ಕೆ.ಎಸ್.ಡಿ.ಎಲ್.ಚಂದ್ರು

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL)ಕಂಪೆನಿಯ ಕಾರ್ಮಿಕ ಜಿ .ಹೆಚ್ .ಚಂದ್ರ ಶೇಖರ್ ಹವ್ಯಾಸಿ ರಂಗ ಭೂಮಿ ,ಕಾಲೇಜು ರಂಗ ಭೂಮಿ ,ಕೈಗಾರಿಕಾ ರಂಗಭೂಮಿ ಯಲ್ಲಿ ನಟ ,ನಿರ್ದೇಶಕ ,ಸಂಘಟಕನಾಗಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲರಾಗಿ ಕೆ ಎಸ್ ಡಿ ಎಲ್ ಚಂದ್ರು ಎಂದೇ ಜನಪ್ರಿಯ ರಾಗಿದ್ದಾರೆ .ಚಂದ್ರು ರಂಗ ಭೂಮಿ ಮಾತ್ರವಲ್ಲದೆ ಕಿರು ತೆರೆ ,ಬೆಳ್ಳಿ ತೆರೆಯಲ್ಲಿಯು ಸಕ್ರಿಯರಾಗಿದ್ದಾರೆ . . ಚಂದ್ರು ತಂದೆತಾಯಿಗಳು ಇಟ್ಟಿರುವ ಹೆಸರು, 'ಜಿ.ಎಚ್.ಚಂದ್ರಶೇಖರ' ಎಂದು. ಆದರೆ ಅವರಿಗೆ ವೃತ್ತಿಜೀವನದಲ್ಲಿ ಯಶಸ್ಸನ್ನು ತಂದುಕೊಟ್ಟಿದ್ದು 'ಕೆ.ಎಸ್.ಡಿ.ಎಲ್.ಸಂಸ್ಥೆ . ಹಾಗಾಗಿ 'ಕೆ.ಎಸ್.ಡಿ.ಎಲ್. ಚಂದ್ರು ಎಂದೇ ಪರಿಚಿತರಾಗಿದ್ದಾರೆ .. ,

ಪರಿವಾರ[ಬದಲಾಯಿಸಿ]

'ಚಂದ್ರು'ರವರ ತಂದೆ, ಹೊನ್ನಯ್ಯ ತಾಯಿ, ಲಕ್ಷಮ್ಮ,ಪತ್ನಿ (ರಾಜಲಕ್ಷ್ಮಿ ) ಮಗ (ಸೂರ್ಯ ಪ್ರಕಾಶ ) ಮಗಳು (ಭೂಮಿಕಾ ) ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಚಂದ್ರು, 'ಐ.ಟಿ.ಐ.' ನಲ್ಲಿ ತರಪೇತಿ ಪಡೆದು ಕೆ.ಎಸ್.ಡಿ.ಎಲ್.ನಲ್ಲಿ ನೌಕರಿಗೆ ಸೇರಿದರು. ವೃತ್ತಿಯ ಜೊತೆಗೆ ನಟನೆ ,ನಿರ್ದೇಶನವನ್ನು ಪ್ರವೃತ್ತಿ ಯನ್ನಾಗಿಸಿಕೊಂಡು ಮೂರು ದಶಕಗಳಿಂದ ರಂಗ ಭೂಮಿ,ಕಿರುತೆರೆ ,ಚಲನಚಿತ್ರಗಳಲ್ಲಿ ಕ್ರಿಯಾಶೀಲರಾಗಿದ್ದಾರೆ .ಹವ್ಯಾಸಿ ರಂಗ ಭೂಮಿ -ಕಾರ್ಮಿಕ ರಂಗ ಭೂಮಿ -ಕಾಲೇಜು ರಂಗ ಭೂಮಿಯಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ . ಕಾಲೇಜು ರಂಗ ಭೂಮಿಗಾಗಿ ನಿರ್ದೇಶಿಸಿರುವ ನಾಟಕಗಳು


ಎಂ .ಇ .ಎಸ್ ಕಾಲೇಜು -ಎಲ್ಲರೂ ನಮ್ಮವರೇ -ರಚನೆ -ಚಂದ್ರು ಕಾಳೇನಹಳ್ಳಿ


ಬೆಂಗಳೂರು ವಿಶ್ವವಿದ್ಯಾಲಯ -ಇತಿಹಾಸ ಚಕ್ರ


ಮಹಾರಾಣಿ ಲಕ್ಷ್ಮಿ ಅಮ್ಮಣಿ ಮಹಿಳಾ ವಿದ್ಯಾಲಯ


- -ಕಿರಗೂರಿನ ಗಯ್ಯಾಳಿಗಳು-ತೇಜಸ್ವಿ

                          - ಮಳೆಬೀಜ-ಬಸವರಾಜ ಸೂಳೇರಿ ಪಾಳ್ಯ 
                          -ಈಡಿಪಸ್ -ಪಿ .ಲಂಕೇಶ್ 
                          -ಕರ್ವಾಲೋ -ತೇಜಸ್ವಿ 
                          -ರಾಮಧಾನ್ಯ -ಕನಕದಾಸ 
                          -ಕಾಲಜ್ಞಾನಿ ಕನಕ -ಕಿ ರಂ ನಾಗರಾಜ
                           -ಯಹೂದೀ ಹುಡುಗಿ -ಇಟಗಿ ಈರಣ್ಣ

ಕಾರ್ಮಿಕ ರಂಗ ಭೂಮಿಗಾಗಿ ಹಲವು ನಾಟಕಗಳನ್ನು ಚಂದ್ರು ನಿರ್ದೇಶಿಸಿದ್ದಾರೆ .


ಬಿ ಇ ಎಂ ಎಲ್ ಅಪ್ರೆಂಟಿಸ್ ವಿಧ್ಯಾರ್ಥಿ ಗಳಿಗಾಗಿ -ಕುರ್ಚಿ -ಎಸ್.ಎಸ್.ಶರ್ಮ ಕೆ .ಇ ಬಿ ಮಹಿಳಾ ನೌಕರರಿಗಾಗಿ - ಘಾಟಿ ಮುದುಕಿ -ಬೇಲೂರು ಕೃಷ್ಣ ಮೂರ್ತಿ ಮೈಕೋ ಕಾರ್ಮಿಕರಿಗಾಗಿ -ನಾಳೆ ಯಾರಿಗೂ ಇಲ್ಲ -ಚಿ .ಶ್ರೀನಿವಾಸ ರಾಜು

              -ಸೇತೂ ಮಾಧವನ ಸಲ್ಲಾಪ -ಟಿ .ಎನ್ .ನರಸಿಂಹನ್
              -ಭ್ರೂಣ -ಆರ್ಯ 

ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ -ರಾಮಧಾನ್ಯ -ಡಾ.ರಾಮಕೃಷ್ಣ ಮರಾಠೆ.

             -ಯಹೂದಿ ಹುಡುಗಿ -ಇಟಗಿ ಈರಣ್ಣ 

ಕೆ .ಎಸ್.ಡಿ ಎಲ್ ಕಾರ್ಮಿಕರಿಗಾಗಿ -ಅನ್ವೇಷಕರು -ಪ್ರಕಾಶ ಕಂಬತ್ತಳ್ಳಿ

                   -ನಾಳೆ ಯಾರಿಗೂ ಇಲ್ಲ 
                   -ಅಳಿಯಾವತಾರ
                   -ಕುರ್ಚಿ 
                   -ಇತಿಹಾಸ ಚಕ್ರ 
                   -ಎಲ್ಲರೂ ನಮ್ಮವರೇ 
                   -ಶತಮೂರ್ಖರು 
                   -ಪ್ಯಾರ ಸೈಟ್ಸ್ 
                   -ಛಾಯ ಲೋಕ 
                   -ಗಂಧವತಿ ವೈಭವ -ಬೀದಿ ನಾಟಕ 
                    
                    -

ಸ್ನೇಹರಂಗ ,ಇಳಕಲ್ -ಆರದಿರಲಿ ಬೆಳಕು -ಜಯಶ್ರಿ ಕಂಬಾರ -ಕೆ ಎಸ್ ಡಿ ಎಲ್ ಚಂದ್ರು ಶಿವಸಂಚಾರ ,ಸಾಣೆಹಳ್ಳಿ -ಸಂಪತ್ತಿಗೆ ಸವಾಲ್ -ಬಿ ಪಿ .ಧುತ್ತರಗಿ -ಕೆ ಎಸ ಡಿ ಎಲ್ ಚಂದ್ರು

ರೂಪಾಂತರ ತಂಡದ ಕಾರ್ಯದರ್ಶಿ ಯಾಗಿರುವ ಚಂದ್ರು ರೂಪಾಂತರ ತಂಡಕ್ಕಾಗಿ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ

.

 • ಕೊಕ್ಕೆ -ಕತೆ -ಎಂ .ಬಿ .ನಟರಾಜ್ ,ರಂಗ ರೂಪ -ಅಮರ್
 • ಹೆಜ್ಜೆಗಳು -ಡಾ.ಹೆಚ್ .ಎಸ್.ವೆಂಕಟೇಶ ಮೂರ್ತಿ
 • ಮಳೆ ಬೀಜ -ರಚನೆ -ಬಸವರಾಜ ಸೂಳೇರಿ ಪಾಳ್ಯ
 • ಮುಸ್ಸಂಜೆ ಕಥಾಪ್ರಸಂಗ,-ಕಾದಂಬರಿ -ಪಿ .ಲಂಕೇಶ್ ,ರಂಗರೂಪ -ಬಸವರಾಜ ಸೂಳೇರಿ ಪಾಳ್ಯ
 • ಕರ್ವಾಲೋ,-ಕಾದಂಬರಿ -ಪೂರ್ಣಚಂದ್ರ ತೇಜಸ್ವಿ ,ರಂಗ ರೂಪ -ಅ.ನಾ ರಾವ್ ಜಾದವ್
 • ಮೈ ಮನಗಳ ಸುಳಿಯಲ್ಲಿ -ಕಾದಂಬರಿ -ಡಾ .ಶಿವರಾಮ ಕಾರಂತ ,ರಂಗ ರೂಪ -ಬಸವರಾಜ ಸೂಳೇರಿಪಾಳ್ಯ
 • ಬಡೇಸಾಬು ಪುರಾಣ -ಕತೆ -ಡಾ .ಶಾಂತ ರಸ ,ರಂಗರೂಪ -ಬಸವರಾಜ ಸೂಳೇರಿಪಾಳ್ಯ
 • ಗಲ್ಬಸ್ಕಿ -ರಚನೆ -ಕಾಫಿ ರಾಘವೇಂದ್ರ
 • ಯಹೂದಿ ಹುಡುಗ-ಉರ್ದುಮೂಲ -ಆಘಾ ಹಶ್ರು ಕಾಶ್ಮೀರಿ -ಕನ್ನಡ ಅನುವಾದ -ಇಟಗಿ ಈರಣ್ಣ
 • ರಾಮಧ್ಯಾನ ಚರಿತೆ,-ಕಾವ್ಯ -ಕನಕದಾಸ -ರಚನೆ -ಡಾ .ರಾಮಕೃಷ್ಣ ಮರಾಥೆ
 • ಟ್ರೈನ್ ಟು ಪಾಕಿಸ್ತಾನ್- ಕಾದಂಬರಿ-ಖುಷ್ವಂತ್ ಸಿಂಗ್ ,ಕನ್ನಡ ಅನುವಾದ -ಡಾ ಎಂ .ಬಿ .ರಾಮಮೂರ್ತಿ ,ರಂಗ ರೂಪ -ಚಿದಾನಂದ ಸಾಲಿ
 • ಕರಿ ಸಿದ್ದ -ಕವನ -ಕುವೆಂಪು ,ರಂಗ ರೂಪ -ಎ .ಎಸ್.ಮೂರ್ತಿ
 • ಚಕ್ರ ರತ್ನ -ರಚನೆ -ಡಾ .ಕೆ ವೈ .ನಾರಾಯಣ ಸ್ವಾಮಿ
 • ಮತ್ಸ್ಯ ಗಂಧಿ -ಕಾದಂಬರಿ-ಡಾ .ಪ್ರಭಾಕರ ಶಿಶಿಲ -ರಂಗ ರೂಪ -ಎನ್ .ಟಿ .ಪ್ರಸನ್ನ ಕುಮಾರ್

ಮೋಹನ ಸ್ವಾಮಿ -ವಸುಧೇಂದ್ರ -ಬಸವರಾಜ ಸೂಳೇರಿ ಪಾಳ್ಯ -ಕೆ ಎಸ್ ಡಿ ಎಲ್ ಚಂದ್ರು ಮೊದಲಾದ ನಾಟಕಗಳನ್ನು ರೂಪಾಂತರಕ್ಕೆ ನಿರ್ದೇಶಿಸಿ ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ ..

ಚಂದ್ರು ಕಿರು ತೆರೆಗೆ ಹಲವಾರು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ


 • ಗೋರೂರು ಕಥಾ ಪ್ರಸಂಗ
 • ಹಾಲು ಜೇನು
 • ಚಿತ್ತಾರದ ಬದುಕು
 • ಮಹಾನದಿ
 • ಊರ್ವಶಿ
 • ಚಾಪ್ಲಿನ್ ನೀನು ಅಮರ
 • ಅಕ್ಬರ್ ಬೀರಬಲ್

ಕಿರು ಚಿತ್ರಗಳು (ನಿರ್ದೇಶನ)


 • ದೀಪಾವಳಿಯ ನಸುಕಿನಲ್ಲಿ
 • ಬಾಂಧವ್ಯ
 • ಪಲಾಯನ
 • ರಕ್ತ ದ್ವಜ
 • ಅಗಸ್ಟ್ ಒಂಬತ್ತು
 • ಶಿವಯೋಗಿ ಸಿದ್ದರಾಮ ಮುಂತಾದವು

ಕಿರುತೆರೆ ಧಾರವಾಹಿ(ನಟನ)


 • ನಿರಂತರ
 • ಚಿತ್ತಾರದ ಬದುಕು
 • ಚಾಪ್ಲಿನ್ ನೀನು ಅಮರ
 • ಅಕ್ಬರ್ ಬೀರಬಲ್
 • ಮಹಾನದಿ
 • ರಾಘವೇಂದ್ರ ಮಹಾತ್ಮೆ
 • ಅರುಂಧತಿ
 • ಶ್ರೀರಸ್ತ್ತು ಶುಭ ಮಸ್ತ್ತು
 • ವೈಷ್ಣವಿ
 • ತ್ರಿವೇಣಿ ಸಂಗಮ

ಜಾಹಿರಾತು ಚಿತ್ರ .......


 • ಡೈಮಂಡ್ ಕಡಲೇಕಾಯಿ ಎಣ್ಣೆ

ಸಾಕ್ಷ್ಯ ಚಿತ್ರ .......


ಭ್ರೂಣ ಹತ್ಯೆ

ಬೆಳ್ಳಿ ತೆರೆ


 • ಹೃದಯ ಹೃದಯ -ಕತೆ ಮತ್ತು ಸಹ ನಿರ್ದೇಶನ
 • ಅಮಾಸ -ಸಹ ನಿರ್ದೇಶನ
 • ಮೊಗ್ಗಿನ ಜಡೆ -ಅಭಿನಯ
 • ಹೆಜ್ಜೆಗಳು -ಅಭಿನಯ
 • ಮಾಗಿಯ ಕಾಲ -ಅಭಿನಯ
 • ತಿಪ್ಪಾರಳ್ಳಿ ತರಲೆಗಳು -ಅಭಿನಯ
 • ಗ್ಯಾಂಗ್ ಸ್ಟರ್ -ಮಲಯಾಳಂ ಚಿತ್ರ -ಅಭಿನಯ
 • ಕಿರಗೂರಿನ ಗಯ್ಯಾಳಿಗಳು-ಅಭಿನಯ

ಕೆ ಎಸ ಡಿ ಎಲ್ ಚಂದ್ರುಹಲವಾರು ಕಿರು ತೆರೆ ಧಾರಾವಾಹಿ ಗಳಲ್ಲಿ ನಟಿಸಿ ನಿರ್ದೇಶಿಸಿದ್ದರು ರಂಗಭೂಮಿ ಅವರ ನೆಚ್ಚಿನ ತಾಣ . ಅಲ್ಲಿ ಅಭಿನಯಕ್ಕೆ ಬೇಕಾದ ಶಿಸ್ತು, ಸಂಯಮ, ಸಮರ್ಪಣಾ ಮನೋಭಾವ, ಶ್ರದ್ಧೆ, ಮೊದಲಾದವುಗಳನ್ನು ಕಲಿಯಲು ಸಾಧ್ಯವಾಯಿತು. 'ಅಮರ್'ನೇತೃತ್ವ ದಲ್ಲಿ .ಗೋಪಿ, ಕನಕರಾಜ್, ಗುರುಮೂರ್ತಿ, ಸುದರ್ಶನ್ ಸಿ.ವಿ .ಮಂಜುನಾಥ ,ವೆಂಕಟಾಚಲ ,ಅ.ನಾ.ರಾವ್ ಜಾದವ್ ,ಟಿ.ಕೆ ವಿಜಯಕುಮಾರ್ ,ಜಾಕಿ ಶಿವು,ಗಜಾನನ ಮೊದಲಾದ ಗೆಳೆಯರ ಜೊತೆ ಸಂಘಟಿಸಿ ರೂಪಾಂತರದ ಹವ್ಯಾಸಿ ರಂಗ ಭೂಮಿಯಲ್ಲಿ ತನ್ನದೇ ಆದ ಸ್ಥಾನ ಪಡೆಯುವಲ್ಲಿ ಶ್ರಮಿಸಿದ್ದಾರೆ ..