ಕೆಪ್ಪ

ವಿಕಿಪೀಡಿಯ ಇಂದ
Jump to navigation Jump to search

ಸ್ವಲ್ಪ ಅಥವ ಪೂರ್ತಿ ಕೇಳದವರನ್ನು ಕೆಪ್ಪಯಂದು ಕರೆಯುತ್ತಾರೆ. ಒಂದು ಅಥವ ಎರಡೂ ಕಿವಿ ಕೆಳಿಸದವರನ್ನು ಕೆಪ್ಪಯಂದು ಕರೆಯುತ್ತಾರೆ. ಹುಟ್ಟಿನಿಂದ ಕಿವಿ ಕೇಳಿಸದವರಿಗೆ ಭಾಷೆಯನ್ನು ಕಲಿಯಲು ಬಹಳ ಕಷ್ಟವಾಗುತ್ತದೆ. ಹಾಗು ಇವರಿಗೆ ಬೇರೆ ಕೆಲಸಗಳನ್ನು ಮಾಡುವುದಕ್ಕೂ ಕಷ್ಟವಾಗುತ್ತದೆ. ಕೆಪ್ಪರಿಗೆ ಒಂಟಿತನ ಕಾಡುತ್ತದೆ. ತಾತ್ಕಾಲಿಕವಾಗಿ ಅಥವ ಶಾಶ್ವತವಾಗಿ ಕಿವಿ ಕೇಳಿಸದಿರಬಹುದು. ಬಹಳ ಕಾರಣಗಳಿಂದ ಕೆಪ್ಪು ಉಂಟಾಗಬಹುದು. ವಯಸ್ಸಾದ ಕಾರಣ, ರೋಗದಿಂದ, ಹುಟ್ಟುವಾಗ ಆಗುವ ತೊಡಕುಗಳಿಂದ,ಕಿವಿಗೆ ಪೆಟ್ಟು ಬಿದ್ದು ಅಥವ ಹೆಚ್ಚಿನ ಶಬ್ದವನ್ನು ಕೇಳುವುದರಿಂದ ಕೆಪ್ಪರಾಗಬಹುದು. ಸಾಮಾನ್ಯವಾಗಿ ಸೋಂಕುಗಳಿಂದ ಕೆಪ್ಪರಾಗುತ್ತಾರೆ.ಗರ್ಭಾವಸ್ಥೆಯಲ್ಲಿ ಉಂಟಾಗುವ ರುಬೆಲ್ಲಯಂಬ ಸೋಂಕಿನಿಂದ ಸಹ ಕೆಪ್ಪರಾಗುತ್ತಾರೆ. ಕನಿಷ್ಠ ಒಂದು ಕಿವಿಯಿಂದ ೨೫ ಡೆಸಿಬಲ್ ಶಬ್ದ ಕೇಳಿಸದಿದ್ದರೆ ಅವರನ್ನು ಕೆಪ್ಪರೆಂದು ಕರೆಯಲಾಗುತ್ತದೆ.ಶಿಶುವಿಗೆ ಸಹಜವಾಗಿ ಹುಟ್ಟಿದ ತಕ್ಷಣ ಪರಿಕ್ಷಿಸಲಾಗುತ್ತದೆ. ಕಿವಿ ಕೇಳಸದಿರುವವರನ್ನು ಸೌಮ್ಯ, ಸಾಧಾರಣ, ತೀವ್ರವಾಗಿ ಕೆಳಿಸದವರೆಂದು ವರ್ಗಿಕರಿಸಲಾಗುತ್ತದೆ. ಸ್ವಲ್ಪ ಕಿವಿ ಕೇಳಿಸದಿರುವುದನ್ನು ತಡೆಯಬಹುದು. ಗರ್ಭಧಾರಣೆಯಲ್ಲಿ ಹೆಚ್ಚಿನ ಆರೈಕೆಯನ್ನು ಮಾಡುವುದರಿಂದ ಹಾಗು ಹೆಚ್ಚಿನ ಶಬ್ದವನ್ನು ಕೇಳಿಸಿಕೋಳ್ಳದಿರುವುದರಿಂದ ಕೆಪ್ಪುತನವನ್ನು ತಡೆಯಬಹುದು. ವಿಶ್ವ ಆರೋಗ್ಯ ಸಂಘಟನೆಯು ಯುವಕರಿಗೆ ಆಡಿಯೋ ಪ್ಲೇಯರ್ಗಳನ್ನು ಕಡಿಮೆ ಬಳಸಲು ಶಿಫಾರಿಸುತ್ತದೆ.




"https://kn.wikipedia.org/w/index.php?title=ಕೆಪ್ಪ&oldid=718034" ಇಂದ ಪಡೆಯಲ್ಪಟ್ಟಿದೆ