ವಿಷಯಕ್ಕೆ ಹೋಗು

ಕಾರೆಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Canthium coromandelicum
Canthium coromandelicum in Kerala, India
Scientific classification e
Unrecognized taxon (fix): Canthium
ಪ್ರಜಾತಿ:
C. coromandelicum
Binomial name
Canthium coromandelicum

ಕಾರೆಗಿಡರೂಬಿಯೇಸೀ ಕುಟುಂಬಕ್ಕೆ ಸೇರಿದ ಕ್ಯಾಂತಿಯಮ್ ಕೊರಮಂಡಲಿಕಮ್ ಎಂಬ ಶಾಸ್ತ್ರೀಯ ಹೆಸರಿನ ಗಿಡ. ಮುಖ್ಯವಾಗಿ ಇದು ಉಷ್ಣಪ್ರದೇಶಗಳ ಬಂಜರುಭೂಮಿಯಲ್ಲಿ ಕಳೆಯಂತೆ ಬೆಳೆಯುತ್ತದೆ.

ಪ್ರಭೇದಗಳು

[ಬದಲಾಯಿಸಿ]

ಭಾರತದಲ್ಲಿ ಈ ಪ್ರಭೇದವಲ್ಲದೆ ಇದರಂತೆಯೇ ಇರುವ ಕ್ಯಾ. ಡೈಕಾಕ್ಕಮ್ ಮತ್ತು ಕ್ಯಾ. ಅಂಬೇಲೇಟಮ್ ಎಂಬ ಪ್ರಭೇದಗಳು ಬೆಳೆಯುತ್ತವೆ. ಇವು ಚಿಕ್ಕ ಕುರುಚಲು ಗಿಡಗಳಾಗಿಯೊ ಸಣ್ಣ ಪೊದರುಗಳಾಗಿಯೊ ಇಲ್ಲವೆ ಸಣ್ಣ ಮರಗಳಾಗಿಯೊ ಬೆಳೆಯುತ್ತವೆ.

ಲಕ್ಷಣಗಳು

[ಬದಲಾಯಿಸಿ]

ಎಲ್ಲ ಪ್ರಭೇದಗಳಲ್ಲೂ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಗೊಂಡಿವೆ. ಇವುಗಳ ಕಂಕುಳುಗಳಲ್ಲಿ ಚೂಪಾದ ಮತ್ತು ಗಟ್ಟಿಯಾದ ಮುಳ್ಳುಗಳಿವೆ. ಇವು ಮಾರ್ಪಾಡಾದ ಕಂಕುಳು ಮೊಗ್ಗುಗಳು. ಹೂಗಳು ಸಣ್ಣವು, ಆಕರ್ಷಕವಾಗಿಲ್ಲ. ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹಣ್ಣು ಅಷ್ಟಿಫಲ ಮಾದರಿಯದು. ಮಾಗಿದಾಗ ಕಂದುಬಣ್ಣಕ್ಕೆ ತಿರುಗುತ್ತದೆ. ಒಳಗೆ ಎರಡು ಬೀಜಗಳಿವೆ. ಹಣ್ಣು ತಿನ್ನಲು ಯೋಗ್ಯವಾಗಿದೆ.

ಉಪಯೋಗಗಳು

[ಬದಲಾಯಿಸಿ]

ಕ್ಯಾಡೈ ಕಾಕ್ಕಮ್‍ನ ತೊಗಟೆಯನ್ನು ಜ್ವರಕ್ಕೆ ಉಪಯೋಗಿಸುತ್ತಾರೆ. ಮೂಳೆಗಳಿಗೆ, ಪೆಟ್ಟು ಬಿದ್ದಾಗ ಇದನ್ನು ಉಪಯೋಗಿಸುವುದುಂಟು. ಇದರ ಕಾಂಡವನ್ನು ಕೈ ಬೆತ್ತಗಳಿಗೂ ವ್ಯವಸಾಯದ ಸಲಕರಣೆಗಳಿಗೂ ಬಾಚಣಿಗೆ ಗೊಂಬೆ ಮುಂತಾದುವುಗಳ ತಯಾರಿಕೆಗೂ ಬಳಸುತ್ತಾರೆ. ಕ್ಯಾ.ಕೊರಮಂಡಲಿಕಮ್ ಬೇರು ಮತ್ತು ಎಲೆಗಳ ಕಷಾಯವನ್ನು ಕೆಲವು ಶೀತ ಭೇದಿಗಳಿಗೆ ಉಪಶಮನ ಔಷಧಿಯಾಗಿಯೂ ಬೇರನ್ನು ಜಂತುಹುಳು ನಾಶಕವಾಗಿಯೂ ಉಪಯೋಗಿಸುತ್ತಾರೆ. ಕಾಂಡವನ್ನು ಬೀಸುವ ಕಲ್ಲುಗಳ ಹಿಡಿಗಳಾಗಿಯೂ ಅಚ್ಚುಗಳಾಗಿಯೂ ಬಳಸುವರು. ಅಲ್ಲದೆ ಎಲೆ, ಎಳೆಯಕಾಂಡ ಮತ್ತು ಹಣ್ಣುಗಳು ಆಡುಗಳಿಗೆ ಉತ್ತಮವಾದ ಮೇವು.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. "Canthium coromandelicum (Burm.f.) Alston". Plants of the World Online. The Trustees of the Royal Botanic Gardens, Kew. n.d. Retrieved November 6, 2022.
  2. "Canthium coromandelicum (Burm.f.) Alston". Catalogue of Life. Species 2000. n.d. Retrieved November 6, 2022.
"https://kn.wikipedia.org/w/index.php?title=ಕಾರೆಗಿಡ&oldid=1342070" ಇಂದ ಪಡೆಯಲ್ಪಟ್ಟಿದೆ