ವಿಷಯಕ್ಕೆ ಹೋಗು

ಕಾರ್ಲ್ ಫರ್ಡಿನಾಂಡ್ ಫಾನ್ ಗ್ರಾಫೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಲ್ ಫರ್ಡಿನಾಂಡ್ ಫಾನ್ ಗ್ರಾಫೆಯ ಶಿಲಾಮುದ್ರಣ

ಕಾರ್ಲ್ ಫರ್ಡಿನಾಂಡ್ ಫಾನ್ ಗ್ರಾಫೆ (1787-1840) ಜರ್ಮನಿಯ ಒಬ್ಬ ಪ್ರಸಿದ್ಧ ವೈದ್ಯ.

ಜೀವನ, ಸಾಧನೆಗಳು

[ಬದಲಾಯಿಸಿ]

ಕಾರ್ಲ್ ಫರ್ಡಿನಾಂಡ್ ಪೋಲೆಂಡಿನ ವಾರ್ಸಾದಲ್ಲಿ ಹುಟ್ಟಿ[] ಜರ್ಮನಿಯಲ್ಲಿ ಶಿಕ್ಷಣ ಪಡೆದು ಬರ್ಲಿನ್ನಿನಲ್ಲಿ ಶಸ್ತ್ರವೈದ್ಯ ಪ್ರಾಧ್ಯಾಪಕನಾಗಿ ಕೆಲಸಮಾಡಿದ. ಅಂಗವಿಕಾರಗಳನ್ನು ಸರಿಪಡಿಸಿ ಸುರೂಪಕ್ಕೆ ತರಲು ಬಳಸುವ ಪ್ಲಾಸ್ಟಿಕ್ ಶಸ್ತ್ರವೈದ್ಯ ವಿಧಾನವನ್ನು ಜರ್ಮನಿಯಲ್ಲಿ ಮೊತ್ತ ಮೊದಲು ಪ್ರಾರಂಭಿಸಿ ಅದರಲ್ಲಿ ಪರಿಣತಿಯನ್ನು ಪಡೆದು ಪ್ಲಾಸ್ಟಿಕ್ ಶಸ್ತ್ರವೈದ್ಯದ ಅಧ್ವರ್ಯುವೆಂದು ಹೆಸರು ಪಡೆದ. ಜೊತೆಗೆ ದೇಹದಲ್ಲಿನ ರಕ್ತ ಪೂರೈಕೆ, ಸಿಸೇರಿಯನ್ ಶಸ್ತ್ರವೈದ್ಯವೆಂದು ಹೆಸರಾದ ಗರ್ಭಕೋಶದ ಕೊಯ್ತದಿಂದ ಮಾಡುವ ಹೆರಿಗೆ, ಮೂಗನ್ನು ಸುರೂಪಗೊಳಿಸುವಿಕೆ, ಬಾಯಿಯ ಹರಿದ ಅಟ್ಟವನ್ನು ಸರಿಪಡಿಸುವಿಕೆ[] ಮುಂತಾದ ವಿಧಾನಗಳಲ್ಲಿ ವಿನೂತನ ಬದಲಾವಣೆಗಳನ್ನು ಮಾಡಿ ಗಣನೀಯ ಪ್ರಗತಿ ಸಾಧಿಸಿದ.

ಉಲ್ಲೇಖಗಳು

[ಬದಲಾಯಿಸಿ]


ಗ್ರಂಥಸೂಚಿ

[ಬದಲಾಯಿಸಿ]
  •  This article incorporates text from a publication now in the public domainChisholm, Hugh, ed. (1911). "Gräfe, Karl Ferdinand von" . Encyclopædia Britannica. Vol. 12 (11th ed.). Cambridge University Press. pp. 315–316. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help)



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: