ಕಾರ್ಲ್ ಜಂಗ್
ಕಾರ್ಲ್ ಜಂಗ್ | |
---|---|
ಜನನ | ಕಾರ್ಲ್ ಗುಸ್ತಾವ್ ಜಂಗ್ ೨೬ ಜುಲೈ ೧೮೭೫ ಕೆಸ್ವಿಲ್, ಥುರ್ಗೌ, ಸ್ವಿಟ್ಜರ್ಲೆಂಡ್. |
ಮರಣ | 6 June 1961 ಕುಸ್ನಾಚ್ಟ್, ಜುರಿಚ್, ಸ್ವಿಟ್ಜರ್ಲೆಂಡ್. | (aged 85)
ಕಾರ್ಯಕ್ಷೇತ್ರ | |
ಸಂಸ್ಥೆಗಳು | |
ಅಭ್ಯಸಿಸಿದ ವಿದ್ಯಾಪೀಠ | |
ಡಾಕ್ಟರೇಟ್ ಸಲಹೆಗಾರರು | ಯುಜೆನ್ ಬ್ಲ್ಯೂಲರ್ |
ಪ್ರಸಿದ್ಧಿಗೆ ಕಾರಣ | |
ಸಂಗಾತಿ | |
ಮಕ್ಕಳು | ೫ |
ಹಸ್ತಾಕ್ಷರ |
ಕಾರ್ಲ್ ಗುಸ್ತಾವ್ ಜಂಗ್ (೨೬ ಜುಲೈ ೧೮೭೫ - ೬ ಜೂನ್ ೧೯೬೧) ಇವರು ಸ್ವಿಸ್ ಮನೋವೈದ್ಯ ಮತ್ತು ಮನಶ್ಶಾಸ್ತ್ರಜ್ಞರಾಗಿದ್ದರು.[೧] ಜಂಗ್‌ರವರು ಆರಂಭಿಕ ಮನೋವಿಶ್ಲೇಷಣಾ ಚಳವಳಿಯಲ್ಲಿ ತೊಡಗಿಸಿಕೊಂಡ ನಂತರ ಅವರು ವಿಶ್ಲೇಷಣಾತ್ಮಕ ಮನೋವಿಜ್ಞಾನದ ಶಾಲೆಯನ್ನು ಸ್ಥಾಪಿಸಿದರು.[೨] ಸಮೃದ್ಧ ಲೇಖಕ, ಚಿತ್ರಕಾರ, ವರದಿಗಾರ, ಸಂಕೀರ್ಣ ಮತ್ತು ವಿವಾದಾತ್ಮಕ ಪಾತ್ರವಾಗಿದ್ದ ಜಂಗ್‌ರವರು ಅವರ ಆತ್ಮಚರಿತ್ರೆಗಳಾದ ನೆನಪುಗಳು, ಕನಸುಗಳು, ಪ್ರತಿಬಿಂಬಗಳು ಮೂಲಕ ಪ್ರಸಿದ್ಧರಾಗಿದ್ದಾರೆ. [೩]
ಜಂಗ್ ಅವರ ಕೆಲಸವು ಮನೋವೈದ್ಯಶಾಸ್ತ್ರ, ಮಾನವಶಾಸ್ತ್ರ, ಪುರಾತತ್ವಶಾಸ್ತ್ರ, ಸಾಹಿತ್ಯ, ತತ್ವಶಾಸ್ತ್ರ, ಮನೋವಿಜ್ಞಾನ ಮತ್ತು ಧಾರ್ಮಿಕ ಅಧ್ಯಯನಗಳ ಕ್ಷೇತ್ರಗಳಲ್ಲಿ ಪ್ರಭಾವ ಬೀರಿದೆ.[೪] ಅವರು ಜ್ಯೂರಿಚ್‌ನ ಬರ್ಗ್ಹೋಲ್ಜ್ಲಿ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಯುಜೆನ್ ಬ್ಲ್ಯೂಲರ್ ಅವರ ಅಡಿಯಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕೆಲಸ ಮಾಡಿದರು. ಮನೋವಿಶ್ಲೇಷಣೆಯ ಸ್ಥಾಪಕರಾದ ಸಿಗ್ಮಂಡ್ ಫ್ರಾಯ್ಡ್ ಅವರೊಂದಿಗೆ ಸ್ನೇಹವನ್ನು ಬೆಳೆಸಿಕೊಂಡು, ಮಾನವ ಮನೋವಿಜ್ಞಾನದ ಬಗ್ಗೆ ಅವರ ಜಂಟಿ ದೃಷ್ಟಿಕೋನಕ್ಕೆ ಪ್ರಮುಖವಾದ ಸುದೀರ್ಘ ಪತ್ರವ್ಯವಹಾರವನ್ನು ನಡೆಸುವ ಮೂಲಕ ಜಂಗ್‌ರವರು ತಮ್ಮನ್ನು ರೂಪಿಸಿಕೊಂಡರು. ಜಂಗ್ ಅವರನ್ನು ಇತಿಹಾಸದ ಅತ್ಯಂತ ಪ್ರಭಾವಶಾಲಿ ಮನಶ್ಶಾಸ್ತ್ರಜ್ಞರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.[೫][೬]
ಫ್ರಾಯ್ಡ್‌ರವರು ತಮ್ಮ "ಹೊಸ ವಿಜ್ಞಾನದ" ಮನೋವಿಶ್ಲೇಷಣೆಯನ್ನು ಮುಂದೂಡಲು ಕಿರಿಯ ಉತ್ತರಾಧಿಕಾರಿಯಾಗಿದ್ದ ಜಂಗ್‌ರವರನ್ನು ಸೂಚಿಸಿದರು. ಆದರೆ, ತಮ್ಮ ಸ್ವಂತ ಕೆಲಸವನ್ನು ಕಾನೂನುಬದ್ಧಗೊಳಿಸುವ ಸಾಧನವಾಗಿ ಫ್ರಾಯ್ಡ್‌ರವರು ಮತ್ತು ಇತರ ಸಮಕಾಲೀನ ಮನೋವಿಶ್ಲೇಷಕರು ಯುರೋಪ್‌ನಲ್ಲಿ ಹೆಚ್ಚುತ್ತಿರುವ ಯೆಹೂದ್ಯ ವಿರೋಧಿಗಳನ್ನು ಎದುರಿಸುತ್ತಿರುವ ಯಹೂದಿಗಳಾಗಿದ್ದರು ಮತ್ತು ಜಂಗ್‌ರವರು ಕ್ರಿಶ್ಚಿಯನ್ ಆಗಿದ್ದರು.[೭] ಫ್ರಾಯ್ಡ್‌ರವರು ಹೊಸದಾಗಿ ಸ್ಥಾಪಿತವಾದ ಇಂಟರ್ನ್ಯಾಷನಲ್ ಸೈಕೋಅನಾಲಿಟಿಕಲ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಜಂಗ್ ಅವರ ನೇಮಕವನ್ನು ಪಡೆದರು.[೮] ಆದಾಗ್ಯೂ, ಜಂಗ್ ಅವರ ಸಂಶೋಧನೆ ಮತ್ತು ವೈಯಕ್ತಿಕ ದೃಷ್ಟಿಕೋನವು ಅವರ ಹಳೆಯ ಸಹೋದ್ಯೋಗಿಯ ಸಿದ್ಧಾಂತವನ್ನು ಅನುಸರಿಸಲು ಕಷ್ಟಕರವಾಗಿಸಿತು.[೯] ಈ ವಿಭಜನೆಯು ಜಂಗ್‌ರವರಿಗೆ ನೋವುಂಟು ಮಾಡಿತು ಮತ್ತು ಇದರ ಪರಿಣಾಮವಾಗಿ ಜಂಗ್‌ರವರ ವಿಶ್ಲೇಷಣಾತ್ಮಕ ಮನೋವಿಜ್ಞಾನವು ಮನೋವಿಶ್ಲೇಷಣೆಯಿಂದ ಪ್ರತ್ಯೇಕವಾದ ಸಮಗ್ರ ವ್ಯವಸ್ಥೆಯಾಗಿ ಸ್ಥಾಪನೆಯಾಯಿತು. ವಿದ್ವಾಂಸರಾದ ಯೋಸೆಫ್ ಹಯೀಮ್ ಯೆರುಶಾಲ್ಮಿ ಅವರು ಜಂಗ್ ಅವರ ನಂತರದ ಯಹೂದಿ ವಿರೋಧಿ ಹೇಳಿಕೆಗಳು ಭಿನ್ನಾಭಿಪ್ರಾಯದ ಸುಳಿವು ಆಗಿರಬಹುದು ಎಂದು ನಂಬಿದ್ದಾರೆ.[೧೦]
ಜೀವನರಿತ್ರೆ
[ಬದಲಾಯಿಸಿ]ಆರಂಭಿಕ ಜೀವನ
[ಬದಲಾಯಿಸಿ]ಬಾಲ್ಯ
[ಬದಲಾಯಿಸಿ]ಕಾರ್ಲ್ ಗುಸ್ತಾವ್ ಜಂಗ್‌ರವರು ೨೬ ಜುಲೈ ೧೮೭೫ ರಂದು ಸ್ವಿಸ್ ಕ್ಯಾಂಟನ್ ಥುರ್ಗೌನ ಕೆಸ್ವಿಲ್‌ನಲ್ಲಿ ಪಾಲ್ ಅಚಿಲ್ಲೆಸ್ ಜಂಗ್ (೧೮೪೨–೧೮೯೬) ಮತ್ತು ಎಮಿಲೀ ಪ್ರಿಸ್‌ವರ್ಕ್ (೧೮೪೮–೧೯೨೩) ದಂಪತಿಗಳ ಮೊದಲ ಬದುಕುಳಿದ ಮಗನಾಗಿ ಜನಿಸಿದರು.[೧೧] ಅವರ ಜನನಕ್ಕೆ ಮುಂಚಿತವಾಗಿ ಎರಡು ಹೆರಿಗೆಗಳು ಮತ್ತು ೧೮೭೩ ರಲ್ಲಿ, ಜನಿಸಿದ ಪೌಲ್ ಎಂಬ ಮಗನ ಜನನವು ಕೆಲವೇ ದಿನಗಳವರೆಗೆ ಬದುಕುಳಿದಿತ್ತು.[೧೨][೧೩]
ಜಂಗ್‌ರವರ ತಂದೆ ಪಾಲ್ ಅಚಿಲ್ಲೆಸ್ ಜಂಗ್, ಬಾಸೆಲ್‌ನಲ್ಲಿ ಪ್ರಸಿದ್ಧ ಜರ್ಮನ್-ಸ್ವಿಸ್ ವೈದ್ಯಕೀಯ ಪ್ರಾಧ್ಯಾಪಕರ ಕಿರಿಯ ಮಗನಾಗಿದ್ದರು. ಅದೃಷ್ಟವನ್ನು ಸಾಧಿಸುವ ಪಾಲ್‌ರವರ ಭರವಸೆ ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ ಮತ್ತು ಸ್ವಿಸ್ ರಿಫಾರ್ಮ್ಡ್ ಚರ್ಚ್‌ನಲ್ಲಿ ಬಡ ಗ್ರಾಮೀಣ ಪಾದ್ರಿಯ ಸ್ಥಿತಿಯಿಂದಾಗಿ ಅವರು ಪ್ರಗತಿ ಸಾಧಿಸಲಿಲ್ಲ. ಜಂಗ್‌ರವರ ತಾಯಿ ಎಮಿಲೀ ಪ್ರಿಸ್‌ವರ್ಕ್ ಕೂಡ ದೊಡ್ಡ ಕುಟುಂಬದಲ್ಲಿ ಬೆಳೆದಿದ್ದರು.[೧೪] ಎಮಿಲೀ ಪ್ರಿಸ್‌ವರ್ಕ್‌ರವರು ಪ್ರಸಿದ್ಧ ಬಾಸೆಲ್ ಚರ್ಚ್ ಮ್ಯಾನ್ ಮತ್ತು ಶಿಕ್ಷಣತಜ್ಞರಾದ ಸ್ಯಾಮ್ಯುಯೆಲ್ ಪ್ರಿಸ್ವರ್ಕ್ (೧೭೯೯–೧೮೭೧) ಮತ್ತು ಅವರ ಎರಡನೇ ಹೆಂಡತಿಯ ಕಿರಿಯ ಮಗು. ಸ್ಯಾಮ್ಯುಯೆಲ್ ಪ್ರಿಸ್ವರ್ಕ್‌ಅವರು ಆಂಟಿಸ್ಟೆಸ್ ಆಗಿದ್ದರು. ನಗರದ ಸುಧಾರಿತ ಪಾದ್ರಿಗಳ ಮುಖ್ಯಸ್ಥರಿಗೆ ಈ ಬಿರುದನ್ನು ನೀಡಲಾಗುತ್ತದೆ. ಜೊತೆಗೆ ಹೆಬ್ರೈಸ್ಟ್, ಲೇಖಕ ಮತ್ತು ಸಂಪಾದಕರಾಗಿದ್ದರು.[೧೫] ಅವರು ಪಾಲ್ ಅಚಿಲ್ಲೆಸ್ ಜಂಗ್ ಅವರಿಗೆ ಬಾಸೆಲ್ ವಿಶ್ವವಿದ್ಯಾಲಯದಲ್ಲಿ ಹೀಬ್ರೂ ಪ್ರಾಧ್ಯಾಪಕರಾಗಿ ಕಲಿಸಿದರು.
ಜಂಗ್‌ರವರು ಆರು ತಿಂಗಳ ಮಗುವಾಗಿದ್ದಾಗ ಅವರ ತಂದೆಯನ್ನು ಲಾಫೆನ್‌ನ ಹೆಚ್ಚು ಸಮೃದ್ಧ ಪ್ಯಾರಿಷ್‌ಗೆ ನೇಮಿಸಲಾಯಿತು. ಇದರಿಂದ ಜಂಗ್‌ರವರ ತಂದೆ ಮತ್ತು ತಾಯಿಯ ನಡುವೆ ಉದ್ವಿಗ್ನತೆ ಬೆಳೆಯಿತು. ಜಂಗ್‌ರವರ ತಾಯಿ ವಿಲಕ್ಷಣ ಮತ್ತು ಖಿನ್ನತೆಗೆ ಒಳಗಾದ ಮಹಿಳೆಯಾಗಿದ್ದರಿಂದ ಅವರು ತಮ್ಮ ಮಲಗುವ ಕೋಣೆಯಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರು.[೧೬] ಅವರು ರಾತ್ರಿಯಲ್ಲಿ ಆತ್ಮಗಳು ಅವರನ್ನು ಭೇಟಿ ಮಾಡುತ್ತವೆ ಎಂದು ಹೇಳುತ್ತಿದ್ದರು. ಹಗಲಿನಲ್ಲಿ ಸಾಮಾನ್ಯ ಸ್ಥಿತಿಯಲ್ಲಿದ್ದರೂ, ರಾತ್ರಿಯಲ್ಲಿ ತಮ್ಮ ತಾಯಿ ವಿಚಿತ್ರ ಮತ್ತು ನಿಗೂಢವಾಗಿದ್ದರು ಎಂದು ಜಂಗ್‌ರವರು ನೆನಪಿಸಿಕೊಂಡರು. ಒಂದು ರಾತ್ರಿ ಅವರ ಕೋಣೆಯಿಂದ ಮಸುಕಾದ ಪ್ರಕಾಶಮಾನವಾದ ಮತ್ತು ಅನಿರ್ದಿಷ್ಟ ಆಕೃತಿ ಬರುತ್ತಿರುವುದನ್ನು ತಾನು ನೋಡಿದೆ, ಕುತ್ತಿಗೆಯಿಂದ ತಲೆಯನ್ನು ಬೇರ್ಪಡಿಸಿ ದೇಹದ ಮುಂದೆ ಗಾಳಿಯಲ್ಲಿ ತೇಲುತ್ತಿದೆ ಎಂದು ಅವರು ಹೇಳಿದರು. ನಂತರ, ಜಂಗ್‌ರವರ ತಾಯಿ ಅಜ್ಞಾತ ದೈಹಿಕ ಕಾಯಿಲೆಯಿಂದಾಗಿ ಹಲವಾರು ತಿಂಗಳುಗಳ ಕಾಲ ಲಾಫೆಲ್ ಅನ್ನು ತೊರೆದು ಬಾಸೆಲ್ ಬಳಿ ಆಸ್ಪತ್ರೆಯಲ್ಲಿ ಉಳಿದರು.
ಬಾಲ್ಯದ ನೆನಪುಗಳು
[ಬದಲಾಯಿಸಿ]ಜಂಗ್‌ರವರು ಏಕಾಂಗಿ ಮತ್ತು ಅಂತರ್ಮುಖಿ ಮಗುವಾಗಿದ್ದರು. ಬಾಲ್ಯದಿಂದಲೂ, ಅವರು ತಮ್ಮ ತಾಯಿಯಂತೆ,[೧೭] ಎರಡು ವ್ಯಕ್ತಿತ್ವಗಳನ್ನು ಹೊಂದಿದ್ದರು.[೧೮] ಜಂಗ್‌ರವರು "ವ್ಯಕ್ತಿತ್ವ ಸಂಖ್ಯೆ ೧", ಎಂದು ಕರೆಯುವ ವಿಶಿಷ್ಟ ಶಾಲಾ ವಿದ್ಯಾರ್ಥಿಯಾಗಿದ್ದರು. ಜಂಗ್‌ರವರು ಹೆತ್ತವರಿಗೆ ಹತ್ತಿರವಾಗಿದ್ದರೂ, ನಂಬಿಕೆಯ ವಿಷಯದಲ್ಲಿ ತಮ್ಮ ತಂದೆಯ ಶೈಕ್ಷಣಿಕ ವಿಧಾನದಿಂದ ಅವರು ನಿರಾಶೆಗೊಂಡರು.[೧೯]
ಜಂಗ್‌ರವರಿಗೆ ಅವರ ಬಾಲ್ಯದ ಕೆಲವು ನೆನಪುಗಳು ಜೀವನಪರ್ಯಂತ ಪ್ರಭಾವ ಬೀರಿದವು. ಜಂಗ್‌ರವರು ಹುಡುಗನಾಗಿದ್ದಾಗ, ಅವರು ತಮ್ಮ ಪೆನ್ಸಿಲ್ ಕೇಸ್‌ನಿಂದ ಮರದ ರೂಲರ್‌ನ ತುದಿಯಲ್ಲಿ ಒಂದು ಸಣ್ಣ ಮಾದರಿಯನ್ನು ಕೆತ್ತಿದರು ಮತ್ತು ಅದನ್ನು ಕೇಸ್‌ನ ಒಳಗೆ ಇಟ್ಟರು ಅದರೊಳಗೆ ಒಂದು ಕಲ್ಲನ್ನು ಸೇರಿಸಿದರು.[೨೦] ಅದನ್ನು ಅವರು ಮೇಲಿನ ಮತ್ತು ಕೆಳಗಿನ ಭಾಗಗಳಾಗಿ ಚಿತ್ರಿಸಿ ಆ ಚೀಲವನ್ನು ಮೇಲ್ಛಾವಣಿಯಲ್ಲಿ ಬಚ್ಚಿಟ್ಟರು. ನಿಯತಕಾಲಿಕವಾಗಿ, ಅವರು ಮಾದರಿಗೆ ಮರಳುತ್ತಿದ್ದರಿಂದ, ಆಗಾಗ್ಗೆ ತಮ್ಮದೇ ಆದ ರಹಸ್ಯ ಭಾಷೆಯಲ್ಲಿ ಸಂದೇಶಗಳನ್ನು ಕೆತ್ತಲಾದ ಸಣ್ಣ ಕಾಗದದ ಹಾಳೆಗಳನ್ನು ತರುತ್ತಿದ್ದರು. ಈ ಔಪಚಾರಿಕ ಕ್ರಿಯೆಯು ಅವರಿಗೆ ಆಂತರಿಕ ಶಾಂತಿ ಮತ್ತು ಭದ್ರತೆಯ ಭಾವನೆಯನ್ನು ತಂದಿತು ಎಂದು ಪ್ರತಿಬಿಂಬಿಸಿದರು.[೨೧] ವರ್ಷಗಳ ನಂತರ, ಅವರು ತಮ್ಮ ವೈಯಕ್ತಿಕ ಅನುಭವ ಮತ್ತು ಸ್ಥಳೀಯ ಸಂಸ್ಕೃತಿಗಳಲ್ಲಿನ ಟೋಟೆಮ್‌ಗಳಿಗೆ ಸಂಬಂಧಿಸಿದ ಅಭ್ಯಾಸಗಳ ನಡುವಿನ ಸಾಮ್ಯತೆಗಳನ್ನು ಕಂಡುಹಿಡಿದರು. ಉದಾಹರಣೆಗೆ, ಅರ್ಲೆಶೈಮ್ ಅಥವಾ ಆಸ್ಟ್ರೇಲಿಯಾದ ಟ್ಜುರುಂಗಾಸ್ ಬಳಿ ಆತ್ಮ-ಕಲ್ಲುಗಳ ಸಂಗ್ರಹ.[೨೨] ಅವರು ಚಿಕ್ಕ ಹುಡುಗನಾಗಿದ್ದಾಗ ಏನೂ ತಿಳಿದಿರದ ದೂರದ ಸ್ಥಳಗಳಿಗೆ ಅಭ್ಯಾಸ ಮಾಡಿಲು ಹೋಗುತ್ತಿದ್ದರು. ಚಿಹ್ನೆಗಳು, ಮೂಲಮಾದರಿಗಳು ಮತ್ತು ಸಾಮೂಹಿಕ ಸುಪ್ತಾವಸ್ಥೆಯ ಬಗ್ಗೆ ಅವರ ಅವಲೋಕನಗಳು ಭಾಗಶಃ, ಅವರ ನಂತರದ ಸಂಶೋಧನೆಯೊಂದಿಗೆ ಸಂಯೋಜಿಸಲ್ಪಟ್ಟ ಈ ಆರಂಭಿಕ ಅನುಭವಗಳಿಂದ ಸ್ಫೂರ್ತಿ ಪಡೆದಿವೆ.[೨೩]
ವಿಶ್ವವಿದ್ಯಾಲಯ ಅಧ್ಯಯನಗಳು ಮತ್ತು ಆರಂಭಿಕ ವೃತ್ತಿಜೀವನ
[ಬದಲಾಯಿಸಿ]ಆರಂಭದಲ್ಲಿ, ಜಂಗ್‌ರವರು ಒಬ್ಬ ಬೋಧಕ ಅಥವಾ ಮಂತ್ರಿಯಾಗುವ ಆಕಾಂಕ್ಷೆಗಳನ್ನು ಹೊಂದಿದ್ದರು. ಅವರ ಮನೆಯಲ್ಲಿ ಬಲವಾದ ನೈತಿಕ ಪ್ರಜ್ಞೆ ಇತ್ತು ಹಾಗೂ ಅವರ ಕುಟುಂಬದಲ್ಲಿ ಅನೇಕರು ಪಾದ್ರಿಗಳಾಗಿದ್ದರು. ಜಂಗ್‌ರವರು ಪುರಾತತ್ವಶಾಸ್ತ್ರವನ್ನು ಅಧ್ಯಯನ ಮಾಡಲು ಬಯಸಿದ್ದರು.[೨೪] ಆದರೆ, ಅವರ ಕುಟುಂಬವು ಬಾಸೆಲ್ ವಿಶ್ವವಿದ್ಯಾಲಯಕ್ಕಿಂತ ಹೆಚ್ಚಿನದನ್ನು ಕಳುಹಿಸಲು ಸಾಧ್ಯವಾಗಲಿಲ್ಲ. ತಮ್ಮ ಹದಿಹರೆಯದಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ ನಂತರ, ಜಂಗ್‌ರವರು ಧಾರ್ಮಿಕ ಸಾಂಪ್ರದಾಯಿಕತೆಯ ಮಾರ್ಗಕ್ಕೆ ವಿರುದ್ಧವಾಗಿ ನಿರ್ಧರಿಸಿದರು ಮತ್ತು ಮನೋವೈದ್ಯಶಾಸ್ತ್ರ ಮತ್ತು ವೈದ್ಯಕೀಯವನ್ನು ಮುಂದುವರಿಸಲು ನಿರ್ಧರಿಸಿದರು.[೨೫] ಅವನ ಆಸಕ್ತಿಯು ಜೈವಿಕ ಮತ್ತು ಆಧ್ಯಾತ್ಮಿಕತೆಯನ್ನು ಸಂಯೋಜಿಸಿತು. ೧೮೯೫ ರಲ್ಲಿ, ಜಂಗ್‌ರವರು ಬಾಸೆಲ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ಪ್ರಾರಂಭಿಸಿದರು. ಕೇವಲ ಒಂದು ವರ್ಷದ ನಂತರ, ಅವರ ತಂದೆ ಪಾಲ್‌ರವರು ನಿಧನರಾದರು ಮತ್ತು ಕುಟುಂಬವನ್ನು ನಿರ್ಗತಿಕರ ಬಳಿ ಬಿಟ್ಟುಹೋದರು. ಜಂಗ್ ಅವರ ಅಧ್ಯಯನಕ್ಕೆ ಕೊಡುಗೆ ನೀಡಿದ ಸಂಬಂಧಿಕರು ಅವರಿಗೆ ಸಹಾಯ ಮಾಡಿದರು.[೨೬]
ಮದುವೆ
[ಬದಲಾಯಿಸಿ]
೧೯೦೩ ರಲ್ಲಿ, ಜಂಗ್‌ರವರು ಎಮ್ಮಾ ರೌಚೆನ್ಬಾಕ್ (೧೮೮೨-೧೯೫೫) ಅವರನ್ನು ವಿವಾಹವಾದರು. ಅವರು ಜಂಗ್‌ರವರಿಗಿಂತ ಏಳು ವರ್ಷ ಕಿರಿಯರಾಗಿದ್ದು, ಪೂರ್ವ ಸ್ವಿಟ್ಜರ್ಲೆಂಡ್‌ನ ಶ್ರೀಮಂತ ಕೈಗಾರಿಕೋದ್ಯಮಿಯಾದ ಜೋಹಾನ್ಸ್ ರೌಚೆನ್ಬಾಕ್-ಸ್ಚೆಂಕ್ ಅವರ ಹಿರಿಯ ಮಗಳಾಗಿದ್ದರು. ರೌಚೆನ್ಬಾಕ್‌ರವರು ಇತರ ಕಾಳಜಿಗಳ ಜೊತೆಗೆ, ಐಷಾರಾಮಿ ಸಮಯ-ತುಣುಕುಗಳ ತಯಾರಕರಾದ ಇಂಟರ್ನ್ಯಾಷನಲ್ ಕೈಗಡಿಯಾರ ಕಂಪನಿಯಾದ ಐಡಬ್ಲ್ಯೂಸಿ ಶಾಫ್ಹೌಸೆನ್‌ನ ಮಾಲೀಕರಾಗಿದ್ದರು. ರೌಚೆನ್ಬಾಕ್‌ರವರ ಅವರ ಮರಣದ ನಂತರ ೧೯೦೫ ರಲ್ಲಿ, ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು ಅವರ ಗಂಡಂದಿರು ವ್ಯವಹಾರದ ಮಾಲೀಕರಾದರು..[೨೭] ಜಂಗ್‌ರವರ ಸೋದರ ಮಾವನಾದ ಅರ್ನ್ಸ್ಟ್ ಹೊಂಬರ್ಗರ್‌ರವರ ವ್ಯವಹಾರದ ಪ್ರಮುಖ ಮಾಲೀಕರಾದರು. ಆದರೆ, ಜಂಗ್‌ರವರ ಕುಟುಂಬವು ದಶಕಗಳವರೆಗೆ ಅಭಿವೃದ್ಧಿ ಹೊಂದುತ್ತಿರುವ ವ್ಯವಹಾರದಲ್ಲಿ ಷೇರುದಾರರಾಗಿ ಉಳಿದರು. ಶಿಕ್ಷಣದಲ್ಲಿ ಸೀಮಿತವಾಗಿದ್ದ ಎಮ್ಮಾ ಜಂಗ್‌ರವರು, ತಮ್ಮ ಗಂಡನ ಸಂಶೋಧನೆಯಲ್ಲಿ ಗಣನೀಯವಾಗಿ ಸಾಮರ್ಥ್ಯ ಮತ್ತು ಆಸಕ್ತಿಯನ್ನು ವ್ಯಕ್ತಪಡಿಸಿದರು ಮತ್ತು ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.[೨೮][೨೯] ಅವರು ಅಂತಿಮವಾಗಿ ತಮ್ಮದೇ ಆದ ರೀತಿಯಲ್ಲಿ ಪ್ರಸಿದ್ಧ ಮನೋವಿಶ್ಲೇಷಕಿಯಾದರು. ಅವರ ದಾಂಪತ್ಯ ಜೀವನವು ಸಾಯುವವರೆಗೂ ಮುಂದುವರೆಯಿತು. ಅವರಿಗೆ ಐದು ಮಕ್ಕಳಿದ್ದರು:
- ಅಗಾಥೆ ನೀಹಸ್, ಡಿಸೆಂಬರ್ ೨೮, ೧೯೦೪ ರಂದು ಜನಿಸಿದರು.
- ಗ್ರೆಟ್ ಬೌಮನ್, ಫೆಬ್ರವರಿ ೮, ೧೯೦೬ ರಂದು ಜನಿಸಿದರು.
- ಫ್ರಾಂಜ್ ಜಂಗ್-ಮೆರ್ಕರ್, ನವೆಂಬರ್ ೨೮, ೧೯೦೮ ರಂದು ಜನಿಸಿದರು.
- ಮರಿಯಾನೆ ನೀಹಸ್, ಸೆಪ್ಟೆಂಬರ್ ೨೦, ೧೯೧೦ ರಂದು ಜನಿಸಿದರು.
- ಹೆಲೆನ್ ಹೋರ್ನಿ, ಮಾರ್ಚ್ ೧೮, ೧೯೧೪ ರಂದು ಜನಿಸಿದರು..
ಯಾವುದೇ ಮಕ್ಕಳು ತಮ್ಮ ತಂದೆಯ ವೃತ್ತಿಜೀವನವನ್ನು ಮುಂದುವರಿಸಲಿಲ್ಲ. ಪುತ್ರಿಯರಾದ ಅಗಾಥೆ ಮತ್ತು ಮರಿಯಾನೆ ಪ್ರಕಾಶನ ಕಾರ್ಯದಲ್ಲಿ ಸಹಾಯ ಮಾಡಿದರು.[೩೦]
ಭಾರತ
[ಬದಲಾಯಿಸಿ]ಡಿಸೆಂಬರ್ ೧೯೩೭ ರಲ್ಲಿ, ಜಂಗ್‌ರವರು ಫೌಲರ್ ಮೆಕ್ಕಾರ್ಮಿಕ್ ಅವರೊಂದಿಗೆ ಭಾರತದ ವ್ಯಾಪಕ ಪ್ರವಾಸಕ್ಕಾಗಿ ಜ್ಯೂರಿಚ್‌ನಿಂದ ಹೊರಟರು. ಭಾರತದಲ್ಲಿ, ಅವರು ಮೊದಲ ಬಾರಿಗೆ "ವಿದೇಶಿ ಸಂಸ್ಕೃತಿಯ ನೇರ ಪ್ರಭಾವಕ್ಕೆ ಒಳಗಾಗಿದ್ದಾರೆ" ಎಂದು ಭಾವಿಸಿದರು. ಆಫ್ರಿಕಾದಲ್ಲಿ, ಅವರ ಸಂಭಾಷಣೆಗಳು ಭಾಷೆಯ ಅಡೆತಡೆಯಿಂದ ಸೀಮಿತವಾಗಿದ್ದವು. ಆದರೆ, ಭಾರತದಲ್ಲಿ, ಅವರು ವ್ಯಾಪಕವಾಗಿ ಸಂಭಾಷಿಸಲು ಸಾಧ್ಯವಾಯಿತು. ರಮಣ ಮಹರ್ಷಿಗಳೊಂದಿಗಿನ ಸಭೆಯನ್ನು ತಪ್ಪಿಸಿದರೂ, ಸಾಂಕೇತಿಕತೆಯ ಪಾತ್ರ ಮತ್ತು ಪ್ರಜ್ಞಾಹೀನರ ಜೀವನದ ಬಗ್ಗೆ ಅವರ ತಿಳುವಳಿಕೆಯಲ್ಲಿ ಹಿಂದೂ ತತ್ವಶಾಸ್ತ್ರವು ಒಂದು ಪ್ರಮುಖ ಅಂಶವಾಯಿತು.[೩೧] ರಮಣರು ಆತ್ಮದಲ್ಲಿ ಲೀನರಾಗಿದ್ದರು ಎಂದು ಅವರು ಬಣ್ಣಿಸಿದರು. ಈ ಪ್ರವಾಸದ ಸಮಯದಲ್ಲಿ ಅವರು ವೇದಗಿರಿಶ್ವರರ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಈ ದೇವಾಲಯದ ಗೋಪುರದ ಮೇಲಿನ ಚಿಹ್ನೆಗಳು ಮತ್ತು ಶಿಲ್ಪಗಳ ಬಗ್ಗೆ ಸ್ಥಳೀಯ ತಜ್ಞರೊಂದಿಗೆ ಸಂಭಾಷಣೆ ನಡೆಸಿದರು. ನಂತರ, ಅವರು ಈ ಸಂಭಾಷಣೆಯ ಬಗ್ಗೆ ತಮ್ಮ ಪುಸ್ತಕ ಅಯೋನ್‌ನಲ್ಲಿ ಬರೆದಿದ್ದಾರೆ. ಈ ಪ್ರವಾಸದ ಸಮಯದಲ್ಲಿ, ಜಂಗ್‌ರವರು ತೀವ್ರ ಅನಾರೋಗ್ಯಕ್ಕೆ ಒಳಗಾದರು ಮತ್ತು ಕಲ್ಕತ್ತಾ ಆಸ್ಪತ್ರೆಯಲ್ಲಿ ಎರಡು ವಾರಗಳ ಬುದ್ಧಿಭ್ರಮಣೆಯನ್ನು ಸಹಿಸಿಕೊಂಡರು. ೧೯೩೮ ರ ನಂತರ, ಅವರ ಪ್ರಯಾಣಗಳು ಯುರೋಪಿಗೆ ಸೀಮಿತವಾಗಿದ್ದವು.[೩೨]
ನಂತರದ ಜೀವನ ಮತ್ತು ಮರಣ
[ಬದಲಾಯಿಸಿ]ಜಂಗ್‌ರವರು ೧೯೪೩ ರಲ್ಲಿ, ಬಾಸೆಲ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಮನೋವಿಜ್ಞಾನದ ಪೂರ್ಣ ಪ್ರಾಧ್ಯಾಪಕರಾದರು. ಆದರೆ, ಮುಂದಿನ ವರ್ಷ ಹೃದಯಾಘಾತದ ನಂತರ ಖಾಸಗಿ ಜೀವನವನ್ನು ನಡೆಸಲು ರಾಜೀನಾಮೆ ನೀಡಿದರು. ೧೯೪೫ ರಲ್ಲಿ, ಅವರು ಇಂಗ್ಲಿಷ್ ರೋಮನ್ ಕ್ಯಾಥೊಲಿಕ್ ಪಾದ್ರಿ ಫಾದರ್ ವಿಕ್ಟರ್ ವೈಟ್ ಅವರೊಂದಿಗೆ ಸಂಬಂಧ ಹೊಂದಲು ಪ್ರಾರಂಭಿಸಿದರು ಹಾಗೂ ಅವರು ಆಪ್ತ ಸ್ನೇಹಿತರಾದರು. ಬೊಲ್ಲಿಂಗನ್ ಎಸ್ಟೇಟ್‌ನಲ್ಲಿ ಜಂಗ್‌ರವರು ನಿಯಮಿತವಾಗಿ ಭೇಟಿ ಮಾಡುತ್ತಿದ್ದರು.[೩೩] ಜಂಗ್‌ರವರು ೧೯೫೨ ರಲ್ಲಿ, ಮತ್ತೆ ಅನಾರೋಗ್ಯಕ್ಕೆ ಒಳಗಾದರು. ಫ್ಲೈಯಿಂಗ್ ಸಾಸರ್ಸ್: ಎ ಮಾಡರ್ನ್ ಮಿಥ್ ಆಫ್ ಥಿಂಗ್ಸ್ ಸೀನ್ ಇನ್ ದಿ ಸ್ಕೈಸ್ (೧೯೫೯) ಸೇರಿದಂತೆ ಜಂಗ್‌ರವರು ತನ್ನ ಜೀವನದ ಕೊನೆಯವರೆಗೂ ಪುಸ್ತಕಗಳನ್ನು ಪ್ರಕಟಿಸುವುದನ್ನು ಮುಂದುವರೆಸಿದರು. ಇದು ಯುಎಫ್ಒಗಳ ವರದಿಯಾದ ಅವಲೋಕನಗಳ ಪ್ರಾಚೀನ ಅರ್ಥ ಮತ್ತು ಸಂಭಾವ್ಯ ಮಾನಸಿಕ ಮಹತ್ವವನ್ನು ವಿಶ್ಲೇಷಿಸಿತು.[೩೪] ೧೯೬೧ ರಲ್ಲಿ, ಅವರು ತಮ್ಮ ಕೊನೆಯ ಕೃತಿಯಾದ ಮ್ಯಾನ್ ಅಂಡ್ ಹಿಸ್ ಸಿಂಬಲ್ಸ್‌ಗೆ ಒಂದು ಕೊಡುಗೆಯಾಗಿ "ಅಪ್ರೋಚಿಂಗ್ ದಿ ಅನ್‌ಕೊನ್ಶಿಯಸ್" (೧೯೬೪ ರಲ್ಲಿ, ಮರಣೋತ್ತರವಾಗಿ ಪ್ರಕಟಿಸಲಾಯಿತು) ಎಂಬ ಶೀರ್ಷಿಕೆಯನ್ನು ಬರೆದರು. ಜಂಗ್‌ರವರು ರಕ್ತಪರಿಚಲನಾ ಕಾಯಿಲೆಗಳಿಂದ ಬಳಲುತ್ತಿದ್ದರು. ಅಲ್ಪಕಾಲದ ಅನಾರೋಗ್ಯದ ನಂತರ ೬ ಜೂನ್ ೧೯೬೧ ರಂದು ಕೊಸ್ನಾಚ್ಟ್‌ನಲ್ಲಿ ನಿಧನರಾದರು.[೩೫]
ಪ್ರಶಸ್ತಿಗಳು
[ಬದಲಾಯಿಸಿ]- ಕ್ಲಾರ್ಕ್ ವಿಶ್ವವಿದ್ಯಾಲಯ, ೧೯೦೯.
- ಫೋರ್ಧಾಮ್ ವಿಶ್ವವಿದ್ಯಾಲಯ, ೧೯೧೨.
- ಹಾರ್ವರ್ಡ್ ವಿಶ್ವವಿದ್ಯಾಲಯ, ೧೯೩೬.
- ಅಲಹಾಬಾದ್ ವಿಶ್ವವಿದ್ಯಾಲಯ, ೧೯೩೭.
- ಬನಾರಸ್ ವಿಶ್ವವಿದ್ಯಾಲಯ, ೧೯೩೭.
- ಕಲ್ಕತ್ತ ವಿಶ್ವವಿದ್ಯಾಲಯ, ೧೯೩೮.
- ಆಕ್ಸ್ಫರ್ಡ್ ವಿಶ್ವವಿದ್ಯಾಲಯ, ೧೯೩೮.
- ಜಿನೀವಾ ವಿಶ್ವವಿದ್ಯಾಲಯ, ೧೯೪೫.
- ಜ್ಯೂರಿಚ್ನಲ್ಲಿ ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ೧೯೫೫ ಅವರ ೮೦ ನೇ ಹುಟ್ಟುಹಬ್ಬದಂದು.
ಇದಲ್ಲದೆ:
- ೧೯೩೨ ರಲ್ಲಿ, ಜ್ಯೂರಿಚ್ ನಗರದಿಂದ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು.
- ೧೯೩೫ ರಲ್ಲಿ, ಜ್ಯೂರಿಚ್ನಲ್ಲಿರುವ ಸ್ವಿಸ್ ಫೆಡರಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಾಮಮಾತ್ರದ ಪ್ರಾಧ್ಯಾಪಕರಾದರು.
- ೧೯೩೯ ರಲ್ಲಿ, ರಾಯಲ್ ಸೊಸೈಟಿ ಆಫ್ ಮೆಡಿಸಿನ್ನ ಗೌರವ ಸದಸ್ಯರಾಗಿ ನೇಮಕಗೊಂಡರು.
- ೧೯೪೫ ರಲ್ಲಿ, ಎರಾನೋಸ್ನಲ್ಲಿ ಫೆಸ್ಟ್ಸ್ಕ್ರಿಫ್ಟ್ ನೀಡಲಾಯಿತು.
- ೧೯೪೬ ರಲ್ಲಿ, ಲಂಡನ್ನ ಸೊಸೈಟಿ ಆಫ್ ಅನಾಲಿಟಿಕಲ್ ಸೈಕಾಲಜಿಯ ಅಧ್ಯಕ್ಷರಾಗಿ ನೇಮಕಗೊಂಡರು.
- ೧೯೫೫ ರಲ್ಲಿ, ವಿದ್ಯಾರ್ಥಿಗಳು ಮತ್ತು ಸ್ನೇಹಿತರಿಂದ ಫೆಸ್ಟ್ಸ್ಕ್ರಿಫ್ಟ್ ನೀಡಲಾಯಿತು.
- ೧೯೬೦ ರಲ್ಲಿ, ಅವರ ೮೫ ನೇ ಹುಟ್ಟುಹಬ್ಬದಂದು ಕೊನ್ನಾಚ್ಟ್ನ ಗೌರವ ನಾಗರಿಕ ಎಂದು ಹೆಸರಿಸಲಾಯಿತು.
ಇದನ್ನೂ ನೋಡಿ
[ಬದಲಾಯಿಸಿ]ಮನೆಗಳು ಮತ್ತು ಸಂಸ್ಥೆಗಳು
[ಬದಲಾಯಿಸಿ]- ಸಿ.ಜಿ. ಜಂಗ್ ಹೌಸ್ ಮ್ಯೂಸಿಯಂ
- ಬೊಲ್ಲಿಂಗನ್ ಟವರ್
- ಸೈಕಾಲಜಿ ಕ್ಲಬ್ ಜುರಿಚ್
- ಸಿ.ಜಿ. ಜಂಗ್ ಇನ್ಸ್ಟಿಟ್ಯೂಟ್, ಜುರಿಚ್
- ಸೊಸೈಟಿ ಆಫ್ ಅನಾಲಿಟಿಕಲ್ ಸೈಕಾಲಜಿ
ಸಂಸ್ಥೆಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Jung, C. G. (1973-09-01). "Editorial Note (Vol. IV)". Collected Works of C.G. Jung: The First Complete English Edition of the Works of C.G. Jung (in ಇಂಗ್ಲಿಷ್). Routledge. p. lxxxix. ISBN 978-1-317-53016-9.
- ↑ Eisold, Kenneth (2002). "Jung, Jungians, and psychoanalysis". Psychoanalytic Psychology (in ಇಂಗ್ಲಿಷ್). 19 (3): 502–503. doi:10.1037/0736-9735.19.3.501. ISSN 1939-1331.
- ↑ Kingsley, Peter (2018). Catafalque. London: Catafalque Press. pp. 78–79. ISBN 9781999638412.
- ↑ Darowski, Emily; Darowski, Joseph (1 June 2016). "Carl Jung's Historic Place in Psychology and Continuing Influence in Narrative Studies and American Popular Culture". Swiss American Historical Society Review. 52 (2). ISSN 0883-4814.
- ↑ "Carl Jung - One of the Most Influential Psychiatrists of All Time". 26 July 2022.
- ↑ Corbett, Sara (2009-09-16). "The Holy Grail of the Unconscious". The New York Times (in ಅಮೆರಿಕನ್ ಇಂಗ್ಲಿಷ್). ISSN 0362-4331. Retrieved 2023-07-05.
- ↑ Yosef Hayim Yerushalmi (1991). Freud's Moses. Yale University Press. p. 42. ISBN 0-300-05756-3. Freud wrote, "[I]t was only by his appearance on the scene that psycho-analysis escaped the danger of becoming a Jewish national affair."
- ↑ Yosef Hayim Yerushalmi (1991). Freud's Moses. Yale University Press. p. 50. ISBN 0-300-05756-3.
- ↑ Alcoholics Anonymous (1984). "Pass it on" : the story of Bill Wilson and how the A.A. message reached the world. Internet Archive. New York : Alcoholics Anonymous World Services. ISBN 978-0-916856-12-0.
- ↑ "The Life of Carl Gustav Jung (1875–1961)", Carl Gustav Jung, London: SAGE Publications Ltd, pp. 1–38, 2001, doi:10.4135/9781446218921.n1, ISBN 978-0-7619-6238-0
- ↑ Schellinski, Kristina (2014). "Who am I?". Journal of Analytical Psychology. 59 (2): 189–210. doi:10.1111/1468-5922.12069. PMID 24673274.
- ↑ Wehr, Gerhard (1987). Jung: a Biography. Moshupa, Dorset: Shambhala. p. 9. ISBN 978-0-87773-455-0.
- ↑ Brome, Vincent (1978). Jung. New York: Atheneum. p. 28.
- ↑ Memories, Dreams, Reflections. p. 18.
- ↑ Dunne, Claire (2002). Carl Jung: Wounded Healer of the Soul: An Illustrated Biography. Continuum. p. 5.
- ↑ Memories, Dreams, Reflections, p. 8.
- ↑ Stepp, G. "Carl Jung: Forever Jung". Vision Journal. Retrieved 19 December 2011.
- ↑ Memories, Dreams, Reflections. pp. 33–34.
- ↑ Wehr records that Paul's chosen career path was to achieve a doctorate in philology. He was an Arabist, but the family money ran out for his studies. Relief came from a family legacy, however, a condition of the will was that it should only be offered to a family member who intended to study theology and become a pastor. Paul Jung, therefore, had his career determined by a will, not his will. See p.20.
- ↑ Malchiodi, Cathy A. (2006). The Art Therapy Sourcebook. McGraw-Hill Professional. p. 134. ISBN 978-0-07-146827-5.
- ↑ Memories, Dreams, Reflections. pp. 22–23.
- ↑ "Carl Jung | Biography, Theory, & Facts". Encyclopædia Britannica. Retrieved 19 July 2017.
- ↑ Memories, Dreams, Reflections. p. 30.
- ↑ "Carl Jung | Biography, Theory, & Facts". Encyclopædia Britannica. Retrieved 9 April 2019.
- ↑ "Carl Jung Biography". soultherapynow.com. Archived from the original on 20 January 2018. Retrieved 7 March 2009.
- ↑ Wehr, Gerhard (1987). Jung: A Biography. Boston/Shaftesbury, Dorset: Shambhala. p. 14. ISBN 978-0-87773-455-0.
- ↑ "C. G. JUNG: Experiences". IWC Schaffhausen. Retrieved 7 September 2015.
- ↑ Hayman, Ronald (2001). A Life of Jung (1st American ed.). New York: W.W. Norton & Co. pp. 84–5, 92, 98–9, 102–7, 121, 123, 111, 134–7, 138–9, 145, 147, 152, 176, 177, 184, 185, 186, 189, 194, 213–4. ISBN 978-0-393-01967-4.
- ↑ Carotenuto, A. A secret symmetry. Sabina Spielrien between Jung and Freud. Tran. Arno Pomerans, John Shepley, Krishna Winston. New York: Pantheon Books, 1982
- ↑ dream-dictionary.com (2024-02-21). "Carl Gustaw Jung - wife and children". Dream Dictionary (in ಅಮೆರಿಕನ್ ಇಂಗ್ಲಿಷ್). Retrieved 2024-03-24.
- ↑ Also published in his Collected Works as a footnote to paragraph 339 in chapter 7.Jung, Carl Gustav (1989). "VII-Gnostische Symbole des Selbst". Aion - Beiträge zur Symbolik des Selbst. C G Jung Gesammelte Werke. Vol. 9/2 (7 ed.). Olten und Freiburg im Breisgau: Walter Verlag. para. 339. ISBN 3-530-40798-4.
- ↑ Bair, Deirdre (2003). Jung: A Biography. Little, Brown. pp. 417–430. ISBN 978-0-316-07665-4.
- ↑ The Collected Works of C. G. Jung, p. 152, by Siegfried M. Clemens, Carl Gustav Jung, 1978.
- ↑ Bair, Deirdre (2003). Jung. Boston: Little, Brown. pp. 622–3. ISBN 978-0-316-07665-4.
- ↑ "Dr. Carl G. Jung is Dead at 85; Pioneer in Analytic Psychology". The New York Times.
ಮತ್ತಷ್ಟು ಓದಿ
[ಬದಲಾಯಿಸಿ]ಪರಿಚಯಾತ್ಮಕ ಪಠ್ಯಗಳು
- Carl Gustav Jung, Analytical Psychology: Its Theory and Practice (The Tavistock Lectures) (Ark Paperbacks), 1990, ISBN 978-0-7448-0056-2
- Fordham, Frieda (1966). An Introduction to Jung's Psychology. Harmondsworth: Penguin Books Ltd. ISBN 978-0-14-020273-1.
- The Basic Writings of C. G. Jung, edited by V. S. de Laszlo (The Modern Library, 1959), ISBN 978-0-679-60071-8
- Edward F Edinger, Ego and Archetype, (Shambhala Publications), ISBN 978-0-87773-576-2
- Robert Hopcke, A Guided Tour of the Collected Works of C. G. Jung, ISBN 978-1-57062-405-6
- Edward C. Whitmont, The Symbolic Quest: Basic Concepts of Analytical Psychology, Princeton University Press, Princeton, New Jersey, 1969, 1979, ISBN 978-0-691-02454-7
- O'Connor, Peter A. (1985). Understanding Jung, understanding yourself. New York, NY: Paulist Press. ISBN 978-0-8091-2799-3.
- Stein, Murray (1998). Jung's map of the soul: An introduction. Chicago: Open Court. ISBN 0-8126-9376-0. OCLC 38106161.
ಜುಂಗಿಯನ್ ಚಿಂತನೆಯ ವಿವಿಧ ಕ್ಷೇತ್ರಗಳಲ್ಲಿನ ಪಠ್ಯಗಳು
- Robert Aziz, C. G. Jung's Psychology of Religion and Synchronicity (1990), currently in its 10th printing, is a refereed publication of State University of New York Press. ISBN 978-0-7914-0166-8
- Robert Aziz, Synchronicity and the Transformation of the Ethical in Jungian Psychology in Carl B. Becker, ed., Asian and Jungian Views of Ethics. Westport, CT: Greenwood, 1999. ISBN 978-0-313-30452-1
- Robert Aziz, The Syndetic Paradigm: The Untrodden Path Beyond Freud and Jung (2007), a refereed publication of The State University of New York Press. ISBN 978-0-7914-6982-8
- Robert Aziz, Foreword in Lance Storm, ed., Synchronicity: Multiple Perspectives on Meaningful Coincidence. Pari, Italy: Pari Publishing, 2008. ISBN 978-88-95604-02-2
- Wallace Clift, Jung and Christianity: The Challenge of Reconciliation. New York: The Crossroad Publishing Company, 1982. ISBN 978-0-8245-0409-0
- Edward F. Edinger, The Mystery of The Coniunctio, ISBN 978-0-919123-67-0
- Wolfgang Giegerich, The Soul's Logical Life, ISBN 978-3-631-38225-7
- James A Hall M.D., Jungian Dream Interpretation, ISBN 978-0-919123-12-0
- James Hillman, "Healing Fiction", ISBN 978-0-88214-363-7
- Stanton Marlan, Jung's Alchemical Philosophy. Psyche and the Mercurial Play of Image and Idea, Routledge, 2022, ISBN 9781032105444
- Montiel, Luis, "El rizoma oculto de la psicología profunda. Gustav Meyrink y Carl Gustav Jung", Frenia, 2012, ISBN 978-84-695-3540-0
- Catherine M Nutting, Concrete Insight: Art, the Unconscious, and Transformative Spontaneity, UVic Thesis 2007 214
- Andrew Samuels, Critical Dictionary of Jungian Analysis, ISBN 978-0-415-05910-7
- Vladimir Simosko. Jung, Music, and Music Therapy: Prepared for the Occasion of the C.G. "Jung and the Humanities" Colloquium, 1987. Winnipeg, Man., The Author, 1987
- June Singer, Boundaries of the Soul, ISBN 978-0-385-47529-7. On psychotherapy
- Anthony Storr, Jung (1973) ISBN 978-0-00-633166-7
- — The Essential Jung (1983) ISBN 978-0-691-08615-6
- — The Essential Jung: Selected Writings (1999) ISBN 978-0-00-653065-7
- John R. White, (2023) Adaptation and Psychotherapy. Langs and Analytical Psychology. Lanham: Rowman & Littlefield. discusses Jung's two concepts of "adaptation" and relates these ideas to the work of psychoanalyst Robert Langs. ISBN 978-1-5381-1794-1
- Marion Woodman, The Pregnant Virgin: A Process of Psychological Transformation, ISBN 978-1-5381-1794-1
ಶೈಕ್ಷಣಿಕ ಪಠ್ಯಗಳು
- Andrew Samuels, The Political Psyche (Routledge), ISBN 978-0-415-08102-3
- Lucy Huskinson, Nietzsche and Jung: The Whole Self in the Union of Opposites (Routledge), ISBN 978-1-58391-833-3
- Davydov, Andrey. From Carl Gustav Jung's Archetypes of the Collective Unconscious to Individual Archetypal Pattern. HPA Press, 2014. ISBN 978-1-311-82008-2
- Remo, F. Roth: Return of the World Soul, Wolfgang Pauli, C.G. Jung and the Challenge of Psychophysical Reality [unus mundus], Part 1: The Battle of the Giants. Pari Publishing, 2011, ISBN 978-88-95604-12-1
- Remo, F. Roth: Return of the World Soul, Wolfgang Pauli, C.G. Jung and the Challenge of Psychophysical Reality [unus mundus], Part 2: A Psychophysical Theory. Pari Publishing, 2012, ISBN 978-88-95604-16-9
ಜರ್ನಲ್ ಗಳು
- The Journal of Analytical Psychology (JAP at John Wiley & Sons)
- International Journal for Jungian Studies (IJJS at Brill)
ಜಂಗ್-ಫ್ರಾಯ್ಡ್ ಸಂಬಂಧ
- Kerr, John. A Most Dangerous Method: The Story of Jung, Freud, and Sabina Spielrein. Knopf, 1993. ISBN 978-0-679-40412-5.
- Balakirsky Katz, Maya. Freud, Jung and Jonah: Religion and the Birth of the Psychoanalytic Periodical. Cambridge University Press, 2023.
Others recollections of Jung
- van der Post, Laurens, Jung and the Story of Our Time, New York: Pantheon Books, 1975. ISBN 978-0-394-49207-0
- Hannah, Barbara, Jung, his life and work: a biographical memoir, New York: G. P. Putnam's Sons, 1976. SBN: 399-50383-8
- David Bailey's biography of his Great Aunt, Ruth Bailey, 'The English Woman and C.G.Jung' drawing extensively on her diaries and correspondence, explores the deep and long-lasting friendship between Ruth, Jung, and Jung's wife and family.
ನಿರ್ಣಾಯಕ ವಿದ್ಯಾರ್ಥಿವೇತನ
- Maidenbaum, Aryeh (ed), Jung and the Shadow of Anti-Semitism, Berwick ME: Nicolas-Hays Inc, 2002.
- Dohe, Carrie B. Jung's Wandering Archetype: Race and Religion in Analytical Psychology. London: Routledge, 2016. ISBN 978-1-138-88840-1
- Grossman, Stanley (1979). "C.G. Jung and National Socialism". Jung in Contexts: A Reader. Psychology Press. ISBN 978-0-415-20558-0.
- Hanegraaff, Wouter J. (1997). New Age Religion and Western Culture: Esotericism in the Mirror of Secular Thought. Leiden/New York/Koln: E.J. Brill. ISBN 978-1-4384-0565-0.
- Bishop, Paul (2014). Carl Jung (Critical Lives). Reaktion Books.
- Richard Noll, The Aryan Christ: The Secret Life of Carl Jung (Random House, 1997)
- Shamdasani, Sonu (1998). Cult fictions: C.G. Jung and the founding of analytical psychology. London/New York: Routledge. ISBN 978-0-415-18614-8. OCLC 560455823.
- Shamdasani, Sonu (2003). Jung and the making of modern psychology: the dream of a science. Cambridge, UK New York: Cambridge University Press. ISBN 978-0-521-53909-8. OCLC 57509166.
- Shamdasani, Sonu (2005). Jung stripped bare: By his biographers, even. London New York: Karnac. ISBN 978-1-85575-317-4. OCLC 759160070.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Works by or about ಕಾರ್ಲ್ ಜಂಗ್ at Internet Archive
- Works by ಕಾರ್ಲ್ ಜಂಗ್ at LibriVox (public domain audiobooks)
- ಟೆಂಪ್ಲೇಟು:Helveticat
- C.G. Jung Institute, Zurich
- Museum House of C.G. Jung Küsnacht, Zurich (Switzerland)
- Carl Jung Resources
- The Jung Page
- Philemon Foundation
- Carl Jung: Foreword to the I Ching Archived 2006-12-10 ವೇಬ್ಯಾಕ್ ಮೆಷಿನ್ ನಲ್ಲಿ.
- The Association Method Full-text article from 1916. Originally Published in the Collected Papers on Analytical Psychology.
- The Seven Sermons to the Dead, 1916 Carl Gustav Jung
- The Theory of Psychoanalysis Full-text article from 1915. Originally published in The Journal of Nervous and Mental Disease
- Jung's "Essay on Wotan"
- Bollingen Foundation Collection From the Rare Book and Special Collections Division, Library of Congress
- The Journal of Analytical Psychology
- International Journal for Jungian Studies