ವಿಷಯಕ್ಕೆ ಹೋಗು

ಕಾಹುಗೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The north entrance to the Cheyenne Mountain Complex in Colorado, United States

ಕೋಟೆಯ ರಕ್ಷಣೆಯಲ್ಲಿ ನಿರತರಾಗಿರುವ ಸೈನಿಕರ ವಾಸಕ್ಕೆ ಕೋಟೆಯಲ್ಲೇ ಕಟಿದ ಕತ್ತಲೆಯ ನೆಲಮನೆ. ಇದು ಗಿರಿದುರ್ಗದ ಅತ್ಯಂತ ಬಲಿಷ್ಠ ಸ್ಟಳ. ಶತ್ರುಸೇನೆ ಏನಾದರೂ ಕೋಟೆಯನ್ನು ಆಕ್ರಮಿಸಿದರೆ ಈ ಕತ್ತಲಮನೆಗಳು ದುರ್ಗರಕ್ಷಕರಿಗೆ ಆಶ್ರಯಸ್ಥಾನಗಳಾಗುವುವು. ಕೋಟೆಯ ಮಧ್ಯ ಪ್ರದೇಶದಲ್ಲಿರುವ ಗೋಪುರದಲ್ಲಿ ಕೈದಿಗಳಿಗಾಗಿ ಮಾಡಿರುವ ಭದ್ರವಾದ ನೆಲಮಾಳಿಗೆಯ ಕೋಣೆಗಳಿದ್ದುವು. ಕತ್ತಲುಗವಿಯ ಬಂದೀಖಾನೆಯ ಈ ಕೋಣೆಗಳಲ್ಲಿ ತಪ್ಪಿತಸ್ಥರನ್ನು ಸೆರೆ ಹಾಕುತಿದ್ದರು. ಕೋಣೆಯ ರಕ್ಷಣಶಕಿಯನ್ನು ಹೆಚ್ಚಿಸಲು ಎತ್ತರದ ಕಲ್ಲು ಗೋಡೆಗಳ ಬದಲು ತಗ್ಗಾದ ದಪ್ಪ ಮಣ್ಣುಗೋಡೆಗಳು ಕಲ್ಲಿನ ಮೇಲ್ಮೈಗೆಬಂದವು. ರಕ್ಷಣೆಯ ಮಣ್ಣು ದಿಬ್ಬಗಳ ಆಳುವೇರಿಗಳು, ತಡೆಗೋಡೆ, ಗೋಡೆಯ ಹಿಂದೆ ಕಮಾನಿನ ಸುರಂಗ ಮಾರ್ಗಗಳು, ಕೋಟೆಯ ಸುತ್ತಲೂ ಗ್ಲೇಸಿಸ್ ಎಂಬ ಇರುಕಲು ಮಣ್ಣುದಿಬ್ಬಗಳು, ಇವೇ ಮೊದಲಾದವುಗಳ ತಕ್ಷಣ ಸೈನ್ಯಕ್ಕೆ ಮುಚ್ಚಿಗೆಯ ಆಶ್ರಯಗಳು ನಿರ್ಮಿತವಾದುವು. ಕಾಲಾಂತರದಲ್ಲಿ ಯುದ್ಧತಂತ್ರ ಬದಲಾದಂತೆ ಮಣ್ಣಿನ ದಿಡ್ಡಿಗೋಡೆಗಳಿಂದ ಮುಚ್ಚಿದ ಕಾಂಕ್ರೀಟ್ ಬಂತು. ಬಾಂಬುಗಳನ್ನು ನಿವಾರಿಸಲು 6'-10' ದಪ್ಪ ಚಾವಣಗಳಾದವು. ಬಂದೂಕುಗಳನ್ನು ರಕ್ಷಿಸಲು ಕೊಠಡಿಗಳ ನಿರ್ಮಾಣವಾಯಿತು. ಅಲ್ಲದೇ ಉಕ್ಕಿನ ಗುಮ್ಮಟ, ಸಣ ಗೋಪುರಗಳೂ ಕಾಂಕ್ರೀಟ್ ಕೋಣೆಗಳೂ ರಕ್ಷಣ ಸಾಧನಗಳೂ ಭೂಮಿಯೊಳಗೆ ನಿರ್ಮಿತವಾದುವು. ಭೂಮಿಯೊಳಗೇ 600 ಮೈಲಿ ಉದ್ದ ಚಾಚಿದ್ದ ಮ್ಯಾಜಿನೋಲೈನ್ ಎಂಬ ಅದ್ಭುತ ಕೋಣೆಯಲ್ಲಿ ಸೈನಿಕರ ಗೃಹಗಳು ಕತ್ತಲ ನೆಲಮಾಳಿಗೆಯಲ್ಲಿವೆ. ಜರ್ಮನಿನ ಸೀಗ್‍ಫ್ರೈಡ್ ಲೈನಿನಲ್ಲೂ ರಷ್ಯನರ ಸ್ಟಾಲಿನ್ ಲೈನಿನಲ್ಲೂ ಕಾಹುಗೋಟೆಗಳಿವೆ. ಅಮೆರಿಕ ಕಾಲರ್ಯಾಡೊ ಪ್ರಾಂತ್ಯದ ಕೆಯೆನ್ನೇ ಪರ್ವತದಲ್ಲಿ ಶಿಖರದಿಂದ 2500'ಗಳ ಕೆಳಗೆ 6 1/2 ಕ್ಷ ಟನ್ ಬಂಡೆಗಳನ್ನುಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಅಭೇದ್ಯ ಕೋಣೆಯಲ್ಲಿ 12,000'ಗಳ ಉದ್ದದ sರಿ ಸುರಂಗಳಲ್ಲಿ 20,000 ಸೈನಿಕರಿಗೆ ಮನೆಗಳಾಗಿವೆ. ಭೂಕಂಪ ಮತ್ತು ಬಾಂಬುಗಳಿಂದ ರಕ್ಷಣೆ ಒದಗಿಸಲು ಈ ಗೃಹಗಳನ್ನು ಉಕ್ಕಿನ ಸ್ಪ್ರಿಂಗುಗಳ ಮೇಲೆ ನಿಲ್ಲಿಸಿದ್ದಾರೆ. ಇವಕ್ಕೆ 36' ದಪ್ಪ, 13' ಎತ್ತರ 11' ಅಗಲ ಮತ್ತು 30 ಟನ್ ತೂಕದ ಮೂರು ವಿದ್ಯುಚ್ಚಾಲಿತ ದಿಡ್ಡಿ ಬಾಗಿಲುಗಳಿವೆ. ಕೋಣೆ ರಕ್ಷಣೆಗೆ ಸಂಂಧಿಸಿದ ಕೋಟ್ಯಾಂತರ ಪ್ರಶ್ನೆಗಳಿಗೆ ಗಣಕಯಂತ್ರ ಸೆಕೆಂಡುಗಳಲ್ಲಿ ಉತ್ತರ ಕೊಡುತ್ತದೆ. ನೋರಾಡ್ ಕ್ಯಾಮರ ಸಾವಿರಾರು ಮೈಲಿ ದೂರದ ವಸ್ತುಗಳನ್ನು ಪರದೆಯ ಮೇಲೆ ಚಿತ್ರಿಸುತ್ತದೆ. ಅಂತರಿಕ್ಷ ವಿಮಾನಗಳ ಚಲನವಲನಗಳನ್ನು ಪತ್ತೆ ಮಾಡುತ್ತದೆ. ಗಣಕಯಂತ್ರ ಆ ಸಂಕೇತಗಳನ್ನು ತಕ್ಷಣ ಹಿಡಿದು ಆಜ್ಞೆಗಳನ್ನು ಕೊಡುತ್ತದೆ.

ಛಾಯಾಂಕಣ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

1. abmm.org Archived 30 March 2022 ವೇಬ್ಯಾಕ್ ಮೆಷಿನ್ ನಲ್ಲಿ.: Australian Bunker And Military Museum

2. BunkerBlog: All about German fortifications 1933–1945

3. Bunkersite.com: About bunkers built by the Germans during 1933–1945 in the whole of Europe

4. German bunkers in Poland: Fortified Front Odra-Warta rivers, Boryszyn Loop


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: