ಕೀಪುಮಾ ಸಮರಕಲೆ
ಕೀಪುಮಾ ಸಮರಕಲೆ | Keepuma Samarakale
ಭಾರ್ಗವಪುರಾಣದಲ್ಲಿ ಉಲ್ಲೇಖಿತ ತ್ರೇತಾಯುಗದ ಸಮಯದಲ್ಲಿ ಅಧರ್ಮೀ ಕ್ಷತ್ರಿಯರ ಸಂಹಾರಕ್ಕೆ ಪರಶುರಾಮ ಕೈಗೊಂಡ ಧರ್ಮದ ಉಳಿವಿನ ಯುದ್ಧದ ಸನ್ನಿವೇಶದಲ್ಲಿ ಶ್ರೀ ರಾಮನು ಭಾರ್ಗವ ಪರಶುರಾಮನಿಗೆ ತಿಳಿಸಿದ ಬ್ರಹ್ಮಜ್ಞಾನ ಸ್ವರೂಪಿ ಸತ್ಯಯುಗ ಸೃಷ್ಟಿಯ ಮತ್ತು ಲೋಕ ಕಲ್ಯಾಣಕ್ಕಾಗಿ ಹೇಳಲ್ಪಟ್ಟ ಸನ್ಮಾರ್ಗಶ್ಲೋಕವು ಶ್ರೀ ಕಲ್ಕೀ ಲಿಖಿತ ಕೀಪುಮಾ ಸಮರಕಲೆಯ ಗ್ರಂಥಕ್ಕೆ ಸ್ಪೂರ್ತಿ ಮತ್ತು ಕೀಪುಮಾ ಸಮರಕಲೆ ಗುರುಕುಲಕ್ಕೆ ಬುನಾದಿ ಎನ್ನಬಹುದು.[೧]
ಸನ್ಮಾರ್ಗಶ್ಲೋಕ;
"ಜೈ ಕಲ್ಕೀ, ಜೈ ಜಗತ್‌ಪತೇ | ಪದ್ಮಾ ಪತೆ, ರಮಾಪತೇ ||
ಕೀಪ ಉಮಾ ಕಲ್ಕಿಃ | ಧರ್ಮಸ್ಥಾಪನಾರ್ಥೆ ಕಲಿಯುಗೆ ||
ಎಂಬ ಈ ಶ್ಲೋಕವು ಸಂಸ್ಕೃತ ಭಾಷೆಯಲ್ಲಿ ಹೇಳಲ್ಪಟ್ಟಿದೆ. ಇಲ್ಲಿ ಕಲ್ ಎಂದರೇ ಭವಿಷ್ಯ, ಕೀ ಎಂದರೇ ರಕ್ಷಕ ಒಟ್ಟಾರೆಯಾಗಿ ಭವಿಷ್ಯದ ರಕ್ಷಕ ಎಂಬುದು ಕಲ್ಕೀ ಶಬ್ದದ ಭಾವಾರ್ಥವಾಗಿದೆ. ಈ ಶ್ಲೋಕದಲ್ಲಿ ಶ್ರೀ ರಾಮನು ಹೇಳುತ್ತಿರುವನು ಜೈ ಕಲ್ಕೀ, ಜೈ ಜಗತ್‌ಪತೇ ಅಂದರೇ ಭವಿಷ್ಯದ ರಕ್ಷಕನಾದ ಅನಂತ ಚೈತನ್ಯ ಸ್ವರೂಪಿ ವಿಷ್ಣುವಿಗೆ ಜಯವಾಗಲಿ ಎಂಬ ಭಾವ. ಮುಂದುವರಿದು ಈ ಶ್ಲೋಕದಲ್ಲಿ ಶ್ರೀ ರಾಮನು ನಮಗೆ ಈ ಕಲ್ಕೀಯು ಪದ್ಮಾಪತೇ ಮತ್ತು ರಮಾಪತೇ ಎಂದು ಹೆಳುತ್ತಾರೆ ಇದರ ಭಾವಾರ್ಥವು ಹೀಗಿದೆ, ಸ್ತ್ರೀಯ ಶರೀರವು ಪದ್ಮಾವತಿಯಾಗಿದ್ದು, ಆ ಸ್ತ್ರೀಯ ಆತ್ಮಚೈತನ್ಯವು ರಮಾ ಆಗಿರುತ್ತದೆ ಅಂದರೇ ಪರಿಶುದ್ಧ ಶರೀರ ಮತ್ತು ಪರಿಶುದ್ಧ ಆತ್ಮಚೈತನ್ಯ ಹೊಂದಿದ ಶ್ರೀ ಮಹಾಲಕ್ಷ್ಮಿ ಸ್ವರೂಪಿನಿಯಾದ ಸ್ತ್ರೀಯ ಪತಿ ಎಂಬ ವಳಾರ್ಥವು ಈ ಮಾತಿನಲ್ಲಿ ಇದೆ. ಅಂದರೇ ಭವಿಷ್ಯದ ರಕ್ಷಕನಾದ ಚೈತನ್ಯ ಸೌರಭಸ್ಥಿತ ಪತಿಯ ಪತ್ನಿ ಎಂಬ ಅರ್ಥವನ್ನು ನೀಡುತ್ತದೆ. ಮುಂದುವರಿದು ಕೀಪ ಉಮಾ ಕಲ್ಕೀಃ, ಅಂದರೇ ಈ ಹಿಂದೇಯೆ ಅರಿತ ಸಂಸ್ಕೃತ ಭಾಷೆಯಲ್ಲಿ ಕೀ ಎಂದರೇ ರಕ್ಷಕ, ಕೀಪ ಎಂದರೇ ರಕ್ಷಿಸು. ಉಮಾ ಎಂದರೇ ಪ್ರಕೃತಿ, ಸಂಸ್ಕೃತಿ ಮತ್ತು ಸ್ತ್ರೀ ಎಂಬ ಭಾವಾರ್ಥ, ಒಟ್ಟಾರೆಯಾಗಿ ಕೀಪ ಉಮಾ ಎಂದೇ ಪ್ರಕೃತಿ, ಸಂಸ್ಕೃತಿ ಮತ್ತು ಸ್ತ್ರೀಯರನ್ನು ರಕ್ಷಿಸು ಎಂಬ ಭಾವಾರ್ಥವಾಗಿದೆ. ಕೀಪ ಉಮಾ ಕಲ್ಕೀಃ ಎಂದರೆ ಪ್ರಕೃತಿ, ಸಂಸ್ಕೃತಿ ಮತ್ತು ಸ್ತ್ರೀಯರನ್ನು ಭವಿಷ್ಯದ ರಕ್ಷಕ ರಕ್ಷಿಸುವನು ಎಂಬ ಅರ್ಥವನ್ನು ಒಳಗೊಂಡಿದೆ. ಕೊನೆಯಲ್ಲಿ "ಧರ್ಮ ಸ್ಥಾಪನಾರ್ಥೆ ಕಲಿಯುಗೆ" ಎಂಬ ಮಾತು ನಮಗೆ ಸ್ಪಷ್ಟವಾಗಿ ತಿಳಿಸುತ್ತದೆ ಕಲಿಯುಗವು ಅಂದರೇ ಅಧರ್ಮದ ಋಣಾತ್ಮಕ ಮನೋಭಾವಗಳಾದ ಜುಜು, ಮಾಂಸ, ವ್ಯವಿಚಾರ ಮತ್ತು ಮದೀರೆಯಿಂದ ಉತ್ಪನ್ನಗೊಳ್ಳುವ ಚತುರ್ದಶಿ ಮಾನಸಿಕ ಋಣಾತ್ಮಕತೆಯಲ್ಲಿ ಒಂದಾದ ನಾಲಿಗೆ ರುಚಿ ಮತ್ತು ಮರ್ಮಾಂಗದವ್ಯಸನಿಗೆ ಕಲಿಎನ್ನುವರು, ದರ್ಭಾವನೆಗಳೇ ತುಂಬಿದ ಸಮಯವನ್ನು ಕಲಿಯುಗ ಎನ್ನುವರು, ಇಂತಹ ಸಮಾಜ ಎಲ್ಲಿ ಇರುವುದೋ ಅಲ್ಲಿ ಭವಿಷ್ಯದ ರಕ್ಷಕನಾದ ಚೈತನ್ಯಸ್ವರೂಪಿ ವ್ರತಧಾರಿಯು ಧರ್ಮಸ್ಥಾಪನೆಗಾಗಿ ಅಂದರೇ ಸತ್ಯ, ದಯೆ, ಪಾವಿತ್ರ್ಯ ಮತ್ತು ತಪಸ್ಸಿನ ಮೂಲಕ ಮಾನಸಿಕವಾಗಿ ಧನಾತ್ಮಕತೆಯೊಂದಿಗೆ ಕೀಪುಮಾ(ಪ್ರಕೃತಿ, ಸಂಸ್ಕೃತಿ ಮತ್ತು ಸ್ತ್ರೀಯರ ರಕ್ಷಣೆ)ದೊಂದಿಗೆ ಜೀವಿಸುವ ಜೀವನ ಶೈಲಿಯನ್ನು ಧರ್ಮ ಎನ್ನುವರು, ಈ ಸ್ಥಿಯನ್ನು ಸ್ಥಾಪಿಸುವುದೇ ಧರ್ಮಸ್ಥಾಪನೆಯಾಗಿರುತ್ತದೆ. ಒಟ್ಟಾರೆಯಾಗಿ ಈ ಶ್ಲೋಕವು ಸಂಪೂರ್ಣ ಸತ್ಯಯುಗ ನಿರ್ಮಾಣ ಕಾರ್ಯವನ್ನು ನಿರ್ವಹಿಸುವ ವ್ರತಧಾರಿಗೆ ಸನ್ಮಾರ್ಗ ಶ್ಲೊಕವಾಗಿದೆ. [೨]
ಈ ಶ್ಲೋಕದಿಂದಲೇ ಆಯ್ದ ಕೀಪುಮಾ ಸಮರಕಲೆ ಎಂಬ ಶೀರ್ಷಿಕೆಯು ಶ್ರೀ ಕಲ್ಕೀ ನಿರ್ಮಿತ ಕೀಪುಮಾ ಸಮರಕಲೆ ಗುರುಕುಲವಾಗಿದೆ. ಹಾಗದರೇ ಕೀಪುಮಾ ಸಮರಕಲೆಯ ಶಬ್ಧಾರ್ಥ ಎನು?. ಶಬ್ದಾರ್ಥಗಳು ಹೀಗಿವೆ ಕೀಪುಮಾ - ಎಂದರೆ ಪ್ರಕೃತಿ, ಸಂಸ್ಕೃತಿ ಮತ್ತು ಸ್ತ್ರೀಯರನ್ನು ರಕ್ಷಿಸು ಎಂದು ಅರ್ಥ. ಸಮರಕಲೆ ಎಂದರೇ, ಸಮರ - ಕಂಕಣಬದ್ಧತೆ. ಕಲೆ - ವ್ಯವಸ್ಥಿತ ಅಧ್ಯಯನ ಒಟ್ಟಾರೆಯಾಗಿ ಕಂಕಣಭದ್ಧತೆಯ ವ್ಯವಸ್ಥಿತ ಅಧ್ಯಯನ ಎಂದು ಅರ್ಥ. [ಕೀಪುಮಾ ಸಮರಕಲೆ ೧]
ಕೀಪುಮಾ ಸಮರಕಲೆ ಎಂದರೇನು?
"ಪ್ರಕೃತಿ, ಸಂಸ್ಕೃತಿ ಮತ್ತು ಸ್ತ್ರೀಯರ ರಕ್ಷಣೆಗಾಗಿ ಸನ್ಮಾರ್ಗವ್ರತಗಳಲ್ಲಿ ಚೈತನ್ಯ ಸೌರಭಸ್ಥಿತಿ ತಪುಪಿಸಿ ವ್ರತಧಾರಿಯನ್ನು ಸತ್ಯಯುಗ ಜೀವಿಯನ್ನಾಗಿಸುವ ಸನ್ಮಾರ್ಗವ್ರತವೇ ಕೀಪುಮಾ ಸಮರಕಲೆ". [೩]
ಪ್ರಕೃತಿ ಎಂದರೇನು?
ನಮ್ಮ ಸುತ್ತಮುತ್ತಲಿರುವ ಸಾತ್ವಿಕವಾತಾವರಣವನ್ನು ಪ್ರಕೃತಿ ಎನ್ನುವರು.[೪]
ಸಂಸ್ಕೃತಿ ಎಂದರೇನು?
ನಮ್ಮ ಸುತ್ತಮುತ್ತಲಿರುವ ವ್ರತಧಾರಿಗಳ ಸಾತ್ವಿಕಸ್ವಭಾವವನ್ನು ಸಂಸ್ಕೃತಿ ಎನ್ನುವರು.[೫]
ಸ್ತ್ರೀ/ಶ್ರೀ ಎಂದರೇನು?
ನಮ್ಮ ಸುತ್ತಮುತ್ತಲಿನ ಸಾತ್ವಿಕ/ಚೈತನ್ಯ ಸ್ವಭಾವದ ವ್ರತಧಾರಿಕಣ್ಯೆಯರನ್ನು ಸ್ತ್ರೀ/ಶ್ರೀ ಎನ್ನುವರು.[೬]
ಸನ್ಮಾರ್ಗವ್ರತ ಎಂದರೇನು?
ಚತುರಾಶ್ರಮಗಳಲ್ಲಿನ ಬ್ರಹ್ಮಚರ್ಯಾಶ್ರಮದ ಸುವಿದ್ಯಾವ್ರತ, ಗೃಹಸ್ಥಾಶ್ರಮದ ಸುಜೀವನವ್ರತ, ವಾನಪ್ರಸ್ಥಾಶ್ರಮದ ವಿಶ್ವವಿಜಯೀವ್ರತ, ಸನ್ಯಾಸಾಶ್ರಮದ ಸತ್ಯಯುಗಸೃಷ್ಟಿ ಸಂಕಲ್ಪ ವ್ರತ ಮತ್ತು ಕೊನೆಯದಾಗಿ ಮೋಕ್ಷವ್ರತಗಳಿಗೆ ಸನ್ಮಾರ್ಗವ್ರತಗಳು ಎನ್ನುವರು.[೭]
ಚೈತನ್ಯ ಸೌರಭಸ್ಥಿತಿ ಎಂದರೇನು?
ಚೈತನ್ಯ ಮತ್ತು ಸೌರಭಸ್ಥಿತಿ ಎಂದರೇನೆಂದು ತಿಳಿಯೊಣ, ತಮೋಗುಣ, ರಜೋಗುಣ ಮತ್ತು ಸತ್ವಗುಣ ಹೊರತು ಪಡಿಸಿ ಮುಂದುವರಿದ ತ್ರೀಗುಣಾತೀತ ಗುಣಗಳಾದ ಚೆತನಾ ಮತ್ತು ಚೈತನ್ಯ ಸ್ವಭಾವಗಳಲ್ಲಿರುವುದೇ ಈ ಚೈತನ್ಯ ಸ್ವಭಾವ, ಇದು ದೈವಿ ಸ್ವಭಾವವಾಗಿದ್ದು ತ್ರಿಗುಣಾತೀತರಾಗಿ ಮೃತ್ಯುಲೋಕದಿಂದ ಮುಕ್ತಿಸಾದೀಸಿದ ಸಾಧಕರ ಸ್ವತ್ತಾಗಿರುತ್ತದೆ. ಸವಿಕಲ್ಪಸ್ಥಿತಿ (ಹಲವಾರು ವಿಚಾರಗಳು), ನಿರ್ವಿಕಲ್ಪಸ್ಥಿತಿ (ಒಂದೇ ವಿಚಾರ), ಸಹಜಸ್ಥಿತಿ(ಒಂದೇ ವಿಚಾರಲ್ಲಿಯ ಜ್ಞಾನಾರ್ಜನೆ) , ಧರ್ಮಮೆಘಾಸ್ಥಿತಿಗಳಲ್ಲಿ(ಜ್ಞಾನಾರ್ಜಿತ ವಿದ್ಯೆಯ ಕೌಶಲ್ಯ ಸಿದ್ಧಿ) ಉತ್ತೀರ್ಣನಾದವನ ಕೊನೆಯ ಸಿದ್ಧಿಯೇ ಸೌರಭಸ್ಥಿತಿ (ಅಂತಿಮ ಕರ್ಮಫಲ ಸುಖ) . ಅಂದರೇ, [೮]
ಕೀಪುಮಾ ಸಮರಕಲೆಯ ಸನ್ಮಾರ್ಗವ್ರತಗಳಲ್ಲಿ ತ್ರೀಗುಣಾತೀತತೆಯೊಂದಿಗೆ ಚೆತನಾದಿಂದ ಚೈತನ್ಯ ಸ್ಥಿತಿಯನ್ನು ತಲುಪಿ, ಸನ್ಮಾರ್ಗವ್ರತಗಳಲ್ಲಿ ಸೌರಭಸ್ಥಿತಿಯಿಂದ ಸುಕರ್ಮಫಲ ಸವಿಯುವುದೇ ಚೈತನ್ಯ ಸೌರಭಸ್ಥಿತಿ. [೯]
ಕೀಪುಮಾ ಸಮರಕಲೆಯು ಸನ್ಮಾರ್ಗವ್ರತವಾಗಿದೆ. ಇದು ಭಾರ್ಘವಪರಶುರಾಮರ ಶಿಷ್ಯ ಶ್ರೀ ಕಲ್ಕೀಯಿಂದ ಸ್ಥಾಪಿತ ಸನಾತನ ಗುರುಕುಲ ಶಿಕ್ಷಣಪದ್ದತಿಯಾಗಿದೆ. ಕೀಪುಮಾ ಸಮರಕಲೆಯು ಸನ್ಮಾರ್ಗವ್ರತಗಳಾದ ಬ್ರಹ್ಮಚರ್ಯಾಶ್ರಮದ ಸುವಿದ್ಯಾವ್ರತ, ಗೃಹಸ್ಥಾಶ್ರಮದ ಸುಜೀವನವ್ರತ, ವಾನಪ್ರಸ್ಥಾಶ್ರಮದ ವಿಶ್ವವಿಜಯೀವ್ರತ, ಸನ್ಯಾಸಾಶ್ರಮದ ಸತ್ಯಯುಗಸೃಷ್ಟಿ ಸಂಕಲ್ಪ ವ್ರತ ಮತ್ತು ಕೊನೆಯದಾಗಿ ಮೋಕ್ಷವ್ರತಗಳ ಮೂಲಕ ಆಯು ಆಧಾರಿತ ವ್ರತಪಾಲನೆಯ ಮೂಲಕ ಶಿಸ್ತಿನೊಂದಿಗೆ ಸತ್ಯಯುಗ ಸೃಷ್ಟಿಯ ಶಿಕ್ಷಣವಾಗಿದೆ. [೧೦]
ಬ್ರಹ್ಮಚರ್ಯಾಶ್ರಮ ವ್ರತವು ಸುವಿದ್ಯಾವ್ರತವನ್ನು ಬೋಧಿಸುವುದರ ಮೂಲಕ ವ್ರತಧಾರಿಗಳನ್ನು ಸುಶಿಕ್ಷಿತರನ್ನಾಗಿಸುತ್ತದೆ. ಬ್ರಹ್ಮಚರ್ಯ ಆಶ್ರಮದ ಸುವಿದ್ಯಾವ್ರತದಲ್ಲಿ ನಾವು ಸಂಸ್ಕಾರವಿದ್ಯಾವ್ರತವನ್ನು ಅಧ್ಯಯನ ಮಾಡುತ್ತೆವೆ. ಈ ವ್ರತದಲ್ಲಿ ನಾವು ತಮೋಶಾಸ್ತ್ರ, ರಜೋಶಾಸ್ತ್ರ, ಸತ್ವಶಾಸ್ತ್ರ, ಚೆತನಾಶಾಸ್ತ್ರ ಮತ್ತು ಚೈತನ್ಯಶಾಸ್ತ್ರಗಳ ಅಧ್ಯಯನ ಮಾಡುತ್ತೆವೆ. ಶಾಸ್ತ್ರವಿದ್ಯಾವ್ರತದಲ್ಲಿ ಧರ್ಮಶಾಸ್ತ್ರ, ಭಾಷಾಶಾಸ್ತ್ರ, ಗಣಿತಶಾಸ್ತ್ರ, ವಿಜ್ಞಾನಶಾಸ್ತ್ರ ಮತ್ತು ಜ್ಞಾನಶಾಸ್ತ್ರಗಳ ಅಧ್ಯಯನ ಮಾಡುತ್ತೆವೆ, ಈ ಶಾಸ್ತ್ರವಿದ್ಯಾವ್ರತವನ್ನು ನಾವು ಭಾವನಾ, ಭಾಯಪಾಠ, ಭಾಷಣ, ಪ್ರಭಂಧ ಮತ್ತು ಸಾಹಿತ್ಯ ಎಂಬುವ ಹಂತಗಳ ತಂತ್ರದ ಮೂಲಕ ಕರಗತ ಮಾಡಿಕೊಳ್ಳ ಬಹುದು. ಶಸ್ತ್ರವಿದ್ಯಾವ್ರತದಲ್ಲಿ ವೇಗ್ವಿದ್ಯೆ, ಮಣಿತ್ವಿದ್ಯೆ,ಧಾರ್ಡ್ಯತ್‌ವಿದ್ಯೆ, ಮರ್ಕಟವಿದ್ಯೆ ಮತ್ತು ಆಯುಧಾತ್ಮರಕ್ಷನಾವಿದ್ಯೆಯನ್ನು ಅಧ್ಯಯನ ಮಾಡುತ್ತೆವೆ. ಗಂಧರ್ವವಿದ್ಯಾವ್ರತದಲ್ಲಿ ಸಂಗಿತಶಾಸ್ತ್ರ, ನೃತ್ಯಶಾಸ್ತ್ರ, ನಟನಾಶಾಸ್ತ್ರ, ಚಿತ್ರಶಿಲ್ಪಶಾಸ್ತ್ರ ಮತ್ತು ಚಲನಚಿತ್ರಶಾಸ್ತ್ರಗಳ ಅಧ್ಯಯನ ಮಾಡುತ್ತೆವೆ. ಆತ್ಮವಿದ್ಯಾವ್ರತದಲ್ಲಿ ಪ್ರಾಣಾಯಾಮ, ಧ್ಯಾನ, ತ್ರಾಟಕ, ಅಷ್ಟಸಿದ್ಧಿನವನಿಧಿ ಮತ್ತು ಪರಬ್ರಹ್ಮತ್ವದ ಅಧ್ಯಯನ ಮಾಡುತ್ತೆವೆ. ನಾವು ಈ ಸಂಸ್ಕಾರವಿದ್ಯೆ, ಶಾಸ್ತ್ರವಿದ್ಯೆ, ಶಸ್ತ್ರವಿದ್ಯೆ, ಗಂಧರ್ವವಿದ್ಯೆ ಮತ್ತು ಆತ್ಯವಿದ್ಯೆಗಳಲ್ಲಿ ಸವಿಕಲ್ಪಸ್ಥಿತಿ, ನಿರ್ವಿಕಲ್ಪಸ್ಥಿತಿ, ಸಹಜಸ್ಥಿತಿ, ಧರ್ಮಮೇಘಾಸ್ಥಿತಿ ಮತ್ತು ಸೌರಭಸ್ಥಿತಿಯ ತಂತ್ರದ ಮೂಲಕ ಯಶಸ್ವಿಯಾಗುತ್ತೆವೆ.. ಈ ಸುವಿದ್ಯಾವ್ರತವು ಕೀಪುಮಾ ಸಮರಕಲೆಯ ಮುಖ್ಯವ್ರತವಾಗಿದ್ದು ವ್ರತಧಾರಿಗಳು ಅವಶ್ಯವಾಗಿ ಆಚರಿಸುವ ಮೂಲಕ ಚೈತನ್ಯ ಸೌರಭ ಸ್ಥಿತಿತಲುಪಬೇಕು. ಸುವಿದ್ಯಾವ್ರತದಲ್ಲಿ ಚೈತನ್ಯ ಸೌರಭಸ್ಥಿತಿ ತಲುಪಿದ ವ್ರತಧಾರಿ ಮತ್ತು ವ್ರತಧಾರಿನಿ ಯೊರ್ವರು ಗೃಹಸ್ಥಾಶ್ರಮಕ್ಕೆ ಯೋಗ್ಯರಾಗಿರುತ್ತಾರೆ.[೧೧]
ಈಗ ವಿಸ್ತಾರವಾಗಿ ಮೊದಲನೆಯ ಆಶ್ರಮವಾದ ಬ್ರಹ್ಮಚರ್ಯ ಆಶ್ರಮದಲ್ಲಿ ಬರುವ ಸುವಿದ್ಯಾವ್ರತದ ಕುರಿತು ನೋಡೊನ ಬನ್ನಿ. ಸಂಸ್ಕಾರವಿದ್ಯೆಯಲ್ಲಿ ಬರುವ ತಮೋಶಾಸ್ತ್ರದಲ್ಲಿ ನಾವು ಅಧರ್ಮ, ಮಿತ್ಯಾ, ಮಾಯಾ, ದಂಬ, ಲೊಬ, ನಿಕೃತಿ, ಮೃತ್ಯು, ಭಯಾ, ಕ್ರೋದ, ಹಿಂಸಾ, ನಿರ್ದಯಾ, ಯಾತನಾ, ಕಲಿ ಮತ್ತು ದುರುಕ್ತಿ ಎಂಬ ಚತುರ್ದಶಿ ಋಣಾತ್ಮಕ ಮನೋಭಾವನೆಗಳ ಕುರಿತು ಮತ್ತು ಅವುಗಳಿಂದ ಮುಕ್ತಿಸಾಧಿಸಲು ಸನ್ಮಾರ್ಗವಾದ ಧರ್ಮದ ಕುರಿತು ಅಧ್ಯಯನ ಮಾಡಲಾಗುತ್ತದೆ. ರಜೋಶಾಸ್ತ್ರದಲ್ಲಿ ಅಲಕ್ಷ್ಮೀ ಮತ್ತು ನಿದ್ರಾದೇವಿಯ ಋಣಾತ್ಮಕತೆಯಿಂದ ಹೊರಬರಲು ಅಲಕ್ಷ್ಯ ಮತ್ತು ಆಲಸ್ಯದ ಕುರಿತು ಶನಿಯ ನ್ಯಾಯ ನಿರ್ಣಯ ವಿಧಾನವಾದ ಕುಂಡಲಿನಿ ಚಕ್ರಗಳ ಸಕ್ರಿಯ ಮತ್ತು ನಿಷ್ಕ್ರಿಯದ ಮೂಲವಾದ ಕೀಪುಮಾದ ಮಹತ್ವವನ್ನು ಮತ್ತು ಶಟ್ಯವ್ವಳ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರದ ನಿಯಂತ್ರಣ ಸಾಧನೆಯ ಕುರಿತು ಅಧ್ಯಯನ ಮಾಡಲಾಗುತ್ತದೆ. ಸತ್ವಶಾಸ್ತ್ರದಲ್ಲಿ ಸಾಂಖ್ಯಯೋಗ, ರಾಜಯೋಗ, ಭಕ್ತಿಯೋಗ, ಹಟಯೋಗ ಮತ್ತು ಕೊನೆಯದಾಗಿ ಕರ್ಮಯೋಗದ ಅಧ್ಯಯನ ಮಾಡಲಾಗುತ್ತದೆ. ಚೆತನಾಶಾಸ್ತ್ರದಲ್ಲಿ ನಿಯಮವ್ರತಗಳಾದ ಬ್ರಹ್ಮಚರ್ಯವ್ರತ, ಸಾತ್ವಿಕವ್ರತ, ಅರಿಷಡ್ವರ್ಗನಿಷಿದ್ಧವ್ರತ, ನಾಯಕತ್ವವ್ರತ ಮತ್ತು ತತ್ವಭದ್ದತಾವ್ರತ ಹಾಗೆ ತತ್ವಭದ್ಧತಾವ್ರತಗಳಾದ ಶಾಂತಿವ್ರತ, ಶಿಸ್ತುವ್ರತ, ಸಂಯಮವ್ರತ, ವಿಜಯೀತ್ರಯೋಮಾರ್ಗವ್ರತದ ಸುಪ್ರಭಾತವ್ರತ, ಮೌನವ್ರತ ಮತ್ತು ಸಾಯಂವ್ರತಗಳ ಮತ್ತು ಚತುರಾಶ್ರಮದ ಕುರಿತು ಅಧ್ಯಯನ ಮಾಡಲಾಗುತ್ತದೆ. ಪ್ರಥಮವಾಗಿ ಬ್ರಹ್ಮಚರ್ಯಾಶ್ರಮದಲ್ಲಿನ ಈ ಸಂಸ್ಕಾರವಿದ್ಯೆಯ ಅಂತಿಮವಾದ ಚೈತನ್ಯಶಾಸ್ತ್ರದಲ್ಲಿ ಸುವಿದ್ಯಾವ್ರತ, ಸುಜೀವನವ್ರತ, ವಿಶ್ವವಿಜಯೀವ್ರತ, ಸತ್ಯಯುಗ ಸೃಷ್ಟಿ ಸಂಕಲ್ಪ ವ್ರತ ಮತ್ತು ಮೋಕ್ಷವ್ರತಗಳ ಅಧ್ಯಯನ ಮತ್ತು ಪಾಲನೆಯ ಸಂಕಲ್ಪ ಮಾಡಲಾಗುತ್ತದೆ. [೧೨]
ಎರಡನೆಯದಾಗಿ ಗೃಹಸ್ಥಾಶ್ರಮದ ಸುಜೀವನವ್ರತವು ಶ್ರೀ ನಿವಾಸತೋಟವ್ರತ, ಶ್ರೀ ಸಂಪತ್ತವ್ರತ, ಶ್ರೀ ನಿಧಿವ್ರತ, ಶ್ರೀ ವಿದ್ಯಾನಿಧಿವ್ರತ ಮತ್ತು ಶ್ರೀ ಗೋಸೇವಾವ್ರತ ಎಂಬ ಪಂಚವ್ರತಗಳ ಪಾಲನೆಯು ಸುಜೀವನವ್ರತವಾಗಿದೆ. ವೈವಾಹಿಕ ಜೀವನವು ಸುಗಮ ಸೌಖ್ಯವಾಗಿ ಮುನ್ನಡೆಯಲು ಈ ವ್ರತವು ಸರ್ವಶ್ರೇಷ್ಠ ವ್ರತವಾಗಿದೆ. ವ್ರತಧಾರಿಯು ತನ್ನ 21ನೇಯ ವಯಸ್ಸಿನಿಂದ 31ನೇ ವಯಸ್ಸಿನ ಅವಧಿಯ ಒಳಗೆ 18 ರಿಂದ 28 ವರ್ಷದೊಳಗಿನ ಕೀಪುಮಾ ಕನ್ಯಾವ್ರತಧಾರಿನಿಯನ್ನು ವಿವಾಹವಾಗುವದರೊಳಗೆ ಇರ್ವರೂ ಸುಜೀವನವ್ರತದಲ್ಲಿ ಸೌರಭಸ್ಥಿತಿ ತಲುಪಿರ ಬೇಕು. ಈ ವ್ರಥಧಾರಿಗಳ ಮಕ್ಕಳು ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ನಂತರವೇ ಇವರ ಈ ಗೃಹಸ್ಥಾಶ್ರಮವ್ರತವು ಸಂಪೂರ್ಣಗೊಳ್ಳುವುದು.[೧೩]
ಮೂರನೆಯದಾಗಿ ವಾನಪ್ರಸ್ಥವ್ರತದ ವಿಶ್ವವಿಜಯೀವ್ರತವು ಕೀಪುಮಾ ಸಮರಕಲೆ ಗುರುಕುಲಗಳ ಸೇವೆಗೆ ಸಂಬಂದಿದ್ದು ಲೋಕಪರ್ಯಟನೆಯೊಂದಿಗೆ ಸಕಲ ಗುರುಕುಲಗಳ ಬೇಟಿ ಯೊಂದಿಗೆ ವ್ರತಧಾರಿಗಳನ್ನು ಒಗ್ಗೂಡಿಸುವ ಕಾರ್ಯವಾಗಿದ್ದು ಈ ಮೂಲಕ ವಿಶ್ವವನ್ನು ಜ್ಞಾನದ ಸಂಗ್ರಾಮದಿಂದ ಜಯಿಸಿ ಸತ್ಯಯುಗ ಸೃಷ್ಟಿಸಲು ವ್ರತಧಾರಿಗಳನ್ನು ಒಗ್ಗೂಡಿಸುವ ಹಾಗು ಸನ್ನದ್ಧರಾಗಿಸುವ ಹಂತ.[೧೪]
ನಾಲ್ಕನೇಯದ್ದಾಗಿ ಸನ್ಯಾಸಾಶ್ರಮ ವ್ರತವು ಸತ್ಯಯುಗ ಸೃಷ್ಟಿಸಂಕಲ್ಪವ್ರತವಾಗಿದ್ದು ಈ ಆಶ್ರಮದಲ್ಲಿ ಈ ವ್ರತಧಾರಿಗಳು ಕೀಪುಮಾ ಸಮರಕಲೆ ಗುರುಕುಲ ನಿರ್ಮಿಸಿ ಕನಿಷ್ಠ ನಾಲ್ಕು ವಿದ್ಯಾರ್ಥಿಗಳನ್ನು ಚೈತನ್ಯ ಸೌರಭಸ್ಥಿತಿ ತಲುಪಿಸುವ ಮೂಲಕ ಸತ್ಯಯುಗ ಸೃಷ್ಟಿ ಸಂಕಲ್ಪವನ್ನು ಯಶಸ್ವಿಯಾಗಿಸುವ ಹಂತವಾಗಿದೆ. [೧೫]
ಈ ಕಾರ್ಯದಲ್ಲಿ ಯಶಸ್ವಿಯಾದ ವ್ರತಧಾರಿಗಳಿರ್ವರು ಮೋಕ್ಷವ್ರತದ ಮೂಲಕ ದೇಹವೆಂಬಿ ಕಾಯವನ್ನು ತ್ಯಜಿಸಿ ಆತ್ಮಚೈತನ್ಯವನ್ನು ವೈಕುಂಠಕ್ಕೆ ಮರಳಿಸುವುದರೊಂದಿಗೆ ಶ್ರೀ ಲಕ್ಷ್ಮೀನಾರಾಯಣರಾಗಿ ಜಿವನ್ಮುಕ್ತರಾಗಿ ಜೀವಿಸಿ ಮೋಕ್ಷ ಸಾಧಿಸುವುದು, ಸತ್ಯಯುಗ ನಿರ್ಮಾತೃ ಶ್ರೀ ಕಲ್ಕೀ ಆರಂಭಿಸುವ ಕೀಪುಮಾ ಸಮರಕಲೆ ಗುರುಕುಲದ ಮೂಲ ಉದ್ದೇಶವಾಗಿದೆ. - ಜೈ ಜಗನ್ನಾಥ[೧೬]
- ↑ ಬೆಳ್ಳಿಕುಪ್ಪಿ, ಮಂಜುನಾಥ (06/07/2009). ಸನ್ಮಾರ್ಗವ್ರತ [Keepuma Samarakale - sanmarga granth] (in Kannada) (1 ed.). Karnataka: KS Gurukul publication. p. 108. ISBN No.
{{cite book}}: Check|isbn=value: invalid character (help); Check date values in:|date=(help)CS1 maint: date and year (link) CS1 maint: unrecognized language (link) - ↑ Keepuma, Samarakale (06/07/2009). "Keepuma Samarakale". Blogger.
{{cite web}}: Check|archive-url=value (help); Check date values in:|date=(help)CS1 maint: url-status (link) - ↑ Keepuma Samarakale, Keepuma Samarakale (06/07/2024). "ಕೀಪುಮಾ ಸಮರಕಲೆ". Wiktionary. Retrieved https://kn.m.wiktionary.org/wiki/%E0%B2%95%E0%B3%80%E0%B2%AA%E0%B3%81%E0%B2%AE%E0%B2%BE_%E0%B2%B8%E0%B2%AE%E0%B2%B0%E0%B2%95%E0%B2%B2%E0%B3%86.
{{cite web}}: Check|archive-url=value (help); Check date values in:|access-date=and|date=(help); External link in(help)|access-date= - ↑ https://kn.m.wiktionary.org/wiki/%E0%B2%95%E0%B3%80%E0%B2%AA%E0%B3%81%E0%B2%AE%E0%B2%BE_%E0%B2%B8%E0%B2%AE%E0%B2%B0%E0%B2%95%E0%B2%B2%E0%B3%86
- ↑ https://kn.m.wiktionary.org/wiki/%E0%B2%95%E0%B3%80%E0%B2%AA%E0%B3%81%E0%B2%AE%E0%B2%BE_%E0%B2%B8%E0%B2%AE%E0%B2%B0%E0%B2%95%E0%B2%B2%E0%B3%86
- ↑ https://kn.m.wiktionary.org/wiki/%E0%B2%95%E0%B3%80%E0%B2%AA%E0%B3%81%E0%B2%AE%E0%B2%BE_%E0%B2%B8%E0%B2%AE%E0%B2%B0%E0%B2%95%E0%B2%B2%E0%B3%86
- ↑ https://kn.m.wiktionary.org/wiki/%E0%B2%95%E0%B3%80%E0%B2%AA%E0%B3%81%E0%B2%AE%E0%B2%BE_%E0%B2%B8%E0%B2%AE%E0%B2%B0%E0%B2%95%E0%B2%B2%E0%B3%86
- ↑ https://kn.m.wiktionary.org/wiki/%E0%B2%95%E0%B3%80%E0%B2%AA%E0%B3%81%E0%B2%AE%E0%B2%BE_%E0%B2%B8%E0%B2%AE%E0%B2%B0%E0%B2%95%E0%B2%B2%E0%B3%86
- ↑ https://kn.m.wiktionary.org/wiki/%E0%B2%95%E0%B3%80%E0%B2%AA%E0%B3%81%E0%B2%AE%E0%B2%BE_%E0%B2%B8%E0%B2%AE%E0%B2%B0%E0%B2%95%E0%B2%B2%E0%B3%86
- ↑ https://kn.m.wiktionary.org/wiki/%E0%B2%95%E0%B3%80%E0%B2%AA%E0%B3%81%E0%B2%AE%E0%B2%BE_%E0%B2%B8%E0%B2%AE%E0%B2%B0%E0%B2%95%E0%B2%B2%E0%B3%86
- ↑ https://keepumaweb.blogspot.com/?m=1
- ↑ https://keepumaweb.blogspot.com/?m=1
- ↑ https://keepumaweb.blogspot.com/?m=1
- ↑ https://keepumaweb.blogspot.com/?m=1
- ↑ https://keepumaweb.blogspot.com/?m=1
- ↑ https://keepumaweb.blogspot.com/?m=1
ಉಲ್ಲೇಖ ದೋಷ: <ref> tags exist for a group named "ಕೀಪುಮಾ ಸಮರಕಲೆ", but no corresponding <references group="ಕೀಪುಮಾ ಸಮರಕಲೆ"/> tag was found