ವಿಷಯಕ್ಕೆ ಹೋಗು

ಕೆ. ನಾರಾಯಣ ನಾಯಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆ. ನಾರಾಯಣ ನಾಯಕ್( K NARAYANA NAYAK )ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಮಪ್ಪ ನಾಯಕ್‌ ಮತ್ತು ಜಲಜಾಕ್ಷಿ ದಂಪತಿಗಳ ೭ ಮಕ್ಕಳಲ್ಲಿ ಒಬ್ಬರು, ಇವರು ೦೧-೦೭-೧೯೪೨ ರಂದು ಜನಿಸಿದರು. ಕೃಷಿಕ ಕುಟುಂಬದಿಂದ ಬೆಳೆದು ಬಂದ ಇವರ ಕುಟುಂಬದವರು ಬತ್ತ, ಕಬ್ಬು ಮುಂತಾದ ಬೆಳೆಗಳನ್ನು ಬೆಳೆಸುತ್ತಿದ್ದು ಪ್ರಸ್ತುತ ಅಡಿಕೆ, ರಬ್ಬರ್‌, ತೆಂಗು, ಬಾಳೆ ಮುಂತಾದವುಗಳನ್ನು ಬೆಳೆಯುತ್ತಾರೆ.

ಶಿಕ್ಷಣ

[ಬದಲಾಯಿಸಿ]
  1. ಪ್ರಾಥಮಿಕ ಶಿಕ್ಷಣ: ಕರ್ಪೆ , ಸಿದ್ದಕಟ್ಟೆ ಬಳಿಯ ಪ್ರಾಥಮಿಕ ಶಾಲೆ
  2. ಪ್ರೌದ ಶಿಕ್ಷಣ: ಎಸ್‌.ವಿ.ಎಸ್‌. ಶಿಕ್ಷಣ ಸಂಸ್ಥೆ ಬಂಟ್ವಾಳ
  3. ಶಿಕ್ಷಕ ತರಬೇತಿ: ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಶಿಕ್ಷಕ ತರಬೇತಿ ಕೇಂದ್ರ
  4. ಬಿ.ಎ.: ಕರ್ನಾಟಕ ವಿ.ವಿ. ದಾರವಾಡ
  5. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ರಾಷ್ಟ್ರಭಾಷಾ ಪ್ರವೀಣ (ಎಂ.ಎ.)
  6. ಎಂ.ಎ. ಕರ್ನಾಟಕ ವಿ.ವಿ. ದಾರವಾಡ
  7. ಬಿ.ಎಡ್.‌ ಮೈಸೂರು ವಿ.,ವಿ

ಉದ್ಯೋಗ

[ಬದಲಾಯಿಸಿ]
  1. ೧೯೭೩ರಿಂದ ೧೯೭೩- ಕೊಡಪದವಿನ್ಲಲಿ ಶಿಕ್ಷಕರಾಗಿ
  2. 1973ರಿಂದ ೧೯೮೩ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ರಾಯಿ
  3. ೧೯೮೩ರಿಂದ ೧೯೯೩ ತನಕ ದ.ಕ.ಜಿ.ಪ.ಹಿ.ಪ್ರಾಥಮಿಕ ಶಾಲೆ ದಾಯಿ ಬಂಟ್ವಾಳ ತಾಲೂ ಇಲ್ಲಿಂದ ಸರಕಾರಿ ಪ್ರೌಢಶಾಲೆ ಸಜಿಪಮೂಡ ಬಂಟ್ವಾಳ ತಾಲೂಕು ಇಲ್ಲಿಗೆ ಪ್ರೌಢ ಶಾಲಾ ಶಿಕ್ಷಕನಾಗಿ ಬಡ್ತಿ. ಪ್ರೌಢಶಾಲೆ ಕೊಠಡಿಗಳ, ಪೀಠೋಪಕರಣಗಳ, ಶಿಕ್ಷಕರ ಕೊರತೆ, ಮುಖ್ಯ ಶಿಕ್ಷಕನಾಗಿ ಕಾರ್ಯನಿರ್ವಹಿಸಬೇಕಾಯಿತು
  4. ೧೯೯೩-೧೯೯೮ರಿಂದ ಸರಕಾರಿ ಪ್ರೌಡಶಾಲೆ, ಕೊಯಿಲ ಬಂಟ್ವಾಳ
  5. ೨೦೦೦ ರಿಂದ ೨೦೦೧ ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು. ೨೦೦೧ರಲ್ಲಿ ಸೇವೆಯಿಂದ ನಿವೃತ್ತಿ ಬಳಿಕ ೨ ವರ್ಷಗಳ ಕಾಲ ಅದೇ ಕಾಲೇಜಿನಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಅಲಂಕರಿಸಿದ ಹುದ್ದೆಗಳು

[ಬದಲಾಯಿಸಿ]
  1. ೧೯೯೮ ರಿಂದ ೨೦೦೦ ತನಕ ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ ಶಾಲಾ ತಪಾಸಣಾಧಿಕಾರಿಯಾಗಿ

ಇತರ ಸೇವೆಗಳು

[ಬದಲಾಯಿಸಿ]

ನಿವೃತ್ತಿ ಹೊಂದಿದ ಬಳಿಕ ಆಯ್ದ ಶಾಲಾ ಕಾಲೇಜುಗಳಿಗೆ ಬೇಟಿ ನೀಡಿ ಸರಕಾರಿ ವಿದ್ಯಾರ್ಥಿ ವೇತನ ವಲ್ಲದೆ ಸುಪ್ರಜತ್‌ ಫೌಂಡೇಶನ್‌, ಬೆಂಗಳೂರು, ದೃತಿ ಫೌಂಡೇಶನ್‌, ಮಂಗಳೂರು, ಆಲ್‌ ಕಾರ್ಗೋ ಲಾಜಿಸ್ಟಿಕ್ಸ್‌ ವಿದ್ಯಾರ್ಥಿ ವೇತನಗಳನ್ನು ಕೊಡಿಸುವಲ್ಲಿ ಮಾಹಿತಿಯನ್ನು ಕೊಡುವುದ ಮಾತ್ರವಲ್ಲದೆ, ಮಕ್ಕಳಿಂದ್‌ ಅರ್ಜಿ ಬರಿಸಿ ಪ್ರೋಸ್ತಾಹ ನೀಡುತ್ತಿದ್ದರು. ಶಾಲಾ ಕಾಲೇಜುಗಳಲಿ ವಿದ್ಯಾರ್ಥಿ ವೇತನವಲ್ಲದೆ ಮಂಗಳೂರಿನ ಈಶ್ವರಾನಂದ ಅನಾಥಾಶ್ರಮ, ಕಂಕನಾಡಿ, ಶ್ರದ್ಧಾನಂದ್ದ ಅನಾಥಾಶ್ರಮ , ಆರ್ಯಸಮಾಜ, ಕುತ್ತಾರು ಪದವಿನ ಬಾಲ ಸಂಕರ್ಷಣಾ ಕೇಂದ್ರಗಳಿಗೆ ಆಗಾಗ ಬೇಟಿನೀಡಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು, ಶಿಕ್ಷಣ, ಸಮವಸ್ತ್ರ ವಿತರಣೆ, ವಿಕಲ ಚೇತನ ಮಕ್ಕಳಿಗೆ ಸರಕಾರದ ಮಾಸಾಶನವನ್ನು ಕೊಡಿಸುವುದು . ಕಟ್ಗಡ ಕಾರ್ಮಿಕ ಮಕ್ಕಳಗೆ ಶಿಕ್ಷಣಕ್ಕೆ ಪ್ರೋತ್ಸಾಹ, ಕಟ್ಟದ ಕಾರ್ಮಿಕರಿಗೆ ಗುರುತಿನ ಚೀಟಿ ಹೀಗೆ ಒಬ್ಬಂಟಿಯಾಗಿ ತನಗೆ ಸಿಗುವ ನಿವೃತ್ತಿ ವೇತನದಲ್ಲಿ ಅರ್ದಾಂಶ ಹಾಗು ತಮಗೆ ಸಿಗುವ ಪ್ರಶಸ್ಠಿ ಪುರಸ್ಕಾರಗಳಿಂದ ಸಿಗುವ ನಗದು ಪುರಸ್ಕಾರವೆಲ್ಲವನ್ನು ಮಾತ್ರವಲ್ಲದೆ ಸಿಗುವ ಮೊತ್ತಕ್ಕೆ ನಾಲ್ಕರಷ್ಟು ಸೇರಿಸಿ ಮಕ್ಕಳಿಗಾಗಿ, ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಅವರ ದೊಡ್ಡ ಗುಣ ಅವರ ಮಾತಿನಲ್ಲೇ ಹೇಳುವುದಾದರೆ ನಾವ್ಯಾರು ದೇವರನ್ನು ನೋಡಿಲ್ಲ, ಆದರೂ ದೇವರಿದ್ದಾನೆ ಎಂದು ಭಕ್ತಿಯಿಂದ ಪೂಜಿಸುತ್ತೇವೆ. ನಾನು ಮಕ್ಕಳಲ್ಲಿ ದೇವರನ್ನು ನೋಡುತ್ತೇನೆ. ಇಂತಹ ಮನಸ್ಸಿರುವ ಕೆ. ನಾರಾಯಣ ನಾಯಕ್‌ ತಮ್ಮ ಕುಟುಂಬದೊಂದಿಗೆ ಬಂಟ್ಟಾಳ ತಾಲೂಕಿನ ಕರ್ಪೆಯಲ್ಲಿ ವಾಸಿಸುತ್ತಿದ್ದಾರೆ. ಮನೆಯಲ್ಲಿಯೇ ಇರದೇ ಶಾಲೆ ಆರಂಭವಾಗುವಾಗ/ ನಂತರ ಶಾಲಾ ಕಾಲೇಜಿಗೆ ಬೇಟಿ ನೀಡಿ ಅದರಲ್ಲೂ ಸರಕಾರಿ ಕಾಲೇಜುಗಳು, ಗ್ರಾಮೀಣ ಪ್ರದೇಶದಲ್ಲಿ ತಮ್ಮ ಎಲೆ ಮರೆಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಪಡೆದ ಪ್ರಶಸ್ಥಿ ಪುರಸ್ಕಾರಗಳು

[ಬದಲಾಯಿಸಿ]
  1. ೨೦೧೪ ಬೆಂಗಳೂರಿನ ಯಲಹಂಕದ ಮೀನಾಕ್ಷಿ ಸ್ಮಾರಕ ವಿಶ್ವವಿದ್ಯಾಲಯದಲ್ಲಿ ಸಮಾಜ ಸೇವಕ ಸನ್ಮಾನ
  2. ೨೦೧೮ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್‌ ರವರಿಂದ ಅಸಮಾನ್ಯ ಕನ್ನಡಿಗ ಪ್ರಶಸ್ಥಿ ಮತ್ತು ಪುರಸ್ಕಾರ
  3. ೨೦೨೧ ದ.ಕ.ಜಿಲ್ಲಾ ಪತ್ರಿಕೋದ್ಯಮ ಸನ್ಮಾನ ಮತ್ತು ಪುರಸ್ಥಾರ

https://www.whatsapp.com/channel/0029VaAJz0Q2f3EFfUEev01O