ವಿಷಯಕ್ಕೆ ಹೋಗು

ಕಾಲಿಂಜರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಲಿಂಜರ್ ಕೋಟೆ
Banda district, Uttar Pradesh, India
Karwi ಸಮೀಪ
ಕಾಲಿಂಜರ್ ಕೋಟೆಯ ಮೇಲಿಂದ ಕಾಣುವ ವಿಹಂಗಮ ದೃಶ್ಯ
ಸ್ಥಳದ ಮಾಹಿತಿ
ಪ್ರಕಾರFort, caves and temples
ಸಾರ್ವಜನಿಕರಿಗೆ ಮುಕ್ತವಾಗಿದೆಯೇ
Yes
ಪರಿಸ್ಥಿತಿಪಾಳುಬಿದ್ದಿದೆ
ಸ್ಥಳ
Map
ನಿರ್ದೇಶಾಂಕಗಳು24°59′59″N 80°29′07″E / 24.9997°N 80.4852°E / 24.9997; 80.4852
ಎತ್ತರ1,200 feet (370 m)
ಸ್ಥಳದ ಇತಿಹಾಸ
ನಿರ್ಮಾಣಗೊಂಡಿದ್ದುಐದನೆಯ ಶತಮಾನ
ಬಳಸಿದ ಸಾಮಗ್ರಿಗಳುGranite stones
ಕೆಡವಿದ್ದು1858
ಯುದ್ಧಗಳು/ಕದನಗಳುMahmud of Ghazni – 1023, Sher Shah Suri – 1545, Maratha Peshwa – 1732, East India Company – 1812 and Indian Rebellion of 1857
ದಳ/ಸೇನಾಪಡೆ ಮಾಹಿತಿ
ಹಿಂದಿನ ಕಮಾಂಡರ್‌ಗಳು
Gupta Empire, Chandela dynasty, Baghel Rajputs of Rewa, Maratha Peshwas
ಗ್ಯಾರಿಸನ್ (ಸೇನಾ ಪಡೆ)Maratha Cavalry 1731 – 1858 British garrison – 1947
  • Hanuman Gate
  • Kalinjar Fort
  • Laldarwaza
  • Maratha Garrison

ಕಾಲಿಂಜರ್ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಸ್ಥಳ. ಇಲ್ಲಿರುವ ಕೋಟೆ ಪ್ರಾಚೀನವಾದ್ದು. 10ನೆಯ ಶತಮಾನದಲ್ಲಿ ಕನೌಜಿನ ರಾಜರ ಸಾಮಂತನಾಗಿದ್ದ ಚಾಂಡೆಲ ರಾಜ ಯಶೋವರ್ಮ ಕಾಲಿಂಜರ್ ಕೂಟಿಯನ್ನು ಗೆದ್ದುಕೊಂಡು ಸ್ವತಂತ್ರನಾದ. ಚಾಂಡೆಲರು ಕಾಲಿಂಜರ್ ನಗರದಲ್ಲಿ ಸುಂದರವಾದ ದೇವಸ್ಥಾನಗಳನ್ನೂ ಸರೋವರಗಳನ್ನೂ ಕಟ್ಟಿಸಿದರು. ಘಸ್ನಿ ಮಹಮ್ಮದ್ ಕಾಲಿಂಜರ್ ಕೋಟೆಯನ್ನು ಮುತ್ತಿ, 1023 ರಲ್ಲಿ ಚಾಂಡೆಲ ರಾಜ ಗಂಡನನ್ನು ಸೋಲಿಸಿ, ಪ್ರಭಲವಾದ ಕೋಟೆಯನ್ನು ವಶಪಡಿಸಿಕೂಂಡ. ಮಹಮ್ಮದ್ ಘೋರಿ 1203ರಲ್ಲಿ ಕೂೀಟೆಯನ್ನು ಪುನಃ ಗೆದ್ದು ಉತ್ತರ ಭಾರತದಲ್ಲಿ ತನ್ನ ಆಳ್ವಿಕೆಯನ್ನು ಸ್ಧಾಪಿಸಿದ. ತರುವಾಯ ರಜಪೂತರ ವಶವಾದ ಕೂೀಟೆಯನ್ನು ಸೂರ್ ವಂಶದ ಪೇರ್ ಷಾ 1545ರಲ್ಲಿ ಗೆದ್ದುಕೊಂಡರೂ ಕದನದಲ್ಲಿ ಆತ ಮೃತನಾದುದರಿಂದ ಮತ್ತೆ ಅದು ರಜಪೂತರ ವಶವಾಯಿತು. ಮೊಗಲ್ ಚಕ್ರವರ್ತಿ ಹುಮಾಯೂನ್ ಕಾಲಿಂಜರದ ಕೋಟೆಯನ್ನು ಮುತ್ತಿದನಾದರೂ ವಶಡಿಸಿಕೊಳ್ಳಲಾರದೆ ಕೊನೆಗೆ ರಜಪೂತರೊಡನೆ ಸಂಧಿ ಮಾಡಿಕೊಳ್ಳಬೇಕಾಯಿತು. 1569 ಅಕ್ಬರ್ ಅದನ್ನು ಗೆದ್ದುಕೂಂಡ. ಮೊಗಲ್ ಸಾಮ್ರಾಜ್ಯದ ಪತನಾನಂತರ ಅದು ಬ್ರಿಟಿಷರ ವಶಕ್ಕೆ ಹೋಗಿತ್ತು.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: