ವಿಷಯಕ್ಕೆ ಹೋಗು

ಕಲೆಂಡ್ಯುಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲೆಂಡ್ಯುಲ
field marigold (Calendula arvensis)
Scientific classification e
Unrecognized taxon (fix): Calendula
Species

See text

Synonyms[]
  • Calendella Kuntze (1898), nom. superfl.
  • Caltha Mill. (1754), nom. illeg.

ಕಲೆಂಡ್ಯುಲಕಂಪಾಸಿóಟೀ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಸುಂದರವಾದ ಹೂಗಳನ್ನು ಬಿಡುವುದರಿಂದ ಉದ್ಯಾನಪ್ರಾಮುಖ್ಯ ಪಡೆದಿದೆ. ವಾರ್ಷಿಕ ಸಸ್ಯವಾದ ಇದು ಸಾಕಷ್ಟು ಫಲವತ್ತಾದ ಎಂಥ ಭೂಮಿಯಲ್ಲಾದರೂ ಬೆಳೆಯಬಲ್ಲದು. ಅಲ್ಲದೆ ಬಹುಬೇಗ ಹೂ ಬಿಡುತ್ತದೆ. ಹೆಚ್ಚಿಗೆ ಮಳೆ ಬೀಳುವ ಪ್ರದೇಶಗಳಲ್ಲಿ ಬಹು ಚೆನ್ನಾಗಿ ಬೆಳೆಯುತ್ತದೆ. ಇದು ಸುಮಾರು (11\2'-2')ಎತ್ತರಕ್ಕೆ ಬೆಳೆಯುತ್ತದೆ. ಇದರಲ್ಲಿ ಒಂಟಿ ಮತ್ತು ಎರಡು ಸುತ್ತಿನ ದಳಗಳುಳ್ಳ ಹೂಗಳನ್ನು ಬಿಡುವ ತಳಿಗಳಿವೆ. ಹೂಗಳು ಒಣ ಹುಲ್ಲಿನ ಬಣ್ಣದಿಂದ ಹಿಡಿದು ಕಿತ್ತಳೆ ಬಣ್ಣದವರೆಗೂ ವ್ಯತ್ಯಾಸವಾಗುತ್ತವೆ. ಬೀಜಗಳನ್ನು ನೇರವಾಗಿ ಮಡಿಗಳಲ್ಲಿ ಬಿತ್ತನೆ ಮಾಡಿ ಸಸಿ ಬೆಳೆಸಬಹುದು. (35) ಮತ್ತು (45) ದಿವಸಗಳಲ್ಲಿ (2) ಸಾರಿ ಗೊಬ್ಬರವನ್ನು ಮೇಲ್ಪದರವಾಗಿ ಕೊಡಬೇಕಲ್ಲದೆ (45,50) ಮತ್ತು (55)ನೆಯ ದಿವಸಗಳಲ್ಲಿ ಮೂರು ಸಾರಿ ಹಿಂಡಿಯ ಗೊಬ್ಬರದ ದ್ರಾವಣವನ್ನು ಕೊಡಬೇಕು. ಗಿಡದ ತಳಭಾಗದ ಬಲಿತ ಒಣ ಎಲೆಗಳನ್ನು ಆಗಾಗ್ಗೆ ತೆಗೆಯುತ್ತಿರಬೇಕು. ಹೀಗೆ ಮಾಡಿದರೆ ಗಿಡ (60-75) ದಿವಸಗಳಲ್ಲಿ ಹೂವಿಗೆ ಬಂದು, ಸುಮಾರು ಎರಡು ತಿಂಗಳವರೆಗೂ ಹೂ ಬಿಡುತ್ತಿರುತ್ತದೆ. ಬಾಡಿದ ಹೂಗಳನ್ನು ಆಗಾಗ್ಗೆ ತೆಗೆಯುತ್ತಿದ್ದರೆ ಗಿಡ ಹೂ ಬಿಡುವ ಕಾಲವನ್ನು ಹೆಚ್ಚಿಸಬಹುದು.

ಛಾಯಾಂಕಣ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Calendula L. Archived 2024-03-03 ವೇಬ್ಯಾಕ್ ಮೆಷಿನ್ ನಲ್ಲಿ. Plants of the World Online. Retrieved 29 September 2023.