ಕಾನ್ಸ್ಟಂಟೈನ್
| Constantine I | |
|---|---|
| Constantine I in 1921 | |
| King of the Hellenes | |
| First reign | 18 March 1913 – ಟೆಂಪ್ಲೇಟು:Avoid wrap |
| Inauguration | 21 March 1913 |
| ಪೂರ್ವಾಧಿಕಾರಿ | George I |
| ಉತ್ತರಾಧಿಕಾರಿ | Alexander |
| Prime ministers | |
| Second reign | 19 December 1920 – ಟೆಂಪ್ಲೇಟು:Avoid wrap |
| ಪೂರ್ವಾಧಿಕಾರಿ | Alexander |
| ಉತ್ತರಾಧಿಕಾರಿ | George II |
| Prime ministers | |
| ಗಂಡ/ಹೆಂಡತಿ | |
| ಸಂತಾನ | |
| ಮನೆತನ | Glücksburg |
| ತಂದೆ | George I of Greece |
| ತಾಯಿ | Olga Constantinovna of Russia |
| ಜನನ | ೨ ಆಗಸ್ಟ್ ೧೮೬೮ Athens, Kingdom of Greece |
| ಮರಣ | 11 January 1923 (aged 54) Palermo, Kingdom of Italy |
| Burial | 14 January 1923 Naples, Italy
ಟೆಂಪ್ಲೇಟು:Br entries |
| ಹಸ್ತಾಕ್ಷರ | |
ಕಾನ್‍ಸ್ಟಂಟೈನ್ (1868-1923) : ಗ್ರೀಕರ ದೊರೆ. 1ನೆಯ ಜಾರ್ಜನ ಮಗ. ಅಥೆನ್ಸಿನಲ್ಲಿ ಹುಟಿ, ಜರ್ಮನಿಯ ಲೀಪ್‍ಜಿಗ್ ವಿಶ್ವವಿದ್ಯಾಲಯ ಮತ್ತು ಪ್ರಷ್ಯದ ಮಿಲಿಟರಿ ಶಾಲೆಯಲ್ಲಿ ಶಿಕ್ಷಣ ಪಡೆದು, 1889ರಲ್ಲಿ ಜರ್ಮನ್ ಚಕ್ರವರ್ತಿ 2ನೆಯ ವಿಲಿಯಮನ ಸೋದರಿ ಸೋಫಿಯಳನ್ನು ವಿವಾಹವಾದ. 1897ರಲ್ಲಿ ಥೆಸ್ಸಲಿಯಲ್ಲಿ ಗ್ರೀಕ್ ಸೈನ್ಯ ಸೋತದ್ದರಿಂದ ಇವನ ಕೀರ್ತಿಗೆ ಕುಂದುಂಟಾಯಿತು. 1909ರಲ್ಲಿ ಗ್ರೀಸ್ ಮತ್ತು ಕ್ರೀಟ್ ದ್ವೀಪದ ಮಧ್ಯೆ ಒಕ್ಕೂಟದ ಸಂಧಾನ ವಿಫಲವಾದುದಕ್ಕೆ ಸೈನಿಕ ಕೂಟದವರು ಇವನೂ ಇವನ ಸೋದರರೂ ಕಾರಣವೆಂದು ದೂಷಿಸಿ ಅವರನ್ನು ಸೈನ್ಯದಿಂದ ಹೊರಹಾಕಿದರು. ಪುನಃ ಅವರನ್ನು ಸೈನ್ಯಕ್ಕೆ ಸೇರಿಸಿಕೊಂಡಾಗ ಈತನು ಪ್ರಾನ್ಸಿನ ಸೈನ್ಯಸಮಿತಿಯ ಸಹಾಯದಿಂದ ಗ್ರೀಕ್ ಸೈನ್ಯವನ್ನು ಸುವ್ಯವಸ್ಥಿಗೊಳಿಸಿ, 1912-13ರ ಬಾಲ್ಕನ್ ಯುದ್ದಗಳಲ್ಲಿ ಗ್ರೀಕ್ ಸೈನ್ಯದ ಜಯಕ್ಕೆ ಕಾರಣನಾದ. ಆಗ ಈತ ತನ್ನ ಯುದ್ದ ದಕ್ಷತೆಯ ವಿಷಯದಲ್ಲಿ ಮತ್ತೆ ಮನ್ನಣೆಗಳಿಸಿದ. 1ನೆಯ ಜಾರ್ಜನ ಮರಣಾನಂತರ 1913 ಮಾರ್ಚಿ 18ರಂದು ಇವನಿಗೆ ರಾಜಪದವಿ ಪ್ರಾಪ್ತವಾಯಿತು. ಒಂದನೆಯ ಮಹಾಯುದ್ಧ ಪ್ರಾರಂಭವಾದಾಗ 1914ರ ಆಗಸ್ಟ್ 7ರಂದು ಈತ ಜರ್ಮನರ ಪರವಾಗಿ ಹೇಳಿಕೆಯಿತ್ತರೂ ಯುದ್ಧದಲ್ಲಿ ತಟಸ್ಥನೀತಿ ಅನುಸರಿದ. ತುರ್ಕಿ ಯುದ್ದಕ್ಕೆ ಸೇರಿದಾಗಲೂ ಈತ ತನ್ನ ಸೇನಾಧಿಪತಿಯ ಸಲಹೆಯನ್ನೊಪ್ಪದೆ ತಟಸ್ಥನೀತಿಯನ್ನೇ ಅನುಸರಿದ್ದರಿಂದ ಆ ಸೇನಾಧಿಪತಿ ರಾಜೀನಾಮೆ ನೀಡಿದನಾದರೂ 1915ರ ಜೂನಿನಲ್ಲಿ ನಡೆದ ಚುನಾವಣೆಗಳಲ್ಲಿ ಅವನೇ ಬಹುಮತದಿಂದ ಆರಿಸಿಬಂದ. ಇಬ್ಬರ ನಡುವಣ ಮನಸ್ತಾಪ ಉಲ್ಬಣಗೊಂಡಿತು. ಈ ಮಧ್ಯೆ ಗ್ರೀಕ್ ಮತ್ತು ಮಿತ್ರಕೂಟಗಳ ನಡುವೆ ವಿರಸವುಂಟಾಯಿತು. ಮಿತ್ರಕೂಟಕ್ಕೆ ಸೇರಿದ ಫ್ರೆಂಚ್ ದಳಪತಿ 1917ರಲ್ಲಿ ಕಾನ್‍ಸ್ಟಂಟೈನನನ್ನು ತೆಗೆದುಹಾಕಿ, ಅವನ ಎರಡನೆಯ ಮಗ ಅಲೆಕ್ಸಾಂಡರನನ್ನು ಸಿಂಹಾಸನಕ್ಕೆ ನೇಮಿಸಿದ. 1920ರ ನವೆಂಬರಿನಲ್ಲಿ ನಡೆದ ಚುನಾವಣೆಗಳ ಫಲವಾಗಿ ಸ್ವಿಟ್ಜರ್ಲೆಂಡಿನಲ್ಲಿದ್ದ ಕಾನ್‍ಸ್ಟಂಟೈನ್ ಪುನಃ ಅಧಿಕಾರಕ್ಕೆ ಬಂದ. ಗ್ರೀಸ್-ತುರ್ಕಿಗಳ ಹಳೆಯ ದ್ವೇಷ ಮುಂದುವರಿಯಿತು. 1922ರ ಆಗಸ್ಟ್-ಸೆಪ್ಟೆಂರ್‍ನಲ್ಲಿ ಗ್ರೀಕರು ಸೋತರು. ಸೈನ್ಯದಲ್ಲಿ ದಂಗೆಯುಂಟಾಯಿತು. ಸೆಪ್ಟೆಂಬರ್ 30ರಂದು ಕಾನ್‍ಸ್ಟಂಟೈನ್ ಅಧಿಕಾರ ತ್ಯಾಗಮಾಡಿ, ಹಿರಿಯ ಪುತ್ರ 2ನೆಯ ಜಾರ್ಜನಿಗೆ ರಾಜ್ಯಾಧಿಕಾರವನ್ನು ವಹಿಸಿಕೊಟ್ಟ. ಈತ ಮೃತನಾದ್ದು 1923ರ ಜನವರಿ 11ರಂದು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]
Media related to Constantine I of Greece at Wikimedia Commons- Abdication speech of 1917
- Royal House of Greece Archived 25 July 2016 ವೇಬ್ಯಾಕ್ ಮೆಷಿನ್ ನಲ್ಲಿ.
- The Great War – King Constantine I of Greece
- Elli Lemonidou: Constantine I, King of Greece, in: 1914–1918 online. International Encyclopedia of the First World War.
- Newspaper clippings about ಕಾನ್ಸ್ಟಂಟೈನ್ in the 20th Century Press Archives of the ZBW
- Portraits of Constantine I, King of Greece at the National Portrait Gallery, London
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |