ವಿಷಯಕ್ಕೆ ಹೋಗು

ಕಾರ್ಟಿಸೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:Chembox ATCCode

ಕಾರ್ಟಿಸೋನ್
ಹೆಸರುಗಳು
ಐಯುಪಿಎಸಿ ಹೆಸರು
17α,21-Dihydroxypregn-4-ene-3,11,20-trione
Systematic IUPAC name
(1R,3aS,3bS,9aR,9bS,11aS)-1-Hydroxy-1-(hydroxyacetyl)-9a,11a-dimethyl-2,3,3a,3b,4,5,8,9,9a,9b,11,11a-dodecahydro-7H-cyclopenta[a]phenanthrene-7,10(1H)-dione
Other names
17α,21-Dihydroxy-11-ketoprogesterone; 17α-Hydroxy-11-dehydrocorticosterone
Identifiers
3D model (JSmol)
ChEBI
ChemSpider
ECHA InfoCard 100.000.149
KEGG
MeSH Cortisone
UNII
  • InChI=1S/C21H28O5/c1-19-7-5-13(23)9-12(19)3-4-14-15-6-8-21(26,17(25)11-22)20(15,2)10-16(24)18(14)19/h9,14-15,18,22,26H,3-8,10-11H2,1-2H3/t14-,15-,18+,19-,20-,21-/m0/s1 checkY
    Key: MFYSYFVPBJMHGN-ZPOLXVRWSA-N checkY
  • InChI=1/C21H28O5/c1-19-7-5-13(23)9-12(19)3-4-14-15-6-8-21(26,17(25)11-22)20(15,2)10-16(24)18(14)19/h9,14-15,18,22,26H,3-8,10-11H2,1-2H3/t14-,15-,18+,19-,20-,21-/m0/s1
    Key: MFYSYFVPBJMHGN-ZPOLXVRWBW
  • O=C(CO)[C@@]3(O)CC[C@H]2[C@@H]4CC\C1=C\C(=O)CC[C@]1(C)[C@H]4C(=O)C[C@@]23C
ಗುಣಗಳು
ಆಣ್ವಿಕ ಸೂತ್ರ C21H28O5
ಮೋಲಾರ್ ದ್ರವ್ಯರಾಶಿ ೩೬೦.೪೪ g mol−1
ಕರಗು ಬಿಂದು

220 to 224 °C, ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". K, ಪದವಿನ್ಯಾಸ ದೋಷ: ಗುರುತಿಸಲಾಗದ ಪದ"to". °F

Pharmacology
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ಕಾರ್ಟಿಸೋನ್ ಒಂದು ಚೋದನಿಕ. ಮೂತ್ರಜನಕಾಂಗಗಳ ಮೇಲೆ ಅಂಟಿಕೊಂಡಿರುವ ನಿರ್ನಾಳಗ್ರಂಥಿ (ಅಡ್ರಿನಲ್ ಗ್ಲಾಂಡ್) ಇದನ್ನು ಉತ್ಪಾದಿಸುತ್ತದೆ. ಇದರ ರಾಸಾಯನಿಕ ರಚನೆ ಹೀಗಿದೆ:

ದೇಹದ ಮೇಲಿನ ಪರಿಣಾಮಗಳು

[ಬದಲಾಯಿಸಿ]

ದೇಹದ ಮೇಲೆ ಕಾರ್ಟಿಸೋನ್ ಬಹುಬಗೆಯ ಪರಿಣಾಮಗಳನ್ನುಂಟುಮಾಡುತ್ತದೆ. ರಕ್ತದಲ್ಲಿ ಸಕ್ಕರೆ (ಗ್ಲೂಕೋಸ್) ಮಟ್ಟವನ್ನು ಏರಿಸುವಿಕೆ ಇದರ ಅಸಂಖ್ಯಾತ ಪರಿಣಾಮಗಳಲ್ಲೊಂದು ಸಸಾರಜನಕಗಳನ್ನು ಸಕ್ಕರೆಯನ್ನಾಗಿ ಪರಿವರ್ತನೆಗೊಳಿಸುವ ಕ್ರಿಯೆಗಳನ್ನು ಪ್ರಚೋದಿಸುವುದರ ಮೂಲಕ ಕಾರ್ಟಿಸೋನ್ ಭಾಗಶಃ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಏರಿಸುತ್ತದೆ. ಚಿಕಿತ್ಸಾದೃಷ್ಟಿಯಿಂದ ಕಾರ್ಟಿಸೋನನ್ನು ಸಂಧಿವಾತ ರೋಗವನ್ನು ಹತೋಟಿಗೆ ತರಲು ಬಹಳವಾಗಿ ಉಪಯೋಗಿಸುತ್ತಾರೆ. ಕಣ್ಣಿನ ಉರಿಯೂತ ಗಾಯಗಳ ಚಿಕಿತ್ಸೆಯಲ್ಲಿ ಇದರ ಉಪಯೋಗ ವಿಶೇಷ ಮಹತ್ತ್ವ ಪಡೆದಿದೆ. ಹಲವು ವೇಳೆ ಕುರುಡುತನಕ್ಕೆ ಕಾರಣವಾಗುವ ಗಾಯದ ಕಲೆಗಳಿಲ್ಲದೆಯೇ ಕಣ್ಣಿನ ಉರಿಯೂತವನ್ನು ಗುಣಪಡಿಸುತ್ತದೆ. ಇದನ್ನು ತಿಕ್ಷ್ಣ ಲ್ಯೂಕೀಮಿಯಾವನ್ನು ಗುಣಪಡಿಸಲು ಉಪಯೋಗಿಸುತ್ತಾರೆ (ಹೆಚ್ಚಾಗಿ ಮಕ್ಕಳಲ್ಲಿ ಲ್ಯೂಕೀಮಿಯಾವನು ತಡೆಟ್ಟಲು). ಇದು ಪರಿಣಾಮಕಾರಿಯಾಗಿ ಅಸಾಮಾನ್ಯ ಜೀವಕಣಗಳ ಸಂಖ್ಯಾಭಿವೃದ್ಧಿಯನ್ನು ತಡೆಗಟ್ಟುವುದರ ಮೂಲಕ ರೋಗವನ್ನು ಸಂಪೂರ್ಣ ಗುಣಪಡಿಸದಿದ್ದರೂ ತಗ್ಗಿಸಲು ಸಹಕಾರಿಯಾಗುತ್ತದೆ. ಸ್ವಾಭಾವಿಕವಾಗಿ ದೊರೆಯುವ ಕಾರ್ಟಿಸೋನನ್ನು ಈಗ ಅಷ್ಟಾಗಿ ಔಷಧವಸ್ತುವಾಗಿ ಬಳಸುವುದಿಲ್ಲ. ಬದಲು ಸಿಸಾಲ್ ಎಂ ಪದಾರ್ಥದ ತಯಾರಿಯಲ್ಲಿ ಉಪಪದಾರ್ಥವಾಗಿರುವ ವಸ್ತುವಿನಿಂದ ಕೃತಕವಾಗಿ ಸಂಯೋಜಿಸಲ್ಪಡುವ ಚೋದನಿಕವನ್ನು ಬಳಸುತ್ತಾರೆ. ಶರ್ಕರಪಿಷ್ಠ, ಮೇದಸ್ ಮತ್ತು ಸಸಾರಜನಕಗಳ ಚಯಾಪಚಯ ಕ್ರಿಯೆಯ (ಮೆಟಬಾಲಿಸವi) ಮೇಲೆ ಕಾರ್ಟಿಸೋನ್ ಪರಿಣಾಮವನ್ನುಂಟುಮಾಡುತ್ತದೆ. ಪಿತ್ತಜನಕಾಂಗದಲ್ಲಿ ಗ್ಲೈಕೊಜೆನ್ ಶೇಖರಣೆಯನ್ನು ಹೆಚ್ಚಿಸುತ್ತದೆ ಮತ್ತು ಸಸಾರಜನಕಗಳ ವಿಭಜನೆಯನ್ನು ಹೆಚ್ಚಿಸುತ್ತದೆ. ದೇಹ ಬಳಸಲು ಉಪಯುಕ್ತವಾದ ಸಸಾರಜನಕದ ಸರಳ ರೂಪಗಳು ಈ ವಿಭಜನೆಯಿಂದ ಉಂಟಾಗುತ್ತವೆ. ಅನೇಕ ತೆರನಾದ ಕಾಯಿಲೆಗಳಿಗೆ ಸಂಬಂಧಿಸಿದ ಉರಿಯೂತರಿಸುವ ಕಾರ್ಯವಿಧಾನವನ್ನು ಕಾರ್ಟಿಸೋನ್ ತಡೆಟ್ಟುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: