ವಿಷಯಕ್ಕೆ ಹೋಗು

ಕಾಟಿನಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Smoke tree
Smoketree with "Smokey" look.
Scientific classification e
Unrecognized taxon (fix): Cotinus
Species

ಕಾಟಿನಸ್ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷಜಾತಿ. ಆಕರ್ಷಕವಾದ ಗರಿಗಳಂಥ ಹೂಗೊಂಚಲುಗಳಿಗಾಗಿಯೂ ಗ್ರೀಷ್ಮ ಋತುವಿನಲ್ಲಿ ವಿವಿಧ ವರ್ಣವಿನ್ಯಾಸವನ್ನು ತೋರುವ ಸುಂದರ ಎಲೆಗಳಿಗಾಗಿಯೂ ಇದನ್ನು ಉದ್ಯಾನಗಳಲ್ಲಿ ಬೆಳೆಸುತ್ತಾರೆ. ಕಾಟಿನಸ್ ದೊಡ್ಡ ಪೊದೆಯಂತೆಯೋ ಸಣ್ಣ ಮರದಂತೆಯೋ ಬೆಳೆಯುವ ಸಸ್ಯ. ಇದರ ಕಾಂಡದಲ್ಲಿ ತೀವ್ರ ವಾಸನೆಯಿರುವ ರಸ ಇದೆ. ಎಲೆಗಳು ಸರಳ; ಪರ್ಯಾಯವಾಗಿ ಜೋಡಣೆಗೊಂಡಿವೆ. ಚಳಿಗಾಲದಲ್ಲಿ ಉದುರಿಹೋಗುತ್ತವೆ. ಹೂಗಳು ಬಲುಚಿಕ್ಕವು, ಭಿನ್ನಲಿಂಗಗಳು. ಕೆಲವು ಹೂಗಳು ಬಂಜೆಗಳಾಗಿರುವುದೂ ಉಂಟು. ಗಂಡು ಹೆಣ್ಣು ಹೂಗಳು ಒಂದೇ ಮರದಲ್ಲಿರಬಹುದು ಇಲ್ಲವೆ ಬೇರೆ ಬೇರೆ ಮರಗಳಲ್ಲಿರಬಹುದು. ಹೂಗೊಂಚಲು ಸಂಕೀರ್ಣಮಾದರಿಯದು. ವಿಫುಲವಾಗಿ ಕವಲೊಡೆದು ಗರಿಯಂತೆ ಕಾಣುತ್ತದೆ. ಪುಷ್ಪಪತ್ರಗಳು 5, ದಳಗಳು 5, ಕೇಸರಗಳು 5, ಅಂಡಾಶಯ ಉಚ್ಚಸ್ಥಾನದ್ದು. ಒಂದೇ ಕೋಣೆಯನ್ನೊಳಗೊಂಡಿದೆ. ಫಲ ಚಿಕ್ಕದಾಗಿರುವ ಚಪ್ಪಟೆಯಾಗಿರುವ ಕಿರು ಅಷ್ಟಿಫಲ (ಡ್ರೂಪ್‍ಲೆಟ್). ಅದರ ಆಕಾರ ಅಸಮ ವಿರುದ್ಧ ಕರನೆಯಾಕಾರ (ಆಬ್ಲಿಕ್-ಆಬ್‍ಓವೇಟ್).

ಕಾಟಿನಸ್ ಮರದ ಹೂಗೊಂಚಲುಗಳು ಅರಳಿದಾಗ ಮರದ ಸುತ್ತ ಸಣ್ಣ ಸಣ್ಣ ಹೊಗೆಯ ಮೋಡಗಳು ಆವರಿಸಿದಂತೆ ಮೋಹಕವಾಗಿ ಕಾಣುವುದರಿಂದ ಇದಕ್ಕೆ ಸ್ಮೋಕ್-ಟ್ರೀ ಎಂಬ ಹೆಸರೂ ಇದೆ. ಪ್ರಭೇದಗಳಲ್ಲಿ ಮುಖ್ಯವಾದವು ಕಾ.ಕಾಗಿಗ್ರಿಯ ಮತ್ತು ಕಾ.ಅಮೆರಿಕಾನಸ್. ಗ್ರೀಷ್ಮದಲ್ಲಿ ಇವುಗಳ ಎಲೆಗಳು ಕಿತ್ತಳೆ, ಕಡುಗೆಂಪು ಮುಂತಾಗಿ ಬಣ್ಣಗಳನ್ನು ಬದಲಾಯಿಸುವುದರಿಂದ ಇವು ಬಲು ಸುಂದರವಾಗಿ ಕಾಣುತ್ತವೆ.

ಛಾಯಾಂಕಣ

[ಬದಲಾಯಿಸಿ]

ಬಾಹ್ಯಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಕಾಟಿನಸ್&oldid=1341867" ಇಂದ ಪಡೆಯಲ್ಪಟ್ಟಿದೆ