ವಿಷಯಕ್ಕೆ ಹೋಗು

ಕೋರಿಯಾಪ್ಸಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋರಿಯಾಪ್ಸಿಸ್
Coreopsis gigantea
Scientific classification e
Unrecognized taxon (fix): ಕೋರಿಯಾಪ್ಸಿಸ್
Species

Many, see text

Synonyms[]
  • Acispermum Neck.
  • Calliopsis Rchb.
  • Chrysomelea Tausch
  • Coreopis Gunnerus, orth. var.
  • Coreopsoides Moench
  • Cymbaecarpa Cav.
  • Diplosastera Tausch
  • Leachia Cass.
  • Lophactis Raf.
  • Odoglossa Raf.
  • Pugiopappus A.Gray
  • Selleophytum Urb.
  • Vernasolis Raf.

ಕೋರಿಯಾಪ್ಸಿಸ್ ಆಸ್ಟರೇಸೀ (ಕಂಪಾಸಿಟೀ) ಕುಟುಂಬಕ್ಕೆ ಸೇರಿದ ಒಂದು ಸುಂದರವಾದ ಅಲಂಕಾರ ಸಸ್ಯ[]). ಇದಕ್ಕೆ ಕ್ಯಾಲಿಯಾಪ್ಸಿಸ್ ಎಂಬ ಹೆಸರೂ ಇದೆ. ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಸಸ್ಯಜಾತಿಯಾದ ಇದರಲ್ಲಿ ಸು.50ಕ್ಕೂ ಹೆಚ್ಚು ಪ್ರಭೇದಗಳಿವೆ. ಎಲ್ಲವೂ 3'ಗಿಂತ ಹೆಚ್ಚು ಎತ್ತರಕ್ಕೆ ಬೆಳೆಯದ ಮೂಲಿಕೆ ಸಸ್ಯಗಳು.

ಲಕ್ಷಣಗಳು

[ಬದಲಾಯಿಸಿ]

ಹಲವಾರು ಸಣ್ಣ ಹಾಗೂ ಉದ್ದನೆಯ ವಿಭಾಗಗಳಾಗಿ ಕತ್ತರಿಸಿದ ಅಂದವಾದ ಎಲೆಗಳೂ ಒಂಟಿಹೂಗಳಂತೆ ಕಾಣುವ ಚಂಡುಮಂಜರಿ ಮಾದರಿಯ ಹೂ ಗೊಂಚಲುಗಳೂ ಕೋರಿಯಾಪ್ಸಿಸ್ ಗಿಡದ ವಿಶೇಷ ಲಕ್ಷಣಗಳು. ಹೂಗೊಂಚಲಿನ ಅಂಚಿನಲ್ಲಿ ಉದ್ದಕ್ಕೆ ಚಾಚಿರುವ ಹಲವಾರು ರೇ ಹೂಗಳೂ ಮಧ್ಯಭಾಗದಲ್ಲಿ ಸಣ್ಣಗಾತ್ರದ ಅನೇಕ ಡಿಸ್ಕ್ ಹೂಗಳೂ ಇವೆ. ರೇ ಹೂಗಳ ಬಣ್ಣ ಈ ಗಿಡದ ವಿವಿಧ ಪ್ರಭೇದಗಳಲ್ಲಿ ಹಳದಿ, ಕಂಚು, ಕಿತ್ತಳೆ, ಕಡುಗೆಂಪು ಇತ್ಯಾದಿಯಾಗಿ ವೈವಿಧ್ಯಮಯವಾಗಿದ್ದು ಗಿಡಗಳ ಸೌಂದರ್ಯಕ್ಕೆ ಮುಖ್ಯ ಕಾರಣವೆನಿಸಿದೆ[] .

ಪ್ರಭೇದಗಳು

[ಬದಲಾಯಿಸಿ]

ಉದ್ಯಾನ ಪ್ರ್ರಾಮುಖ್ಯದ ದೃಷ್ಟಿಯಿಂದ ಹೆಚ್ಚು ಪ್ರಸಿದ್ಧವಾಗಿರುವ ಕೋರಿಯಾಪ್ಸಿಸ್ ಪ್ರಭೇದಗಳು ಇವು: 1 ಕೋ.ಡ್ರಮಾಂಡಿಯೈ. 8"-10" ಎತ್ತರಕ್ಕೆ ಬೆಳೆಯುವ ಕುಳ್ಳುಪ್ರಭೇದ; ಪುಷ್ಪಸಮೃದ್ಧಿಗೆ ಹೆಸರಾಗಿದೆ. ಹೂಗಳ ಬಣ್ಣ ಹಳದಿ. 2 ಕೋ.ಗ್ರಾಂಡಿಫ್ಲೋರ. 3 ಎತ್ತರಕ್ಕೆ ಬೆಳೆಯುತ್ತದೆ. ಹೂಗಳ ಬಣ್ಣ ಕಿತ್ತಳೆ ಮಿಶ್ರಿತ ಹಳದಿ. 3 ಕೋ. ಟಿಂಕ್ಟೋರಿಯ. 1'-3' ಎತ್ತರಕ್ಕೆ ಬೆಳೆಯುತ್ತದೆ; ಕಡುಗೆಂಪು ಬಣ್ಣದ ಹೂಗಳಿಂದಾಗಿ ಪ್ರಸಿದ್ಧವಾಗಿದೆ. 4 ಕೋ.ಕರೊನೇರಿಯ. ಉಳಿದೆಲ್ಲ ಬಗೆಗಳಿಗಿಂತ ತಡವಾಗಿ ಹೂ ಬಿಡುತ್ತದೆ.

ಕೋರಿಯಾಪ್ಸಿಸ್ ಗಿಡವನ್ನು ಮಡಿಗಳಲ್ಲೂ ಕುಂಡಗಳಲ್ಲೂ ಬೆಳೆಸಬಹುದು. ಇದರ ಬೇರುಗಳು ಹರಡಲು ಹೆಚ್ಚು ಸ್ಥಳ ಬೇಕಾಗುವುದರಿಂದ ಕುಂಡಗಳಿಗಿಂತ ನೇರವಾಗಿ ನೆಲದಲ್ಲಿ ಬೆಳೆಸುವುದೇ ಉತ್ತಮ. ಇದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ. ವರ್ಷದ ಯಾವ ಕಾಲದಲ್ಲಾದರೂ ಇದನ್ನು ಬೆಳೆಸಬಹುದು. ಮೊದಲು ಒಟ್ಲು ಪಾತಿಗಳಲ್ಲಿ ಬೀಜ ಬಿತ್ತಿ ಸಸಿಗಳನ್ನು ಪಡೆದು ಸಸಿಗಳಲ್ಲಿ 6ನೆಯ ಎಲೆ ಹೊರಟಾಗ ಬೇರೆ ಮಡಿಗಳಿಗೆ ವರ್ಗಾಯಿಸಬೇಕು. ಒಂದು ಸಸಿಯಿಂದ ಇನ್ನೊಂದಕ್ಕೆ 1'-1 ಳಿ ಅಂತರ ಇರಬೇಕು. ಕಾಲಕಾಲಕ್ಕೆ ಕೊಟ್ಟಿಗೆ ಗೊಬ್ಬರ ಮತ್ತು ಹಿಂಡಿಗೊಬ್ಬರದ ದ್ರಾವಣ ಹಾಕುತ್ತ ಇದ್ದು ಗಿಡಗಳು 75 ದಿವಸ ವಯಸ್ಸಿನವಾದಾಗ ಅವುಗಳ ತುದಿಯನ್ನು ಚಿವುಟಿಹಾಕಬೇಕು. ಹೀಗೆ ಮಾಡಿದರೆ ಮುಂದೆ 15 ದಿವಸಗಳಲ್ಲಿ ಗಿಡಗಳು ಹೂಬಿಡಲು ಪ್ರಾರಂಭಿಸುತ್ತವೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • Flora of North America: Coreopsis
  • Wikispecies logo ವಿಕಿಸ್ಪೀಸೀಸ್‍ನಲ್ಲಿ ಕೋರಿಯಾಪ್ಸಿಸ್ ಗೆ ಸಂಬಂಧಿತ ದತ್ತಾಂಶ
  • Wikimedia Commons logo ವಿಕಿಮೀಡಿಯಾ ಕಾಮನ್ಸ್ನಲ್ಲಿ ಕೋರಿಯಾಪ್ಸಿಸ್ ಗೆ ಸಂಬಂಧಿತ ಮಾಧ್ಯಮ

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. "Coreopsis L." Plants of the World Online. Royal Botanic Gardens, Kew. Retrieved 13 March 2025.
  2. Sunset Western Garden Book, 1995:606–607
  3. "Coreopsis For the Mid-Atlantic Region Research Report". December 2015. Retrieved 27 January 2017.