ವಿಷಯಕ್ಕೆ ಹೋಗು

ಕೋಲೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Chembox Beilstein

ಕೋಲೀನ್
Choline cation skeletal formula
Ball-and-stick model
ಹೆಸರುಗಳು
ಐಯುಪಿಎಸಿ ಹೆಸರು
2-Hydroxyethyl(trimethyl)azanium[]
Preferred IUPAC name
2-Hydroxy-N,N,N-trimethylethan-1-aminium
Other names
  • Bilineurine
  • (2-Hydroxyethyl)trimethylammonium
  • 2-Hydroxy-N,N,N-trimethylethanaminium
Identifiers
3D model (JSmol)
ChEBI
ChemSpider
DrugBank
ECHA InfoCard 100.000.487
EC Number 200-535-1
E number E1001 (additional chemicals)
324597
KEGG
UNII
  • InChI=1S/C5H14NO/c1-6(2,3)4-5-7/h7H,4-5H2,1-3H3/q+1 checkY
    Key: OEYIOHPDSNJKLS-UHFFFAOYSA-N checkY
  • C[N+](C)(C)CCO
ಗುಣಗಳು
ಆಣ್ವಿಕ ಸೂತ್ರ C5H14NO
ಮೋಲಾರ್ ದ್ರವ್ಯರಾಶಿ ೧೦೪.೧೭ g mol−1
ರಚನೆ
Tetrahedral at the nitrogen atom
Hazards
Main hazards Corrosive
Safety data sheet 4
GHS pictograms GHS05: Corrosive
GHS Signal word
H314
P260, P264, P280, P301+330+331, P303+361+353, P304+340, P305+351+338, P310, P321, P363, P405, P501
NFPA 704
Lethal dose or concentration (LD, LC):
3–6 g/kg (rat, oral)[]
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ಕೋಲೀನ್ ಜೀವಕಣಗಳ ಒಂದು ಘಟಕ. ಕೊಬ್ಬಿನ ಚಯಾಪಚಯದಲ್ಲಿ ಇದರ ಪಾತ್ರ ಹಿರಿದು. ಆದ್ದರಿಂದ ಇದಕ್ಕೆ ಲೈಪೊಟ್ರಾಪಿಕ್ ಕಾರಕ ಎಂದೂ ಹೆಸರಿದೆ. ಇದು ಅಸಿಟೈಲ್ ಕೋಲೀನಿನ ಒಂದು ಘಟಕ ಮತ್ತು ಪೂರ್ವಗಾಮಿ. ಇದರ ಉತ್ಪನ್ನ ಬೀಟೈನ್ ಎನ್ನುವ ಸಸ್ಯ ವಸ್ತುವಿನಿಂದ ಆಗುತ್ತದೆ. ಇವೆಲ್ಲವೂ ಲೈಪೊಟ್ರಾಪಿಕ್ ಕಾರಕಗಳೇ. ದೇಹಕ್ಕೆ ಕೋಲೀನಿನ ಅವಶ್ಯಕತೆಯ ತಿಳಿವಳಿಕೆ ಬಂದದ್ದು 1932ರಲ್ಲಿ. ಸಾಧಾರಣವಾಗಿ ತೆಗೆದುಕೊಳ್ಳುವ ಆಹಾರದಲ್ಲಿ ಕೋಲೀನ್, ಬೀಟೈನ್ ಮತ್ತು ಮಿಥಿಯೋನೀನ್ ಎನ್ನುವ ಪದಾರ್ಥಗಳು ಇದ್ದೇ ಇರುತ್ತವೆ. ಕೋಲೀನ್, ರಾಸಾಯನಿಕ ಸೂತ್ರ [(CH3)3NCH2CH2OH]+.[][][]

ಪ್ರಾಮುಖ್ಯತೆ

[ಬದಲಾಯಿಸಿ]

ಆಹಾರದಲ್ಲಿ ಕೋಲೀನ್ ಅಭಾವ ದೀರ್ಘಕಾಲ ಇದ್ದರೆ ಪಿತ್ತಜನಕಾಂಗದಲ್ಲಿ ಕೊಬ್ಬು ಶೇಖರಿಸುತ್ತದೆ. ಇದು ದೇಹಕ್ಕೆ ಅಹಿತಕಾರಿ. ಇದರ ಪರಿಣಾಮವಾಗಿ ಸಿರ್ಹೊಸಿಸ್ ಎನ್ನುವ ಯಕೃತ್ತಿನ ರೋಗ ಬರುತ್ತದೆ. ಅಲ್ಲದೇ ಹೃದಯದ ಬಡಿತದ ಎಣಿಕೆ ಕಡಿಮೆಯಾಗುತ್ತದೆ ಮತ್ತು ಮಾಂಸಖಂಡಗಳಲ್ಲಿನ ಶಕ್ತಿ ಕಡಿಮೆಯಾಗುತ್ತದೆ. ಹಂದಿ ಮತ್ತು ಇಲಿಗಳ ಮೇಲೆ ಮಾಡಿದ ಪ್ರಯೋಗಗಳಲ್ಲಿ ಈ ತೀರ್ಮಾನಗಳು ಸ್ಥೀರೀಕೃತವಾಗಿವೆ. ಕೋಲೀನಿಗಿರುವ ಗುಣಪಡಿಸುವ ಒಂದೇ ಉಪಯೋಗವನ್ನು ಲೆನೆಕ್ ಎನ್ನುವ ಯಕೃತ್ತಿನ ಸಿರ್ಹೊಸಿಸ್ ರೋಗದಲ್ಲಿ ಕಾಣಬಹುದು. ಲೆನೆಕ್ ಸಿರ್ಹೋಸಿಸ್ ಎಂಬ ರೋಗ ಅತಿಮದ್ಯಸೇವನೆಯಿಂದಲೂ ಜೊತೆಗೆ ಕಡಿಮೆ ಊಟದ ಮಾಡುವುದರಿಂದಲೂ ಕಾಣಿಸಿಕೊಳ್ಳುವುದುಂಟು. ಸಾಂಕ್ರಾಮಿಕ ಹೆಪಟೈಟಿಸ್ ಎನ್ನುವ ಯಕೃತ್ತಿನ ರೋಗದಲ್ಲಿ ಕೋಲೀನನ್ನು ಉಪಯೋಗಿಸಿದಾಗ ಅದು ಗುಣಮುಖವಾಗಿದೆ. ಕೋಲೀನ್ ಕರುಳುಗಳಿಂದ ಶರೀರಕ್ಕೆ ಸೇರುತ್ತದೆ. ಬಾಯಿಯ ಮೂಲಕ ತೆಗೆದುಕೊಂಡ ಕೋಲೀನಿನ 1% ಭಾಗ ಮೂತ್ರಜನಕಾಂಗದ ಮೂಲಕ ವಿಸರ್ಜಿಸಲ್ಪಡುತ್ತದೆ.[]

ಮಾರ್ಪಾಡುಗಳು

[ಬದಲಾಯಿಸಿ]

ಕೋಲೀನಿನ ರಾಸಾಯನಿಕ ರಚನೆಯಲ್ಲಿ ಸ್ವಲ್ಪ ಬದಲಾವಣೆ ಮಾಡುವುದರಿಂದ ಅತಿ ವಿಷವುಳ್ಳ ವಸ್ತುಗಳು ಉತ್ಪತ್ತಿಯಾಗುತ್ತವೆ. ಕೋಲೀನಿನಲ್ಲಿರುವ ನೀರಿನ ಭಾಗವನ್ನು ತೆಗೆದರೆ ಹೆಚ್ಚಿನ ವಿಷವುಳ್ಳ ನ್ಯೂರೀನ್ ಎನ್ನುವ ವಸ್ತು ಉತ್ಪತ್ತಿಯಾಗುತ್ತದೆ. ಕೋಲೀನಿಗೂ ಅಸಿಟೈಲ್ ಕೋಲೀನಿಗೂ ನಿಕಟಸಂಬಂಧ ಉಂಟು. ನರಗಳಲ್ಲಿ ಸ್ಪಂದನಗಳ ಸಾಗಣೆಗೆ ಬೇಕಾಗುವ ವಸ್ತು ಅಸಿಟೈಲ್ ಕೋಲೀನ್. ಇದು ಕೋಲಿನೆರ್ಜಿಕ್ ಎನ್ನುವ ನರಗಳ ಕೊನೆಗಳ ತುದಿಯಲ್ಲಿ ಬಿಡುಗಡೆ ಆಗುತ್ತದೆ. ಆಗ ಇದು ಜಡತೆಯ ಸ್ಥಿತಿಯಲ್ಲಿರುತ್ತದೆ. ಕೂಡಲೇ ಇದು ಕೋಲೀನ್ ಎಸ್ಟರೇಸ್ ಎಂಬ ಎನ್‍ಜೈಮಿನ ಸಹಾಯದಿಂದ ಕೋಲೀನ್ ಮತ್ತು ಅಸಿಟೇಟ್ ಎನ್ನುವ ವಸ್ತುಗಳಾಗಿ ಪರಿವರ್ತನೆಯಾಗುತ್ತದೆ. ಈ ರೀತಿಯ ರಾಸಾಯನಿಕ ಪ್ರತಿಕ್ರಿಯೆ ನರಗಳನ್ನು ಪ್ರಚೋದಿಸಿದಾಗ ಕಾಣುತ್ತದೆ. ಆದರೆ ನರಗಳು ಚೇತರಿಸಿಕೊಳ್ಳುವ ಸಮಯದಲ್ಲಿ ಮತ್ತೆ ಕೋಲೀನ್ ಮತ್ತು ಅಸಿಟೇಟ್‍ಗಳು ಒಂದುಗೂಡುತ್ತವೆ. ಹೀಗೆ ಒಂದುಗೂಡಿಕೆಯಿಂದ ಉಂಟಾದ ಅಸಿಟೈಲ್ ಕೋಲೀನ್ ನರಗಳಲ್ಲಿ ಸೇರಿಕೊಳ್ಳುತ್ತದೆ. ಇದು ಮತ್ತೊಂದು ನರದ ಸ್ಪಂದನಗಳ ಸಾಗಣೆಗೆ ಸಿದ್ಧವಾಗಿ ನಿಂತಿರುತ್ತದೆ. ಕೋಲೀನ್ ಎಸ್ಟರೇಸನ್ನು ತಡೆಯುವ ವಸ್ತುಗಳು ಅಸಿಟೈಲ್ ಕೋಲೀನಿಗೆ ಹೆಚ್ಚು ಕಾಲ ಬಾಳಲು ಅವಕಾಶ ಕೊಡುತ್ತವೆ. ಎಸ್ಟರೀನ್ ಮತ್ತು ನಿಯೋಸ್ಟಿಗ್ಮನುಗಳು ಕೋಲೀನ್ ಎಸ್ಟರೇಸಿನ ಚಟುವಟಿಕೆಯನ್ನು ತಡೆಹಿಡಿಯುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. 1 2 "Choline". PubChem, National Library of Medicine, US National Institutes of Health. 26 October 2024. Retrieved 31 October 2024.
  2. 1 2 Gidding, Curtis E. (2000). "Choline". Kirk-Othmer Encyclopedia of Chemical Technology. doi:10.1002/0471238961.0308151207090404.a01. ISBN 978-0-471-48494-3.
  3. "Choline". Office of Dietary Supplements, US National Institutes of Health. 2 June 2022. Retrieved 31 October 2024.
  4. "21 CFR 107.100: Infant formula; Nutrient requirements; Nutrient specifications; Choline content". Code of Federal Regulations, Title 21; Food and Drug Administration. 1 April 2019. Retrieved 2019-10-24.
"https://kn.wikipedia.org/w/index.php?title=ಕೋಲೀನ್&oldid=1372934" ಇಂದ ಪಡೆಯಲ್ಪಟ್ಟಿದೆ