ಕೈಸರ್ ಬಾಗ್, ಅಮೃತಸರ್
ಗೋಚರ
ಅನನ್ಯವಾದ ಗೋಥಿಕ್ ಹಾಗು ಮುಘಲ್ ಸಮ್ಮಿಲನದ ಕಟ್ಟಡದ ಶೈಲಿಯನ್ನು ಬಿಂಬಿಸುವ ಉದ್ಯಾನವನವೇ ಅಮೃತಸರದಲ್ಲಿರುವ ಕೈಸರ್ ಬಾಗ್. ಸುಮಾರು ವರ್ಷಗಳ ಹಿಂದೆ 1845-50 ಅವಧಿಯಲ್ಲಿ ಚತುಷ್ಕೋನದಾಕಾರದ ಪಾರ್ಕ್‌ನ ಆಕರ್ಷಣೀಯ ಪ್ರವೇಶದ್ವಾರದಲ್ಲಿ ಇದ್ದ ಸಾಲುಮೆಟ್ಟಿಲುಗಳು ಸೇತುವೆಯಂತೆ ಕಾಣುತ್ತಿದ್ದವು. ಸೇತುವೆಯ ಮಧ್ಯಭಾಗದಲ್ಲಿ ಇಂಡೋ-ಗೋಥಿಕ್ ಶೈಲಿಯ ಮಂದಿರ ಸುಂದರವಾಗಿ ಕಾಣಿಸುತ್ತದೆ.[೧]
ಗಾರ್ಡನ್‌ನ ಮುಖ್ಯ ಅಂತಸ್ತಿನಲ್ಲಿರುವ ಪೆವಿಲಿಯನ್‌ನ ಮೂರು ಬದಿಗಳನ್ನು ಹಳದಿ ಬಣ್ಣದ ಇಟ್ಟಿಗೆಗಳಿಂದ ಕಟ್ಟಲಾಗಿದೆ. ಗುಂಪಾಗಿ ಕಾಣುವ ಗುಮ್ಮಟಗಳು ಮತ್ತು ಕಪೋಲಾಗಳು ಯಾತ್ರಿಕರಿಗೆ ಮೇಲಿಂದ ಮೇಲೆ ಭೇಟಿ ನೀಡುವಂತೆ ಪ್ರೇರೇಪಿಸುತ್ತವೆ. ನಿಸರ್ಗದ ಸೌಂದರ್ಯವನ್ನು ತಮ್ಮ ಕಣ್ಣೆಂಬ ಲೆನ್ಸಿನಲ್ಲಿ ಸೆರೆಹಾಕಲು ಪ್ರವಾಸಿಗರಿಗೆ ಅಮೃತಸರದಲ್ಲಿರುವ ಈ ಗಾರ್ಡನ್ ಸೂಕ್ತ ಸ್ಥಳ.[೨]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-08-12. Retrieved 2016-07-02.
- ↑ "ಆರ್ಕೈವ್ ನಕಲು". Archived from the original on 2014-10-30. Retrieved 2016-07-02.