ಕೋಣಂದೂರು ಲಿಂಗಪ್ಪ

ವಿಕಿಪೀಡಿಯ ಇಂದ
Jump to navigation Jump to search
  • ವಿದ್ಯಾರ್ಥಿ ಜೀವನದಲ್ಲೇ ಮೈಸೂರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಕೋಣಂದೂರು ಲಿಂಗಪ್ಪ ಅವರು ಕನ್ನಡ ಯುವಜನ ಸಭಾ ಎಂಬ ಸಂಘಟನೆ ಸ್ಥಾಪಿಸಿ ಕನ್ನಡ ಚಳವಳಿಯಲ್ಲಿ ತೊಡಗಿದ್ದರು. ದೇವರಾಜ ಅರಸು ಅವರ ಉಳುವವನೇ ಭೂಮಿಯ ಒಡೆಯ ಘೋಷವಾಕ್ಯದಡಿ ಭೂ ಸುಧಾರಣೆ ಪರ ಹೋರಾಟ ಮಾಡಿದ್ದರು. ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ್ದ ಅವರು ಅದಕ್ಕೂ ಮುನ್ನವೇ ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ ಅವರ ಜತೆಗೂಡಿ ಗೇಣಿದಾರರ ಪರ ಹೋರಾಟದಲ್ಲಿ ತೊಡಗಿದ್ದರು. 1972ರಿಂದ 78ರವರೆಗೆ ಎರಡು ಅವಧಿಯಲ್ಲಿ ಶಾಸಕರಾಗಿದ್ದ ಲಿಂಗಪ್ಪ ಅವರು ಉತ್ತಮ ಸಂಸದೀಯ ಪಟುವೂ ಆಗಿದ್ದರು. ಹಾವನೂರು ವರದಿ ಜಾರಿಗೆ ಹೋರಾಟ ಮಾಡಿದ್ದರು. ಅಲ್ಲದೆ, ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಹಕ್ಕೊತ್ತಾಯವನ್ನೂ ಮಾಡಿದ್ದರು.
  • ಶ್ರೀ ಕೋಣಂದೂರು ಲಿಂಗಪ್ಪನವರು ಕರ್ನಾಟಕದ ಹಿರಿಯಾ ಸಮಾಜವಾದಿ ನಾಯಕರು. ತೀರ್ಥಹಳ್ಲಿ ವಿಧಾನಸಭಾ ಕ್ಷೇತ್ರದಿಂದ ೧೯೭೨ ರಿಂದ ೧೯೭೮ ರವರೆಗೆ ಶಾಸಕರಾಗಿ ಆಯ್ಕೆಯಾಗಿದ್ದವರು. ಇವರು ಹಿರಿಯ ಸಮಾಜವಾದಿ ನಾಯಕರಾದ ದಿ. ಶ್ರೀ ಶಾಂತವೇರಿ ಗೋಪಾಲಗೌಡ ಅವರ ಶಿಷ್ಯ. ಇವರಿಗೆ (77ನೇ ವಯಸ್ಸಿನಲ್ಲಿ) ಕರ್ನಾಟಕ ರಾಜ್ಯ ಸರ್ಕಾರ 2013 ರಲ್ಲಿ ಪ್ರತಿಷ್ಠಿತ "ದೇವರಾಜ ಅರಸು ಪ್ರಶಸ್ತಿ" ನೀಡಿ ಗೌರವಿಸಿದೆ[೧]. ಇವರು ತೀರ್ಥಹಳ್ಳಿ, ಶಿವಮೊಗ್ಗ, ಮೈಸೂರು ಮತ್ತು ಬೆಂಗಳೂರಿನಲ್ಲಿ ಶಿಕ್ಷಣವನ್ನು ಪಡೆದರು.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

<references>  1. "ದೇವರಾಜ ಅರಸು ಪ್ರಶಸ್ತಿ