ವಿಷಯಕ್ಕೆ ಹೋಗು

ಕಾಚಿನಿಯಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dactylopius coccus
Female (left) and male (right) cochineals
Scientific classification e
Unrecognized taxon (fix): Dactylopius
ಪ್ರಜಾತಿ:
D. coccus
Binomial name
Dactylopius coccus
Costa, 1835
Synonyms

Coccus cacti Linnaeus, 1758
Pseudococcus cacti Burmeister, 1839

ಕಾಚಿನಿಯಾಲ್ವಿವಿಧ ದರ್ಜೆಯ ಕೆಂಪು ಬಣ್ಣಗಳನ್ನು ನೀಡಬಲ್ಲ ವರ್ಣ ದ್ರವ್ಯ. ರೂಢಿಯ ಹೆಸರು ಕಿರುಮಂಜಿ. ಮೆಕ್ಸಿಕೋ ಮತ್ತು ಪೆರುದೇಶಗಳಲ್ಲಿನ ನೊಪೋಲಿಯಾ ಕೊಚೆಸೆಲ್ಲಿಫರ್ ಎಂಬ ಕಳ್ಳಿ ಸಸ್ಯದ ಮೇಲೆ ಜೀವಿಸುವ ಡ್ಯಾಕ್ಟೋಲೈಪಸ್ ಕಾಕಸ್ ಎಂಬ ಕೀಟಗಳು ಇದರ ಆಕರ. ಅಲ್ಪಸಂಖ್ಯೆಯಲ್ಲಿರುವ ಗಂಡುಕ್ರಿಮಿಗಳಿಂದ ಈ ವರ್ಣದ್ರವ್ಯ ದೊರೆಯದು; ಹೆಣ್ಣುಕೀಟಗಳನ್ನು ರೇಷ್ಮೆಹುಳುಗಳಂತೆ ಬೆಳೆಸಲಾಗುತ್ತದೆ. ಇಂಥ ಒಂದೊಂದು ಕೀಟವೂ ಸಾವಿರಕ್ಕೂ ಮಿಗಿಲಾದ ಸಂತಾನ ನೀಡುತ್ತದೆ. ಗರ್ಭತಾಳಿದಾಗ ಹಿರಿಯ ಗಾತ್ರಕ್ಕೆ ಉಬ್ಬಿ ಗೋಂದಿನ ಹನಿಗಳಂತೆ ಕಾಣುವ, ಗಿಡದ ಮೇಲಿನ ಈ ಕೀಟಗಳನ್ನು ಮೊಂಡು ಚಾಕುಗಳಿಂದ ಬಿಡಿಸಿ ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. ಹೀಗೆ ವರ್ಷದಲ್ಲಿ ಮೂರು ಬಾರಿ ಸಂಗ್ರಹಿಸಲಾಗುವ ಕೀಟಗಳನ್ನು ಬಿಸಿನೀರಿನಲ್ಲಿ ಮುಳುಗಿಸಿ ಅಥವಾ ಆವಿ ಇಲ್ಲವೇ ಶಾಖಗಳಿಗೊಳಪಡಿಸಿ ಕೊಂದು ಅನಂತರ ಒಣಗಿಸಲಾಗುತ್ತದೆ. ಪರಿಷ್ಕರಿಸುವ ರೀತಿಯಲ್ಲಿರುವ ವ್ಯತ್ತಾಸವೇ ಕಾಚಿನಿಯಾಲ್ ಮಾದರಿಗಳಲ್ಲಿ ಕಂಡುಬರುವ ವ್ಯತ್ಯಾಸಕ್ಕೆ ಕಾರಣ. ಸತ್ತ ಕೀಟಗಳ ಒಣಗಿದ ಪುಡಿಯೇ ಮಾರುಕಟ್ಟೆಯಲ್ಲಿ ದೊರೆಯುವ ವರ್ಣದ್ರವ್ಯ. ಈಚಿನ ಹಲವು ವರ್ಷಗಳವರೆಗೂ ಅನೇಕ ದೇಶಗಳಲ್ಲಿ ಕಾಚಿನಿಯಾಲ್ ಸಾಕಣೆ ಇತ್ತು. ಆದರೆ ಕೃತಕ ವರ್ಣದ್ರವ್ಯ ಉದ್ದಿಮೆಯಿಂದಾಗಿ ಈ ಕೀಟಗಳ ಸಾಕಣೆ ಬಹು ಕಡಿಮೆಯಾಗಿ ಮೆಕ್ಸಿಕೋವಿನಲ್ಲಿ ಮಾತ್ರ ಅಲ್ಪಸ್ವಲ್ಪ ಉಳಿದಿದೆ.

A cluster of females

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: