ವಿಷಯಕ್ಕೆ ಹೋಗು

ಕೃಷ್ಣಮೃಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Blackbuck
A blackbuck in central India.
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
Antilope

Pallas, 1766
ಪ್ರಜಾತಿ:
A. cervicapra
Binomial name
Antilope cervicapra
(Linnaeus, 1758)
Subspecies

Antilope cervicapra centralis
Antilope cervicapra cervicapra
Antilope cervicapra rajputanae
Antilope cervicapra rupicapra

ಚಿತ್ರ:Blackbuck male female.yellowjpg
Male and female blackbucks

ಕೃಷ್ಣಮೃಗಬೋವಿಡೇ ಕುಟುಂಬದ ಉಪವಿಭಾಗ ಆಂಟಿಲೋಪ್‍ನ ಸದಸ್ಯ. ವೈಜ್ಞಾನಿಕ ಹೆಸರು ಆಂಟಿಲೋಪೆ ಸೆರ್ವಿಕಾಪ್ರ. ಹಿಂದೆ ಸೂರತ್‍ನ ಕೆಲವು ಭಾಗಗಳನ್ನು ಬಿಟ್ಟು ಭಾರತದ ಎಲ್ಲ ಮೈದಾನ ಪ್ರದೇಶಗಳಲ್ಲಿ ಕಂಡುಬರುತ್ತಿದ್ದ ಇವು ಇಂದು ಆವಾಸ ನಾಶದಿಂದಾಗಿ ವಂಶನಾಶದ ಹಾದಿ ಹಿಡಿದಿದೆ.

ಲಕ್ಷಣಗಳು

[ಬದಲಾಯಿಸಿ]

ಮರಿಯಾಗಿದ್ದಾಗ ಹಳದಿ ಬಣ್ಣ ಹೊಂದಿರುವ ಇವು ಕ್ರಮೇಣ ಕಂದು-ಕಪ್ಪಿಗೆ ತಿರುಗುತ್ತವೆ. ವಯಸ್ಸಿನೊಂದಿಗೆ ಈ ಬಣ್ಣ ಗಾಢವಾಗುತ್ತದೆ. ಹೆಣ್ಣಿನ ಬಣ್ಣ ಬದಲಾಗದೆ ಹಳದಿಯಾಗೇ ಉಳಿಯುತ್ತದೆ. ಎರಡಕ್ಕೂ ಕಣ್ಣಿನ ಸುತ್ತ ಬಿಳಿ ಉಂಗುರವಿದ್ದು, ಗಂಡಿಗೆ ಸುರುಳಿಯಾದ ಎರಡು ಕೊಬುಗಳಿರುತ್ತದೆ. ವಿಜಯದ ಧ್ವಜದಂತೆ ಇವು ಕಂಗೊಳಿಸುತ್ತವೆ.

ವಂಶಾಭಿವ್ರದ್ಧಿ

[ಬದಲಾಯಿಸಿ]

ದಕ್ಷಿಣ ಭಾರತದಲ್ಲಿ 20-30ರ ಗುಂಪುಗಳಲ್ಲಿರುವ ಇವು ವರ್ಷಪೂರ್ತಿ ವಂಶಾಭಿವೃದ್ಧಿ ನಡೆಸುತ್ತವೆಯಾದರೂ ಮುಖ್ಯ ವಂಶಾಭಿವೃದ್ಧಿಯ ಸಮಯ ಫೆಬ್ರವರಿ ಮತ್ತು ಮಾರ್ಚ್. ಹೆಣ್ಣಿಗಾಗಿ ಕಾದಾಟ ಸಾಮಾನ್ಯ. ಹೆಣ್ಣು ಒಂದು ಅಥವಾ ಎರಡು ಮರಿಯನ್ನು ಈಯುತ್ತದೆ. ಗುಂಪಿನ ನಾಯಕತ್ವ ವಹಿಸುವುದು ಇತರ ಹಲವಾರು ಪ್ರಾಣಿಗಳಲ್ಲಿರುವಂತೆ ಹಿರಿಯ ಹೆಣ್ಣು ಪ್ರಾಣಿ. ಅಪಾಯ ಒದಗಿದಾಗ ಇವು ದಾಪುಗಾಲು ಹಾಕಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸುತ್ತವೆ. ಓಟದ ಮಧ್ಯದಲ್ಲಿ ದೊಡ್ಡ ದೊಡ್ಡ ಜಿಗಿತಗಳು ಇರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Mallon, D.P. (Antelope Specialist Group) (2003). Antilope cervicapra. 2006. IUCN Red List of Threatened Species. IUCN 2006. www.iucnredlist.org. Retrieved on 13 February 2010..


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: