ಕಾರೈಕ್ಕಾಲ್
ಕಾರೈಕ್ಕಾಲ್
Karikal | |
|---|---|
Municipality | |
Location of Karaikal in Tamil Nadu, India | |
| Coordinates: 10°55′58″N 79°49′55″E / 10.932701°N 79.831853°E | |
| Country | India |
| Union territory | Puducherry |
| District | Karaikal |
| Region | Tamil Nadu |
| Government | |
| • Type | Municipality |
| • Body | Karaikal Municipality (Conseil Municipal de Karaikal) |
| Elevation | ೪ m (೧೩ ft) |
| Population | |
• Total | ೨,೦೦,೨೨೨ |
| Languages | |
| • Official | Tamil |
| • Additional | English, French |
| Time zone | UTC+5:30 (IST) |
| PIN | 609601-609609 |
| Telephone code | +91-04368- |
| Vehicle registration | PY 02 |
| Website | www |
ಕಾರೈಕ್ಕಾಲ್¨ಕೇಂದ್ರ ಒಕ್ಕೊಟ ಪ್ರದೇಶವಾದ ಪುದುಚೇರಿಯ ಆಡಳಿತಕ್ಕೆ ಸೇರಿರುವ ಭಾಗಗಳಲ್ಲೊಂದು; ಮತ್ತು ಅದೇ ಹೆಸರಿನ ಪಟ್ಟಣ.
ಭೌಗೋಳಿಕ
[ಬದಲಾಯಿಸಿ]ಕಾರೈಕಾಲ್ ಪ್ರದೇಶ ಉ.ಅ. 100 50' ನಿಂದ 110 ರವರೆಗೆ ಮತ್ತು ಪೂ.ರೇ. 700 43' 790 52' ವರೆಗೆ ಹಬ್ಬಿದೆ. ಪುದುಚೆರಿಯಿಂದ ದಕ್ಷಿಣಕ್ಕೆ 150 ಕಿ.ಮಿ.ದೂರದಲ್ಲಿ, ಬಂಗಾಳ ಕೊಲ್ಲಿಯ ದಂಡೆಯ ಮೇಲಿರುವ ಕಾರೈಕ್ಕಾಲ್ ಪ್ರದೇಶದ ಉತ್ತರ, ದಕ್ಷಿಣ, ಪಶ್ಚಿಮಗಳಲ್ಲಿ ತಮಿಳುನಾಡಿನ ತಂಜಾವೂರು ಜಿಲ್ಲೆಯೂ ಪೂರ್ವದಲ್ಲಿ ಬಂಗಾಳ ಕೊಲ್ಲಿಯೂ ಇವೆ. ತಂಜಾವೂರು ಜಿಲ್ಲೆಯ ಭಾಗದಂತಿರುವ ಈ ಪ್ರದೇಶದ ವಿಸ್ತೀಣ 150 ಕಿ.ಮೀ., ಜನಸಂಖ್ಯೆ ೨,೦೦,೨೨೨. ಕಾರೈಕ್ಕಾಲ್, ತಿರುನಲ್ಲೂರು, ನೆರಾವಿ, ನೆಡುಂಗಾಡು, ಕೊಟ್ಟುಚೆರಿ ಮತ್ತು ತಿರುಮಲೈರಾಯನ್ ಪಟ್ಟನಂ- ಎಂಬ ಆರು ಸಣ್ಣ ವಿಭಾಗಗಳಾಗಿವೆ (ಕಮ್ಯೂನ್). ಕಾರೈಕ್ಕಾಲ್ ಪಟ್ಟಣವೇ ಅಲ್ಲದೆ 118 ಗ್ರಾಮಗಳುಂಟು.
ಕೃಷಿ
[ಬದಲಾಯಿಸಿ]ಕಾವೇರಿ ಮುಖಜಭೂಮಿಯಲ್ಲಿ ಅದರ ಕವಲೊಂದರ ಭಾಗದಲ್ಲಿರುವ ಕಾರೈಕ್ಕಾಲ್ ಪ್ರದೇಶದ ಕೃಷಿಕಾರ್ಯ ಕಾವೇರಿಯ ಕಾಲುವೆ ವ್ಯವಸ್ಥೆಗೆ ಒಳಪಟ್ಟಿದೆ. ಬತ್ತ ಮುಖ್ಯ ಬೆಳೆ. ತರಿ ಜಮೀನಿನ ವಿಸ್ತೀರ್ಣ ಸುಮಾರು 10,000 ಹೆಕ್ಟೇರುಗಳು. ಇಲ್ಲಿಯ ಜನಸಾಂದ್ರತೆ ಬಲು ಹೆಚ್ಚು.
ವಾಣಿಜ್ಯ
[ಬದಲಾಯಿಸಿ]ಕಾರೈಕ್ಕಾಲ್ ಪಟ್ಟಣ ಪೂರ್ವ ಕರಾವಳಿಯ ಪ್ರಮುಖ ಹಡಗುದಾಣಗಳಲ್ಲೊಂದು. ಇಲ್ಲಿ 142' ಎತ್ತರದ ದೀಪಸ್ತಂಭವುಂಟು. 8 ಮೈಲಿಗಳ ಫಾಸಲೆಯ ವರೆಗೂ ಇದು ಕಾಣಿಸುತ್ತದೆ. ದಕ್ಷಿಣ ರೈಲ್ವೆಯ ರೈಲುದಾರಿ ಕಾರೈಕಾಲ್ ಮೂಲಕ ಹಾದು ಹೋಗುತ್ತದೆ.
ಇತಿಹಾಸ
[ಬದಲಾಯಿಸಿ]ಕಾರೈಕ್ಕಾಲ್ 1739ರಲ್ಲಿ ಫ್ರೆಂಚರ ವಶಕ್ಕೆ ಬಂತು. ಪದಚ್ಯುತಿ ಹೊಂದ್ದ ತಂಜಾವೂರಿನ ದೊರೆ ಸಯ್ಯಾಜಿ ಅವನ ರಾಜ್ಯವನ್ನು ದೊರಕಿಸಿಕೊಡಲು ಸಹಾಯಮಾಡಿದ್ದ ಫ್ರೆಂಚರ ಉಪಕಾರಕ್ಕೆ ಪ್ರತಿಯಾಗಿ ಕಾರೈಕ್ಕಾಲನ್ನು ಅವರಿಗೆ ನೀಡುವುದಾಗಿ ಆತ 1738ರಲ್ಲಿ ನೀಡಿದ್ದ ವಾಗ್ದಾನದಂತೆ ನಡೆದುಕೊಳ್ಳದಿದ್ದುದರಿಂದ ಫ್ರೆಂಚರು ಚಂದಾಸಾಹೆಬನ ನೆರವಿನಿಂದ ಇದನ್ನು ಗೆದ್ದುಕೊಂಡರು. 1760 ರಲ್ಲಿ ಇಂಗ್ಲೀಷರು ಇದನ್ನು ಫ್ರೆಂಚರಿಂದ ಕಿತ್ತುಕೊಡಿದ್ದು, 1765ರಲ್ಲಿ ಅವರಿಗೇ ಹಿಂತಿರುಗಿಸಿದರು. ಅನಂತರವೂ ಮೂರು ಸಾರಿ ಇದು ಇಂಗ್ಲೀಷರ ವಶಕ್ಕೆ ಬಂದಿತ್ತು. ಯುದ್ಧ ಪ್ರಚೋದಕ ಚಟುವಟಿಗಳಲ್ಲಿ ಕಾರೈಕ್ಕಾಲ್ಲನ್ನು ಬಳಸಿಕೊಳ್ಳಬಾರದೆಂಬ ಷರತ್ತಿನ ಮೇಲೆ ಕೊನೆಗೆ ಫ್ರೆಂಚರಿಗೇ ಇದನ್ನು ಕೊಡಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ-1954ರಲ್ಲಿ -ಫ್ರೆಂಚರು ಇದನ್ನು ಭಾರತಕ್ಕೆ ವಸ್ತುತಃ ವರ್ಗಾವಣೆ ಮಾಡಿದರು. ಇದರ ನ್ಯಾಯತಃ ಹಕ್ಕು ಭಾರತಕ್ಕೆ ವರ್ಗವಾದ್ದು 1956ರಲ್ಲಿ.
ಹವಾಮಾನ
[ಬದಲಾಯಿಸಿ]Köppen-Geiger climate classification system classifies its climate as tropical wet and dry (As).
| Climate data for Karaikal (1991–2020, extremes 1973–2020) | |||||||||||||
|---|---|---|---|---|---|---|---|---|---|---|---|---|---|
| ತಿಂಗಳು | ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಷ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ | ವರ್ಷ |
| Record high °C (°F) | 32.2 (90.0) |
34.2 (93.6) |
37.2 (99.0) |
40.7 (105.3) |
42.0 (107.6) |
42.4 (108.3) |
39.5 (103.1) |
39.4 (102.9) |
38.8 (101.8) |
36.9 (98.4) |
35.9 (96.6) |
32.7 (90.9) |
42.4 (108.3) |
| Mean daily maximum °C (°F) | 29.0 (84.2) |
30.4 (86.7) |
32.2 (90.0) |
34.2 (93.6) |
36.3 (97.3) |
36.6 (97.9) |
36.0 (96.8) |
35.1 (95.2) |
34.2 (93.6) |
32.1 (89.8) |
29.8 (85.6) |
28.8 (83.8) |
32.9 (91.2) |
| Daily mean °C (°F) | 25.9 (78.6) |
26.8 (80.2) |
28.6 (83.5) |
30.6 (87.1) |
30.9 (87.6) |
31.4 (88.5) |
31.4 (88.5) |
30.2 (86.4) |
29.8 (85.6) |
28.8 (83.8) |
27.0 (80.6) |
26.2 (79.2) |
29.0 (84.1) |
| Mean daily minimum °C (°F) | 22.3 (72.1) |
23.0 (73.4) |
24.4 (75.9) |
26.5 (79.7) |
27.2 (81.0) |
26.8 (80.2) |
26.5 (79.7) |
25.8 (78.4) |
25.5 (77.9) |
25.0 (77.0) |
23.9 (75.0) |
22.8 (73.0) |
25.0 (77.0) |
| Record low °C (°F) | 18.0 (64.4) |
17.8 (64.0) |
18.4 (65.1) |
20.8 (69.4) |
21.0 (69.8) |
20.8 (69.4) |
21.1 (70.0) |
21.0 (69.8) |
20.6 (69.1) |
20.6 (69.1) |
19.5 (67.1) |
17.8 (64.0) |
17.8 (64.0) |
| Average rainfall mm (inches) | 37.4 (1.47) |
24.6 (0.97) |
19.6 (0.77) |
23.6 (0.93) |
59.3 (2.33) |
57.8 (2.28) |
37.0 (1.46) |
84.5 (3.33) |
109.5 (4.31) |
260.7 (10.26) |
493.4 (19.43) |
260.6 (10.26) |
೧,೪೬೭.೯ (57.79) |
| Average rainy days | 2.1 | 1.0 | 0.6 | 1.2 | 2.4 | 2.4 | 2.2 | 4.9 | 4.9 | 9.8 | 13.7 | 8.4 | 53.6 |
| Average relative humidity (%) (at 17:30 IST) | 75 | 72 | 71 | 73 | 71 | 65 | 65 | 70 | 75 | 78 | 82 | 79 | 73 |
| Source 1: India Meteorological Department[೨][೩] | |||||||||||||
| Source 2: Tokyo Climate Center (mean temperatures 1991–2020)[೪] | |||||||||||||
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]
- ↑ "Karaikal at a glance". Archived from the original on 5 March 2018. Retrieved 30 December 2016.
- ↑ "Station: Karaikal Climatological Table 1981–2010" (PDF). Climatological Normals 1981–2010. India Meteorological Department. January 2015. pp. 391–392. Archived from the original (PDF) on 5 February 2020. Retrieved 19 March 2020.
- ↑ "Extremes of Temperature & Rainfall for Indian Stations (Up to 2012)" (PDF). India Meteorological Department. December 2016. p. M196. Archived from the original (PDF) on 5 February 2020. Retrieved 19 March 2020.
- ↑ "Normals Data: Karaikal – India Latitude: 10.92°N Longitude: 79.83°E Height: 7 (m)". Japan Meteorological Agency. Retrieved 1 December 2022.