ಕೆ ಎಸ್ ಡಿ ಎಲ್ ಚಂದ್ರು

ವಿಕಿಪೀಡಿಯ ಇಂದ
Jump to navigation Jump to search


ಕೆ ಎಸ್ ಡಿ ಎಲ್ ಚಂದ್ರು ಬೆಂಗಳೂರಿನ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಎಂ .ಹೊನ್ನಯ್ಯ ಮತ್ತು ಲಕ್ಷಮ್ಮ ಎಂಬ ದಂಪತಿಗಳ ದ್ವಿತೀಯ ಪುತ್ರನಾಗಿ 20-5-1963 ರಲ್ಲಿ ಜನಿಸಿದರು . ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಉದ್ಯಮ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಚಂದ್ರು ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಕಾರ್ಮಿಕ ರಂಗಭೂಮಿ ,ಕಾಲೇಜು ರಂಗಭೂಮಿ ,ಹವ್ಯಾಸಿ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ನಟ -ನಿರ್ದೇಶಕ -ಸಂಘಟಕ .ಕೆ ಎಸ್ ಡಿ ಎಲ್ ಚಂದ್ರು ವಿಶೇಷವಾಗಿ ಹೆಸರಾಂತ ಹವ್ಯಾಸಿ ರಂಗತಂಡ ರೂಪಾಂತರಕ್ಕೆ ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಲೇಖಕರಾದ ಕುವೆಂಪು ,ಶಿವರಾಮ ಕಾರಂತ ,ಪಿ ಲಂಕೇಶ್ ,ಪೂರ್ಣಚಂದ್ರ ತೇಜಸ್ವಿ ,ಶಾಂತರಸ ,ಪ್ರಭಾಕರ ಶಿಶಿಲ ಮುಂತಾದವರ ಕತೆ ,ಕಾವ್ಯ ,ಕಾದಂಬರಿಗಳ ರಂಗ ರೂಪಗಳನ್ನು ಈ ನಾಡಿನಾದ್ಯಂತ ಮಾತ್ರವಲ್ಲದೆ ದೆಹಲಿ ,ಮುಂಬಯಿ,ಹೈದರಾಬಾದ್ ,ತಿರುಪತಿಯಲ್ಲಿ ಪ್ರದರ್ಶಿಸಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ್ದಾರೆ .ಚಂದ್ರು ಕಿರುತೆರೆಯಲ್ಲಿಯೂ ನಟ ನಿರ್ದೇಶಕರಾಗಿ ಹಲವಾರು ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿ ಹಾಗೂ ನಟಿಸಿದ್ದಾರೆ .ಚಂದ್ರು ಬೆಳ್ಳಿತೆರೆಯಲ್ಲಿ ಶಿವರಾಜಕುಮಾರ್ ಅಭಿನಯದ ಹೃದಯ ಹೃದಯಾ ಚಲನಚಿತ್ರಕ್ಕೆ ಕತೆ ಮತ್ತು ಸ ನಿರ್ದೇಶಕರಾಗಿ ದುಡಿದ್ದಿದ್ದಾರೆ.ಹಲವಾರು ಕಲಾತ್ಮಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ .ಅಭಿನಯ ಕುರಿತ ಪರೀಕ್ಷೆಗಳಲ್ಲಿ ಪರಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ .ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಟಕ ಡಿಪ್ಲೋಮಾ ಮತ್ತು ಪಿಜಿ ಡಿಪ್ಲೋಮಾ ರಂಗ ಶಿಕ್ಷಣದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ .

ಕಾರ್ಮಿಕ ರಂಗಭೂಮಿ

ಕೆ ಎಸ್ ಡಿ ಎಲ್ ಕಾರ್ಮಿಕರಿಗಾಗಿ ನಿರ್ದೇಶಿಸಿರುವ ನಾಟಕಗಳ ವಿವರ

1.ಅನ್ವೇಷಕರು 2.ಅಳಿಯಾವತಾರ 3.ಶತಮೂರ್ಖರು 4.ಇತಿಹಾಸ ಚಕ್ರ 5.ಎಲ್ಲರುನಮ್ಮವರೇ 6.ಹಳಿಯ ಮೇಲಿನ ಸದ್ದು 7.ಛಾಯಾಲೋಕ 8.ಪ್ಯಾರಸೈಟ್ಸ್ 9.ಲಂಬೋದರ 10.ಕುರ್ಚಿ 11.ಗಂಧವತಿ ವೈಭವ -ಬೀದಿನಾಟಕ 12.ನಾಳೆ ಯಾರಿಗೂ ಇಲ್ಲ

ಮೈಕೋ ಕಾರ್ಮಿಕರಿಗಾಗಿ ನಿರ್ದೇಶಿಸಿರುವ ನಾಟಕಗಳ ವಿವರ

ಕೆ ಇ ಬಿ ಮಹಿಳಾ ಕಾರ್ಮಿಕರಿಗಾಗಿ ನಿರ್ದೇಶಿಸಿರುವ ನಾಟಕಗಳ ವಿವರ

1.ಭ್ರೂಣ 2.ನಾಳೆ ಯಾರಿಗೂ ಇಲ್ಲ 3.ಸೇತು ಮಾಧವನ ಸಲ್ಲಾಪ 1.ಘಾಟಿ ಮುದುಕಿ

ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಗೆ ನಿರ್ದೇಶಿಸಿರುವ ನಾಟಕಗಳ ವಿವರ

1.ರಾಮಧಾನ್ಯ 2.ಯಹೂದಿ ಹುಡುಗಿ 3.ಭ್ರೂಣ 4.ಮುಸ್ಸಂಜೆ ಕಥಾ ಪ್ರಸಂಗ

ಕಾಲೇಜು ರಂಗಭೂಮಿ

ಎಂ ಇ ಎಸ್ ಕಾಲೇಜು ವಿಧ್ಯಾರ್ಥಿಗಳಿಗೆ ನಿರ್ದೇಶಿಸಿದ ನಾಟಕದ ವಿವರ

1.ಕುರ್ಚಿ 2.ರೊಟ್ಟಿ ಋಣ 3.ಎಲ್ಲರೂ ನಮ್ಮವರೇ

ಬೆಂಗಳೂರು ವಿಶ್ವ ವಿಧ್ಯಾಲಯ ವಿಧ್ಯಾರ್ಥಿಗಳಿಗೆ ನಿರ್ದೇಶಿಸಿದ ನಾಟಕದ ವಿವರ 1.ಇತಿಹಾಸ ಚಕ್ರ

ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿಧ್ಯಾಲಯದ ವಿಧ್ಯಾರ್ಥಿನಿಯರಿಗೆ ನಿರ್ದೇಶಿಸಿದ ನಾಟಕದ ವಿವರ

1.ಕಿರಗೂರಿನ ಗಯ್ಯಾಳಿಗಳು 2.ಮಳೆ ಬೀಜ 3.ಈಡಿಪಸ್ 4.ಕರ್ವಾಲೋ 5.ರಾಮಧಾನ್ಯ 6.ಕಾಲಜ್ಞಾನಿ ಕನಕ 7.ಯಹೂದಿ ಹುಡುಗಿ

ಹವ್ಯಾಸಿ ರಂಗಭೂಮಿ

ರಂಗ ಚೇತನ ತಂಡದ ಕಲಾವಿದರಿಗೆ ನಿರ್ದೇಶಿಸಿದ ನಾಟಕಗಳು

1.ಮಾದರ ಚನ್ನಯ್ಯ 2.ಅರಿವಿನಮನೆ 3.ಸಂಪ್ಪತ್ತಿಗೆ ಸವಾಲ್ 4.ಭ್ರೂಣ

ಸ್ನೇಹ ರಂಗ ಇಳಕಲ್ಲ ತಂಡದ ಕಲಾವಿದರಿಗೆ ನಿರ್ದೇಶಿಸಿದ ನಾಟಕಗಳು

1.ಆರದಿರಲಿ ಬೆಳಕು

ಶಿವ ಸಂಚಾರ ,ಸಾಣೆಹಳ್ಳಿ ತಂಡದ ಕಲಾವಿದರಿಗೆ ನಿರ್ದೇಶಿಸಿದ ನಾಟಕಗಳು

1.ಸಂಪತ್ತಿಗೆ ಸವಾಲ್

ರೂಪಾಂತರ ತಂಡದ ಕಲಾವಿದರಿಗೆ ನಿರ್ದೇಶಿಸಿದ ನಾಟಕಗಳು

1.ಕೊಕ್ಕೆ 2.ಹೆಜ್ಜೆಗಳು 3.ಕರ್ವಾಲೋ 4.ಮುಸ್ಸಂಜೆ ಕಥಾ ಪ್ರಸಂಗ 5.ಮೈಮನಗಳಸುಳಿಯಲ್ಲಿ 6.ಬಡೇಸಾಬು ಪುರಾಣ 7.ಗಲ್ಬಸ್ಕಿ 8.ಯಹೂದಿ ಹುಡುಗಿ 9.ರಾಮಧಾನ್ಯ 10.ಕರಿಸಿದ್ಧ 11.ಟ್ರೈನ್ ಟು ಪಾಕಿಸ್ತಾನ 12.ಚಕ್ರ ರತ್ನ 13.ಮತ್ಸ್ಯ ಗಂಧಿ 14.ಮೋಹನ ಸ್ವಾಮಿ 15.ಏಕಲವ್ಯ 16.ಹಡೆದವ್ವ ಬರೆದ ಹಣೆಬರಹ 17.ಆರದಿರಲಿ ಬೆಳಕು 18.ಸಾವಿನ ಹೊಗೆ -ಬೀದಿ ನಾಟಕ

ಅಭಿನಯಿಸಿದ ನಾಟಕಗಳ ವಿವರಗಳು

1.ಫಜೀತಿ 2.ಮೀನಿನ ಹೆಜ್ಜೆ 3.ಅಳಿಯದೇವರು 4.ಸಾಫಲ್ಯ 5.ಚಿರೋಟಿ ಚಾಮಣ್ಣ 5.ಕುರ್ಚಿ 5.ಅನ್ವೇಷಕರು 6,ಅಳಿಯಾವತಾರ 7.ಛಾಯಾಲೋಕ 8.ಮಾವ ಮಾವ ಕತೆ ಕೇಳು 9.ಸಾಧಿಸಿದ ಸೇಡು 10.ಲಂಬೋದರ 11.ಬರ 12.ಕುದುರೆ ಮೋತಿ ಪ್ರಕರಣ 13.ರೊಟ್ಟಿ 14.ಕಿರಗೂರಿನ ಗಯ್ಯಾಳಿಗಳು 15.ಮುಸ್ಸಂಜೆ ಕಥಾ ಪ್ರಸಂಗ 16.ಬಡೇ ಸಾಬು ಪುರಾಣ 17.ತಲೆದಂಡ 18.ಆರದಿರಲಿ ಬೆಳಕು 19.ಗಾಂಧಿ ಜಯಂತಿ 20.ಇಗೋ ಪಂಜರ ಅಗೋ ಮುಗಿಲು

ಕಿರು ತೆರೆಗೆ ನಿರ್ದೇಶಿಸಿದ ಧಾರಾವಾಹಿಗಳ ವಿವರ

1.ದೀಪಾವಳಿಯ ನಸುಕಿನಲ್ಲಿ 2.ಭಾಂದವ್ಯ 3.ಅಗಸ್ಟ್ ಒಂಬತ್ತು 4.ರಕ್ತ ಧ್ವಜ 5.ಪಲಾಯನ 6.ಶಿವಯೋಗಿ ಸಿದ್ದರಾಮ 7.ಗೋರೂರು ಕಥಾ ಪ್ರಪಂಚ 8.ಚಿತ್ತಾರದ ಬದುಕು 9.ಮಹಾನದಿ 10.ಊರ್ವಶಿ 11.ಹಾಲು ಜೇನು 12.ಚಾಪ್ಲಿನ್ ನೀನು ಅಮರ 13.ಅಕ್ಬರ್ ಬೀರಬಲ್ಲ

ಕಿರುತೆರೆಯಲ್ಲಿ ಅಭಿನಯಿಸಿದ ಧಾರಾವಾಹಿಗಳ ವಿವರ

1.ನಿರಂತರ 2.ಚಿತ್ತಾರದ ಬದುಕು 3.ಮಹಾನದಿ 5.ಅರುಂಧತಿ 6.ಶ್ರೀರಸ್ತ್ತು ಶುಭ ಮಸ್ತ್ತು 9.ವೈಷ್ಣವಿ 10ಯಾರೇ ನೀ ಮೋಹಿನಿ 11.ಗಾಂಧಿ ಸತ್ತಿಲ್ಲ

ಸಾಕ್ಸ್ಯಚಿತ್ರ - ನಿರ್ದೇಶನ ೧.ಭ್ರೂಣ ಹತ್ಯೆ

ಜಾಹಿರಾತು ಚಿತ್ರ -ನಿರ್ದೇಶನ 1.ಡೈಮೆಂಡ್ ಕಡಲೆಕಾಯಿ ಎಣ್ಣೆ

ಬೆಳ್ಳಿ ತೆರೆ

ಹೃದಯ ಹೃದಯಾ ಚಲನ ಚಿತ್ರ - ಕಥೆ ಮತ್ತು ಸಹ ನಿರ್ದೇಶನ

ಅಭಿನಯಿಸಿದ ಚಿತ್ರಗಳ ವಿವರ 1.ಹೆಜ್ಜೆಗಳು 2.ಕಿರಗೂರಿನ ಗಯ್ಯಾಳಿಗಳು 3.ತಿಪ್ಪಾರಳ್ಳಿ ತರಲೆಗಳು 4.ಅಮಾಸ 5.ಮಾಗಿಯ ಕಾಲ 6.ಗ್ಯಾಂಗ್ ಸ್ಟರ್ -ಮಲೆಯಾಳಂ ಚಿತ್ರ

ಪ್ರಶಸ್ತಿ ,ಪುರಸ್ಕಾರಗಳು

1.2010 ರಲ್ಲಿ ರಂಗ ಚೇತನ ಸಂಸ್ಥೆಯ ಸಿ .ಜಿ .ಕೆ ಪ್ರಶಸ್ತಿ 2.2011 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ 3.2012 ರಲ್ಲಿ ಕನಕ ಲೋಕ ಶಿಕ್ಷಣ ಟ್ರಸ್ಟ್ ಕನಕ ಪುರಸ್ಕಾರ 4.2013 ರಲ್ಲಿ ಅಂತರಂಗ ರಂಗ ಪುರಸ್ಕಾರ 5.2016 ರಲ್ಲಿ ಕೆ ಎಸ್ ಡಿ ಎಲ್ ಶ್ರೀ ಗಂಧ ಪುರಸ್ಕಾರ