ಕೊಂಬಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಮುನ್ನುಡಿ[ಬದಲಾಯಿಸಿ]

ಕೊಡುಗು ಜಿಲ್ಲೆಯಲ್ಲಿ ಕಂಡುಬರುವ ಕೆಲವು ವಿಶಿಷ್ಟ ಕಲೆಗಳಲ್ಲಿ 'ಕೊಂಬಾಟ್' ಕಲೆಯೂ ಒಂದು. ದೈವೀ ಆರಾಧನೆಯ ಹಿನ್ನೆಲೆಯಲ್ಲಿ ಬೆಳೆದು ಬಂದಿರುವ ಈ ಕಲೆಯನ್ನು ಹಬ್ಬ, ಹುಣ್ಣಿಮೆ, ಜಾತ್ರಾ ಉತ್ಸವಗಳಲ್ಲಿ ಪ್ರದರ್ಶಿಸುತ್ತಾರೆ. ಕಲಾವಿದರು ಕೈಯಲ್ಲಿ ಜಿಂಕೆಯ ಕೊಂಬುಗಳನ್ನು ಹಿಡಿದುಕೊಂಡು ಕುಣಿಯುವದರಿಂದ ' ಕೊಂಬಾಟ್ ' ಎಂಬ ಹೆಸರು ಬಂದಿದೆ. ಈ ಕಲೆಯನ್ನು ಕೊಡವರು ಹವ್ಯಾಸಿ ಕಲೆಯಾಗಿ ಉಳಿಸಿಕೊಂಡು ಬಂದಿದ್ದಾರೆ.

ಹಿನ್ನೆಲೆ[ಬದಲಾಯಿಸಿ]

ಲೋಕ ಕಂಟಕನಾದ ಭಸ್ಮಾಸುರನನ್ನು ಸಂಹಾರ ಮಾಡಲು ವಿಷ್ಣು ಅವತಾರವೆತ್ತಿದಾಗ ಮಾಡಿದ ಒಂದು ನೃತ್ಯದಲ್ಲಿ ಕೊಂಬನ್ನು ಹಿಡಿದು ಕುಣಿದನೆಂದೂ, ಇನ್ನೊಮ್ಮೆ ಪೀಲಿಯನ್ನು (ನವಿಲು) ಹಿಡಿದು ಕುಣಿದನೆಂದೂ ಕಲಾವಿದರು ಹೇಳುತ್ತಾರೆ. ಮಹಾವಿಷ್ಣುವಿನ ಅವತಾರದ ಸಂಕೇತವೇ ಈ ಕಲೆಗಳು ಎಂಬುದು ಅವರ ನಂಬಿಕೆ.

ಭಾಗವಹಿಸುವಿಕೆ[ಬದಲಾಯಿಸಿ]

ಎಷ್ಟು ಜನ ಬೇಕಾದರೂ ಪ್ರದರ್ಶನದಲ್ಲಿ ಭಾಗವಹಿಸಬಹುದಾದ ಈ ಕಲೆಗಳಲ್ಲಿ ಬಹುತೇಕವಾಗಿ ಗ್ರಾಮದ ಹಿರಿಯ ಪ್ರಮುಖರು ಭಾಗವಹಿಸುತ್ತಾರೆ. ಇವರಲ್ಲಿ ಕೆಲವರು ನಾಯಕರು. ಕೊಡಗಿನ ಸಂಪ್ರದಾಯಕವಾದ ರುಮಾಲು. ಬಿಳಿಯ ಅಥವಾ ಕರಿಯ ಕುಪ್ಪಸ, ನಡುವಿಗೆ ರೇಷ್ಮೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ದೇವತಾ ಕಾರ್ಯಗಳ ಸಂದರ್ಭದಲ್ಲಿ ದೇವಸ್ಥಾನದ ಬಳಿ ಸೇರಿಕೊಳ್ಳುವ ಕಲಾವಿದರು ಕೈಯಲ್ಲಿ ಕೊಂಬು ಅಥವಾ ' ಪೀಲಿ'ಗಳನ್ನು ಹಿಡಿದು ಬೆಂಕಿ ಗುಡ್ಡೆಗಳ ಸುತ್ತಲೂ ಕುಣಿಯುತ್ತಾರೆ,

ವಾದ್ಯಗಳು[ಬದಲಾಯಿಸಿ]

ಕೊಡವರ ದುಡಿ ಮತ್ತು ಹರಿಜನರ ಡೋಲು, ಕೊಂಬು, ಪರೆ, ತಾಳ ಇತ್ಯಾದಿ ವಾದ್ಯಗಳನ್ನು ಬಳಸುತ್ತಾರೆ. ಕುಣಿತಕ್ಕೆ ಹಿಮ್ಮೇಳ, ಕೊಂಬಾಟ್ ಮತ್ತು ಪೀಲಿಯಾಟ್ ಕುಣಿತದ ರೀತಿ ನೋಟಕ್ಕೆ ಹುತ್ತರಿ ಕೋಲಾಟದಂತೆ ಕಂಡರೂ ಇಲ್ಲಿನ ಗತ್ತುಗಳಲ್ಲಿ ಸ್ಪಷ್ಟ ಬದಲಾಣೆ ಕಾಣಬಹುದು, ಕಲಾವಿದರು ಜೋಡಿ ಸಾಲುಗಳಲ್ಲಿ ಸುತ್ತು ಸಾಲಿನಲ್ಲಿ ಕುಣಿಯುತ್ತಾರೆ, ಕುಣಿಯುವಾಗ ಸಾಮಾನ್ಯವಾಗಿ 'ಕೊಂಬು' ಅಥವಾ 'ಪೀಲಿ' ಹಿಡಿದ ಕೈಗೆ ಹೆಚ್ಚಿನ ಚಲನ ಇರುತ್ತದೆ,

ಉಪಸಂಹಾರ[ಬದಲಾಯಿಸಿ]

ಕೊಂಬಾಟ್ ಮತ್ತು ಪೀಲಿಯಾಟ್ ಕಲೆಗಳನ್ನು ಕೊಡವರು ಸಾಮಾನ್ಯವಾಗಿ ತಮ್ಮ ಗ್ರಾಮದ ಪ್ರಮುಖ ದೇವತೆಗಳ ಆರಾಧನೆಯ ಅಂಗವಾಗಿ ಪ್ರದರ್ಶಿಸುತ್ತಾರೆ, ಉದಾಹರಣೆಗೆ ವೀರರಾಜಪೇಟೆಯ ಕಡೆ ಕಾರ್ಕೋಟ ಕಾಲ ಭೈರವ ದೇವರ ಆರಾಧನೆಗಾಗಿ ನಡೆದರೆ, ಸೋಮವಾರಪೇಟೆ ಭಾಗದಲ್ಲಿ ಕಾಳಿದೇವರ ಆರಾಧನೆಗಾಗಿ ನಡೆಯುತ್ತದೆ.

ಉಲ್ಲೇಖ[ಬದಲಾಯಿಸಿ]

  1. ಸಂಪಾದಕರು: ಗೊ. ರು. ಚನ್ನಬಸಪ್ಪ, ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ೧೯೭೭, ಪುಟ: ೩೭-೩೮.
"https://kn.wikipedia.org/w/index.php?title=ಕೊಂಬಾಟ್&oldid=788925" ಇಂದ ಪಡೆಯಲ್ಪಟ್ಟಿದೆ