ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ

ವಿಕಿಪೀಡಿಯ ಇಂದ
Jump to navigation Jump to search

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಿಂದ ಪಕ್ಷಿಮ ದಿಕ್ಕಿಗೆ ಸಂಚರಿಸಿದಾಗ ಸುಳ್ಯದ ಜೀವನದಿ ಪಯಸ್ವಿನಿ ನದಿಯು ಎದುರಾಗುತ್ತದೆ. ಅದನ್ನು ದಾಟಿ ಮುಂದೆ ಸಾಗಿದರೆ ಅಂದರೆ ಸುಳ್ಯ ಬಸ್ ನಿಲ್ದಾಣದಿಂದ ನೇರವಾಗಿ ಸುಮಾರು ೮ ಕಿ.ಮೀ ಹೋದರೆ ಅಜ್ಜಾವರ ಗ್ರಾಮದ ಕೇಂದ್ರ ಸ್ಥಳವನ್ನು ತಲುಪಬಹುದು. ಅಲ್ಲಿಂದ ಸುಮಾರು ಅರ್ದ ಕಿ.ಮೀ ಸಾಗಿದಾಗ ರಸ್ತೆಯ ಎಡಬದಿಯಲ್ಲಿ ಕಾಣಿಸುವುದು ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಮುಖ್ಯದ್ವಾರ. ಅದರ ಮೂಲಕ ಸುಮಾರು ಮುಕ್ಕಾಲು ಕಿ.ಮೀ ಚಲಿಸಿದರೆ ಸಸ್ಯ ಕಾಶಿಯ ಮದ್ಯೆ ಕಂಗೊಳಿಸುವುದು ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ.


ದೇವಸ್ಥಾನದ ವೈಶಿಷ್ಟ: ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನವು ಪೂರ್ವಭಿಮುಖವಾದಗಿದ್ದು ಬಲಬಾಗದಲ್ಲಿ ಬ್ರಹ್ಮ ರಕ್ಷಸುವಿನ ಗುಡಿ, ಎಡಬಾಗದಲ್ಲಿ ರಕ್ತೇಶ್ವರಿಯ ಕಟ್ಟೆ ಮತ್ತು ದೇವಸ್ಥಾನದ ಬಾವಿಯಿದೆ.ದೇವಾಲಯದ ಸ್ವಲ್ಪ ದೂರದಲ್ಲಿ ನಾಗಬನ ಮತ್ತು ಶ್ರೀ ವಿಷ್ಣುಮೂರ್ತಿ (ಬೂತದ ಚಾವಡಿ) ದೈವಸ್ಥಾನವಿದೆ. ದೇವಾಲಯದ ಒಳಬಾಗದಲ್ಲಿ ನಮಸ್ಕಾರ ಮಂಟಪ ಮತ್ತು ಗರ್ಭಗುಡಿಯಿದೆ.ಗರ್ಭಗುಡಿಯಲ್ಲಿ ಒಂದೇ ಪೀಠದಲ್ಲಿ ಮೂರು ಲಿಂಗಗಳಿರುವುದು ಇಲ್ಲಿನ ವಿಶೇಷತೆ.

ಇತಿಹಾಸ,ಹಿನ್ನಲೆ:

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನವು ಸುಮಾರು ೩೦೦ ವರ್ಷಗಳ ಹಿಂದೆ ಸ್ಥಾಪಿತವಾಗಿದ್ದು ,ಶತಮಾನಗಳ ಹಿಂದೆ ಅಜ್ಜಾವರದ ಶಿರಾಜೆಗೆ ಬಂದ ಗೌಡ ವಂಶದವರಿಂದ ನಿರ್ಮಿಸಲ್ಪಟ್ಟಿದೆ. ಶತಮಾನಗಳ ಹಿಂದೆ ಶಿರಾಜೆಗೆ ಬಂದ ಗೌಡ ವಂಶದ ಸಹೋದರರಲ್ಲಿ ಹಿರಿಯವನು ಶಿರಾಜೆಯಲ್ಲೂ , ಇನ್ನೊಬ್ಬನು ಅಡ್ಪಂಗಾಯದಲ್ಲೂ ,ಮತ್ತೊಬ್ಬ ನು ಕರ್ಲಪಾಡಿಯಲ್ಲಿ ನೆಲೆನಿಂತರೆಂದೂ ಇಲ್ಲಿನ ಐತಿಹ್ಯ. ಮುಂದೆ ಕರ್ಲಪಾಡಿಯ ಮನೆತನದಿಂದ ಈ ದೇವಾಲಯದ ನಿರ್ಮಾಣವಾಯಿತೆಂಬುದು ತಿಳಿಯುತ್ತದೆ.ಕರ್ಲಪಾಡಿಯ ಆಸ್ತಿಯು ಕಾರಣಾಂತರಗಳಿಂದ ಅಡ್ಪಂಗಾಯದವರಿಗೂ, ಬಳಿಕ ಹುಲಿಮನೆಯವರಿಗೂ ಆನಂತರ ಕೇರಳದ ಕೋಡೋತ್ ಚಿಂಡನ್ ನಾಯರ್ ರವರ ಅದೀನಕ್ಕೆ ಬಂತು.ಮತ್ತು ದೇವಾಲಯದ ಆಡಳಿತವೂ ಅವರ ಪಾಲಾಯಿತು. ನಂತರ ಸರಕಾರದ ಭೂ ಸುದಾರಣಾ ಕಾನೂನಿನ ಪ್ರಕಾರ ದೇವಸ್ಥಾನದ ಆಸ್ತಿಯು ಹಲವರ ಪಾಲಾಯಿತು.ನಂತರದ ಅವಧಿಯಲ್ಲಿ ದೇವಸ್ಥಾನದ ನಿರ್ವಹಣೆಯನ್ನು ಕರ್ಲಪಾಡಿಯ ಮತ್ತು ಪಡ್ಡಂಬೈಲಿನ ಜನರು ವಹಿಸುವಂತಾಯಿತು. ೧೯೯೯ರ ಸಮಯದಲ್ಲಿ ದೇವಸ್ಥಾನವು ಶಿಥಿಲಾವಸ್ತೆಗೆ ತಲುಪಿತು.

ದೇವಸ್ಥಾನದ ನವೀಕರಣ ಕರ್ಯಗಳು:

ಹುಲಿಮನೆಯವರ ಆಡಳಿತದಲ್ಲಿ: ೧೯೨೦ರ ಸುಮಾರಿಗೆ ಹುಲಿಮನೆ ಚೆನ್ನಪ್ಪ ಗೌಡರಿಂದ ಗರ್ಭಗುಡಿಗೆ ಮತ್ತು ನಮಸ್ಕಾರ ಮಂಟಪಕ್ಕೆ ಹಂಚಿನ ಛಾವಣಿ.

'ಕೇರಳದ ಕೋಡೋತ್ ಚಿಂಡನ್ ನಾಯರ್ ರವರ ಆಡಳಿತದಲ್ಲಿ': ೧೯೩೨ರ ಸುಮಾರಿಗೆ ಕೇರಳದ ಕೋಡೋತ್ ಚಿಂಡನ್ ನಾಯರ್ ರವರಿಂದ ದೇವಸ್ಥಾನದ ಎದುರಿನ ಗೋಪುರಕ್ಕೆ ಹಂಚಿನ ಛಾವಣಿ.

ಊರವರ ಸಹಾಯದಲ್ಲಿ: ಸುಮಾರು ೨೦ ಲಕ್ಷ ವೆಚ್ಚದಲ್ಲಿ ನೂತನ ದೇವಾಲಯದ ನಿರ್ಮಾಣ ಮತ್ತು ೨೦/೦೨/೨೦೦೨ ರಿಂದ ೨೮/೦೨/೨೦೦೨ ರ ವರೆಗೆ ಜಿರ್ಣೋದ್ದಾರ ಮತ್ತು ಅಷ್ಟಬಂದ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶ