ವಿಷಯಕ್ಕೆ ಹೋಗು

ಕಾನ್ಸ್ಟಂಟೈನ್ (ಪ್ಲೇವಿಯಸ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾನ್ಸ್ಟಂಟೈನ್ (ಪ್ಲೇವಿಯಸ್)
A gold coin showing the profile of a man wearing a wreath
Coin of Constantine III
Roman emperor in the West
ಆಳ್ವಿಕೆ 407–411
ಪೂರ್ವಾಧಿಕಾರಿ Honorius
ಉತ್ತರಾಧಿಕಾರಿ Honorius
Alongside
ಸಂತಾನ
  • Constans II
  • Julian
ಶಾಸನ ಅವಧಿಯ ಹೆಸರು
Flavius Claudius Constantinus
ಮರಣ 411 (before 18 September)
ಧರ್ಮ Nicene Christianity

ಕಾನ್ಸ್ಟಂಟೈನ್ (ಪ್ಲೇವಿಯಸ್) (ಫ್ಲೇವಿಯಸ್ ಕ್ಲಾಡಿಯಸ್ ಕಾನ್ ಸ್ಟಾಂಟಿನಸ್) : ಮರಣ 411. ರೋಮನ್ ಚಕ್ರವರ್ತಿಯೆಂಬ ಪದವಿ ಕಸಿದುಕೊಂಡಿದ್ದವ (407) ಪಶ್ಚಿಮ ರೋಮನ್ ಚಕ್ರವರ್ತಿಯಾಗಿದ್ದ ಫ್ಲೇವಿಯಸ್ ಹೊನೋರಿಯಸನಿಂದಲೂ ಹಾಗೆಂದು ಮನ್ನಣೆ ಪಡೆದಿದ್ದ (409). ಬ್ರಿಟನಿನಲ್ಲಿ ಸಾಧಾರಣ ಸಿಮಾಯಿಯಾಗಿದ್ದು 497ರಲ್ಲಿ ದಳಪತಿಯಾದ. 406ರಲ್ಲಿ ಗಾಲ್ ಪ್ರಾಂತ್ಯದ ಮೇಲೆ ಅನಾಗರಿಕ ಜನರ ದಾಳಿ ನಡೆಸುತ್ತಿದ್ದುದರಿಂದ ಅವರ ವಿರುದ್ದ ಬ್ರಿಟನಿನಲ್ಲಿದ್ದ ರೋಮನ್ ಸೈನ್ಯವನ್ನು ತೆಗೆದುಕೊಂಡು ಯೂರೋಪಿಗೆ ಹೋದ. ಕೇಂದ್ರ ಸರ್ಕಾರ ಸಾರಸನ ನೇತೃತ್ವದಲ್ಲಿ ಕಾನ್ ಸ್ಟಂಟೈನನ ವಿರುದ್ದ ಸೈನ್ಯ ಕಳಿಸಿತು. ಮೊದಲಿಗೆ ಇವನು ಸೋತರೂ 408 ರಲ್ಲಿ ಸಾರಸ್ ಹಿಮ್ಮೆಟ್ಟಬೇಕಾಯಿತು. ಆರಿಲೇಟ್ ಪ್ರಾಂತ್ಯದಲ್ಲಿ ಕಾನಸ್ಟಂಟೈನ್ ಭದ್ರವಾಗಿ ನೆಲೆನಿಂತ. ಸ್ಪೇನಿನ ರೋಮನ್ ಸೈನ್ಯವೂ ಇವನ ಕಡೆ ಸೇರಿತು. ತನ್ನ ಮಗ ಕಾನಸ್ಟನ್ಸನನ್ನು ಸೀಸರನೆಂದು ನೇಮಿಸಿದ. ಹೊನೋರಿಯಸನ ಬಂಧುಗಳು ಎಬ್ಬಿಸಿದ್ದ ದಂಗೆಯನ್ನಡಗಿಸಲು ಗೆರೊಂಷಿಯಸನ ನೇತೃತ್ವದಲ್ಲಿ ಸೈನ್ಯವೊಂದನ್ನು ಕಳಿಸಿದ. 408 ರಲ್ಲಿ ಇಟಲಿಯ ಮೇಲೂ ಯುದ್ಧ ಹೂಡಿದಾಗ ಚಕ್ರವರ್ತಿ ಹೊನೋರಿಯಸ್ ಅವನಿಗೆ ಜಂಟಿ ಚಕ್ರವರ್ತಿಯೆಂದು ಮನ್ನಣೆ ನೀಡಬೇಕಾಯಿತು (409). ಕಾನ್‍ಸ್ಟನ್À್ಸ ಸ್ಪೇನಿನ ಯಾತ್ರೆಯಲ್ಲಿ ಯಶಸ್ವಿಯಾಗಿ ಗಾಲಿಗೆ ಹಿಂದಿರುಗಿದ. ಆದರೆ ಸ್ಪೇನಿನಲ್ಲಿದ್ದ ಗೆರೊಂಷಿಯಸನೂ ಸೈನ್ಯವೂ ಒಂದಾಗಿ ಸಂಚು ಹೂಡಿ, ಮ್ಯಾಕ್ಸಿಮಸ್ ಎಂಬವನನ್ನು ಪ್ರತಿಸ್ಪರ್ಧಿ ಚಕ್ರವರ್ತಿಯಾಗಿ ಎತ್ತಿ ಕಟ್ಟಿದರು. ಇದರಿಂದ ಕಾನ್‍ಸ್ಟಂಟೈನನ ಪ್ರಾಬಲ್ಯ ಕುಗ್ಗಿತು. ಕೊನೆಗೆ ಸು.411ರಲ್ಲಿ ಕಾನ್‍ಸ್ಪನ್ಸ್ ಸೋತು ಸತ್ತ. ಕಾನ್‍ಸ್ಟಂಟೈನ್ ಇಟಲಿಗೆ ದಂಡೆತ್ತಿಹೋದ. ಆದರೆ ಅರಿಲೀಟಿಗೆ ಹಿಮ್ಮೆಟ್ಟಬೇಕಾಯಿತು. ಅಲ್ಲಿ ಹೊನೋರಿಯಸನ ದಳಪತಿಗಳು ಅವನ ಸೈನ್ಯಕ್ಕೆ ಮುತ್ತಿಗೆ ಹಾಕಿದರು. ಕಾನ್‍ಸ್ಟಂಟೈನ್ ಶರಣಾಗತನಾದ. ಶತ್ರುಗಳು 411ರಲ್ಲಿ ಅವನ ಪ್ರಾಣ ತೆಗೆದರು.

ಉಲ್ಲೇಖಗಳು

[ಬದಲಾಯಿಸಿ]