ವಿಷಯಕ್ಕೆ ಹೋಗು

ಕಾರನ್ ಫ್ಲವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Centaurea cyanus
Flower of Centaurea cyanus
cornflower bud
Scientific classification e
Unrecognized taxon (fix): Centaurea
ಪ್ರಜಾತಿ:
C. cyanus
Binomial name
Centaurea cyanus
Centaurea cyanus (introduced species) near Peshastin, Chelan County, Washington

ಕಾರನ್ ಫ್ಲವರ್ ಸೆಂಟಾರಿಯ ಸಯೇನಸ್ ಎಂಬ ಶಾಸ್ತ್ರೀಯನಾಮವುಳ್ಳ ಏಕವಾರ್ಷಿಕ ಸಸ್ಯ.

ಸಸ್ಯ ಕುಟುಂಬ

[ಬದಲಾಯಿಸಿ]

ಕಂಪಾಸಿಟೀ ಕುಟುಂಬಕ್ಕೆ ಸೇರಿದೆ; ಬ್ಲೂ ಬಾಟಲ್ ಎಂದೂ ಕರೆಯುವುದುಂಟು. ಅಂದವಾದ ಹೂಬಿಡುವ ಸಸ್ಯವಾದ್ದರಿಂದ ಉದ್ಯಾನ ಪ್ರಾಮುಖ್ಯ ಪಡೆದಿದೆ.

ಸಸ್ಯ ಲಕ್ಷಣ

[ಬದಲಾಯಿಸಿ]

ಇದು ಸುಮಾರು 30-60 ಸೆಂಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ನೀಳ, ಹೂಗಳು ನೀಲಿ, ನಸುಗೆಂಪು, ಗುಲಾಬಿ, ಲೈಲಕ್, ಊದಾ. ಬಿಳಿ ಇತ್ಯಾದಿಯಾಗಿ ವರ್ಣರಂಜಿತವಾಗಿರುವುವಲ್ಲದೆ ಚೆಲುವಾದ ಚಂಡುಮಂಜರಿ ಹೂ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲುಗಳಿಗೆ ಬಹಳ ಉದ್ದವಾದ ತೊಟ್ಟಿರುವುದರಿಂದ ಕತ್ತರಿಸಿ ಹೂದಾನಿಗಳಲ್ಲಿಟ್ಟು ಅಲಂಕಾರಕ್ಕಾಗಿ ಬಳಸಬಹುದು.

ಸಸ್ಯಾಭಿವ್ರದ್ಧಿ

[ಬದಲಾಯಿಸಿ]

ಈ ಗಿಡವನ್ನು ಬೀಜಗಳ ಮೂಲಕ ವೃದ್ಧಿಸುತ್ತಾರೆ. ನೇರವಾಗಿ ಮಡಿಗಳಲ್ಲೆ ಬಿತ್ತುವುದು ವಾಡಿಕೆ. ಮೊಳಕೆಯೊಡೆದು ಸಸಿಗಳು ಬಂದಮೇಲೆ 3"-4" ಗಳಿಗೊಂದರಂತೆ ಗಿಡಗಳನ್ನು ಬಿಟ್ಟು ಉಳಿದವನ್ನು ತೆಗೆದುಹಾಕಬೇಕು. ಇದರಿಂದ ಗಿಡಗಳ ಬೆಳವಣಿಗೆಗೂ ಹೂಗಳು ಎದ್ದು ಕಾಣುವುದಕ್ಕೂ ಅನುಕೂಲ. ನೀರು ಹೆಚ್ಚಾಗಿ ಬೇಕಾಗಿಲ್ಲ. ಬಿತ್ತನೆ ಮಾಡಿದ ಅನಂತರ 30,40,50 ಮತ್ತು 60ನೆಯ ದಿನಗಳಲ್ಲಿ ಹಿಂಡಿ ಗೊಬ್ಬರ ಹಾಕಬೇಕು 3ಳಿ ತಿಂಗಳಲ್ಲಿ ಹೂ ಒಡೆಯುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: