ವಿಷಯಕ್ಕೆ ಹೋಗು

ಕೋಲುಕಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Euphorbia tirucalli
Mature tree in Mozambique
Conservation status
CITES Appendix II (CITES)[]
Scientific classification e
Unrecognized taxon (fix): Euphorbia
ಪ್ರಜಾತಿ:
E. tirucalli
Binomial name
Euphorbia tirucalli

ಕೋಲುಕಳ್ಳಿಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಯೂಫೋರ್ಬಿಯ ತಿರುಕಳ್ಳಿ ಎಂಬುದು ಇದರ ವೈಜ್ಞಾನಿಕ ನಾಮ.

ಹರಡುವಿಕೆ

[ಬದಲಾಯಿಸಿ]

ಆಫ್ರಿಕದ ಮೂಲವಾಸಿಯಾದ ಇದು ಭಾರತದಲ್ಲೂ ಬಲು ಸಾಮಾನ್ಯ; ಬಂಜರು ಭೂಮಿಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಬೇಲಿಗಿಡವಾಗಿ ಬೆಳೆಸುವುದೂ ಉಂಟು.

ಸಸ್ಯ ಲಕ್ಷಣ

[ಬದಲಾಯಿಸಿ]

ಇದೊಂದು ಚಿಕ್ಕ ಪೊದೆ ಸಸ್ಯ. ಕಾಂಡ ದಂಡಾಕಾರವಾಗಿದೆ. ರೆಂಬೆಗಳು ನುಣುಪಾಗಿವೆ. ಮುಖ್ಯಕಾಂಡದ ಮೇಲೆ ರೆಂಬೆಗಳು ಸುತ್ತುಮಾದರಿಯಲ್ಲಿ ಜೋಡಣೆಯಾಗಿವೆ. ಎಲೆಗಳು ಹುಟ್ಟಿದರೂ ಅವು ಬಲುಬೇಗ ಉದುರಿಹೋಗುತ್ತವೆಯಾದ್ದರಿಂದ ಕಾಂಡವೇ ದ್ಯುತಿಸಂಶ್ಲೇಷಣ ಕಾರ್ಯವನ್ನು ನಿರ್ವಹಿಸುತ್ತದೆ. ಈ ಕಾರ್ಯದ ಅನುಕೂಲತೆಗೆಂದು ಕಾಂಡದಲ್ಲಿ ಕ್ಲೋರೊಫಿಲ್ ಇದೆ. ಕೋಲುಕಳ್ಳಿಯ ಇನ್ನೊಂದು ವಿಶೇಷ ಲಕ್ಷಣ ಇದರ ಕಾಂಡದಲ್ಲಿ ಬಿಳಿಯ ಬಣ್ಣದ ಹಾಲ್ನೊರೆಯಿರುವುದು. (ಈ ಲಕ್ಷಣದಲ್ಲಿ ಕೋಲುಕಳ್ಳಿ ಯೂಫೋರ್ಬಿಯೇಸೀ ಕುಟುಂಬದ ಇತರ ಸಸ್ಯಜಾತಿಗಳನ್ನು ಹೋಲುತ್ತದೆ.) ಈ ಹಾಲ್ನೊರೆಯು ವಿಷಕಾರಕವಾಗಿದೆ.ಸಂಪರ್ಕವಾದಾಗ ಚರ್ಮದಲ್ಲಿ ತುರಿಕೆ ಹಾಗೂ ತಾತ್ಕಾಲಿಕ ಕಣ್ಣು ಮಂಜು ಬರುತ್ತದೆ.[]

ಉಪಯೋಗಗಳು

[ಬದಲಾಯಿಸಿ]

ಹಾಲ್ನೊರೆಯನ್ನು ಗಾಯಗಳಿಗೂ ಸಂಧಿವಾತಕ್ಕೂ ಹಲ್ಲುನೋವಿಗೂ ಔಷಧಿಯಾಗಿ ಬಳಸುತ್ತಾರೆ. ಕಿವಿನೋವಿಗೂ ಉಪಯೋಗಿಸುವುದುಂಟು[][]. ಮೀನು ಮತ್ತು ಇಲಿಗಳಿಗೆ ಇದು ವಿಷವೆಂದು ಹೇಳಲಾಗಿದೆ. ಕೋಲುಕಳ್ಳಿ ಗಿಡದ ಇದ್ದಲನ್ನು ಬಂದೂಕಿನ ಸಿಡಿಮದ್ದಿನ ಜೊತೆಗೆ ಉಪಯೋಗಿಸುತ್ತಾರೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Haevermans, T. (2017) [amended version of 2004 assessment]. "Euphorbia tirucalli". IUCN Red List of Threatened Species. 2017 e.T44452A117034216. doi:10.2305/IUCN.UK.2017-2.RLTS.T44452A117034216.en.
  2. "Appendices | CITES". cites.org. Retrieved 2024-01-17.
  3. "Euphorbia tirucalli L." Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved 16 March 2010.
  4. "Aveloz". American Cancer Society. Archived from the original on 26 ಏಪ್ರಿಲ್ 2015. Retrieved 28 ಮಾರ್ಚ್ 2013.
  5. (in Malay) Tumbuhan-tumbuhan perubatan herba, P.13
  6. Euphorbia tirucalli L. in Handbook of Energy Crops, James Duke