ವಿಷಯಕ್ಕೆ ಹೋಗು

ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ ಕರಾವಳಿಯ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಕಂಡುಬರುವ ಒಂದು ಗ್ರಾಮ. ಇದು ಕರಾವಳಿ ಕರ್ನಾಟಕದ ಶಕ್ತಿಪೀಠದಲ್ಲಿ ಒಂದು.ಇಲ್ಲಿ ನೆಲೆನಿಂತ ದೇವಿ ಅಮೃತೇಶ್ವರೀ. ಕಲಿಯುಗದಲ್ಲೂ ನೋಡಬಹುದಾದ ಪವಾಡ ಮಾಡುವಳು. ಸಂತಾನ ಪ್ರಾಪ್ತಿಗಾಗಿ ದೇಶದ ನಾನಾ ಭಾಗಗಳಿಂದ ಭಕ್ತರು ಈ ದೇವಾಲಯಕ್ಕೆ ಆಗಮಿಸಿ ಪ್ರಾ‍ರ್ಥನೆ,ಹರಕೆ ಸಲ್ಲಿಸುವರು.ಈ ದೇವಿಯು ಹಲವು ಮಕ್ಕಳ ತಾಯಿಯೆಂದೇ ಹೆಸರುವಾಸಿಯಾಗಿರುವಳು.[]

[]

ಇಲ್ಲಿನ ವಿಶೇಷತೆ

[ಬದಲಾಯಿಸಿ]

ದೇವಾಲಯದ ಸುತ್ತಲು ಪ್ರತಿವರ್ಷ ತನ್ನಿಂದ ತಾನೇ ಲಿಂಗಗಳು ಹುಟ್ಟಿಕೊಳ್ಳುತ್ತವೆ.ಅಷ್ಟೇ ಅಲ್ಲದೆ ಅಲ್ಲಿ ಹುಟ್ಟುವ ಲಿಂಗಗಳು ದಿನಕಳೆದಂತೆ ಬೆಳೆಯುತ್ತಾ ಹೋಗುತ್ತದೆ.ಅಮೃತೇಶ್ವರೀ ದೇವಿಯು ಆ ಲಿಂಗಗಳ ತಾಯಿಯೆಂದು ವಾಡಿಕೆ ಇದೆ. ಮಕ್ಕಳಾಗದೆ ಇರುವವರು ಆ ಲಿಂಗಗಳಿಗೆ ತುಪ್ಪ ಹಚ್ಚುವ ಮೂಲಕ ಅಥವಾ ಇನ್ನಿತರ ಅಭಿಷೇಕ ಮಾಡುವ ಮೂಲಕ ಹರಕೆ ತೀರಿಸುತ್ತಾರೆ.

ಸ್ಥಳ ಪುರಾಣ

[ಬದಲಾಯಿಸಿ]

ರಾಮಯಣದ ಕಾಲದಲ್ಲಿ ರಾವಣನ ಬಂದುವಾದ ಗರಸೂರನು ಪತ್ನಿ ಕುಂಬಮುಖಿ ಹಾಗೂ ತಂಗಿ ಶೂರ್ಪಾನಕಿಯೊಂದಿಗೆ ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದರು. ಒಂದು ದಿನ ಪತ್ನಿ ಮತ್ತು ಸಹೋದರಿ ಸಂಚಾರಕ್ಕೆಂದು ಹೊರಟಾಗ ಅದೇ ದಾರಿಯಲ್ಲಿ ಏಕಮುಖವೆಂಬ ಮಹರ್ಷಿಯ ವಿಧವೆಪತ್ನಿಯಾದ ಅತೀಪ್ರಭೆ ಎಂಬುವವಳು ತನ್ನ ಮಗ ಭವಸುತ ಎಂಬುವವನೊಂದಿಗೆ ಅದೇ ಮಾರ್ಗದಲ್ಲಿ ತೀರ್ಥಯಾತ್ರೆಗೆ ಹೊರಟಿದ್ದರು.ಶೂರ್ಪಾನಕೆಯೂ ಭವಸುತನ ಸೌಂದರ್ಯಕ್ಕೆ ಮರುಳಾಗಿ ತನ್ನನ್ನು ವಿವಾಹವಾಗುವಂತೆ ಕೇಳಿದಾಗ ಅವನು ನೀರಾಕರಿಸಿದನು.ಇದರಿಂದ ಕೋಪಗೊಂಡ ಶೂರ್ಪಾನಕಿ ಅವನನ್ನು ಸಂಹರಿಸುತ್ತಾಳೆ.ಆತನ ತಾಯಿ ತನ್ನ ಮಗನನ್ನು ಕೊಂದದ್ದು ಕುಂಬಮುಖಿ ಎಂದು ತಿಳಿದು ನಿನಗೆ ಮಕ್ಕಳಾಗದಿರಲಿ ಎಂದು ಶಾಪ ನಿಡುತ್ತಾಳೆ.ಪುನಃ ಮನವರಿಕೆಯಾದಾಗ ಶೂರ್ಪಾನಕಿ ಎಂದು ತಿಳಿದು ನೀನು ಮುಂದೆ ವ್ಯಾಮೋಹಕ್ಕೇ ಒಳಗಾದ ವ್ಯಕ್ತಿಯಿಂದಲೇ ನಿನ್ನ ಸಾವು ಎಂದು ಶಾಪಕೊಟ್ಟು ಅಲ್ಲೇ ಹರಿಯುತ್ತಿದ್ದ ಪ್ರಪಾತಕ್ಕೆ ಹಾರುವಳು.ನಂತರ ಶಾಪಗ್ರಸ್ಥೆಯಾದ ಕುಂಬಮುಖಿ ನಡೆದ ಘಟನೆಯಲ್ಲ ಗರಸೂರನಿಗೆ ತಿಳಿಸಿ ಅವನು ಶೂರ್ಕಾಚಾರ್ಯರ ಬಳಿ ಹೇಳಿದಾಗ ಅವರು ಗರಸುರನಿಗೆ ಒಂದು ಲಿಂಗ ನಿರ್ಮಿಸಿ ಪೂಜಿಸಲು ಮತ್ತು ಕುಂಬಮುಖಿಗೆ ದೇವಿಯನ್ನು ಸ್ಥಾಪಿಸಿ ಪೂಜಿಸಲು ತಿಳಿಸಿದರು. ಶಂಕಪುರ ಎಂಬಲ್ಲಿ ಗರಾಸುರನು ಲಿಂಗ ನಿರ್ಮಿಸಿ ಕುಂಭಮುಖಿ ಅದರ ಪಕ್ಕದಲ್ಲಿಯೇ ದೇವಿಯ ವಿಗ್ರಹವನ್ನು ನಿರ್ಮಿಸಿ ಪೂಜಿಸಿದರು. ಅವರ ಭಕ್ತಿಗೆ ಪ್ರತ್ಯಕ್ಷವಾದ ದೇವಿಯು ಏನು ಬೇಕೆಂದಾಗ ಅವಳು ತನ್ನ ಬೇಡಿಕೆಯನ್ನು ಮರೆತು ಬೇರೆಯೇ ಬೇಡಿಕೆ ಕೇಳುವಳು. ದೇವಿಯು ವರ ನೀಡಿ ಮಾಯವಾಗುತ್ತಾಳೆ ನಂತರ ಮನವರಿಕೆಗೊಂಡ ಕುಂಬಮುಖಿಯು ನಾನು ತಪ್ಪು ಮಾಡಿದೆನಲ್ಲ ಎಂದು ಬೇಸರಗೊಂಡಳು. ನಂತರ ದೇವಿಯೂ ಅವಳ ತಪ್ಪನ್ನು ಕ್ಷಮಿಸಿ ಹಲವು ಮಕ್ಕಳ ತಾಯಿಯಾಗಿ ಈಗಿನ ಕೋಟ ಕ್ಷೇತ್ರದಲ್ಲಿ ನೆಲೆಸಿರುವಳು.

ಉಪಸಂಹಾರ

[ಬದಲಾಯಿಸಿ]

ಈ ಕ್ಷೇತ್ರದಲ್ಲಿ ಹರಕೆ ಯಕ್ಷಗಾನ ನಡೆಯಲಿದ್ದು ಮಕ್ಕಳಾದ ಮೇಲೆ ಆ ದೇವಿಗೆ ಹರಕೆ ಪೂಜೆ ವಿಧಿ ವಿಧಾನ ನಡೆಸುವವರು. ದೇಶ ವಿದೇಶಗಳಿಂದ ಸಹಸ್ರಾರು ಮಂದಿ ಭಕ್ತಧಿಗಳು ಈ ದೇವಾಲಯಕ್ಕೇ ಆಗಮಿಸುತ್ತಾರೆ. ಕೋಟ ಕ್ಷೇತ್ರವು ಪ್ರಸಿದ್ದ ಪವಿತ್ರ ಕ್ಷೇತ್ರವಾಗಿ ರೂಪಗೊಂಡಿದೆ.

ಉಲ್ಲೇಖಗಳು

[ಬದಲಾಯಿಸಿ]

kota Amruteshwari Temple Archived 2023-01-01 ವೇಬ್ಯಾಕ್ ಮೆಷಿನ್ ನಲ್ಲಿ. News Next Kannada

  1. "Shri Keshorai Patan ( Atishay Kshetra) Kota Rajasthan India". www.jainjagat.com. Archived from the original on 31 ಜನವರಿ 2020. Retrieved 21 December 2022.
  2. "Kota Amrutheshwari Temple - Famous Sapta Kshetra And Dakshin Kannada Temples - FAMOUS TEMPLES IN INDIA". indiatemple.net. Retrieved 21 December 2022.