ಕೊಡತಿಬೆಟ್ಟು
| Hammer toe | |
|---|---|
| ಸಮಾನಾರ್ಥಕ ಹೆಸರು/ಗಳು | Contracted toe |
| Human feet with hammer toes | |
| ವೈದ್ಯಕೀಯ ವಿಭಾಗಗಳು | Podology, ಮೂಳೆ ಶಸ್ತ್ರಚಿಕಿತ್ಸೆ |
ಕೊಡತಿಬೆಟ್ಟು (ಹ್ಯಾಮರಟೋ) ಸಾಮಾನ್ಯವಾಗಿ ಕಾಲಿನ ಎರಡನೆ ಬೆರಳಿನಲ್ಲಿ ಕಂಡುಬರುವ ಅಂಗವಿಕಾರ. ಬೆರಳೆಲು ಕೀಲಿನಲ್ಲಿ ಕೆಳಬಾಗಿ ಬೆರಳತುದಿ ನೆಲ ಸವರುತ್ತದೆ. ಹೀಗೆ ಬಾಗಿ ಕೊಡತಿ ಆಕಾರ ತಾಳುತ್ತದೆ. ಪ್ರಧಾನವಾಗಿ ಬಾಗಿದ ಬೆರಳಿನ ಮೇಲ್ಬಾಗದಲ್ಲಿ ಒತ್ತುಗಂಟು ಅಥವಾ ಆಣೆ ಬೆಳೆದು ನೊವುಂಟು ಮಾಡುತ್ತದೆ. ಈ ವಿಕಾರವು ಎರಡೂ ಕಾಲುಗಳಲ್ಲಿಯೂ ಮತ್ತು ಒಂದಕ್ಕಿಂತ ಹೆಚ್ಚು ಬೆರಳುಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಇದು ಸಂಜಾತವಾಗಿ ಅಥವಾ ಅನುವಂಶಿಕವಾಗಿಯೂ ಇರಬಹುದು. ಬಿಗಿಯಾದ ಇಲ್ಲವೆ ಪಾದಗಳಿಗೆ ಹೊಂದಿಕೊಳ್ಳದ ಪಾದರಕ್ಷೆಗಳನ್ನು ಉಪಯೋಗಿಸವದರಿಂದಲೂ ಕೊಡತಿಬೆಟ್ಟಿನ ವಿಕಲತೆ ಮೂಡಬಹುದು.
ಚಿಕಿತ್ಸೆ
[ಬದಲಾಯಿಸಿ]ಎಳೆವಯಸ್ಸಿನಲ್ಲಿ ಚಿಕಿತ್ಸೆ ಸರಳ ಮತ್ತು ಫಲದಾಯಕ. ಬೆರಳನ್ನು ನೇರಗೊಳಿಸಿ ಬಾಗದಂತೆ ಪಟ್ಟಿ ಕಟ್ಟಿ ಸರಿಪಡಿಸಬಹುದು. ವಯಸ್ಕರÀಲ್ಲಿ ಶಸ್ತ್ರ ಚಿಕಿತ್ಸೆ ಬೇಕಾಗುತ್ತದೆ.[೧] ಬೆರಳಿನ ಮೇಲೆ ಬೆಳೆದ ದಡ್ಡು ಅಥವಾ ಆಣಿ ಕೊಯ್ತೆಗೆದು ಬಾಗಿದ ಎಲುಬಿನ ಭಾಗಗಳನ್ನು ಮೊಟಕಗೊಳಿಸಿ ಬೆರಳನ್ನು ನೇರಗೊಳಿಸ ಬೇಕಾಗುತ್ತದೆ. ಮೊಟಕುಗೊಳಿಸಿದ ಮೂಳೆಗಳು ಸರಿಯಂತೆ ಒಳೆಲುತಂತಿ ಜೋಡಿಸಬೇಕಾಗುತ್ತದೆ. ಇದರಿಂದ ನೋವಿಲ್ಲದ ಚಲನೆರಹಿತ ಬೆರಳು ಫಲಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]
- ↑ "Benefits and Risks of Hammertoe Surgery". Archived from the original on 2017-08-11. Retrieved 2017-06-29.