ಕುಲ್ಧಾರ ಅಥವಾ ಕುಲ್ ಧಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಕುಲ್ಧಾರಾ ಎಂಬ ಪರಿತ್ಯಕ್ತ ಗ್ರಾಮ: =

ಇದು ರಾಜಸ್ಥಾನ ರಾಜ್ಯದ ಜೈಸಲ್ಮೇರ್ ನಿಂದ ಸುಮಾರು ೧೮ ಕಿ.ಮಿ. ದೂರದಲ್ಲಿದೆ. ಈಗ ನಾವು ಕೇವಲ ಈ ಊರಿನ ಅಳಿದುಳಿದ ಅವಶೇಷಗಳನ್ನು ಮಾತ್ರ ನೋಡಬಹುದು.

ಇತಿಹಾಸ[ಬದಲಾಯಿಸಿ]

ಈ ಗ್ರಾಮವು ೧೩ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಒಂದು ಕಾಲದಲ್ಲಿ ಪಲಿವಾಲ್ ಬ್ರಾಹ್ಮಣರು ವಾಸಿಸುತ್ತಿದ್ದರಂತೆ. ೧೯ನೇ ಶತಮಾನದಲ್ಲಿ ನೀರಿನ ಸೌಲಭ್ಯವಿಲ್ಲದ್ದರಿಂದಲೋ ಅಥವಾ ಇನ್ಯಾವುದೇ ಕಾರಣದಿಂದ ಇಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರು ಇಡೀ ಪ್ರದೇಶವನ್ನು ತ್ಯಜಿಸಿ ಬೇರೆಲ್ಲಿಗೋ ವಲಸೆ ಹೋದರಂತೆ.

ಅಂದಿನಿಂದ ಇಂದಿನವರೆಗೂ ಕುಲ್ಧಾರಾ ಹಾಗೂ ಅದರ ಸುತ್ತಮುತ್ತಲಿನ ೮೩ ಹಳ್ಳಿಗಳಲ್ಲಿ ಯಾರೂ ವಾಸಿಸುತ್ತಿಲ್ಲವಂತೆ. ಕೆಲವರು ಭೂಕಂಪದಿಂದಾಗಿ ಇಡೀ ಪ್ರದೇಶ ಸರ್ವನಾಶವಾಯಿತು ಎಂದೂ ಆಂದಾಜಿಸುತ್ತಾರೆ. ಅಲ್ಲದೇ ಈ ಪ್ರದೇಶ ಭೂತ- ಪ್ರೇತಗಳ ಆವಾಸಸ್ಥಾನವಾಗಿದೆ ಎನ್ನುವುದು ಸುತ್ತಮುತ್ತಲಿನ ಜನರ ನಂಬಿಕೆ. ಆದರೆ ಈ ರೀತಿ ಇಡೀ ಊರೇ ನಿರ್ಜನವಾಗಲು ನಿಖರವಾದ ಕಾರಣ ಇಲ್ಲಿಯವರೆಗೂ ಯಾರಿಗೂ ತಿಳಿದಿಲ್ಲವಂತೆ.

ಉಲ್ಲೇಖ[ಬದಲಾಯಿಸಿ]