ಕಾಂಡಾರ್ ಹಕ್ಕಿ
| ಕಾಂಡಾರ್ ಹಕ್ಕಿ | |
|---|---|
| Male at the Cincinnati Zoo | |
| Female at Doué-la-Fontaine Zoo, France | |
| Conservation status | |
| Scientific classification | |
| Unrecognized taxon (fix): | Vultur |
| ಪ್ರಜಾತಿ: | V. gryphus |
| Binomial name | |
| Vultur gryphus | |
| Yellow – approximate range/distribution | |
| Synonyms | |
ಕಾಂಡಾರ್ ಹಕ್ಕಿದಕ್ಷಿಣ ಅಮೆರಿಕದ ಆಂಡಿಸ್ ಪರ್ವತ ಪ್ರದೇಶಗಳಲ್ಲಿ ಸಿಗುವ ಅಪೂರ್ವ ಜಾತಿಯ ರಣಹದ್ದು. ಸಾಮಾನ್ಯವಾಗಿ 10,000' - 16,000' ಎತ್ತರದ ಪ್ರದೇಶಗಳಲ್ಲಿ ಇದರ ವಾಸ. ಪಕ್ಷಿವರ್ಗದ ಕಾಥರ್‍ಟಿಡಿ ಕುಟುಂಬಕ್ಕೆ ಸೇರಿದೆ. ಇದರ ಶಾಸ್ತ್ರೀಯನಾಮ ವಲ್ಚರ್ ಗ್ರೈಫಸ್. ಇದಕ್ಕೆ ಹತ್ತಿರ ಸಂಬಂಧಿ ಜಿಮ್ನೋಜಿಪ್ಸ್ ಕ್ಯಾಲಿಫೋರ್ನಿಯಾನಸ್ ಎಂಬ ರಣಹದ್ದನ್ನು ಸಹ ಕ್ಯಾಲಿಫೋರ್ನಿಯ ಕಾಂಡಾರ್ ಎಂದು ಕರೆಯಲಾಗುತ್ತದೆ. ಇದು ಉತ್ತರ ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ದಕ್ಷಿಣದ ಪ್ರದೇಶದಲ್ಲಿ ಕಂಡುಬರುತ್ತದೆ.
ಲಕ್ಷಣಗಳು
[ಬದಲಾಯಿಸಿ]- At Torres del Paine National Park, Chile
- Male, Farellones, Chile
- At Colca Canyon, Peru
ಕಾಂಡಾರ್ ಹಕ್ಕಿ ರಣಹದ್ದು, ಗಿಡುಗ, ಗರುಡ ಮುಂತಾದ ಹಕ್ಕಿಗಳನ್ನು ಹೋಲುತ್ತದೆ. ದೈತ್ಯಾಕಾರದ ಹಕ್ಕಿಯಿದು. ಸಾಧಾರಣವಾಗಿ 4' ಉದ್ದವಿದೆ. ರೆಕ್ಕೆಯನ್ನು ಹರಡಿದಾಗ ಒಂದು ತುದಿಯಿಂದ ಇನ್ನೊಂದು ತುದಿಗೆ 9'-10' ಅಗಲ. ಇದಕ್ಕೆ ತಲೆ ಮತ್ತು ಕತ್ತಿನ ಮೇಲೆ ಪುಕ್ಕಗಳಿಲ್ಲ. ನೆತ್ತಿ ಚಪ್ಪಟೆಯಾಗಿದೆ. ತಲೆಯ ಮೇಲೆ ಒಂದು ಶಿಖೆಯಿದೆ; ಕತ್ತು ಸುಕ್ಕುಸುಕ್ಕಾಗಿದೆ. ಕತ್ತಿನ ಬುಡದಲ್ಲಿ ಬಿಳಿಯ ಬಣ್ಣದ ಪುಕ್ಕಗಳಿವೆ. ಮೈಮೇಲಿನ ಪುಕ್ಕಗಳ ಬಣ್ಣ ಕಪ್ಪು. ರೆಕ್ಕೆಯಲ್ಲಿ ಬಿಳಿಯ ಮಚ್ಚೆಗಳಿವೆ. ನಖಗಳು ಮೊನಚಾಗಿಲ್ಲ. ಕೊಂಚ ನೆಟ್ಟಗಿವೆ. ಹೆಣ್ಣು ಹಕ್ಕಿ ಗಾತ್ರದಲ್ಲಿ ಗಂಡಿಗಿಂತ ಚಿಕ್ಕದು. ಇವುಗಳ ಹಾರಾಟ ಬಲು ಸೊಗಸು. ಕೊಂಚ ಎತ್ತರಕ್ಕೆ ಏರುವವರೆಗೂ ರೆಕ್ಕೆ ಬಡಿಯುತ್ತಿದ್ದು ಅನಂತರ ಗಾಳಿಯಲ್ಲಿ ತೇಲುವಂತೆ ಅನಾಯಾಸವಾಗಿ ಹಾರಾಡುತ್ತದೆ.
ಆಹಾರ
[ಬದಲಾಯಿಸಿ]ಸತ್ತ ಪ್ರಾಣಗಳ ದೇಹ ಇದರ ಮುಖ ಆಹಾರ. ಕೆಲವೊಮ್ಮೆ ಕುರಿ, ಮೇಕೆ, ಜಿಂಕೆ ಮುಂತಾದ ಪ್ರಾಣಿಗಳನ್ನು ಬೇಟೇಯಾಡುವುದೂ ಉಂಟು. ಬಲು ಹೊಟ್ಟೆಬಾಕ ಹಕಿಯೆಂದೇ ಪ್ರಸಿದ್ಧವಾಗಿದೆ. ಕಾಂಡಾರುಗಳು ಹಗಲೆಲ್ಲ ಬಹು ಪಾಲು ನಿದ್ರೆಯಲ್ಲಿಯೇ ಕಳೆಯುತ್ತಿದ್ದು ಬೆಳಗ್ಗೆ ಮತ್ತು ಸಂಜೆ ಆಹಾರದ ಅನ್ವೇಷಣೆಯಲ್ಲಿ ತೊಡಗುತ್ತವೆ. ಹಗಲು ನಿದ್ರಿಸುವುದರಿಂದ ಇವನ್ನು ಹಿಡಿಯುವುದು ಬಲು ಸುಲಭ. ಹೊಟ್ಟೆ ತುಂಬಿದಾಗ ಬಲು ಆಲಸಿಗಳಾಗುವುದರಿಂದ ಆಗಲೂ ಇವುಗಳ ಬೇಟೆ ಬಲು ಸುಲಭ.
ಸಂತಾನೋತ್ಪತ್ತಿ
[ಬದಲಾಯಿಸಿ]ಪರ್ವತದ ಅತಿ ಎತ್ತರ ಪ್ರದೇಶಗಳಲ್ಲಿ ವಾಸ ಮಾಡುವ ಈ ಹಕ್ಕಿಗಳು ಕೋಡುಗಲ್ಲುಗಳ ಪೊಟರೆಗಳಲ್ಲಿ ಒರಟಗೂಡುಗಳನ್ನು ಕಟ್ಟಿ ವರ್ಷಕ್ಕೊಮ್ಮೆ ಎರಡು ಮೊಟ್ಟೆಗಳನ್ನಿಡುತ್ತವೆ. ಸುಮಾರು ಏಳು ವಾರಗಳ ಕಾಲ ಕಾವು ಕೊಟ್ಟು ಮರಿ ಮಾಡುತ್ತವೆ. ಮರಿಗಳು ತಾಯಿಯೊಡನೆ ಒಂದು ವರ್ಷಕಾಲ ಇದ್ದು, ಆಮೇಲೆ ಸ್ವತಂತ್ರ ಜೀವನವನ್ನು ಆರಂಭಿಸುತ್ತವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Vulture Territory Facts and Characteristics: Andean condor
- ARKive – images and movies of the Andean condor (Vultur gryphus)
- Video of Peruvian condors
- BirdLife Species Factsheet
- Andean condor
- Andean condor videos on the Internet Bird Collection
- Scientists Work to Repopulate Colombia's Skies with Condors – slideshow by the Los Angeles Times
- Proyecto Conservación Cóndor Andino de Argentina, Organizado por la Fundación Bioandina Argentina.
- Ecology of condors
ಉಲ್ಲೇಖಗಳು
[ಬದಲಾಯಿಸಿ]
- ↑ BirdLife International (2020). "Vultur gryphus". IUCN Red List of Threatened Species. 2020 e.T22697641A181325230. doi:10.2305/IUCN.UK.2020-3.RLTS.T22697641A181325230.en. Retrieved 19 November 2021.
- ↑ "Appendices | CITES". cites.org. Retrieved 2022-01-14.