ಕಾಂಪಿಲ್ಯ
ಗೋಚರ
ಕಾಂಪಿಲ್ಯ ವೇದಗಳ ಕಾಲದಲ್ಲಿ ಪ್ರಮುಖ್ಯವಾಗಿದ್ದ ಪಂಗಡಗಳಲ್ಲೊಂದಾದ ಪಾಂಚಾಲ ರಾಜ್ಯದ ಮುಖ್ಯ ಪಟ್ಟಣ. ಪಾಂಚಾಲ ರಾಜ್ಯ ಈಗಿನ ಉತ್ತರ ಪ್ರದೇಶದ ಬರೈಲಿ, ಬುಡಾವುನ್ ಮತ್ತು ಫರೂಕಾಬಾದ್ ಜಿಲ್ಲೆಗಳಿಗೆ ಸೀಮಿತವಾಗಿತ್ತು. ಈ ರಾಜ್ಯಾಧಿಪತಿಗಳಾದ ಪಾಂಚಾಲರು ಋಗ್ವೇದದಲ್ಲಿ ಸೃಂಜಯ ಮತ್ತು ತುರ್ವಸ ಪಂಗಡಗಳೊಂದಿಗೆ ಹೆಸರಿಸಿರುವ ಕೃವಿ ಪಂಗಡಕ್ಕೆ ಸೇರಿದವರು. ಈ ಪಂಗಡದಲ್ಲಿ ದಿಗ್ವಿಜಯಾಕಾಂಕ್ಷಿಗಳಾದ ಅನೇಕ ರಾಜರು ಹುಟ್ಟಿ ಕುರುವಂಶದವರೊಂದಿಗೆ ಆಗಾಗ ಯುದ್ಧ ಅಥವಾ ಸಂಧಿಕಾರ್ಯಗಳಲ್ಲಿ ತೊಡಗಿರುತ್ತಿದ್ದರಲ್ಲದೇ ಸುಪ್ರಸಿದ್ಧರಾದ ಪ್ರವಹಣ, ಜೈವಲಿಯಂಥ ರಾಜರೂ ಶ್ವೇತಕೇತು, ಆರುಣಿಯಂಥ ಋಷಿ-ತತ್ತ್ವಶಾಸ್ತ್ರಜ್ಞರೂ ಕಂಡುಬಂದರು. ಕ್ರಮೇಣ ವಿದೇಹರಾಜ್ಯ ದೈವಜ್ಞ-ತತ್ತ್ವಶಾಸ್ತ್ರಜ್ಞರ ನೆಲೆವೀಡಾಗಿ ಪ್ರಬಲಿಸಿದಾಗ ಕಾಂಪಿಲ್ಯದ ಪ್ರಾಮುಖ್ಯ ಕಡಿಮೆಯಾಯಿತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |