ವಿಷಯಕ್ಕೆ ಹೋಗು

ಕಾಟಿಲೀಡನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಟಿಲೀಡನ್
Cotyledon orbiculata (grey variety)
Scientific classification e
Unrecognized taxon (fix): Cotyledon
Species

See text

ಕಾಟಿಲೀಡನ್ ಜನಪ್ರಿಯವಾದ ರಸಭರಿತವಾದ (ಸಕ್ಯುಲೆಂಟ್) ಸಸ್ಯ ಜಾತಿ. ಇದು ಆಕರ್ಷಕವಾದ ಎಲೆಯಿಂದ ಕೂಡಿದ್ದು ಸಂದರವಾದ ಹೂಗಳನ್ನು ಬಿಡುವುದರಿಂದ ಉದ್ಯಾನಪ್ರಾಮುಖ್ಯವನ್ನು ಪಡೆದಿದೆ. ಇದನ್ನು ಮನೆ ಅಲಂಕಾರ ಸಸ್ಯ. ಕುಂಡಸಸ್ಯ ಮತ್ತು ಕಲ್ಲೇರಿ ಸಸ್ಯವನ್ನಾಗಿ ಬೆಳೆಸುತ್ತಾರೆ. ಇದು ಕ್ರ್ಯಾಸುಗಲೇಸೀ ಕುಟುಂಬಕ್ಕೆ ಸೇರಿದೆ.ಇವುಗಳಲ್ಲಿ ಬಹುಪಾಲು ದಕ್ಷಿಣ ಆಫ್ರೀಕದ ಮೂಲನಿವಾಸಿಗಳು.

ಸಸ್ಯ ಲಕ್ಷಣಗಳು

[ಬದಲಾಯಿಸಿ]

ಇವು ಸಾಮಾನ್ಯವಾಗಿ ಬಹುವಾರ್ಷಿಕ ಮೂಲಿಕೆ ಅಥವಾ ಪೊದೆಸಸ್ಯಗಳು. ಇವುಗಳು ಕಾಂಡ ಮತ್ತು ಎಲೆಗಳು ದಪ್ಪ ಮತ್ತು ಮೆತುವಾಗಿವೆ. ಎಲೆಗಳು ಕಾಂಡದ ಬುಡದಲ್ಲಿ ಕಮಲದ ದಳಗಳ ರೀತಿ ಜೋಡಣೆಯಾಗಿರಬಹುದು ಅಥವಾ ಕಾಂಡದ ಮೇಲೆ ಅಭಿಮುಖವಾಗೋ ಪರ್ಯಾಯವಗೋ ಜೋಡಣೆಯಾಗಿರಬಹುದು. ಅವುಗಳಿಗೆ ತೊಟ್ಟಿರಬಹುದು ಅಥವಾ ಇಲ್ಲದಿರಬಹುದು. ಕೆಲವು ಪ್ರಭೇದಗಳಲ್ಲಿ ಎಲೆಗಳು ಚಳಿಗಾಲದಲ್ಲಿ ಉದುರಿ ಹೋಗುತ್ತದೆ. ಹೂಗೊಂಚಲು ಮಧ್ಯಾರಂಭಿ ಅಥವಾ ಅಂತ್ಯಾರಂಭಿ ಮಾದರಿಯದು. ಹೂಗಳು ಜೋಲು ಬಿದ್ದಿರಬಹುದು ಅಥವಾ ನೇರವಾಗಿ ನಿಂತಿರಬಹುದು. ಪುಷ್ಪ ಪತ್ರಗಳು 5, ದಳಗಳು 5; ಕೂಡಿಕೊಂಡಿವೆ. ಕೇಸರಗಳು 10, ಅಂಡಾಶಯ 5, ಬಿಡಿ ಬಿಡಿಯಾಗಿರುವ ಕಾರ್ಪೆಲ್‍ಗಳಿಂದ ಕೂಡಿದೆ. ಒಂದೊಂದು ಕಾರ್ಪೆಲಿನ ಬುಡದಲ್ಲೂ ಒಂದೊಂದು ಸಣ್ಣ ಹುರುಪೆಯಂಥ ರಚನೆಯಿದೆ, ಫಲ ಫಾಲಿಕಲ್ ಮಾದರಿಯದು. ಹಲವು ಬೀಜಗಳನ್ನೊಳಗೊಂಡಿದೆ.

ಪ್ರಭೇದಗಳು

[ಬದಲಾಯಿಸಿ]

ಇದರಲ್ಲಿ 40ಕ್ಕೂ ಹೆಚ್ಚು ಪ್ರಭೇದಗಳಿವೆ. ಕಾಟಿಲೀಡನ್ ಪ್ರಭೇದಗಳು ಮೈದಾನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯಲಾರವು. ಉದ್ಯಾನಪ್ರಾಮುಖ್ಯವನ್ನು ಪಡೆದ ಕಾಟಿಲೀಡನ್ ಹಲವಾರು ಪ್ರಭೇದಗಳಲ್ಲಿ ಕಾ.ಜೆಬ್ಬಿಫ್ಲೋರ, ಕಾ. ಸೆಕಂಡ, ಕಾ. ಆರ್ಬಿಕ್ಯುಲೇಟ, ಕಾ. ಗ್ಲಾಕ, ಕಾ, ಅಗೇವಾಯ್ಡಿಸ್, ಕಾ, ಅಂಡ್ಯುಲೇಟ ಮುಖ್ಯವಾದವು. ಇವನ್ನು ಬೇರುಕಂದು, ತುಂಡು ಕಡ್ಡಿ ಮತ್ತು ಕಂಕುಳುಮೊಗ್ಗುಳ್ಳ ಎಲೆಗಳಿಂದ ವೃದ್ಧಿಪಡಿಸುತ್ತಾರೆ. ಮರಳುಭೂಮಿಯಲ್ಲಿವು ಚೆನ್ನಾಗಿ ಬೆಳೆಯುತ್ತವೆ. ತುಂಡುಕಡ್ಡಿಗಳು ಬೇರು ಬಿಡುವ ವರೆಗೆ ನೀರು ಹಾಕಬಾರದು. ಏಕೆಂದರೆ ಈ ಗಿಡ ಹೆಚ್ಚು ತೇವವನ್ನು ಸಹಿಸುವುದಿಲ್ಲ.

ಛಾಯಾಂಕಣ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: