ವಿಷಯಕ್ಕೆ ಹೋಗು

ಕ್ಯಾಂಥರಿಡೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯಾಂಥರಿಡೀ
Temporal range: Albian–Present
Chauliognathus lugubris
Scientific classification e
Unrecognized taxon (fix): Cantharidae
Synonyms

Chauliognathidae

Soldier beetle filmed in Hesse, Germany
A wrinkled solder beetle flies into an aphid colony, eating an aphid before being chased away by the ants.
Wrinkled solder beetle searching foliage
Goldenrod soldier beetles foraging on yellow ironweed.
Goldenrod soldier beetles taking flight from yellow ironweed, followed by slow motion (taken at 3,840 frames per second.

ಕ್ಯಾಂಥರಿಡೀ ಕೀಟವರ್ಗದ ಕೋಲಿಯಾಪ್ಟರ ಗಣ ಏಡಿಫ್ಯಾಗ ಉಪಗಣಕ್ಕೆ ಸೇರಿದ ಒಂದು ಕುಟುಂಬ. ಟೆಲಿಫೋರಿಡೀ ಎಂಬುದು ಇದರ ಪರ್ಯಾಯ ನಾಮ. ಇದಕ್ಕೆ ಸೇರಿದ ಕೀಟಗಳನ್ನು ಸೈನಿಕ ಜೀರುಂಡೆಗಳು (ಸೋಲ್ಜರ್ ಬೀಟಲ್ಸ್) ಎನ್ನಲಾಗುತ್ತದೆ.

ಲಕ್ಷಣಗಳು

[ಬದಲಾಯಿಸಿ]

ಇವುಗಳ ದೇಹ ಮಧ್ಯಮಗಾತ್ರದ್ದು; ನೀಳವಾಗಿ ಕೊಳವೆಯಂತಿದೆ. ದೇಹದ ಮೇಲೆಲ್ಲ ಮೃದುಚರ್ಮ ಇದೆ. ಎಲಿಟ್ರಗಳು ಚಕ್ಕಳದಂತಿವೆ. ಕೆಲವು ಬಗೆಗಳಲ್ಲಿ ವೆಲ್ವೆಟಿನಂತಿರಬಹುದು. ಕತ್ತು ಬಹಳ ಕಿರಿದು. ಆಂಟೆನಗಳು ಎರಡು; ನೀಳವಾಗಿ ತಂತಿಯಂತೆಯೊ ಗರಗಸದಂತೆಯೊ ಇವೆ. ಒಂದೊಂದು ಆಂಟೆನದಲ್ಲೂ ಹನ್ನೊಂದು ಖಂಡಗಳಿವೆ. ಎದೆಯ ಮುಂಭಾಗ (ಪ್ರೋಥೊರ್ಯಾಕ್ಸ್) ಮಧ್ಯಭಾಗಕ್ಕಿಂತ ಹೆಚ್ಚು ಸ್ಪಷ್ಟ ಹಾಗೂ ಕಿರಿದು. ಮುಂಗಾಲುಗಳು ಬಲವಾಗಿವೆ. ಕಾಲಿನ ಟಾರ್ಸಸ್‍ನಲ್ಲಿ 5 ಖಂಡಗಳಿಂದ ಕೂಡಿದೆ. ಈ ಕೀಟಗಳ ಡಿಂಬ ಬಲು ಉದ್ದ. ಡಿಂಬ ಹಾಗೂ ಪ್ರೌಢಜೀವಿಗಳೆರಡೂ ಹಗಲಿನಲ್ಲೇ ಹೆಚ್ಚು ಚಟುವಟಿಕೆಯಿಂದಿರುತ್ತವೆ.

ಪರಾಗವೇ ಇವುಗಳ ಪ್ರಧಾನ ಆಹಾರ. ಕೆಲವು ಬಗೆಗಳು ಮಾತ್ರ ಬೇರೆ ಕೀಟಗಳನ್ನು ತಿನ್ನುವುದುಂಟು.

ಪ್ರಭೇದಗಳು

[ಬದಲಾಯಿಸಿ]

ಕ್ಯಾಂಥರಿಡೀ ಕುಟುಂಬದಲ್ಲಿ ಸುಮಾರು 1,300 ಪ್ರಭೇದಗಳಿವೆ. ಇವುಗಳಲ್ಲಿ ಮುಖ್ಯವಾದವು-ಕ್ಯಾಂಥರಿಸ್, ಚೌಲಿಯಾನ್ಯಾತಸ್, ಡಾಸಿಟಸ್, ಮಾಲ್ತಿನಸ್, ಮಾಲ್ತೋಡಸ್, ಪೋಡೋಬ್ರಸ್, ಪೊಲೇಮಿಯಸ್ ಮತ್ತು ರ್ಯಾಗೋನೈಕ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]