ಕೆನ್ನೀಲಿಕೆ 2
| ಕೆನ್ನೀಲಿಕೆ | |
|---|---|
| Left figure is urine on the first day while the right figure is urine after three days of sun exposure showing the classic change in color to purple. | |
| ಉಚ್ಚಾರ | |
| ವೈದ್ಯಕೀಯ ವಿಭಾಗಗಳು | Hematology, dermatology, neurology |
| ಲಕ್ಷಣಗಳು | Depending on subtype—abdominal pain, chest pain, vomiting, confusion, constipation, fever, seizures, blisters with sunlight[೧][೨] |
| ಕಾಯಿಲೆಯ ಗೋಚರ/ಪ್ರಾರಂಭ | Recurrent attacks that last days to weeks[೨] |
| ಕಾರಣಗಳು | Usually genetic[೨] |
| ರೋಗನಿರ್ಣಯ | Blood, urine, and stool tests, genetic testing[೨] |
| ವಿಭಿನ್ನ ರೋಗನಿರ್ಣಯ | Lead poisoning, alcoholic liver disease[೩] |
| ಚಿಕಿತ್ಸೆ | Depends on type and symptoms[೨] |
| ಆವರ್ತನ | 1 to 100 in 50,000 people[೧] |
ಕೆನ್ನೀಲಿಕೆ 2 (ಪಾರ್ಫಿರಿಯ) ಕೆನ್ನೀಲಿಕೆಗಳೂ (ಪಾರ್ಫಿರಿನ್ಸ್) ಅವುಗಳ ಮೂಲ ವಸ್ತುಗಳೂ ಮೈಯಲ್ಲಿ ಹೆಚ್ಚಾಗಿ ಹುಟ್ಟಿ ಮೂತ್ರದಲ್ಲಿ ಹೊರಬೀಳುತ್ತಿರುವ ತಳಿ ಸಂಬಂಧವಾದ (ಜೆನೆಟಿಕ್) ಒಂದು ವಿರಳ ಬೇನೆ. [೨]
ಲಕ್ಷಣಗಳು
[ಬದಲಾಯಿಸಿ]ಮೂತ್ರ ವಿಸರ್ಜನೆಯಾದ ಕ್ಷಣ ಅದು ಎಂದಿನಂತೆ ಕಂಡರೂ ಕೆಲವೇ ತಾಸುಗಳಲ್ಲಿ ಕಗ್ಗೆಂಪಿಗೆ ತಿರುಗುವುದು. ನಿಸರ್ಗದಲ್ಲಿ ಎಷ್ಟೋ ಕಡೆಗಳಲ್ಲಿರುವ ಆದಿಕೆನ್ನೀಲಕದ (ಪ್ರೋಟೊಪಾರ್ಫಿರಿನ್) ಹಾಗೆಯೇ ಕೆನ್ನೀಲಿಕಗಳೂ ಕೆಂಪನೆಯ ಬಣ್ಣವಸ್ತುಗಳು. ಕೆಂಪು ರಕ್ತಕಣಗಳಲ್ಲಿರುವ ಹೀಮೋಗ್ಲೊಬಿನ್ ಕೆಂಪಗಿರಲು ಕೆನ್ನೀಲಿಕವೇ ಕಾರಣ. ಕಾರಣವಿಲ್ಲದ ಹೊಟ್ಟೆ ಶೂಲೆ, ಕೈಕಾಲುರಿ, ಮನೋವಿಕಲತೆ ಇವೆಲ್ಲ ಒಟ್ಟಾಗಿ ಕಂಡಾಗ ಕೆನ್ನೀಲಿಕೆ ರೋಗವನ್ನು ಅನುಮಾನಿಸಬಹುದು. ಈ ಬೇನೆ ಒಬ್ಬನಲ್ಲಿ ನಿರ್ಧಾರವಾಗಿ ಇರುವುದಾದರೆ, ಅವನ ತಲೆಮಾರಿನವರನ್ನೆಲ್ಲ ಪರೀಕ್ಷಿಸಬೇಕಾಗುವುದು. ಸುಪ್ತವಾಗಿದ್ದ ಈ ಬೇನೆ ಬಹಳ ದಿನಗಳು ಹೊಟ್ಟೆಗಿಲ್ಲವಾದಾಗ, ಬಾರ್ಬಿಟುರೇಟು, ಕಾರ್ಬಮೆಜಪಿನ್, ಕ್ಲೋರ್‍ಪ್ರೊಪಮೈಡ್, ಬಾಯಿಗರ್ಭನಿರೋಧಕ ಮಾತ್ರೆಗಳು, ಫಿನೈಟಾಯಿನ್, ಪೈರಜನ್‍ಎಮೈಡ್, ಟಾಲ್‍ಬುಟಮೈಡ್ ಸಲ್ಫೋನೇಮೈಡುಗಳನ್ನು ಸೇವಿಸಿದಾಗ, ಬಸಿರಾದಾಗ ಕೆರಳುತ್ತದೆ.
ವಿಧಗಳು
[ಬದಲಾಯಿಸಿ]
ಕೆನ್ನೀಲಿಕೆಯಲ್ಲಿ ಎರಡು ಬಗೆಗಳಿವೆ: ಕೆಂಗಣವಿಕಾಸದ ಬಗೆಯಲ್ಲಿ ಮೈ ಮೂಳೆಗಳ ಮಜ್ಜೆಯಲ್ಲಿ ವಿಕಾಸವಾಗುತ್ತಿರುವ ಕೆಲವು ಕೆಂಪು ರಕ್ತಕಣಗಳಲ್ಲಿ ಕೆನ್ನೀಲಿಕ ಮಿತಿಗೆಟ್ಟು ತಯಾರಾಗುತ್ತಿರುವುದು. ಮೈಯಲ್ಲಿ ಎಂದಿಗಿಂತಲೂ ಹೆಚ್ಚಾಗಿ ಮೂತ್ರ ಕೆನ್ನೀಲಿಕ (ಯೂರೊಪಾರ್ಫಿರಿನ್) ಹೊರಬೀಳುವುದರಿಂದ ಮೂತ್ರ ಕಗ್ಗೆಂಪಾಗಿಯೂ ಮೂಳೆ ಮತ್ತು ಹಲ್ಲು ಬೂದುಗೆಂಪಾಗಿಯೂ ಕಾಣುವುವು. ಇದೇ ಕಾರಣದಿಂದ ಎಳೆಗೂಸು ರೋಗಿಗಳಿಗೆ ಬೆಳಕು ತಾಗಿದರೆ ಹಾನಿಕರ. ಮೊಗ, ಕೈಗಳ ಮೇಲೆ ಬೊಬ್ಬೆಗಳೆದ್ದು ವಾಸಿಯಾದಾಗ ಕಲೆಗಟ್ಟಿ ವಿಕಾರವಾಗಿ ಸುಕ್ಕುಗಟ್ಟುವುದು. ತೊರಳೆ ದೊಡ್ಡದಾಗಿ ರಕ್ತ ಕೊರೆಯಾಗುತ್ತದೆ. ತೊರಳೆಯನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕುವುದು ಯೋಗ್ಯ. ಬಿಸಿಲಿಗೆ ಮೈ ತಾಗದಿದ್ದರೆ ರೋಗಿಗೆ ನೆಮ್ಮದಿ. ಇನ್ನೊಂದು ಬಗೆಯಾದ ಈಲಿ ಕೆನ್ನೀಲಿಕೆ (ಹೆಪಾಟೊಪಾರ್ಫಿರಿಯ) ಆಗಾಗ್ಗೆ ಕೆರಳಬಹುದು. ವಯಸ್ಸಾದ ಮೇಲೆ ಬರಬಹುದು, ಇಲ್ಲವೇ ಇವೆರಡು ರೀತಿಗಳಲ್ಲೂ ಕಾಡಬಹುದು. ಆಗಾಗ್ಗೆ ಕೆರಳುವ ಬಗೆಯಲ್ಲಿ, ಈಲಿಯಲ್ಲಿ ಬಣ್ಣವಿರದ ರೂಪದಲ್ಲಿ ಕೆನ್ನೀಲಿಕ ತಯಾರಾಗುವುದರಿಂದ ಪದೇ ಪದೇ ಹೊಟ್ಟೆ ನೋವು, ಪುಕ್ಕಲುತನ, ಸುಸ್ತು ಇಲ್ಲವೇ ಮೈಯಲ್ಲಿ ಅಲ್ಲಲ್ಲಿ ಅರನಾರಿಗಳು ಕಾಣಿಸಿಕೊಂಡು ಕೆಲವೇಳೆ ಸಾವಿಗೀಡಾಗಲೂಬಹುದು. ವಯಸ್ಸಾದ ಮೇಲೆ ಕಾಣಿಸಿಕೊಳ್ಳುವ ಈಲಿಕೆನ್ನೀಲಿಕೆಯಲ್ಲಿ ಕೇವಲ ಬೆಳಕಿಗೊಡ್ಡಿದಾಗ ಚರ್ಮದ ಮೇಲೆ ಬೊಬ್ಬೆಗಳೆದ್ದು ವಾಸಿಯಾಗಿ ಚರ್ಮ ಸುಕ್ಕುಗಟ್ಟುತ್ತದೆ. ಬೇನೆ ಹೆಚ್ಚಾದಾಗ ಶಮನಕ್ಕಾಗಿ ಮೈಯಲ್ಲಿನ ರಕ್ತ ಒಂದಿಷ್ಟನ್ನು ತೆಗೆದುಹಾಕುವುದುಂಟು. ಹಿಮಟೆನ್ ಕೊಡುಗೆಗೆ ಪುರಸ್ಕಾರವಿದೆ. ಅದು ಕೂರಾದ ರೋಗವನ್ನು ಕಡಿಮೆ ಮಾಡುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
- 1 2 ಉಲ್ಲೇಖ ದೋಷ: Invalid
<ref>tag; no text was provided for refs named "NIH2009GHR". - 1 2 3 4 5 6 ಉಲ್ಲೇಖ ದೋಷ: Invalid
<ref>tag; no text was provided for refs named "NIDDK". - ↑ Dancygier, Henryk (2009). Clinical Hepatology: Principles and Practice of Hepatobiliary Diseases. Springer Science & Business Media. p. 1088. ISBN 978-3-642-04519-6. Archived from the original on 8 September 2017.