ವಿಷಯಕ್ಕೆ ಹೋಗು

ಕೋರಿಯೋಲಿಸ್ ಪರಿಣಾಮಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
In the inertial frame of reference (upper part of the picture), the black ball moves in a straight line. However, the observer (red dot) who is standing in the rotating/non-inertial frame of reference (lower part of the picture) sees the object as following a curved path due to the Coriolis and centrifugal forces present in this frame.[೧]

ಕೋರಿಯೋಲಿಸ್ ಪರಿಣಾಮಗಳು ಭೂಮಿಯಿಂದ ಎತ್ತರದಲ್ಲಿ ಸ್ಥಿರ ಆಕಾಶವೇಗದಿಂದ ಚಲಿಸುತ್ತಿರುವ ಯಾವುದೇ ಆಕಾಶಕಾಯ ಆವರ್ತಿಸುತ್ತಿರುವ ಭೂಮಿಯ ಮೈಯನ್ನು ಕುರಿತು ವಿಚಲಿತವಾಗುತ್ತದೆ. ಈ ವಿಚಲನೆಯನ್ನು ಮೊದಲಿಗೆ ಅಭ್ಯಾಸ ಮಾಡಿದವ ಫ್ರೆಂಚ್ ವಿಜ್ಞಾನಿ ಗ್ಯಾಸ್ಟರ್ಡ್‍ಡ ಕೋರಿಯೋಲಿಸ್ ಆದ್ದರಿಂದ ಇದರ ಪರಿಣಾಮಗಳಿಗೆ ಆತನ ಹೆರನ್ನೇ ನೀಡಲಾಗಿದೆ ವೃತ್ತ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವ ಕಣದ ಗತಿ ವಿಜ್ಞಾನವನ್ನು ಅಧ್ಯಯಿಸುವಾಗ mv2/r ಎಂಬ ಕೇಂದ್ರಾಪಗಮನ ಬಲವನ್ನು ಅದರ ಮೇಲೆ ಪ್ರಯುಕ್ತಿಸುವುದು ಸರಿಯಷ್ಟೆ. (m ಆ ಕಣದ ದ್ರವ್ಯರಾಶಿ, v ಅದರ ವೇಗ, r ಕಕ್ಷೆಯ ತ್ರಿಜ್ಯ). ಇದು ಒಂದು ಕಾಲ್ಪನಿಕ ಬಲ. ಕೋರಿಯೋಲಿಸ್ ಬಲ ಸಹ ಇಂಥ ಒಂದು ಕಾಲ್ಪನಿಕ ಬಲ; ಗತಿ ವಿಜ್ಞಾನದ ಸಮೀಕರಣಗಳ ಸಮತೋಲನದಲ್ಲಿ ಎದುರಾಗುವ ಒಂದು ಪರಿಕಲ್ಪನೆ.

ಬಾಹ್ಯಾಕಾಶ ವಿಜ್ಞಾನದಲ್ಲಿ ಬಳಕೆ

[ಬದಲಾಯಿಸಿ]

ಭೂಮಿಯ ದೈನಂದಿನ ಆವರ್ತನೆ ಭೂಮಿಯ ಮೇಲೆ ಅಥವಾ ಆಕಾಶದಲ್ಲಿ ಚಲಿಸುತ್ತಿರುವ ವಸ್ತುಗಳ ಪಥದ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಉದಾಹರಣೆಗೆ ಉತ್ತರ ಮೇರುವಿನಿಂದ ಒಂದು ರಾಕೆಟನ್ನು ಮೈಸೂರಿನತ್ತ ಉಡಾಯಿಸಲಾಗಿದೆ ಎಂದು ಭಾವಿಸೋಣ. ಅದರ ಚಲನ ದರ ಸೆಕೆಂಡಿಗೆ 1 ಮೈಲಿ ಆಗಿದ್ದರೆ ಅದು ಮೈಸೂರಿನ ಅಕ್ಷಾಂಶವನ್ನು (12.50) ತಲಪುವುದರಲ್ಲಿ ಭೂಮಿ ತನ್ನ ಅಕ್ಷದ ಸುತ್ತಲೂ ಸುಮಾರು 22.50 ಯಷ್ಟು ಆವರ್ತಿಸಿರುವುದರಿಂದ ರಾಕೆಟ್ ಮೈಸೂರಿಗೆ ಬದಲು ಅದರ ಪಶ್ಚಿಮಕ್ಕೆ ಸುಮಾರು 1,500 ಮೈಲಿ ದೂರದಲ್ಲಿ ಎಂದರೆ ಅರೇಬಿಯ ಸಮುದ್ರದಲ್ಲಿರುವ ಸೋಕೋತ್ರ ಎಂಬ ದ್ವೀಪವನ್ನು ತಲುಪುತ್ತದೆ. ನೆಲದಿಂದ ನೋಡಿದವರಿಗೆ ರಾಕೆಟ್‍ನ ಪಥ ಒಂದು ಸರಳರೇಖೆಯಾಗಿರದೆ ತನ್ನ ಪಥದಲ್ಲಿ ಅದು ಬಲಭಾಗಕ್ಕೆ ತಳ್ಳಲ್ಪಡುತ್ತಿದೆಯೋ ಎಂದು ಭಾಸವಾಗುವ ವಕ್ರರೇಖೆಯಾಗಿರುತ್ತದೆ. ಭೌತಶಾಸ್ತ್ರದ ನಿಯಮಗಳಿಗೆ ಅನುಸಾರವಾಗಿ ವಕ್ರಪಥದಲ್ಲಿ ಚಲಿಸುತ್ತಿರುವ ವಸ್ತುವಿಗೆ ವೇಗೋತ್ಕರ್ಷ ಇರಲೇಬೇಕು. ಸೂತ್ರದಂತೆ ಮೇರುಗಳ ಮೇಲೆ ಅತ್ಯಧಿಕ ಮೌಲ್ಯವುಳ್ಳ ವೇಗೋತ್ಕರ್ಷ ಸಮಭಾಜಕ ವೃತ್ತದ ಬಳಿ ತೀರ ಕಡಿಮೆಯಾಗಿರುತ್ತದೆ. ರಾಕೆಟ್ ಉತ್ತರ ಮೇರುವಿನಿಂದ ಮೈಸೂರಿಗೆ ಸರಳರೇಖೆಯಲ್ಲಿ ಬರುವಂತಾಗಬೇಕಾದರೆ ಈ ವೇಗೋತ್ಕರ್ಷಕ್ಕೆ ವಿರುದ್ಧ ದಿಕ್ಕಿನಲ್ಲಿ ಬಲವನ್ನೊದಗಿಸಬೇಕು. ಇದೇ ಕೋರಿಯೋಲಿಸ್ ಬಲ. ಭೂಮಿಯ ಆವರ್ತನೆಯಿಂದ ಆಗುವ ಕೋರಿಯೋಲಿಸ್ ಪರಿಣಾಮಗಳನ್ನು ಅನೇಕ ಸಂದರ್ಭಗಳಲ್ಲಿ ಕಾಣಬಹುದು. ಉದಾಹರಣೆಗೆ ಉತ್ತರ ಗೋಲಾರ್ಧದಲ್ಲಿ ಹರಿಯುವ ನದಿಗಳು ತಮ್ಮ ಎಡದಂಡೆಗಿಂತ ಬಲದಂಡೆಯ ಮೇಲೆ ಹೆಚ್ಚು ಒತ್ತಡವನ್ನು ಉಂಟು ಮಾಡುತ್ತವೆ. ವಾಯುಮಂಡಲದ ಚಲನದ ಮೇಲೆ ಉಂಟಾಗುವ ಕೋರಿಯೋಲಿಸ್ ಪರಿಣಾಮ ತುಫಾನುಗಳಿಗೆ ಮತ್ತು ವಾಣಿಜ್ಯ ಮಾರುತಗಳಿಗೆ ಕಾರಣವಾಗುತ್ತದೆ. ಅತಿ ವೇಗದಿಂದ ಚಲಿಸುವ ಆಕಾಶ ನೌಕೆಗಳ ಕಕ್ಷೆಯನ್ನು ನಿರ್ಧರಿಸುವಾಗಲಂತೂ ಈ ಪರಿಣಾಮವನ್ನು ಬಹಳ ಎಚ್ಚರಿಕೆಯಿಂದ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ನೌಕೆಗಳನ್ನು ಕೂಡ ತಮ್ಮ ಅಕ್ಷಗಳ ಸುತ್ತಲೂ ಆವರ್ತಿಸುತ್ತಿರುವುದರಿಂದ ಅಲ್ಲಿ ಉಂಟಾಗುವ ಕೋರಿಯೋಲಿಸ್ ಪರಿಣಾಮವನ್ನೂ ನಿರ್ಧರಿಸಬೇಕಾಗುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
The definition of the Coriolis effect from the Glossary of Meteorology

ಉಲ್ಲೇಖಗಳು

[ಬದಲಾಯಿಸಿ]
  1. ↑ Frautschi, Steven C.; Olenick, Richard P.; Apostol, Tom M.; Goodstein, David L. (2007). The Mechanical Universe: Mechanics and Heat, Advanced Edition (illustrated ed.). Cambridge University Press. p. 396. ISBN 978-0-521-71590-4. Extract of page 396