ವಿಷಯಕ್ಕೆ ಹೋಗು

ಕೆ. ಅಮರನಾಥ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡ್ಮನ್ ಅಮರನಾಥ ಶೆಟ್ಟಿ ಇವರು ಕರ್ನಾಟಕ ಸರ್ಕಾರದ ಮಾಜಿ ಸಚಿವರ ಭಾರತೀಯ ರಾಜಕಾರಣಿ ಹಾಗೂ ಜಾತ್ಯತೀತ ಜನತಾ ದಳ ಮುಖಂಡ.[]

ಜನನ ಮತ್ತು ವೃತ್ತಿಜೀವನ

[ಬದಲಾಯಿಸಿ]

ಅಮರನಾಥ್ ಇವರು ಬೆಳೆದದ್ದು ಮೂಡಬಿದಿರೆಯಲ್ಲಿ. ೧೯೬೫ ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದ ಅವರು, ಕಾರ್ಕಳ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ಇವರು ಮೂಡುಬಿದಿರೆ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾರ್ಕಳ ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷ, ಸಹಕಾರಿ ಸೇವಾ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಿಂದ ೧೯೮೩, ೧೯೮೭ ಮತ್ತು ೧೯೯೪ ಹೀಗೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ಪ್ರವಾಸೋದ್ಯಮ ಮತ್ತು ಮುಜರಾಯಿ ಸಚಿವರಾಗಿದ್ದರು.[]

ಅಮರನಾಥ ಶೆಟ್ಟಿ ಇವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ೨೭ ಜನವರಿ ೨೦೨೦ ರಂದು ನಿಧನ ಹೊಂದಿದರು.[][][]

ಉಲ್ಲೇಖಗಳು

[ಬದಲಾಯಿಸಿ]
  1. "ಮಂಗಳೂರು: ಮಾಜಿ ಸಚಿವ ಅಮರನಾಥ ಶೆಟ್ಟಿ ವಿಧಿವಶ". Vijaya Karnataka. 27 January 2020. Retrieved 27 January 2020.
  2. ೨.೦ ೨.೧ Pereira, Violet; Mangalorean, Mangaluru Team (27 January 2020). "Former Minister Amarnath Shetty (80) Passes Away". Mangalorean.com. Retrieved 27 January 2020.
  3. "Mangaluru: Former minister, JD(S) leader Amarnath Shetty passes away". www.daijiworld.com. Retrieved 27 January 2020.
  4. Jan 27, Stanley Pinto. "K Amarnath Shetty Death: K Amarnath Shetty Death: Former Karnataka minister and JD(S) leader K Amarnath Shetty passes away at 80 | Mangaluru News - Times of India". The Times of India (in ಇಂಗ್ಲಿಷ್). Retrieved 27 January 2020. {{cite news}}: Text "TNN" ignored (help); Text "Updated:" ignored (help)CS1 maint: numeric names: authors list (link)