ಕುಟ್ಟಿಚಾತನ್ ಥೆಯ್ಯಂ
| Kuttichathan Theyyam | |
|---|---|
Kuttichathan theyyam face | |
| ಸಂಲಗ್ನತೆ | Hinduism |
| ಪ್ರದೇಶ | North Kerala, India |
'ಕುಟ್ಟಿಚಾತನ್ ಥೆಯ್ಯಂ' ಇದನ್ನು ಸಾಸ್ತಪ್ಪನ್ ತೆಯ್ಯಂ ಎಂದೂ ಕರೆಯುತ್ತಾರೆ [೧] ಇದು ಭಾರತದ ಕೇರಳ ರಾಜ್ಯದ ಉತ್ತರ ಭಾಗಗಳಲ್ಲಿ ಪ್ರದರ್ಶಿಸಲಾಗುವ ಥೆಯ್ಯಂ ಆಗಿದೆ. ಕುಟ್ಟಿಚಾತನ್ ಥೆಯ್ಯಂನಲ್ಲಿರುವ ದೇವತೆಯು ಕಣ್ಣೂರು ಜಿಲ್ಲೆಯ ಪಯ್ಯನೂರಿನ ಕಲಕಟ್ಟು ಇಲ್ಲಂನ ಬ್ರಾಹ್ಮಣ ಕುಟುಂಬದೊಂದಿಗೆ ಸಂಬಂಧ ಹೊಂದಿರುವುದರಿಂದ, ಈ ಥೆಯ್ಯಂ ಅನ್ನು ಕಲಕಟ್ಟು ಕುಟ್ಟಿಚ್ಚಾತನ್ ಎಂದೂ ಕರೆಯುತ್ತಾರೆ.[೨]
ಪುರಾಣ
[ಬದಲಾಯಿಸಿ]ಶಿವ ಮತ್ತು ಪಾರ್ವತಿಯ ಮಗ.
[ಬದಲಾಯಿಸಿ]ಶಿವ ಮತ್ತು ಪಾರ್ವತಿ, ವಲ್ಲುವನ್ ಮತ್ತು ವಲ್ಲುವತಿ ವೇಷ ಧರಿಸಿದಾಗ, ಅವರಿಗೆ ಕರುವಲ್ ಮತ್ತು ಕುಟ್ಟಿಚಾತನ್ ಎಂಬ ಇಬ್ಬರು ಮಕ್ಕಳಿದ್ದರು.[೩] ಅವರು ಕಪ್ಪು ದೇಹ, ಹಣೆಯ ಮೇಲೆ ಹೂವು ಮತ್ತು ಮೂರು ಕಣ್ಣುಗಳೊಂದಿಗೆ ಜನಿಸಿದ ಕುಟ್ಟಿಚಾತನನ್ನು ಕಲಕಟ್ಟು ಇಲ್ಲಂನ ಮಕ್ಕಳಿಲ್ಲದ ನಂಬೂದರಿಗೆ ನೀಡಿದರು.[೩] ಅವನು ಮಗುವನ್ನು ಶಾಲೆಗೆ ಗುರುವಿನ ಬಳಿ ಕಳುಹಿಸುತ್ತಾನೆ. ಗುರುಗಳ ಮಾತನ್ನು ಪಾಲಿಸಲು ಸಿದ್ಧರಿಲ್ಲದ ಕುಟ್ಟಿಚಾತನ್, ಬ್ರಾಹ್ಮಣ ಪದ್ಧತಿಗಳಿಗೆ ವಿರುದ್ಧವಾದ ಆಚರಣೆಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದನು.[೩] ಗುರುವಿನ ಅಸಾಧಾರಣ ಬುದ್ಧಿಮತ್ತೆಯಿಂದಾಗಿ, ಮಗುವಿನ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ.[೩] ಗುರುಗಳು ತನಗೆ ವಿಧೇಯನಾಗದ ಕುಟ್ಟಿಚಾತನನ್ನು ಗದರಿಸಿ ಹೊಡೆದರು. ಸೇಡು ತೀರಿಸಿಕೊಳ್ಳಲು ಚಾತನ್ ಗುರುಗಳನ್ನು ಕೊಂದು ಸ್ಥಳದಿಂದ ಹೊರಟುಹೋದನು.[೩]
ಇದನ್ನು ತಿಳಿದ ನಂಬೂದಿರಿ ತನ್ನ ಹೆಂಡತಿ ಅತೋಲಮ್ಮನಿಗೆ ಹಸಿವಿನಿಂದ ಬಳಲುತ್ತಿರುವ ಮಗುವಿಗೆ ಆಹಾರ ನೀಡಬೇಡಿ ಎಂದು ಹೇಳಿದನು.[೪] ಅವನು ಹಸಿದು ಹಾಲು ಕೇಳಿದಾಗ, ಅವಳು ಅದನ್ನು ತಿರಸ್ಕರಿಸಿದಳು ಮತ್ತು ಕೋಪದಿಂದ ಹುಡುಗ ಒಂದು ಹೋರಿಯನ್ನು ಕೊಂದು ಅದರ ರಕ್ತವನ್ನು ಕುಡಿದನು.[೩] ಇದರಿಂದ ಕೋಪಗೊಂಡ ನಂಬೂದಿರಿ ಕುಟ್ಟಿಚಾತನನ್ನು ಸಾಯುವಷ್ಟು ಹೊಡೆಯುತ್ತಾನೆ. ಆದರೆ ಕುಟ್ಟಿಚಾತನ್ ಮರುಜನ್ಮ ಪಡೆದನು.[೩] ನಂಬೂದಿರಿಯವರು ಹೆಚ್ಚಿನ ಸಂಖ್ಯೆಯ ಬ್ರಾಹ್ಮಣರನ್ನು ಕರೆತಂದು ಕುಟ್ಟಿಚಾತನನ್ನು ಕೊಂದು ಅವನ ದೇಹವನ್ನು 390 ತುಂಡುಗಳಾಗಿ ಕತ್ತರಿಸಿ 21 ಹೋಮಕುಂಡಗಳಲ್ಲಿ (ಒಂದು ರೀತಿಯ ಪವಿತ್ರ ಕುಂಡ) ಸುಟ್ಟರು.[೩] ಆ ಕುಂಡಗಳಿಂದ ಅನೇಕ ಕುಟ್ಟಿಚಾತನರು ಜನಿಸಿದರು ಮತ್ತು ಅವರು ನಂಬೂದಿರಿಯ ಮನೆ ಮತ್ತು ಹತ್ತಿರದ ಬ್ರಾಹ್ಮಣ ಮನೆಗಳಿಗೆ ಬೆಂಕಿ ಹಚ್ಚಿದರು.[೩] ಅವರು ಕಿರುಕುಳಕ್ಕೊಳಗಾದ ಕುಟ್ಟಿಚಾತನನ್ನು ಥೆಯ್ಯಂ ಆಗಿ ಪೂಜಿಸಲು ನಿರ್ಧರಿಸಿದರು. ಇದು ಕುಟ್ಟಿಚತನ್ ಥೆಯ್ಯಂನ ಹಿಂದಿನ ಪುರಾಣ.[೩]
ನಂಬೂದಿರಿಯವರ ಮಗ
[ಬದಲಾಯಿಸಿ]ಇನ್ನೊಂದು ಕಥೆಯ ಪ್ರಕಾರ ಕುಟ್ಟಿಚಾತನ್ ನಂಬೂದಿರಿ ಮತ್ತು ಮನೆ ಗುಡಿಸುತ್ತಿದ್ದ ಹಿಂದುಳಿದ ಪುಲಯ ಮಹಿಳೆಗೆ ಜನಿಸಿದ ಮಗು.[೫] ಮುಜುಗರಕ್ಕೊಳಗಾದ, ಗರ್ಭಿಣಿ ಮಹಿಳೆ ತನ್ನನ್ನು ಕಲ್ಲಿನ ಕೋಣೆಯಲ್ಲಿ ಬೀಗ ಹಾಕಿಕೊಂಡಳು ಮತ್ತು ಹೆರಿಗೆಯ ನಂತರ ಹುಡುಗನನ್ನು ರಹಸ್ಯವಾಗಿ ಕೋಣೆಯಲ್ಲಿ ಬೆಳೆಸಲಾಯಿತು.[೨] ಅವನು ಬೆಳೆಯುತ್ತಿದ್ದಾಗ ಮನೆಯಿಂದ ಅಕ್ಕಿ ಮತ್ತು ಭತ್ತವನ್ನು ಕದ್ದು ಕೆಳಜಾತಿಯ ಬಡವರಿಗೆ ದಾನ ಮಾಡುತ್ತಿದ್ದ ಎಂಬ ಕಥೆಗಳೂ ಇವೆ.[೨]
ಇನ್ನೊಂದು ಕಥೆಯ ಪ್ರಕಾರ ಕುಟ್ಟಿಚಾತನ್ ನಂಬೂದಿರಿ ಮತ್ತು ಹಿಂದುಳಿದ ಪಾಣ ಮಹಿಳೆಗೆ ಜನಿಸಿದ ಮಗು.[೬] ಅಕ್ರಮ ಸಂಬಂಧದ ಮಗನಾಗಿ ಜನಿಸಿದ ಕಾರಣ, ಆ ಮಗನಿಗೆ ತಂದೆಯ ಪ್ರಭುತ್ವ ದೊರೆಯಲಿಲ್ಲ.[೬] ನಿರ್ಲಕ್ಷ್ಯದಿಂದ ಬೆಳೆದ ಮಗು ತುಂಬಾ ತುಂಟತನದಿಂದ ಕೂಡಿತ್ತು.[೬] ಒಮ್ಮೆ, ಅವರು ನೀರಿಗಾಗಿ ಬಾಯಾರಿದಾಗ, ಜನರು ನೀರು ಕೊಡದೆ ಅವಮಾನಿಸಿದರು. ಕೋಪಗೊಂಡ ಕುಟ್ಟಿಚಾತನ್ ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಹೋರಿಯನ್ನು ಕೊಂದು ರಕ್ತವನ್ನು ಕುಡಿದು, ಆ ಸ್ಥಳದಿಂದ ಹೊರಟು ವಡಕರ ಕುಟ್ಟೋತ್ ಮೂಲಕ ಲೋಕನಾರ್ಕವು ತಲುಪಿದನು.[೬]

ವೇಷ ಭೂಷಣ
[ಬದಲಾಯಿಸಿ]ಆಯತಾಕಾರವಾಗಿ ಉದ್ದವಾಗಿರವ ಆಕರವನ್ನು ಸೊಂಟದ ಸುತ್ತ ಧರಿಸಿರುವ ಕುಟ್ಟಿಚಾತನ್ ಥೆಯ್ಯಂನ ಶಿರಸ್ತ್ರಾಣದಲ್ಲಿ ಕೆನ್ನೆಗಳ ಎರಡೂ ಬದಿಗಳಲ್ಲಿ ಎರಡು ಮರದ ತುಂಡುಗಳನ್ನು ಕಿವಿಗಳ ಆಕರದಲ್ಲಿ ಅಳಡಿಸುತ್ತಾರೆ.[೭] ತೆಯ್ಯಂ ಕಲಾವಿದರು ತಮ್ಮ ಕಣ್ಣುಗಳನ್ನು ಲೋಹದ ಟೋಪಿಯಿಂದ ಮುಚ್ಚಿಕೊಳ್ಳುತ್ತಾರೆ. ಕಣ್ಣುಗಳಿಗಾಗಿ ಮಧ್ಯದಲ್ಲಿ ಸಣ್ಣ ರಂಧ್ರವಿಡುತ್ತಾರೆ.[೭] ಈ ವೇಷಭೂಷಣದಲ್ಲಿ ಬೆನ್ನಿನ ಮೇಲೆ ನವಿಲಿನಂತಹ ಆಕರಗಳನ್ನು ಸಹ ಹೊಂದಿದೆ.[೭] ಒಟ್ಟಾರೆಯಾಗಿ ಎಲ್ಲವೂ ಕೆಂಪು ಬಣ್ಣದ್ದಾಗಿದೆ .
ಕುಟ್ಟಿಚತನ್ ಮತ್ತು ಬೌದ್ಧ ಧರ್ಮದ ನಡುವಿನ ಸಂಬಂಧ
[ಬದಲಾಯಿಸಿ]ಚಾತನ್ ಎಂಬುದು ಬುದ್ಧನ ಪಾಲಿ ಪದದ ಮಲಯಾಳಂ ಅನುವಾದವಾಗಿದೆ.[೫] 'ಕುಟ್ಟಿಚಾತನ್' ಪದದ ಅಕ್ಷರಶಃ 'ಮಕ್ಕಳ ಚಾತನ್' ಎಂದರ್ಥ. ಆರಂಭಿಕ ಬೌದ್ಧ ದೇವಾಲಯಗಳನ್ನು ತಮ್ಮದಾಗಿಸಿಕೊಂಡಾಗ ಅಲ್ಲಿ ಅಸ್ತಿತ್ವದಲ್ಲಿದ್ದ ಅನೇಕ ಬೌದ್ಧ ಪದ್ಧತಿಗಳನ್ನು ಹಿಂದೂಗಳು ಅನುಕರಿಸಿಕೊಂಡಿರಬಹುದು ಎಂದು ನಂಬಲಾಗಿದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ "Sasthappan (Kuttichathan) Theyyam". Wandering Ruminations.
- ↑ ೨.೦ ೨.೧ ೨.೨ ೨.೩ "ബുദ്ധമതവും കുട്ടിച്ചാത്തൻ തെയ്യവും തമ്മിലുള്ള ബന്ധം! വീഡിയോ കാണാം". Samayam (in ಮಲಯಾಳಂ). The Times of India. Archived from the original on 2022-02-01. Retrieved 2022-02-16.
- ↑ ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ "കുട്ടിച്ചാത്തന് തെയ്യം". Janmabhumi (in ಇಂಗ್ಲಿಷ್). Archived from the original on 2022-02-16. Retrieved 2022-02-16.
- ↑ "കുട്ടിച്ചാത്തന് തെയ്യം". Janmabhumi (in ಇಂಗ್ಲಿಷ್). Archived from the original on 2022-02-16. Retrieved 2022-02-16."കുട്ടിച്ചാത്തന് തെയ്യം". Janmabhumi. Archived from the original on 2022-02-16. Retrieved 2022-02-16.
- ↑ ೫.೦ ೫.೧ "ബുദ്ധമതവും കുട്ടിച്ചാത്തൻ തെയ്യവും തമ്മിലുള്ള ബന്ധം! വീഡിയോ കാണാം". Samayam (in ಮಲಯಾಳಂ). The Times of India. Archived from the original on 2022-02-01. Retrieved 2022-02-16."ബുദ്ധമതവും കുട്ടിച്ചാത്തൻ തെയ്യവും തമ്മിലുള്ള ബന്ധം! വീഡിയോ കാണാം". Samayam (in Malayalam). The Times of India. Archived from the original on 2022-02-01. Retrieved 2022-02-16.
- ↑ ೬.೦ ೬.೧ ೬.೨ ೬.೩ പ്രദീപ്, എഴുത്ത്: ആമി അശ്വതി / ചിത്രങ്ങള്: എന് എം. "പ്രതിഷ്ഠയ്ക്ക് മാത്രമല്ല പ്രത്യേകത... കല്ലേരിയിലെ കുട്ടിച്ചാത്തന് ക്ഷേത്രത്തിലെ കൗതുക കാഴ്ചകള്". Mathrubhumi (in ಇಂಗ್ಲಿಷ್). Archived from the original on 2021-11-28. Retrieved 2022-02-16.
- ↑ ೭.೦ ೭.೧ ೭.೨ Raj, Tanya (2019-10-26). "Sasthappan (Kuttichathan) Theyyam". Wandering Ruminations (in ಅಮೆರಿಕನ್ ಇಂಗ್ಲಿಷ್). Archived from the original on 2022-02-16. Retrieved 2022-02-16.Raj, Tanya (2019-10-26). "Sasthappan (Kuttichathan) Theyyam" Archived 2022-02-16 ವೇಬ್ಯಾಕ್ ಮೆಷಿನ್ ನಲ್ಲಿ.. Wandering Ruminations. Retrieved 2022-02-16.
ಬಾಹ್ಯ ಕೊಂಡಿಗಳು
[ಬದಲಾಯಿಸಿ]
Media related to Kuttichathan Theyyam at Wikimedia Commons- V., Navya (August 2020). "The Legends of Resistance: Kuttichathan Theyyam" (PDF). Navajyoti, International Journal of Multi-Disciplinary Research. 5 (1).