ವಿಷಯಕ್ಕೆ ಹೋಗು

ಕಾವ್ಯಶ್ರೀ ನಾಯಕ್ ಅಜೇರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾವ್ಯಶ್ರೀ ನಾಯಕ್ ಅಜೇರು ಅವರು ಯಕ್ಷಗಾನ ಕ್ಷೇತ್ರದಲ್ಲಿ ಪ್ರಸಿದ್ಧ ಭಾಗವತರು. ಪುರುಷ ಪ್ರಾಧಾನ್ಯವಿರುವ ಈ ಕ್ಷೇತ್ರದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ, ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕಾಗಿ ಅವರು ಹಳೆಯ ಮತ್ತು ಹೊಸ ತಲೆಮಾರುಗಳಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ. ಮತ್ತು ಆಕೆಯ ಪ್ರದರ್ಶನಗಳು, ಪುರಸ್ಕಾರಗಳು, ಅಭಿಮಾನಿಗಳಿಗೆ, ಯುವಜನರಿಗೆ ಸ್ಫೂರ್ತಿದಾಯಕಿಯಾಗಿದ್ಧಾರೆ.

ಹುಟ್ಟು

[ಬದಲಾಯಿಸಿ]

ಕಾವ್ಯಶ್ರೀ ನಾಯಕ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಜನಿಸಿದರು. ಇವರ ತಂದೆ ಶ್ರೀಪತಿ ನಾಯಕರು ಶಿಕ್ಷಕರಾಗಿ ವೃತ್ತಿ ನಿರ್ವಹಿಸುತ್ತಿದ್ದರು. ತಂದೆಯವರೇ ಇವರ ಗುರುಗಳು. ಇವರ ತಾತ ರಾಮಪ್ಪಯ್ಯನವರು ಯಕ್ಷಗಾನ ಭಾಗವತರು ಮತ್ತು ಚೆಂಡೆ, ಮದ್ದಳೆ ಕಲಾವಿದರಾಗಿದ್ದರು.[]

ಗುರುಗಳು

[ಬದಲಾಯಿಸಿ]

ತಂದೆ ಶ್ರೀಪತಿ ನಾಯಕ್ ಖ್ಯಾತ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ಯಕ್ಷಗಾನ ಭಾಗವತಿಕೆಯನ್ನು ಔಪಚಾರಿಕವಾಗಿ ತರಬೇತಿ ಪಡೆಯುತ್ತಿದ್ದಾಗ, ಮಗು ಕಾವ್ಯ ಅವರೊಂದಿಗೆ ಸೇರಿಕೊಳ್ಳುತ್ತಿದ್ದಳು. ಒಮ್ಮೆ ಮಾಂಬಾಡಿಯವರು ಆಕೆಯನ್ನು ಯಕ್ಷಗಾನದ ಪದ್ಯವನ್ನು ಹಾಡುವಂತೆ ಕೇಳಲು, ಮಗು ಕಾವ್ಯಳ ಬಾಯಿಂದ ಬಂದ ಭಾಗವತಿಗೆಯನ್ನು ಕೇಳಿದಾಗ ಅವಳ ಸಾಮರ್ಥ್ಯವನ್ನು ಅರಿತುಕೊಂಡರು.[] ಸುಬ್ರಹ್ಮಣ್ಯ ಭಟ್ ಮಾಂಬಾಡಿಯವರಲ್ಲಿ 7 ತಿಂಗಳ ಕಾಲ ರಾಗ-ತಾಳದಂತಹ ಅಧ್ಯಯನ ಮಾಡಿದ ನಂತರ ಕಾವ್ಯ, ಹರೀಶ್ ಬೋಳಂತಿಮೊಗರು ಅವರಲ್ಲಿ ಯಕ್ಷಗಾನ ಪ್ರಸಂಗಳನ್ನು ಕಲಿಯಲು ಪ್ರಾರಂಭಿಸಿದರು. "ಕಾವ್ಯಾ ತನ್ನ ಬಾಲ್ಯದ ದಿನಗಳಿಂದಲೂ ಸಾಕಷ್ಟು ಕಠಿಣತೆ ಮತ್ತು ಹಠವನ್ನು ಹೊಂದಿದ್ದಳು. ಪ್ರತಿ ರಾತ್ರಿಯೂ ಭಾಗವತಿ ಪಾಠ ಮಾಡದೆ ಆಕೆ ನಿದ್ದೆಗೆಡುವುದಿಲ್ಲ' ಎಂದು ಕಳೆದ 17 ವರ್ಷಗಳಿಂದ ಆಕೆಗೆ ಮಾರ್ಗದರ್ಶನ ನೀಡುತ್ತಿರುವ ಹರೀಶ್ ಬೋಳಂತಿಮೊಗರು ಹೇಳುತ್ತಾರೆ.[]

ಭಾಗವತ ಸ್ಥಾನ

[ಬದಲಾಯಿಸಿ]

ಯಕ್ಷಗಾನ ಪ್ರದರ್ಶನದಲ್ಲಿ, ಒಬ್ಬ 'ಭಾಗವತ' ಪ್ರಧಾನ ವೇದಿಕೆಯ ಕಲಾವಿದ ಮತ್ತು ನಿರ್ದೇಶಕ. ಯಕ್ಷಗಾನದ ಮತ್ತು ತಾಳಮದ್ದಳೆ ಎಂಬ ಎರಡೂ ಜನಪ್ರಿಯ ರೂಪಾಂತರಗಳಿಗೆ ಭಾಗವತನೇ ಕೇಂದ್ರ ಬಿಂದು. 10ನೇ ವಯಸ್ಸಿನಲ್ಲಿ 'ಶರಸೇತು ಬಂಧನ' ಎಂಬ ತಾಳಮದ್ದಳೆ ಪ್ರದರ್ಶನಕ್ಕೆ ಕಾವ್ಯ ಅವರ ಮೊದಲ ರಂಗ ಅನುಭವ. ಅಂದಿನಿಂದ, ಅವರು ಹಿಂದೆ ನೋಡದೆ ದೇಶಾದ್ಯಂತ 2,500 ಪ್ರದರ್ಶನಗಳನ್ನು ನೀಡಿದ್ದಾರೆ. ಈಕೆ ಹಾಡಿರುವ ವಿಡಿಯೋ ತುಣುಕುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದಿವೆ. ಯಕ್ಷಗಾನದ ದಿಗ್ಗಜರಾದ ಪದ್ಯಾಣ ಗಣಪತಿ ಭಟ್, ಪಟ್ಲ ಸತೀಶ್ ಶೆಟ್ಟಿ ಮತ್ತು ರವಿಚಂದ್ರ ಕನ್ನಡಿಕಟ್ಟೆ ಸೇರಿದಂತೆ ತಮ್ಮ ನೆಚ್ಚಿನ ಭಾಗವತರೊಂದಿಗೆ ಕಾವ್ಯ ವೇದಿಕೆ ಹಂಚಿಕೊಂಡಿದ್ದಾರೆ.[]

ವಿಧ್ಯಾಭ್ಯಾಸ

[ಬದಲಾಯಿಸಿ]

ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿ ಎಸ್ಸಿ ಪದವಿ ಶಿಕ್ಷಣ ಮುಗಿಸಿ, ಆಮೇಲೆ ರಾಸಾಯನ ಶಾಸ್ತ್ರದಲ್ಲಿ ಸ್ನಾತಕೋತರ ಪದವಿಯನ್ನು ವಿವೇಕನಾಂದ ಮಹಾವಿದ್ಯಾಲಯ, ಪುತ್ತೂರಿನಲ್ಲಿ ಪಡೆದಿರುತ್ತಾರೆ. ಅಲ್ಲದೆ ಬಿ.ಎಡ್ ಪದವಿಯನ್ನೂ ಪಡೆದು ತಮ್ಮ ಜ್ಞಾನವನ್ನು ಹೆಚ್ಚಿಸಿ ಕೊಂಡಿದ್ದಾರೆ.[][]

ಪ್ರಶಸ್ತಿಗಳು

[ಬದಲಾಯಿಸಿ]
  • ಕಲಾ ಸಂಗಮ ಜಿಲ್ಲಾ ಪ್ರಶಸ್ತಿ []
  • ಸುಮ ಸೌರಭ ರಾಜ್ಯ ಪ್ರಶಸ್ತಿ []
  • ನಾದಶ್ರೀ ಪ್ರಶಸ್ತಿ []
  • ಕೊಂಕಣಿ ರಾಯಾಭಾರಿ ಪ್ರಶಸ್ತಿ []

ಭಾಗವತ ಸ್ಥಾನದ ಬಗ್ಗೆ

[ಬದಲಾಯಿಸಿ]

"ಯಕ್ಷಗಾನ ಬಾಗವತರು ಅಂದರೆ, ಕೇವಲ ಭಾಗವತಿಗೆ ಹಾಡುವುದಲ್ಲ.ರಂಗದ ಮೇಲೆ ಅವರ ಗಮನ ಸದಾ ಇರಬೇಕು ಅಲ್ಲದೆ ರಂಗದಲ್ಲಿ ನಡೆಯುವ ದೃಶ್ಯಗಳಿಗೆ ಜೀವ ತುಂಬುವುದೇ ಭಾಗವತರ ಕರ್ತವ್ಯ " ಎಂದು ಕಾವ್ಯಶ್ರೀ ಹೇಳುತ್ತಾರೆ.[]

ವ್ಯಯಕ್ತಿಕ ಜೀವನ

[ಬದಲಾಯಿಸಿ]

ಕಾವ್ಯಶ್ರೀ ನಾಯಕ್ ಅವರು ತಾಂತ್ರಿಕ ಕ್ಷೇತ್ರದ ಶಿಕ್ಷಣ ಪಡೆದಿರುವ ಗುರುಪ್ರಸಾದ್ ನಾಯಕ್ ಅವರನ್ನು ವಿವಾಹವಾಗಿದ್ದಾರೆ. ಉಳಿ ಎಂಬಲ್ಲಿ ನೆಲೆಸಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. 1 2 3 Desk, Newskarkala (17 August 2020). "ಇಂದಿನ ಐಕಾನ್–ಗಂಡು ಕಲೆಯಲ್ಲಿ ಮೆರೆಯುತ್ತಿರುವ ಹೆಣ್ಣು ಧ್ವನಿ ಕಾವ್ಯಶ್ರೀ ಆಜೇರು". News Karkala. {{cite web}}: |last1= has generic name (help)
  2. 1 2 3 "Kavyashree Ajeru". DH Changemakers (in ಇಂಗ್ಲಿಷ್). 23 December 2022.
  3. 1 2 3 4 5 6 "ಈ ಕಾವ್ಯ ಸುಶ್ರಾವ್ಯ". Udayavani.