ವಿಷಯಕ್ಕೆ ಹೋಗು

ಕಾವೇರಿಗೆಂಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hypselobarbus carnaticus
Conservation status
Scientific classification e
Unrecognized taxon (fix): Hypselobarbus
ಪ್ರಜಾತಿ:
H. carnaticus
Binomial name
Hypselobarbus carnaticus
(Jerdon, 1849)
Synonyms
  • Barbodes carnaticus (Jerdon, 1849)
  • Barbus carnaticus Jerdon, 1849
  • Puntius carnaticus (Jerdon, 1849)

ಕಾವೇರಿಗೆಂಡೆ ಒಂದು ಮಧ್ಯಗಾತ್ರದ ಗೆಂಡೆ ಜಾತಿಯ ಮೀನು (ಕಾರ್ಪ್). ಕಾವೇರಿ ನದಿಯಲ್ಲಿ ಸಿಕ್ಕುವ ಸ್ಥಳೀಯ ಜಾತಿಯ ಮೀನಾದ್ದರಿಂದ ಇದಕ್ಕೆ ಈ ಹೆಸರಿದೆ. ಕೃಷ್ಣರಾಜ ಸಾಗರದಲ್ಲಿ ಸಾಕಿ ಬೆಳೆಸುವ ಮೀನು ಜಾತಿಗಳಲ್ಲಿ ಅತಿ ಮುಖ್ಯವಾದುದು. ಇದು ಕರ್ನಾಟಕ ರಾಜ್ಯದ ಬೇರೆ ನದಿಗಳಲ್ಲಿ ದೊರಕುವುದಿಲ್ಲ ಇದರ ವೈಜ್ಞಾನಿಕ ನಾಮ ಹೈಪ್ಸೆಲೋಬಾರ್ಬಸ್ ಕಾರ್ನಾಟಿಕಸ್

ಲಕ್ಷಣಗಳು

[ಬದಲಾಯಿಸಿ]

ಇದಕ್ಕೆ ಮೊನಚಾದ ತಲೆ, ಸಂಕುಚಿತವಾದ ಮೂತಿ ಅಥವಾ ವಸಡಿದೆ. ಬೆನ್ನಿನ ಈಜುರೆಕ್ಕೆಯಲ್ಲಿ ಅತಿದಪ್ಪವಾದ ಮುಳ್ಳು (ರೇ) ಇದೆ. ದೇಹದ ಬಣ್ಣ ಮತ್ತು ಮೇಲೆ ನಮೂದಿಸಿದ ಗುಣಗಳಿಂದ ತನ್ನ ವರ್ಗದ ಬೇರೆ ಮೀನುಗಳಿಂದ ಭಿನ್ನವಾಗಿದೆ. ಪೂರ್ಣ ಬೆಳೆದ ಮೀನು ಸುಮಾರು 2' ಉದ್ದವಿರುತ್ತದೆ. ತೂಕ 10-11 ಪೌಂ. ಇರುವುದುಂಟು.

ವಂಶಾಭಿವೃದ್ಧಿ

[ಬದಲಾಯಿಸಿ]

ಈ ಮೀನು ಹಿಂಗಾರು ಮಳೆಯ ಕಾಲದಲ್ಲಿ ನದಿಗಳಲ್ಲಿ ವಂಶಾಭಿವೃದ್ಧಿ ಮಾಡುತ್ತದೆ. ಜನವರಿ ಮತ್ತು ಫೆಬ್ರವರಿಗಳಲ್ಲಿ ಸಣ್ಣ ಮರಿಗಳನ್ನು ಸಂಗ್ರಹಿಸಬಹುದು. ಚಿಕ್ಕ ಮರಿಗಳಿಗೆ ಅತಿ ಸೂಕ್ಷ್ಮಪ್ರಾಣಿಗಳು ಮತ್ತು ನೀರಿನ ಚಿಗಟಗಳು ಮುಖ್ಯ ಆಹಾರ. ಬೆರಳು ಗಾತ್ರಕ್ಕೆ ಬೆಳೆದಾಗ ನೊಣದ ಜಾತಿಗೆ ಸೇರಿದ ಕೀಟಗಳ ಡಿಂಭ, ನಾರುವಸ್ತು ಮತ್ತು ಮಣ್ಣನ್ನು ತಿನ್ನುತ್ತವೆ. ದೊಡ್ಡವಾದಾಗ ನೀರಿನಲ್ಲಿರುವ ಪಾಚಿಯೇ ಆಹಾರ. ಮರಿಗಳನ್ನು ಕೆರೆಗಳಲ್ಲೂ ಬೆಳೆಸಬಹುದು.

ಉಪಯೋಗ

[ಬದಲಾಯಿಸಿ]

ಕಾವೇರಿಗೆಂಡೆ ಉತ್ತಮವಾದ ಆಹಾರ ಮೀನೆಂದು ಹೆಸರಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Ali, A.; Raghavan, R. (2011). "Barbodes carnaticus". The IUCN Red List of Threatened Species. 2011: e.T172418A6888175. doi:10.2305/IUCN.UK.2011-1.RLTS.T172418A6888175.en. Downloaded on 17 December 2017.