ಕ್ಯಾಂಡಿ
ಕ್ಯಾಂಡಿ
| |
|---|---|
| Nicknames: | |
| Motto(s): Loyal and Freeಟೆಂಪ್ಲೇಟು:Force singular | |
| Coordinates: 7°17′35″N 80°38′06″E / 7.2931°N 80.635°E | |
| Country | Sri Lanka |
| Province | Central Province |
| District | Kandy District |
| Divisional Secretariat | Kandy Four Gravets and Gangawata Korale Divisional Secretariat |
| Senkadagalapura | 14th century |
| Capital of the Kingdom of Kandy | 1469 |
| Founded by | Senasammata Vikramabahu |
| Government | |
| • Type | Municipal Council |
| • Body | Kandy Municipal Council |
| • Mayor | Chandrasiri Wijenayake (NPP) |
| Area | |
• Total | 28.53 km2 (11.02 sq mi) |
| Elevation | 500 m (1,600 ft) |
| Population (2011) | |
• Total | ೧,೨೫,೪೦೦ |
| • Density | 4,591/km2 (11,890/sq mi) |
| Demonym | Kandyan |
| Time zone | UTC+05:30 (Sri Lanka Standard Time) |
| Postal code | 20000 |
| Area code | 081 |
| Website | Kandy Municipal Council |
ಕ್ಯಾಂಡಿ ಶ್ರೀಲಂಕಾ ಗಣರಾಜ್ಯದ ಒಂದು ಪಟ್ಟಣ. ಮಧ್ಯ ಪ್ರಾಂತ್ಯ ಮತ್ತು ಕ್ಯಾಂಡಿ ಜಿಲ್ಲೆ-ಇವುಗಳ ಆಡಳಿತಕೇಂದ್ರ. ಶ್ರೀಲಂಕಾ ದ್ವೀಪದ ಮಧ್ಯ ಬಿಂದುವಿನ ಬಳಿ, ಕ್ಯಾಂಡಿ ಪ್ರಸ್ಥಭೂಮಿಯ ಮೇಲಿದೆ. ಇದರ ಎತ್ತರ ಸಮುದ್ರಮಟ್ಟದಿಂದ 1,602'. ಕೊಲಂಬೋದ ಈಶಾನ್ಯಕ್ಕೆ ರೈಲುಮಾರ್ಗದಲ್ಲಿ 75 ಮೈ.ದೂರದಲ್ಲಿರುವ ಕ್ಯಾಂಡಿಯ ಜನಸಂಖ್ಯೆ ೧,೨೫,೪೦೦ (೨೦೧೧).
ಇತಿಹಾಸ
[ಬದಲಾಯಿಸಿ]ಸುಂದರವಾದ ಗಿರಿವನಗಳ ನಡುವೆ ನೆಲೆಸಿರುವ ಕ್ಯಾಂಡಿ ಪಟ್ಟಣದ ನಡುವೆ ರಮ್ಯವಾದ ಸರೋವರವೊಂದಿದೆ. ಕ್ಯಾಂಡಿಯಲ್ಲಿ ಆಳುತ್ತಿದ್ದ ಕೊನೆಯ ದೊರೆ ಶ್ರೀವಿಕ್ರಮ ರಾಜಸಿಂಘೆ ಇದನ್ನು 1806ರಲ್ಲಿ ಕಟ್ಟಿಸಿದ. ಕ್ಯಾಂಡಿ ಸು.1480ರಿಂದಲೂ ಈ ಹೆಸರಿನ ರಾಜ್ಯದ ರಾಜಧಾನಿಯಾಗಿತ್ತು. 16ನೆಯ ಶತಮಾನದಲ್ಲಿ ಪೋರ್ಚುಗೀಸರೂ 1763ರಲ್ಲಿ ಡಚ್ಚರೂ ಇದನ್ನು ಸ್ವಲ್ಪಕಾಲ ಆಕ್ರಮಿಸಿಕೊಂಡಿದ್ದರಾದರೂ 1815ರಲ್ಲಿ ಇದು ಬ್ರಿಟಿಷರ ವಶವಾಗುವವರೆಗೂ ಇಲ್ಲಿಯ ದೊರೆಗಳು ಸಾಮಾನ್ಯವಾಗಿ ತಮ್ಮ ಸ್ವಾತಂತ್ರ್ಯವನ್ನುಳಿಸಿಕೊಂಡಿದ್ದರು.
ವಾಸ್ತು ಶಿಲ್ಪ
[ಬದಲಾಯಿಸಿ]ಕ್ಯಾಂಡಿಯಲ್ಲಿ ಅನೇಕ ದೇವಸ್ಥಾನಗಳಿವೆ. ಇವುಗಳ ಪೈಕಿ ಬುದ್ಧನ ಪವಿತ್ರ ಹಲ್ಲನ್ನಿಟ್ಟಿರುವ ದೇವಸ್ಥಾನ ಹಳೆಯದು. ಇಲ್ಲಿ ವರ್ಷಕ್ಕೊಮ್ಮೆ ಒಂದು ಉತ್ಸವ ನಡೆಯುತ್ತದೆ. ಕ್ಯಾಂಡಿಗೆ 3 ಮೈ. ದೂರದಲ್ಲಿರುವ ಪೆರಡೆನಿಯದಲ್ಲಿ ಸಸ್ಯಶಾಸ್ತ್ರಕ ಉದ್ಯಾನವೂ ಸಿಲೋನ್ ವಿಶ್ವವಿದ್ಯಾಲಯದ ಒಂದು ಭಾಗವೂ ಇದೆ. ಅದಕ್ಕೆ ಹತ್ತಿರದಲ್ಲೆ ಎರಡು ಬೌದ್ಧ ದೇವಾಲಯಗಳುಂಟು.
ಭೂಗೋಳ
[ಬದಲಾಯಿಸಿ]ಕ್ಯಾಂಡಿ ಜಿಲ್ಲೆಯ ವಿಸ್ತೀರ್ಣ 914 ಚ.ಮೈ. ಶ್ರೀಲಂಕಾದ ಚಹ ತೋಟಗಳಲ್ಲಿ ಬಹುಭಾಗ ಈ ಜಿಲ್ಲೆಯಲ್ಲಿದೆ. ಕ್ಯಾಂಡಿ ನಗರಕ್ಕೆ ಕೆಲವು ಮೈಲಿಗಳ ದೂರದಲ್ಲಿ ಹರಿಯುವ ಮಹಾವೇಲಿ ಗಂಗಾನದಿಯ ದಡದಲ್ಲಿ ಕಕಾವೊ ತೋಟಗಳುಂಟು.