ಕೆ. ಎಸ್. ಹಡಪದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರವೀರಪ್ಪ ಶಿವಪ್ಪ ಹಡಪದ,[೧] (೧೯೩೨-೨೦೦೬) ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ) ಭಾಗದಲ್ಲಿ ತಬಲಾ ವಾದ್ಯವನ್ನು ಜನಪ್ರಿಯಗೊಳಿಸಿ, ಅದನ್ನು ವ್ಯಾಪಕವಾಗಿ ಪ್ರಚಾರಗೊಳಿಸಲು ನಿರಂತರ ಶ್ರಮವಹಿಸಿದ ಸಂಗೀತಜ್ಜ, ಒಂದು ಶಿಷ್ಯ ಪರಂಪರೆಯನ್ನು ಹುಟ್ಟಿಹಾಕಿ ತಬಲಾ ಸ್ವತಂತ್ರ ವಾದನ (solo play) ಹಾಗೂ ಮತ್ತು ಸಾಥ ಸಂಗೀತ (Accompaniment) ದಲ್ಲಿ ಬಳಸಬಹುದೆಂದು ತೋರ್ಪಡಿಸಿದ ಒಬ್ಬ ಅಸಾಮಾನ್ಯ ಸಂಗೀತ ಪಂಡಿತ. ಕರ್ನಾಟಕದಲ್ಲಿ ಅವರು ತಬಲಾ ದಿಗ್ಗಜರೆಂದು ಮನೆಯ ಮಾತಾದರು

ಜನನ, ಮನೆತನ[ಬದಲಾಯಿಸಿ]

ಕೆ. ಎಸ್. ಹಡಪದ ೧೯೩೨ರ ಏಪ್ರಿಲ್‌ ೩೦ ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರದಲ್ಲಿ ಜನಿಸಿದರು. ಅವರದು ಸಂಗೀತ ಪರಂಪರೆಯ ಮನೆತನ. ಅಜ್ಜ, ಚರ್ಮ ವಾದ್ಯ ಪ್ರವೀಣ. ತಂದೆ ಶಿವಪ್ಪ ಕರಡಿ ಮಜಲು ನಿಪುಣ. ಇಂತಹ ಪರಿಸರದಲ್ಲಿ ಬೆಳೆದ ಅವರು, ಚರ್ಮ ವಾದ್ಯದತ್ತ ಒಲವುಗಳಿಸಿದರು ತಬಲಾ ವಾದ್ಯದಲ್ಲಿ ಪರಿಣಿತಿಯನ್ನು ಗಳಿಸಿದರು.

ಗುರುಗಳು[ಬದಲಾಯಿಸಿ]

ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವದಲ್ಲಿ ಹತ್ತು ವರ್ಷ (೧೯೪೩ ರಿಂದ ೧೯೫೩) ತಬಲಾ ಅಧ್ಯಯನಮಾಡಿದರು . ನಂತರ ತಬಲಾದ ಉಚ್ಚ ಶಿಕ್ಷಣಕ್ಕಾಗಿ ಕಾಶಿಗೆ ಪಯಣಿಸಿ ತಬಲಾ ಸಾಮ್ರಾಟ ಪಂ. ಅನೋಖೆಲಾಲ ಮಿಶ್ರಾರವರ ಬಳಿ ೪ ವರ್ಷ ಸುದೀರ್ಘ ಅಧ್ಯಯನಮಾದಿದರು. ಹೀಗೆ ಒಟ್ಟಾರೆ ೧೪ ವರ್ಷ ನಿರಂತರ ತಬಲಾ ಅಧ್ಯಯನದ ಫಲವಾಗಿ, ಪ್ರಬುದ್ಧ ತಬಲಾ ವಾದಕರೆಂಬ ಹೆಗ್ಗಳಿಕೆಗೆ ಪಾತ್ರರಾದರು . ಅಖಿಲ ಭಾರತ ಗಾಂಧರ್ವ ಮಹಾ ಮಂಡಳಿಯ ಸಂಗೀತ ಅಲಂಕಾರ ಪದವಿ ಪ್ರಾಪ್ತವಾಯಿತು.

ಸಂಗೀತ ಪಯಣ[ಬದಲಾಯಿಸಿ]

ವಾರಣಾಸಿಯಿಂದ (ಕಾಶಿ) ಯಿಂದ ಬಾಗಲಕೋಟೆಗೆ ಬಂದು ಮುರನಾಳದ ಪೂಜ್ಯಶ್ರೀ ಗಂಗಾಧರಸ್ವಾಮಿ ಮಹಾ ಪುರುಷಶಿಷ್ಯತ್ವದಲ್ಲಿ ಅವರ ಸಿತಾರ ವಾದನಕ್ಕೆ ತಬಲಾ ಸಾಥ್‌ ಸಂಗತ. ತಮಗೆ ಪ್ರಿಯವಾದ . ತಬಲಾ ಕಲೆಯ ಪ್ರಸಾರಕ್ಕಾಗಿ ೧೯೫೮ ರಲ್ಲಿ ಬಾಗಲಕೋಟೆಯಲ್ಲಿ ಗಂಗಾಧರಸ್ವಾಮಿಯವರ ಸಹಾಯದಿಂದ ‘ನಟರಾಜ ಸಂಗೀತ ವಿದ್ಯಾಲಯ’ದ ಉದ್ಘಾಟನೆಮಾಡಿಸಿದರು.. ಬಾಗಲಕೋಟೆಯಲ್ಲಿ ೫ ವರ್ಷ ಗದುಗಿನ ವಿಜಯ ಕಲಾಮಂದಿರದಲ್ಲಿ ೪ ವರ್ಷ ನಂತರ ಕಲ್ಬುರ್ಗಿಯ ಪ್ರತಿಷ್ಠಿತ ಶ್ರೀ ಶರಣ ಬಸವೇಶ್ವರ ಕಲಾ ಮಹಾ ವಿದ್ಯಾಲಯದಲ್ಲಿ ತಬಲಾ ಪ್ರಾಧ್ಯಾಪಕರಾಗಿ ೨೦ ವರ್ಷ ಸುದೀರ್ಘ ಸೇವೆ ಸಲ್ಲಿಸಿ ೧೯೯೦ರಲ್ಲಿ ನಿವೃತ್ತಿ ಹೊಂದಿ ಕಲ್ಬುರ್ಗಿಯಲ್ಲಿ ನೆಲೆಸಿದರು.

ಹಡಪರ ತಬಲಾ ಕಲೆಯ ಪ್ರಸಾರ[ಬದಲಾಯಿಸಿ]

  • ಶರಣ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಸಂಗೀತ ಪ್ರಾಧ್ಯಾಪಕ ಹೆಸರಾಂತ ಹಿಂದೂಸ್ಥಾನಿ ಗಾಯಕ ಹಾಗೂ ವಚನ ಸಂಗೀತ ಶಿಲ್ಪಿ. ಪಂ. ಸಿದ್ಧರಾಮ ಜಂಬಲ ದಿನ್ನಿಯರೊಂದಿಗೆ ಸುದೀರ್ಘ ಸೇವೆ.
  • ಕಲ್ಬುರ್ಗಿ ಭಾಗದಲ್ಲಿ ನೆಲೆಸಿ ತಬಲಾದಲ್ಲಿ ಪರಿಶ್ರಮಿಸಿದ ಫಲವಾಗಿ ಇಂದು ಕಲ್ಬುರ್ಗಿ ಭಾಗದ ಮೂಲೆ ಮೂಲೆಯಲ್ಲೂ ಅವರ ಶಿಷ್ಯ ಸಂಪತ್ತು ಸಮೃದ್ಧ, ಪಂಡಿತೋತ್ತಮರಾದ ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಪ್ರಭಾ ಅತ್ರೆ, ಬಾಲೇಖಾನ್‌, ಲಕ್ಷ್ಮಿ ಶಂಕರ, ಸಿದ್ಧರಾಮ ಜಂಬಲ ದಿನ್ನಿ. ಸಿದ್ಧರಾಮ ಸ್ವಾಮಿ ಕೋರವಾರ, ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟೆ ಬಿ.ಡಿ. ಪಾಠಕ, ಪ್ರಭುದೇವ ಸರ್ದಾರ ಮುಂತಾದ ಸಂಗೀತ ದಿಗ್ಗಜರಿಗೆ ಸಮರ್ಥ ತಬಲಾ ಸಾಥ್‌ ನೀಡಿದ ಧೀಮಂತ ವ್ಯಕ್ತಿ.
  • ನಾದಯೋಗಿ ಪರ್ವತೀಕರ ಹಾಗೂ ಹೆಸರಾಂತ ಕ್ಲಾರಿಯೋನೇಟ ವಾದಕ ನರಸಿಂಹಲು ವಡವಾಟಿಯವರೊಂದಿಗೆ ದೇಶದ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ತಬಲಾ ಸಾಥ್‌. ಆಕಾಶವಾಣಿ ಹಾಗೂ ದೂರದರ್ಶರನದ ಅಧಿಕೃತ ಕಲಾವಿದರು.
  • ಧಾರವಾಡ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಬೋರ್ಡ್ ಆಫ್‌ ಸ್ಟಡೀಸ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ,

ಚೌಡಯ್ಯ ಸ್ಮಾರಕ ಪ್ರಶಸ್ತಿ, ಆಯ್ಕೆ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಣೆ. ಇವರ ಗುರುವಿನ ಹೆಸರಿನಲ್ಲಿ ಪಂಚಾಕ್ಷರಿ ತಾಲ (೧೫ ಮಾತ್ರಾ), ಕುಮಾರೇಶ ತಾಲ (೧೩ ಮಾತ್ರಾ) ಹಾಗೂ ಪುಟ್ಟರಾಜ ತಾಲ (೧೧ ಮಾತ್ರಾ) ಗಳ ರಚನೆ. ಅನೇಕ ಬೋಲ್‌ಗಳ ನಿರ್ಮಾಣ. ಕೆಲವು ಪ್ರಮುಖ ಸಂಗೀತ ಕಾರರ ಜೊತೆಯಲ್ಲಿ ಕಾರ್ಯ:

  • ರಾವ್‌ ಸಾಹೇಬ ಮೋರೆ,
  • ಶಂಕರ ಕವಡಿಮಟ್ಟಿ,
  • ರಮೇಶ ಗುಡಿ.
  • ಪ್ರೊ. ಎಂ.ಎಸ್‌. ಪಾಟೀಲ,
  • ಗದಿಗಯ್ಯಸ್ವಾಮಿ ರಾಜೋಳ,
  • ಮಡಿವಾಳಯ್ಯ ಸಾಲಿ,
  • ಬಸವರಾಜ ಬೋರೋಟೆ,
  • ಜಗನ್ನಾಥ ಚಿಂಗಟೆ,
  • ಶಿವಾನಂದ ಮಂಗಲಗಿ,
  • ವೆಂಕಟೇಶ ವಡವಾಟಿ,
  • ಉದಯ ಕುಮಾರ ಹೂಗಾರ,
  • ಶರಣ ಬಸವ ಹಡಪದ (ಮಗ),
  • ಅಶ್ವಿನ ಕುಮಾರ ಪೋತದಾರ,
  • ಶ್ರವಣಕುಮಾರ,
  • ರಾಜಕುಮಾರ ಮುಡುಬಿ,
  • ಪಂಚಾಕ್ಷರಿ ಕಣವಿ,
  • ಪಂಚಾಕ್ಷರಿ ಕುಮಾರ ಬೊಮ್ಮಲಾಪೂರ. ಮುಂತಾದವರು

ಪ್ರಶಸ್ತಿಗಳು[ಬದಲಾಯಿಸಿ]

  1. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
  2. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ,
  3. ನಾದಯೋಗಿ ಪ್ರಶಸ್ತಿ,
  4. ತಬಲಾ ವಾದನ ಪ್ರವೀಣ,
  5. ತಾಲ ಮಾರ್ತಂಡ ಪ್ರಶಸ್ತಿಗಳು

ನಿಧನ[ಬದಲಾಯಿಸಿ]

ಸುಮಾರು ೧೬ ವರ್ಷಗಳ ವಿಶ್ರಾಂತ ಜೀವನ ಸಾಗಿಸಿ, ತಮ್ಮ ೭೫ನೇ ವಯಸ್ಸಿನಲ್ಲಿ ೨೦೦೬ ರ ಅಕ್ಟೋಬರ್, ೨೭ ರಂದು ಪಂ. ಹಡಪದರು ಹೃದಯಾಘಾತದಿಂದ ನಿಧನಹೊಂದಿದರು.

ಉಲ್ಲೇಖಗಳು[ಬದಲಾಯಿಸಿ]

  1. ಕರವೀರಪ್ಪ ಶಿವಪ್ಪ ಹಡಪದ[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ತಬಲಾ ವಾದಕ ಪಂ.ಗೋಪಾಲ್ ಹೆಗಡೆ ಅವರಿಗೆ, ಕೆ. ಎಸ್. ಹಡಪದ ಪ್ರಶಸ್ತಿ ಪ್ರದಾನ ಜೂನ್, ೪, ೨೦೧೮, ಸಿಟಿ ಟುಡೆ[ಶಾಶ್ವತವಾಗಿ ಮಡಿದ ಕೊಂಡಿ]