ಕೇಂಬ್ರಿಜ್ -ಮ್ಯಾಸಚೂಸೆಟ್ಸ್
ಕೇಂಬ್ರಿಜ್ -ಮ್ಯಾಸಚೂಸೆಟ್ಸ್ | |
|---|---|
| Motto(s): ಟೆಂಪ್ಲೇಟು:Force singularLiteris Antiquis Novis Institutis Decora (Latin) "Distinguished for Classical Learning and New Institutions""[೧] | |
Location of Cambridge in Middlesex County, Massachusetts | |
| Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Boston Metro" does not exist. | |
| Coordinates: 42°22′25″N 71°06′38″W / 42.37361°N 71.11056°W | |
| Country | United States |
| State | Massachusetts |
| County | Middlesex |
| Region | New England |
| Settled | 1630 |
| Incorporated | 1636 |
| City | 1846 |
| Named after | University of Cambridge |
| Government | |
| • Type | Council–manager |
| • Mayor | Sumbul Siddiqui |
| • Vice mayor | Burhan Azeem |
| • City manager | Yi-An Huang |
| Area | |
• Total | ೭.೧೦ sq mi (೧೮.೪೦ km2) |
| • Land | ೬.೪೦ sq mi (೧೬.೫೭ km2) |
| • Water | ೦.೭೧ sq mi (೧.೮೩ km2) |
| Elevation | ೪೦ ft (೧೨ m) |
| Population (2020) | |
• Total | ೧,೧೮,೪೦೩ |
| • Density | ೧೮,೫೧೨.೦೪/sq mi (೭,೧೪೭.೦೧/km2) |
| • Demonym | Cantabrigian |
| Time zone | UTC−5 (Eastern) |
| • Summer (DST) | UTC−4 (Eastern) |
| ZIP Codes | 02138–02142 |
| Area code | 617 / 857 |
| FIPS code | 25-11000 |
| GNIS feature ID | 0617365 |
| Website | cambridgema |
ಕೇಂಬ್ರಿಜ್ -ಮ್ಯಾಸಚೂಸೆಟ್ಸ್ ಅಮೆರಿಕ ಸಂಯುಕ್ತಸಂಸ್ಥಾನದ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿರುವ ಒಂದು ನಗರ. ಮ್ಯಾಸಚೂಸೆಟ್ಸ್‍ನ ರಾಜಧಾನಿಯೂ ಮ್ಯಾಸಚೂಸೆಟ್ಸ್ ಕೊಲ್ಲಿಯ ಮೇಲಿರುವ ಬಂದರೂ ಆದ ಬಾಸ್ಟನ್ ನಗರಕ್ಕೆ ಎದುರಾಗಿದೆ. ಮಿಡ್ಲ್ ಸೆಕ್ಸ್ ಕೌಂಟಿಯ ಕೇಂದ್ರ. ಜನಸಂಖ್ಯೆ ೧,೧೮,೪೦೩ (೨೦೨೦).
ಇತಿಹಾಸ
[ಬದಲಾಯಿಸಿ]ಇಲ್ಲಿ ಮೊಟ್ಟಮೊದಲ ವಸತಿ ಸ್ಥಾಪಿತವಾದ್ದು 1630ರಲ್ಲಿ-ಮ್ಯಾಸಚೂಸೆಟ್ಸ್ ಕೊಲ್ಲಿ ಕಂಪನಿಯಿಂದ. ಆ ಸ್ಥಳ ಈಗ ಹಾರ್ವರ್ಡ್ ಚೌಕದ ಬಳಿ ಇದೆ. ಮೊದಲು ಇದಕ್ಕೆ ನ್ಯೂಟೌನ್ ಎಂಬ ಹೆಸರಿತ್ತು. ಹಾರ್ವರ್ಡ್ ಕಾಲೇಜಿನ ಸ್ಥಾಪನೆಯಾದ ಎರಡು ವರ್ಷಗಳ ಅನಂತರ (1638) ಇದಕ್ಕೆ ಇಂಗ್ಲೆಂಡಿನ ವಿಶ್ವವಿದ್ಯಾಲಯನಗರವಾದ ಕೇಂಬ್ರಿಜಿನ ಹೆಸರನ್ನೇ ಇಡಲಾಯಿತು. ಇದು ಮ್ಯಾಸಚುಸೆಟ್ಸ್ ಕೊಲ್ಲಿ ವಸಾಹತಿನ ರಾಜಧಾನಿಯಾಗಬೇಕೆಂಬುದು ಹಲವರ ಇಷ್ಟವಾಗಿತ್ತು. ಆದರೆ ಆ ಗೌರವ ಬಾಸ್ಟನಿಗೆ ಸಂದಿತು. ವಾಣಿಜ್ಯ ಮತ್ತು ರಕ್ಷಣೆಗಳ ದೃಷ್ಟಿಯಿಂದ ಆ ನಗರ ಹೆಚ್ಚು ಸಮರ್ಪಕವೆನಿಸಿದ್ದೇ ಇದಕ್ಕೆ ಕಾರಣ. ಹಾರ್ವರ್ಡ್ ಚೌಕದ ಸುತ್ತಣ ಅಂಕುಡೊಂಕಾದ ಕಿರುಬೀದಿಗಳಿಗೆ ಐತಿಹಾಸಿಕ ಮಹತ್ತ್ವವುಂಟು. 1637 ಮತ್ತು 1647ರಲ್ಲಿ ನ್ಯೂ ಇಂಗ್ಲೆಂಡ್ ಚರ್ಚುಗಳ ಧರ್ಮಾಧಿಕಾರಿಗಳ ಆಲೋಚನಾಸಭೆಗಳು ಇಲ್ಲಿ ಸಮಾವೇಶಗೊಂಡು ಆ ಮತದ ಸಿದ್ಧಾಂತವನ್ನು ಕುರಿತ ಅನೇಕ ವಾದಗ್ರಸ್ಥ ಅಂಶಗಳನ್ನು ಕುರಿತು ಚರ್ಚಿಸಿದುವು. ಅಮೆರಿಕನ್ ಕ್ರಾಂತಿಯ (1775-1783) ಕಾಲದಲ್ಲಿ ಅಮೆರಿಕದ ಪ್ರಥಮ ಸೇನೆ ಇಲ್ಲಿ ಬಿಡಾರ ಹೂಡಿತ್ತು. ಬಂಕರ್ ಹಿಲ್ ಕದನದಲ್ಲಿ ಭಾಗವಹಿಸಿದವರಲ್ಲಿ ಬಹಳ ಮಂದಿ ಸೈನಿಕರು ಇಲ್ಲಿಂದ ಹೋದವರೇ. ಇಲ್ಲಿ 1923ರ ವರೆಗೂ ಇದ್ದ ಎಲ್ಮ್ ಮರದ ಕೆಳಗೇ ಜಾರ್ಜ್ ವಾಷಿಂಗ್ಟನ್ 1775ರ ಜುಲೈ 3 ರಂದು ಖಂಡಾಂತರ ಪಡೆಗಳ ದಂಡ ನಾಯಕನಾದನೆಂದು ಪ್ರತೀತಿ. ಆ ಕಾಲದಲ್ಲಿ ವಾಷಿಂಗ್ಟನ್ ಇದ್ದ ಮನೆಯಲ್ಲೇ ಅಮೆರಿಕನ್ ಕವಿ ಹೆನ್ರಿ ವಾಡ್ಸ್‍ವರ್ತ್‍ಲಾಂಗ್‍ಫೆಲೊ ಇದ್ದ (1837-82). 19ನೆಯ ಶತಮಾನದ ಇನ್ನೊಬ್ಬ ಕವಿಯಾದ ಜೇಮ್ಸ್ ರಸೆಲ್ ಲೊವೆಲ್ ಹುಟ್ಟಿ ಬದುಕಿದ್ದೂ ಇಲ್ಲೇ. ಇವರೇ ಅಲ್ಲದೆ ಆಲಿವರ್ ವೆಂಡೆಲ್ ಹೋಮ್ಸ್ ರಿಚರ್ಡ್ ಹೆನ್ರಿ ಡಾನಾ, ಲೂಯಿ ಅಗಾಸಿಸ್, ಅಸಾ ಗ್ರೇ, ಚಾಲ್ರ್ಸ್ ಎಲಿಯಟ್ ನಾರ್ಟನ್, ವಿಲಿಯಂ ಜೇಮ್ಸ್, ಜಾನ್ ಫಿಸ್ಕೆ, ವಿಲಿಯಂ ಡೀನ್ ಹೊವೆಲ್ಸ್, ಬರ್ನಾಡ್ ಡಿ. ವೋಟೊ ಮುಂತಾದ ಅನೇಕ ಸಾಹಿತಿಗಳೂ ವಿಜ್ಞಾನಿಗಳೂ ಕೇಂಬ್ರಿಜಿನೊಂದಿಗೆ ಸಂಬಂಧ ಪಡೆದಿದ್ದರು.
- Areas of Cambridge
ಬೆಳವಣಿಗೆ
[ಬದಲಾಯಿಸಿ]ಹಾರ್ವರ್ಡ್ ಚೌಕದ ಸುತ್ತ ಇರುವ ಹಳೆಯ ಕೇಂಬ್ರಿಜ್ ಅಮೆರಿಕನರ ಸಂಸ್ಕøತಿಯ ಸಂಕೇತವಾಗಿದೆ. ಹಾರ್ವ್‍ರ್ಡ್ ಕಾಲೇಜನ್ನು ಸ್ಥಾಪಿಸಿದಾಗಿನಿಂದ ಇದಕ್ಕೆ ಪ್ರಾಮುಖ್ಯ. ಇದಕ್ಕೆ ಹತ್ತಿರದಲ್ಲೇ 20ನೆಯ ಶತಮಾನದಲ್ಲಿ ವಾಣಿಜ್ಯ ಕೇಂದ್ರವೊಂದು ಬೆಳೆದಿದೆ. ಅಮೆರಿಕದ ಪ್ರಥಮ ಅಚ್ಚುಕೂಟ ಸ್ಥಾಪಿತವಾದ್ದು ಇಲ್ಲಿ (1639). ಆದರೆ ನಗರ ಶೀಘ್ರವಾಗಿ ಬೆಳೆದದ್ದು 20ನೆಯ ಶತಮಾನದಲ್ಲಿ, ಬಾಸ್ಟನಿನಿಂದ ಕೇಂಬ್ರಿಜಿಗೆ ಸುರಂಗಮಾರ್ಗವೊಂದು ನಿರ್ಮಾಣವಾದ ಮೇಲೆ ಬಾಸ್ಟನಿನ ಉದ್ಯಮಿಗಳು ಇಲ್ಲಿಗೆ ಶೀಘ್ರವಾಗಿ ಬರುವುದು ಸಾಧ್ಯವಾದ್ದರಿಂದ ಇಲ್ಲಿ ಕೈಗಾರಿಕೆಗಳು ಬೆಳೆದುವು. ಇಪ್ಪತ್ತನೆಯ ಶತಮಾನದ ನಡುಗಾಲದ ವೇಳೆಗೆ ಇಲ್ಲಿ 400 ಉತ್ಪಾದನೋದ್ಯಮಗಳಿದ್ದುವು. ಲೋಹೋತ್ಪನ್ನಗಳು, ವಿದ್ಯುದುಪಕರಣ, ಮುದ್ರಣ, ಪ್ರಕಾಶನ, ರಸಾಯನ ವಸ್ತುಗಳು, ರಬ್ಬರ್ ಮತ್ತು ಚರ್ಮ ವಸ್ತುಗಳು-ಇವು ಕೆಲವು ಕೈಗಾರಿಕೆಗಳು, ಇವುಗಳ ಜೊತೆಜೊತೆಗೇ ಇಲ್ಲಿ ಅನೇಕ ಸಂಶೋಧನಾಲಯಗಳೂ ಪ್ರಯೋಗಾಲಯಗಳೂ ಬೆಳೆದಿವೆ. ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಮ್ಯಾಸಚೂಸೆಟ್ಸ್ ತಾಂತ್ರಿಕ ಸಂಸ್ಥೆ (ಮ್ಯಾಸಚೂಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಎಂ.ಐ.ಟಿ.)-ಇವು ಹತ್ತಿರದಲ್ಲೇ ಇರುವುದರಿಂದ ಸಂಶೋಧನೆಗೆ ಅನುಕೂಲಗಳು ಲಭ್ಯವಾಗಿವೆ.
ಶೈಕ್ಷಣಿಕ ಕೇಂದ್ರ
[ಬದಲಾಯಿಸಿ]

ಕೇಂಬ್ರಿಜಿನಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯವಿರುವುದರಿಂದ ಇದನ್ನು ವಿಶ್ವವಿದ್ಯಾಲಯನಗರವೆಂದು ಪರಿಗಣಿಸಲಾಗಿದೆ. ರ್ಯಾಡ್‍ಕ್ಲಿಫ್ ಕಾಲೇಜ್ ಫಾರ್ ವಿಮೆನ್ ಇನ್ನೊಂದು ಮುಖ್ಯ ಶಿಕ್ಷಣ ಸಂಸ್ಥೆ. ಇದು ಹಾರ್ವರ್ಡ್ ವಿಶ್ವವಿದ್ಯಾಲಯದ ಮನ್ನಣೆ ಪಡೆದಿದೆ. ಎಪಿಸ್ಕೋಪಲ್ ತಿಯೊಲಾಜಿಕಲ್ ಸ್ಕೂಲ್, ದಿ ನ್ಯೂ ಚರ್ಚ್ ತಿಯೊಲಾಜಿಕಲ್ ಸ್ಕೂಲ್ ಇವು ಇನ್ನೆರಡು ಮುಖ್ಯ ಸಂಸ್ಥೆಗಳು. ಮ್ಯಾಸಚೂಸೆಟ್ಸ್ ತಾಂತ್ರಿಕ ಶಿಕ್ಷಣಸಂಸ್ಥೆ 1916ರಲ್ಲಿ ಬಾಸ್ಟನಿನಿಂದ ಇಲ್ಲಿಗೆ ವರ್ಗವಾಯಿತು. ಎಂಜಿನಿಯರಿಂಗಿನ ಎಲ್ಲ ಶಾಖೆಗಳಲ್ಲೂ ವಾಸ್ತುಶಿಲ್ಪದಲ್ಲೂ ಮಾನವಿಕ ಮತ್ತು ಸಮಾಜ ವಿಜ್ಞಾನಗಳಲ್ಲೂ ಸ್ನಾತಕಪೂರ್ವ ಮತ್ತು ಸ್ನಾತಕ ತರಗತಿಗಳು ಅಲ್ಲಿ ನಡೆಯುತ್ತವೆ. ಮೂಲಭೂತ ಸಂಶೋಧನೆ ನಡೆಸಲು ಅಲ್ಲಿರುವ ಸೌಲಭ್ಯಗಳು ಅಸಾಧಾರಣವಾದವು ; ಕೆಲವಂತೂ ವಿಶಿಷ್ಟವಾದಂಥವು. ನ್ಯೂಕ್ಲಿಯರ್ ರಿಯಾಕ್ಟರ್, ಎಲೆಕ್ಟ್ರಾನಿಕ್ಸ್ ಸಂಶೋಧನ ಪ್ರಯೋಗಾಲಯ, ಸರ್ವೋಕ್ರಿಯಾತಂತ್ರ (ಸರ್ವೋಮೆಕ್ಯಾನಿಸಮ್ಸ್) ಪ್ರಯೋಗಾಲಯ, ಅತೀತಶಬ್ದ ಗಾಳಿಸುರಂಗಗಳು, ಅಂತರರಾಷ್ಟ್ರೀಯ ನಗರೀಯ ಮತ್ತು ಪ್ರಾದೇಶಿಕ ಅಧ್ಯಯನದ ಮತ್ತು ಸಂಪರ್ಕ ವಿಜ್ಞಾನಗಳ ಅಧ್ಯಯನದ ಸೌಲಭ್ಯಗಳು-ಇವು ಕೆಲವು. ವಾಷಿಂಗ್ಟನ್ ಡಿ.ಸಿ.ಯಲ್ಲಿದ್ದ ಸ್ಮಿತ್ಸೋನಿಯನ್ ಖಭೌತ ವೀಕ್ಷಣಾಲಯದ ಮುಖ್ಯ ಕೇಂದ್ರ ಈಗ ಇಲ್ಲಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Official website
Geographic data related to ಕೇಂಬ್ರಿಜ್ -ಮ್ಯಾಸಚೂಸೆಟ್ಸ್ at OpenStreetMap- The Innovation Trail – History of invention in Cambridge and Boston
ಉಲ್ಲೇಖಗಳು
[ಬದಲಾಯಿಸಿ]
- ↑ Cambridge Historical Commission. "Frequently Asked Questions". City of Cambridge. Archived from the original on September 13, 2016. Retrieved September 11, 2016.
- ↑ "2020 U.S. Gazetteer Files". United States Census Bureau. Archived from the original on May 28, 2022. Retrieved May 21, 2022.
- Pages with script errors
- Pages with non-numeric formatnum arguments
- Pages using gadget WikiMiniAtlas
- Pages using multiple image with auto scaled images
- Pages using infobox settlement with possible motto list
- Coordinates on Wikidata
- Official website different in Wikidata and Wikipedia
- ನಗರಗಳು
- ಅಮೆರಿಕ ಸಂಯುಕ್ತ ಸಂಸ್ಥಾನ
- ಅಮೇರಿಕ ಸಂಯುಕ್ತ ಸಂಸ್ಥಾನದ ಪಟ್ಟಣಗಳು