ಕಾನ್ಸ್ಟಂಟ್ಯಾನ್
ಗೋಚರ
ಕಾನ್‍ಸ್ಟಂಟ್ಯಾನ್ನಿಕಲ್ ಮತ್ತು ತಾಮ್ರಗಳ ಒಂದು ಮಿಶ್ರಲೋಹ. ಮಿಶ್ರಣದ ಪ್ರಮಾಣ ನಿಕಲ್ 40%, ತಾಮ್ರ 60%. ಸಾಮಾನ್ಯವಾಗಿ ನಿಕ್ಕಲ್ ಮಿಶ್ರಲೋಹಗಳ ವಿದ್ಯುದ್ವಾಹಕತೆ ಅಲ್ಪ. ಆದ್ದರಿಂದ ಅವನ್ನು ವಿದ್ಯುನ್ನಿರೋಧಕ ಲೋಹತಂತಿಗಳ ತಯಾರಿಕೆಯಲ್ಲಿ ಬಳಸುವರು. ಕಾನ್‍ಸ್ಟಾಂಟನ್ ಮಿಶ್ರಲೋಹದ ವಿದ್ಯುದ್ವಾಹಕತೆ ಉಷ್ಣತೆಯ ಮಟ್ಟದ ಮೇಲೆ ಅಷ್ಟಾಗಿ ಅವಲಂಬಿತವಾಗಿಲ್ಲ. ತಾಮ್ರದೊಂದಿಗೆ ಉಷ್ಣ ವಿದ್ಯುಚ್ಛಕ್ತಿ ಹೆಚ್ಚು. ಹೀಗಾಗಿ ಕಾನ್‍ಸ್ಟಂಟ್ಯಾನ್-ತಾಮ್ರದ ಜೋಡಿಯನ್ನು ಉಷ್ಣಮಾಪನದಲ್ಲಿ ಬಳಸುವರು. ಇದರ ಪ್ರಮುಖ ಲಕ್ಷಣಗಳೆಂದರೆ ಅತ್ಯುಚ್ಚ ರೋಧತೆ, ಅತ್ಯಲ್ಪ ಉಷ್ಣತಾಗುಣಾಂಕ, ವಿದ್ಯುದ್ರೋಧ ಪೆಟ್ಟಿಗೆಗಳಲ್ಲಿ ರೋಧ ತಂತುವಾಗಿ ಬಳಕೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- National Pollutant Inventory - Copper and compounds fact sheet (archived 2008)

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |