ಕಾನ್ಸ್ಟಾನ್ಷಸ್ ಕ್ಲೋರಸ್
ಕಾನ್ಸ್ಟಾನ್ಷಸ್ ಕ್ಲೋರಸ್ 1ನೆಯ ಕಾನ್ಸ್ಟಾನ್ಷಸ್ (ಕ್ಲೋರಸ್) : ಮರಣ 306. ರೋಮಿನ ಚಕ್ರವರ್ತಿ.
ಜನನ
[ಬದಲಾಯಿಸಿ]ಡಾರ್ಡಾನ್ ಪ್ರದೇಶಕ್ಕೆ ಸೇರಿದ ಬಡಕುಟಂಬವೊಂದರಲ್ಲಿ ಜನಿಸಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಅನಂತರ ಡಾಲ್ಮೇಷಿಯದ ಪ್ರಾಂತ್ಯಾಧಿಕಾರಿಯಾಗಿದ್ದ.
ರಾಜ್ಯಾಡಳಿತ
[ಬದಲಾಯಿಸಿ]ಮ್ಯಾಕ್ಸಿಮೀಯನ್ ಚಕ್ರವರ್ತಿಯಿಂದ 293ರ ಮಾರ್ಚಿ 1 ರಂದು ಸೀಸóರ್ ಪದವಿ ಪಡೆದ ಮೇಲೆ ಅವನ ಪುತ್ರಿ ಥಿಯೋಡೋರಳನ್ನು ವಿವಾಹವಾದ. ಆ ವೇಳೆಗೆ ಇವನಿಗೊಬ್ಬ ಮಗನಿದ್ದ. ಅವನೇ ಮುಂದೆ ಚಕ್ರವರ್ತಿಯಾದ 1ನೆಯ ಕಾನ್ಸ್ಟಂಟೈನ್ ಮಹಾಶಯ. ಕನ್ಸ್ಟಾಷಸನಿಗೆ ಥಿಯೋಡೋರಳಲ್ಲಿ ಮೂವರು ಪುತ್ರರೂ ಮೂವರು ಪುತ್ರಿಯರೂ ಜನಿಸಿದರು. ಗಾಲ್ ಪ್ರಾಂತ್ಯಾಧಿಕಾರಿಯಾಗಿದ್ದಾಗ ಬ್ರಿಟನ್ ಪ್ರಾಂತ್ಯವನ್ನು ಕಬಳಿಸಿದ್ದ ಆರೇಲಿಯಸ್ ಕರಾಸಿಯಸನನ್ನು 293ರಲ್ಲೂ ಅವನ ಮಗ ಅಲೆಕ್ಟಸನನ್ನು 296 ರಲ್ಲೂ ಗೆದ್ದು ಬ್ರಿಟನ್ ಪ್ರಾಂತ್ಯವನ್ನು ಪುನರ್ವಶಪಡಿಸಿಕೊಂಡ. 298ರಲ್ಲಿ ಅಲಮನ್ನಿಯನ್ನು ಗೆದ್ದು ಬ್ರಿಟನ್ ಮತ್ತು ಗಾಲ್ ಪ್ರಾಂತ್ಯಗಳ ನಗರಗಳನ್ನು ಸ್ವಾಧೀನಮಾಡಿಕೊಂಡ. ಈತ ಕ್ರೈಸ್ತರ ಚರ್ಚುಗಳನ್ನು ನಾಶಪಡಿಸಿದರೂ ಆ ಮತಸ್ಥರನ್ನು ಹಿಂಸೆ ಮಾಡಲಿಲ್ಲ. 305ರ ಮೇ 1 ರಂದು ಡಯೊಕ್ಲಿಷಿಯನ್ ಮತ್ತು ಮ್ಯಾಕ್ಸಿಮೀಯನ್-ಇವರಿಬ್ಬರೂ ಅಧಿಕಾರ ತ್ಯಾಗಮಾಡಿದಾಗ ಪ್ರಥಮ ಆಗಸ್ಟಸ್ ಪದವಿ ಪಡೆದ.
ನಿಧನ
[ಬದಲಾಯಿಸಿ]ಕಾನ್ಸ್ಟಾನ್ಷಸ್ 306ರ ಬೇಸಗೆಯಲ್ಲಿ ಎಬೊರಕಮ್ನಲ್ಲಿ (ಈಗಿನ ಯಾರ್ಕ್) ಮೃತನಾದ.
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |