ಕಾರ್ನಾಕ್ (ಈಜಿಪ್ಟ್)
| ಕಾರ್ನಾಕ್ | |
|---|---|
Pillars of the Great Hypostyle Hall from the Precinct of Amun-Re | |
| ಸ್ಥಳ | El-Karnak, Luxor Governorate, Egypt |
| ಪ್ರಾಂಥ | Upper Egypt |
| ಪ್ರಕಾರ | Sanctuary |
| ಇದರ ಭಾಗವಾಗಿದೆ | Thebes |
| ಇತಿಹಾಸ | |
| ವಾಸ್ತು ಶಿಲ್ಪಿ | Senusret I–Nectanebo I |
| ಮೂಲವಸ್ತು | Stone |
| ಸ್ಥಾಪಿತ | c. 1970 BC |
| ಕಾಲಘಟ್ಟ | Middle Kingdom to Ptolemaic Kingdom |
| ಸ್ಥಳ ಟಿಪ್ಪಣಿಗಳು | |
| ಸ್ಥಿತಿ | Ruin |
| ಸಾರ್ವಜನಿಕ ಪ್ರವೇಶ | Yes |
| Official name: Ancient Thebes with its Necropolis | |
| ಪ್ರಕಾರ | Cultural |
| ಮಾನದಂಡ | I, III, VI |
| ನಾಮಾಂಕಿತ | 1979 (3rd session) |
| ಉಲ್ಲೇಖ ಸಂ. | 87 |
| Region | Arab states |
ಕಾರ್ನಾಕ್ ಪ್ರಾಚೀನ ಈಜಿಪ್ಟ್ ಸಾಮ್ರಾಜ್ಯ ಕಾಲದ ದೇವಾಲಯಗಳಿರುವ ಗ್ರಾಮ. ದಕ್ಷಿಣ ಈಜಿಪ್ಟಿನಲ್ಲಿ ನೈಲ್ ನದಿಯ ದಂಡೆಯಲ್ಲಿರುವ ಈ ಗ್ರಾಮವು ಈಜಿಪ್ಟಿನ ರಾಜಧಾನಿಯಾಗಿದ್ದ ಥೀಬ್ಸ್ ಪಟ್ಟಣದ ಭಾಗವಾಗಿತ್ತು. ಇದರ ಪೂರ್ವದ ಹೆಸರು ಇಪೆಕ್-ಇಸುಟ್-ಅಂದರೆ ವಿಶೇಷ ಸ್ಥಳ ಎಂದರ್ಥ. ಇಲ್ಲಿಯ ಎಲ್ಲ ಕಟಡಗಳೂ ಸು. 7,800 ಅಡಿಗಳಿಗೂ ಹೆಚ್ಚು ಸುತ್ತಳತೆಯ ಪ್ರಾಕಾರದೊಳಗಿವೆ. ಪ್ರಾಂಗಣದೊಳಗೆ ಉತ್ತರ ಭಾಗದಲ್ಲಿ ಪ್ರಾಚೀನ ಈಜಿಪ್ಟಿನ ಯುದ್ಧದೇವತೆ ಖೊನ್ಸುನ ದೇವಾಲಯವೂ ದಕ್ಷಿಣದಲ್ಲಿ ಮುಟ್ ದೇವತೆಯ ಮಂದಿರವೂ ಇದ್ದುವು. ಮಧ್ಯದಲ್ಲಿರುವ ಈಜಿಪ್ಟಿನ ರಾಷ್ಟ್ರದೇವತೆ ಅಮುನ್-ರೇ ದೇವಾಲಯ ಇಲ್ಲಿಯ ಮುಖ ಕಟ್ಟಡ. ಬೃಹದಾಕಾರದ ಮಹಾದ್ವಾರಗಳು, ಹಜಾರಗಳು, ಸ್ತಂಭಗಳು, ಭಿತ್ತಿಗಳು ಮತ್ತು ಶಿಲ್ಪಗಳನ್ನೊಳಗೊಂಡ ಈ ಗುಡಿ ಪ್ರಪಂಚದ ಅತ್ಯಂತ ದೊಡ್ಡ ದೇವಾಲಯಗಳಲ್ಲೊಂದೆಂದು ಪರಿಗಣಿತವಾಗಿದೆ. ಈ ದೇವಾಲಯ ಒಂದು ಕಾಲದಲ್ಲಿ ಕಟ್ಟಿ ಮುಗಿಸಿದ್ದಲ್ಲ. ಈಜಿಪ್ಟಿನ 11ನೆಯ ರಾಜವಂಶದ ಕಾಲದಲ್ಲಿ (ಕ್ರಿ.ಪೂ. ಸು. 2000) ಅಮುನ್ ದೇವತೆಯ ಒಂದು ಚಿಕ್ಕ ದೇವಾಲಯ ಮಾತ್ರ ಇಲ್ಲಿತ್ತು. ಅನಂತರ ಕ್ರಿಸ್ತಶಕದ ಆರಂಭದವರೆಗೂ ಬೇರೆ ಬೇರೆ ಕಾಲಗಳಲ್ಲಿ ಅನೇಕ ಸೇರ್ಪಡೆಗಳಾಗಿ, ಅದು ಈಗಿನ ಬೃಹದಾಕಾರವನ್ನು ತಾಳಿದೆ. ಈ ಸೇರ್ಪಡೆಗಳಲ್ಲಿ ಬಹಳ ಮುಖ್ಯವಾದುದು ಕ್ರಿ.ಪೂ. 14ನೆಯ ಶತಮಾನದಲ್ಲಿ ಕಟ್ಟಿದ ಮಧ್ಯದ ಹಜಾರ. ಇದು ಪ್ರಾಚೀನ ವಾಸ್ತುಕಲೆಯ ಆಶ್ಚರ್ಯಗಳಲ್ಲಿ ಒಂದು ಎಂದು ಹೆಸರುಗಳಿಸಿದೆ. ಸು. 5800 ಚ.ಅ. ವಿಸ್ತಾರವಿರುವ ಈ ಹeಜಾರದಲ್ಲಿ ಸಾಲಿನಲ್ಲಿ ಏಳರಂತೆ 140 ದೈತ್ಯಾಕಾರದ ಸ್ತಂಭಗಳಿವೆ. ಮಧ್ಯದ ಎರಡು ಸಾಲಿನ ಸ್ತಂಭಗಳು ಒಂದೊಂದೂ 78' ಎತ್ತರವಿವೆ. ಇವು ಇತರ ಕಂಬಗಳಿಗಿಂತ ಸ್ವಲ್ಪ ಹೆಚ್ಚು ಎತ್ತರವಿದ್ದು, ಮಧ್ಯದ ಮಾಡನ್ನು ಮೇಲೆ ಎತ್ತಿ ಹಜಾರದ ಒಳಗೆ ಸುಲಭವಾಗಿ ಗಾಳಿಬೆಳಕು ಬರುವಂತೆ ಅನುವು ಮಾಡಿವೆ. ಒಳಗಿನ ಕಂಗಳ ಮೇಲೆಲ್ಲಾ ಸುಂದರವಾದ ಶಿಲ್ಪಗಳಿವೆ. ಈ ಹಜಾರದ ಹೊರಗೋಡೆಯ ಮೇಲೆ ಸೇಟಿ ದೊರೆಯ ಪ್ಯಾಲಸ್ಟೀನ್ ವಿಜಯ ಮುಂತಾದ ಅನೇಕ ರೀತಿಯ ಘಟನೆಗಳನ್ನು ಕೆತ್ತಲಾಗಿದೆ. ಪ್ರಾಯಶಃ ಫಾರೋ ತಹಾರ್ಕೊ (ಕಿ. ಪೂ. 7ನೆಯ ಶತಮಾನ) ಕಟ್ಟಿದ ಮೊದಲನೆಯ ಮಹಾದ್ವಾರ 370' ಎತ್ತರದ ಬೃಹತ್ ಕಟ್ಟಡ. ಕಿ.ಪೂ. 14ನೆಯ ಶತಮಾನದಲ್ಲಿ 3ನೆಯ ಥಟ್ಮೋಸ್ ಕಟ್ಟಿಸಿದ ಒಂದು ಸಣ್ಣಗುಡಿಯಲ್ಲಿ ಆ ದೊರೆಯ ದಂಡಯಾತ್ರೆಗಳನ್ನೆಲ್ಲ ಕೆತ್ತಲಾಗಿದೆ. ಅದರ ಒಂದು ಗೋಡೆಯ ಮೇಲೆ, ಅವನು ಏಷ್ಯದಿಂದ ತಂದ ಚಿತ್ರ ಸಸ್ಯಗಳು ಮತ್ತು ಪ್ರಾಣಿಗಳನ್ನೆಲ್ಲ ಸಾಲುಸಾಲಾಗಿ ಉಬ್ಬು ಶಿಲ್ಪದಲ್ಲಿ ಕೆತ್ತಿಸಿದ್ದಾನೆ. ಇದು ಪ್ರಪಂಚದ ಪ್ರಾಮುಖ್ಯ ಪಾರಂಪರಿಕ ತಾಣಗಳಲ್ಲೊಂದು.87
ಛಾಯಾಂಕಣ
[ಬದಲಾಯಿಸಿ]- Luxor dromos, an avenue of human-headed sphinxes which once connected the temples of Karnak and Luxor.
- The Sacred Lake of the Precinct of Amun-Re
- View of the first pylon of the temple of Amun-Re at Karnak
- Ram-headed sphinx statues at Karnak
- Hypostyle hall of the Precinct of Amun-Re, as it appeared in 1838 in The Holy Land, Syria, Idumea, Arabia, Egypt, and Nubia
- Osirid statues, likely of Thutmose I, at the Amun-Re temple in Karnak (in the Wadjet Hall). The head of the statue on the right of the image was removed in modern times and is currently located at the British Museum
- Obelisk of Thutmosis I in Karnak
- Colossal statue of Ramses II
- Open papyrus umbel capitals of the Hypostyle Hall
- Closed papyrus umbel capitals of the Hypostyle Hall
- Karnak Temple pillar up-close
- Statue of Khepri in Karnak
- Karnak, Egypt; Gate and Pylon., n.d., Brooklyn Museum Archives
- Karnak, Egypt; Great Statues., n.d., Goodyear. Brooklyn Museum Archives
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- CFEETK – Centre Franco-Égyptien d'Étude des Temples de Karnak (en)
- Temple of Amun, numerous photos & schemes (comments in russian)
- Karnak images
- www.karnak3d.net :: "Web-book" The 3D reconstruction of the Great Temple of Amun in Karnak. Marc[Usurped!]
- Digital Karnak UCLA
- Karnak Temple picture gallery at Remains.se

ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |