಮದಲ್ಲಿರುವ ಲೂನೆಜ್ ಎಂಬ ಹಳ್ಳಿಯ ಬಳಿ 1958ರಲ್ಲಿ ಪ್ರಥಮವಾಗಿ ಎಣ್ಣೆಯ ಸೆಲೆ ಹೊಡೆಯಲಾಯಿತು. 1968-69ರ ಕೊನೆಯ ವೇಳೆಗೆ ಈ ಪ್ರದೇಶದಲ್ಲಿ ತೋಡಲಾದ ಬಾವಿಗಳ ಸಂಖ್ಯೆ 62. ಕ್ಯಾಂಬೇ ಪ್ರದೇಶದಲ್ಲಿಯ ಅನಿಲೋತ್ಪಾದನ ಸಾಮಥ್ರ್ಯ ದಿನಕ್ಕೆ ಸುಮಾರು 5 ಕೋಟಿ ಘನ ಅಡಿ. ಮುಖ್ಯ ಅನಿಲೋತ್ಪಾದನ ಕ್ಷೇತ್ರವಾದ ಕ್ಯಾಂಬೇಯಲ್ಲಿ ತೈಲೋತ್ಪಾದನೆಯನ್ನೂ ಈಚೆಗೆ ಬೆಳೆಸಲಾಗುತ್ತಿದೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. ↑ "Khambhat Population (2020/2021), Taluka Village List in Anand, Gujarat". www.indiagrowing.com. Archived from the original on 10 July 2014. Retrieved 2021-07-03.
"https://kn.wikipedia.org/w/index.php?title=ಕ್ಯಾಂಬೇ&oldid=1373863" ಇಂದ ಪಡೆಯಲ್ಪಟ್ಟಿದೆ